ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆ ಕೈ ಮಾಡಿದ ಅಪ್ಪಿ; ಅಹಂಕಾರಕ್ಕೆ ತಕ್ಕ ಶಿಕ್ಷೆ ಆಗಲಿ ಎಂದ ಅಭಿಮಾನಿಗಳು
ಜೀವ ಹಾಗೂ ಮಹಿಮಾ ಮನೆಯ ಗೃಹ ಪ್ರವೇಶ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಗೃಹ ಪ್ರವೇಶಕ್ಕೆ ರಾಜೇಂದ್ರ ಕೂಡ ಬಂದಿದ್ದ. ಜೀವ ನಡವಳಿಕೆಯಲ್ಲಿ ಕೊಂಚ ಮಟ್ಟದ ಬದಲಾವಣೆಯನ್ನು ಗೌತಮ್ *ಗಮನಿಸಿರುತ್ತಾನೆ. ಆದರೆ ಆ ಬಗ್ಗೆ ಎಲ್ಲಿ ಕೂಡ ಏನು ಹಾಕಿಕೊಂಡು ಇರುವುದಿಲ್ಲ.* ಇತ್ತ ರಾಜೇಂದ್ರನನ್ನು ನೋಡಿ ಗೌತಮ್‌ಗೆ ಬಹಳಷ್ಟು ಸಿಟ್ಟು ಬರುತ್ತದೆ. ನೀನು ಈ ಮನೆಗೆ ಬಂದಿರುವ ಉದ್ದೇಶ ಏನು ಎಂಬುವುದನ್ನು ಪದೇ ಪದೆ ಗೌತಮ್ ರಾಜೇಂದ್ರ ಬಳಿ ಕೇಳುತ್ತಾನೆ.
ರಾಜೇಂದ್ರ ಬಹಳ ಗಟ್ಟಿಯಾಗಿ ಗೌತಮ್ ಬಳಿ ಹೇಳುತ್ತಾನೆ. "ನಿನ್ನಿಂದಾಗಿ ನಾನು ಜೈಲು ಶಿಕ್ಷೆ ಅನುಭವಿಸುವ ಹಾಗೆ ಆಯಿತು. ಆದರೆ ಇನ್ನೆಂದಿಗೂ ಕೂಡ ನಾನು ಅಂತಹ ತಪ್ಪು ಕೆಲಸ ಮಾಡಲಾರೆ *ಎಂದುಕೊಂಡು ಇದ್ದೀಯಾ ಇಲ್ಲ*. ನಿನ್ನ ಮನೆಯವರನ್ನು ನಿನಗೆ ಎದುರಾಗಿ ನಿಲ್ಲಿಸಿ ಅವರಿಂದಲೇ ನೀನು ನರಳಬೇಕು ಹಾಗೆ ಮಾಡಿಯೇ ಮಾಡುತ್ತೇನೆ" ಎಂದು ಬಹಳ ಖಡಕ್ ಆಗಿ ಹೇಳುತ್ತಾನೆ. ಇದನ್ನು ಕೇಳಿ ಗೌತಮ್‌ಗೆ ಸಿಟ್ಟು ಬರುತ್ತೆ.

ಇತ್ತ ಅಪ್ಪಿ ತವರು ಮನೆಯ ಗೃಹ ಪ್ರವೇಶಕ್ಕೆ ಬರುತ್ತಾಳೆ. ಅಪ್ಪಿಯನ್ನು ನೋಡಿ ಮನೆ ಮಂದಿಯೆಲ್ಲ ಬಹಳಷ್ಟು ಖುಷಿ ಪಡುತ್ತಾರೆ. ಭೂಮಿಕಾಗೆ ಸಮಾಧಾನ ಆಗುತ್ತೆ. ಅಪ್ಪಿ ಗೃಹ ಪ್ರವೇಶಕ್ಕೆ ಬರುವುದಿಲ್ಲ ಎಂದುಕೊಂಡಿದ್ದಳು ಭೂಮಿಕಾ. ಈ ಬಗ್ಗೆ ಆಕೆಯ ತಾಯಿ ವಿಚಾರಣೆ ಮಾಡಿದಾಗ ಅಪ್ಪಿಗೆ ಹುಷಾರಿಲ್ಲ. ಆದ ಕಾರಣ ಆಕೆ ಬರುತ್ತಿಲ್ಲ ಎಂದು ಸುಳ್ಳು ಹೇಳಿರುತ್ತಾಳೆ.
ಕೊನೆಗೆ ಅಪ್ಪಿ ಗೃಹ ಪ್ರವೇಶಕ್ಕೆ ಬಂದಿರುವುದನ್ನು ನೋಡಿ ಮನೆಯವರು ಖುಷಿಪಡುತ್ತಾರೆ. ಮನೆ ಮಗಳು ಹೋಮಕ್ಕೆ ಕೆಲ ವಸ್ತುಗಳನ್ನು ಹಾಕಬೇಕಾಗಿತ್ತು. ಅದಕ್ಕೆ ಅರ್ಚಕರು ಮನೆಮಗಳ ಕೈಯಲ್ಲಿ ಕೆಲ ವಸ್ತುಗಳನ್ನು ಹಾಕಿಸಿ ಎಂದ ಕೂಡಲೇ ಅಲ್ಲಿಯೇ ಇದ್ದ ಮಂದಾಕಿನಿ ಮನೆಯ ಹಿರಿಯ ಮಗಳು ಭೂಮಿಕಾ ಬಳಿ ಹೋಮಕ್ಕೆ ಏನು ಹಾಕಬೇಕು ಅದನ್ನು ಅರ್ಚಕರ ಬಳಿ ಕೇಳಿ ಹಾಕುವಂತೆ ಹೇಳುತ್ತಾರೆ. ಇದನ್ನು ನೋಡಿ ಅಪ್ಪಿಗೆ ಸಿಟ್ಟು ಬರುತ್ತದೆ. ಅಕ್ಕ ಮಾತ್ರ ಆ ಮನೆಯ ಮಗಳು ನಾನು ಆ ಮನೆಯ ಮಗಳಲ್ಲ ಎಂದು ಮುನಿಸಿಕೊಂಡು ನೇರವಾಗಿ ಮನೆಯ ಕಡೆ ಕೋಪದಿಂದ ಹೋಗುತ್ತಾಳೆ.
ಅಪ್ಪಿಯ ಕೋಪಕ್ಕೆ ಮನೆ ಮಂದಿ ಕಾರಣ
ಅಪ್ಪಿ ಕೋಪಿಸಿಕೊಂಡಿದ್ದು ಬಹಳ ಚಿಕ್ಕ ಕಾರಣಕ್ಕೆ. ಆದರೆ ಆಕೆಗೆ ಅದೆಷ್ಟೇ ಬುದ್ಧಿವಾದ ಹೇಳಿದರು ಕೂಡ ಆಕೆ ಮಾಡುತ್ತಿರುವ ಕೆಟ್ಟ ಕೆಲಸಗಳನ್ನು ಆಕೆಯನ್ನು ಮತ್ತಷ್ಟು ಕೂಪಕೆ ತಳ್ಳುತ್ತಿರುವುದು ಮಾತ್ರ ಸತ್ಯ. ಶಕುಂತಲಾ ದೇವಿ ಅಪ್ಪಿಗೆ ಕರೆ ಮಾಡಿ ಗೃಹ ಪ್ರವೇಶ ಚೆನ್ನಾಗಿ ನಡೆಯುತ್ತಿದೆಯಾ ಎಂದು ಕೇಳಿದಾಗ, ಅಪ್ಪಿ ಬಹಳ ಕೋಪದಿಂದ "ನನಗೆ ಗೊತ್ತಿಲ್ಲ. ಅಲ್ಲಿ ಏನಾಗುತ್ತಿದೆ ಎನ್ನುವುದು ನಾನು ನೋಡಿಲ್ಲ" ಎಂದು ಹೇಳುತ್ತಾಳೆ. ಹಾಗೆಯೇ ತನ್ನ ಅತ್ತೆಯ ಬಳಿ ಅಲ್ಲಿ ನಡೆದ ಘಟನೆಯ ಬಗ್ಗೆ ಹೇಳುತ್ತಾಳೆ. "ನನ್ನ ತಂದೆ ತಾಯಿ ಅಕ್ಕನನ್ನು ಮಾತ್ರ ಮಗಳು ಎಂದುಕೊಂಡಿದ್ದಾರೆ" ಎನ್ನುವ ರೀತಿ ಹೇಳಿದಾಗ ಶಕುಂತಲಾ ದೇವಿ ಬೇಕೆಂದೇ ನೀನು ನೇರವಾಗಿ ಮನೆಗೆ ಬಾ. ನೀನು ಕುಡಿದುಕೊಂಡೆಲ್ಲ ಬರಬೇಡ ಎಂದು ಹೇಳುತ್ತಾರೆ.

ಕೋಪದಲ್ಲಿ ನಶೆ ಏರಿಸಿಕೊಂಡ ಅಪ್ಪಿ
ಇದನ್ನು ಕೇಳಿದ ಅಪ್ಪಿ ಕೋಪದಲ್ಲಿ ಅತ್ತೆ ಹೇಳಿದ್ದಕ್ಕೆ ತದ್ವಿರುದ್ಧವಾಗಿ ಮಾಡುತ್ತಾಳೆ. ಚೆನ್ನಾಗಿ ಮದ್ಯಪಾನ ಮಾಡಿ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಪೊಲೀಸರ ಕೈ ಗೆ ಸಿಕ್ಕಿ ಬೀಳುತ್ತಾಳೆ. ಪೊಲೀಸರು ಕುಡಿದು ಕಾರು ಓಡಿಸುತ್ತಿರುವ ಬಗ್ಗೆ ಪ್ರಶ್ನೆ ಮಾಡಿದಾಗ ಅಪ್ಪಿ ಪೊಲೀಸರಿಗೆ ಹಣ ಕೊಡಲು ಮುಂದಾಗುತ್ತಾಳೆ. ಇದನ್ನು ನೋಡಿದ ಪೊಲೀಸರು ಕೋಪಿಸಿಕೊಳ್ಳುತ್ತಾರೆ. ಅಪ್ಪಿ ಹೇಳಿದ್ದು ಒಂದೇ ಪದ "ನಾನು ಯಾರು ಎಂದು ಗೊತ್ತಾ ನಿಮಗೆ? ಎಂದು ಹೇಳುತ್ತಾಳೆ. ಹಾಗೆಯೇ ಪೊಲೀಸರ ಕೊರಳ ಪಟ್ಟಿ ಹಿಡಿದುಕೊಳ್ಳುತ್ತಾಳೆ. ಇದರಿಂದ ಕೋಪಗೊಂಡ ಪೊಲೀಸರು ನಿಮ್ಮ ಮನೆಯವರು ಬಂದು ಕಾರು ಬಿಡಿಸಿಕೊಂಡು ಹೋಗಲಿ ಎಂದು ಹೇಳಿ ಅಪ್ಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳುತ್ತಾರೆ. ಅಪ್ಪಿ ಮಾಡಿದ ಘನಂದಾರಿ ಕೆಲಸಕ್ಕೆ ಇದೀಗ ತಕ್ಕ ಶಿಕ್ಷೆ ಆಗುವ ಎಲ್ಲ ಲಕ್ಷಣ ಕಾಣಿಸುತ್ತಿದೆ.


Click it and Unblock the Notifications











