Amruthadhaare: ಮನೆ ತುಂಬಿಸಿಕೊಳ್ಳುವಾಗಲೇ ಅವಾಂತರ ಸೃಷ್ಟಿಸಿದ ಮಹಿಮಾ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಹನಿಮೂನ್ ಎಂದು ಹೊರಟು ಒಂದೇ ದಿನಕ್ಕೆ ಮನೆಗೆ ಬಂದಿರುವುದಕ್ಕೆ ಶಕುಂತಲಾಗೆ ಟೆನ್ಷನ್ ಮಾಡಿಕೊಂಡಿದ್ದಾಳೆ.

ಮದುವೆ ಮಾಡಿ ಕಳಿಸಿದರೂ ಕೂಡ ಮತ್ತೆ ಮನೆಗೆ ಬಂದಿದ್ದಾಳೆ. ಅವಳ ಮನೆಯಲ್ಲಿ ಇರುವುದರ ಬದಲು ಇಲ್ಲಿಗೆ ಬಂದಿದ್ದಾಳೆ. ಇವಳಿಗೆ ಏನು ಮಾಡೋದು ಎಂದುಕೊಳ್ಳುತ್ತಿರುತ್ತಾಳೆ.

ಆದರೆ, ಭೂಮಿಕಾಳಿಗೆ ಜೀವ ಮನೆಗೆ ಬಂದಿರುವುದು ಬಹಳ ಖುಷಿಯಾಗಿರುತ್ತದೆ. ತನ್ನವರು ಯಾರೂ ಇಲ್ಲ ಎನ್ನುವ ಸಂದರ್ಭದಲ್ಲೇ ಜೀವ ಬಂದಿರುವುದಕ್ಕೆ ಸಂತಸಪಟ್ಟಿದ್ದಾಳೆ.

amruthadhaare-kannada-serial

ಜೀವನನ್ನು ರೀ ಎಂದ ಮಹಿಮಾ

ಮನೆಯಲ್ಲಿ ಎಲ್ಲರೂ ಅಜ್ಜಿ ಜೊತೆಗೆ ಕುಳಿತು ಮಾತನಾಡುತ್ತಿರುತ್ತಾರೆ. ಆಗ ಅಕಸ್ಮಾತ್ ಆಗಿ ಮಹಿಮಾ, ಜೀವನ್ ಅನ್ನು ಹೆಸರಿಟ್ಟು ಕರೆಯುತ್ತಾಳೆ. ಕೋಪ ಮಾಡಿಕೊಂಡ ಅಜ್ಜಿ, ಗಂಡನನ್ನು ಹೆಸರಿಟ್ಟು ಕರೆಯುವುದು ಸರಿಯಲ್ಲ. ಮರ್ಯಾದೆ ಕೊಟ್ಟು ಕರೆಯಬೇಕು. ಇಲ್ಲದಿದ್ದರೆ, ಸಮಾಜವೂ ಆತನಿಗೆ ಗೌರವ ಕೊಡೋದಿಲ್ಲ ಎಂದು ಬೈಯುತ್ತಾಳೆ. ಮಹಿಮಾ ನಾನು ಮೊದಲಿನಿಂದಲೂ ಹೆಸರಿಟ್ಟೆ ಕರೆಯೋದು ಎಂದು ಹೇಳುತ್ತಾಳೆ. ಅಜ್ಜಿ ಮತ್ತೆ ಬೈಯುತ್ತಾರೆ. ವಿಧಿ ಇಲ್ಲದೇ ಮಹಿಮಾ ರೀ ಎಂದು ಕರೆಯುತ್ತಾಳೆ. ಆಗ ಮನೆಯವರೆಲ್ಲಾ ಮಹಿಮಾ ರೀ ಎಂದು ಕರೆದಿದ್ದಕ್ಕೆ ನಕ್ಕು ಸುಮ್ಮನಾಗುತ್ತಾರೆ.

ಶಕುಂತಲಾಳಿಗೆ ಮಹಿಮಾ ಮೇಲೆ ಕೋಪ

ಇದೇ ಸಮಯಕ್ಕೆ ಜೀವನ್‌ಗೆ ಮನೆಯಿಂದ ಫೋನ್ ಬರುತ್ತದೆ. ಜೀವ ಆಚೆ ಹೋಗಿ ರಿಸೀವ್ ಮಾಡುತ್ತಾನೆ. ಮಂದಾಕಿನಿ ಸೊಸೆಯನ್ನು ಮನೆ ತುಂಬಿಸಿಕೊಳ್ಳಲು ಕಾಯುತ್ತಿರುತ್ತಾಳೆ. ಹಾಗಾಗಿ ಫೋನ್ ಮಾಡಿ ಎಲ್ಲಿದ್ದೀರಾ ಎಂದು ವಿಚಾರಿಸುತ್ತಾಳೆ. ಹಿಂದೆಯೇ ಬರುವ ಭೂಮಿಕಾ, ಅಮ್ಮನ ಫೋನ್ ಆಗಿದ್ದರೆ ಕೊಡು ಎಂದು ಕೇಳುತ್ತಾಳೆ. ಆಗ ಜೀವ ನಡೆದ ಘಟನೆಯನ್ನು ವಿವರಿಸುತ್ತಾನೆ. ಇವರಿಬ್ಬರ ಮಾತುಗಳನ್ನು ಶಕುಂತಲಾ ಕೇಳಿಸಿಕೊಂಡು ಮಹಿಮಾ ಮೇಲೆ ಕೋಪ ಮಾಡಿಕೊಳ್ಳುತ್ತಾಳೆ.

amruthadhaare-kannada-serial

ಮಹಿಮಾಳನ್ನು ಬೆದರಿಸಿದ ಶಕುಂತಲಾ

ಸೀದಾ ಮಹಿಮಾ ರೂಮಿಗೆ ಹೋಗಿ ಜೋರು ಮಾಡುತ್ತಾಳೆ. ಜೀವ ಮನೆಯಲ್ಲಿ ಶಾಸ್ತ್ರ ಮುಗಿಸುವುದು ಬಿಟ್ಟು. ನೀನು ಇಲ್ಲಿ ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಮಹಿಮಾ ನನ್ನ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು. ಇವತ್ತು ಇಲ್ಲೇ ಇದ್ದು ನಾಳೆ ಹೋಗುತ್ತೇನೆ ಎಂದು ಹೇಳುತ್ತಾಳೆ. ಆಗ ಶಕುಂತಲಾ ಕೋಪದಿಂದ ಕಿರುಚುತ್ತಾಳೆ. ಮಾಹಿಮಾಳನ್ನು ಹೆದರಿಸುತ್ತಾಳೆ. ಮೊದಲು ನಿನ್ನ ಗಂಡನ ಮನೆಗೆ ಹೋಗಿ ಶಾಸ್ತ್ರ ಮುಗಿಸು. ಇಲ್ಲಿ ಇರುವುದಕ್ಕೆ ನಾನು ಬಿಡುವುದಿಲ್ಲ. ಅಣ್ಣನಿಗೆ ನೀನು ಪ್ರೆಗ್ನೆಂಟ್ ಅನ್ನೋ ವಿಷಯ ತಿಳಿಸಬೇಕಾಗುತ್ತದೆ ಎಂದು ಬೆದರಿಸುತ್ತಾಳೆ. ಆಗ ಮಹಿಮಾ ಬೇರೆ ದಾರಿ ಕಾಣದೇ, ಬ್ಯಾಗ್ ತೆಗೆದುಕೊಂಡು ಜೀವ ಜೊತೆಗೆ ಹೊರಟು ಬಿಡುತ್ತಾಳೆ.

ಮನೆಗೆ ಬರುತ್ತಿದ್ದಂತೆ ಅವಾಂತರ

ಮನೆಗೆ ಬರುತ್ತಿದ್ದಂತೆ ಮಂದಾಕಿನಿ ಆರತಿ ತರುತ್ತಾಳೆ. ಆದರೆ, ಮಹಿಮಾ ಆರತಿಯನ್ನು ಆರಿಸುತ್ತಾಳೆ. ಇದಕ್ಕೆ ಪಂಕಜಾ ಬೈಯುತ್ತಾಳೆ. ಮನೆ ತುಂಬಿಸಿಕೊಳ್ಳುವಾಗ ಹೆಣ್ಣು ಐಶ್ವರ್ಯವನ್ನು ತರುತ್ತಾಳೆ ಅನ್ನೋ ನಂಬಿಕೆ ಇದೆ. ಆದರೆ, ನೀನು ಆರತಿಯನ್ನೇ ಆರಿಸಿ ಬಿಟ್ಟೆ ಎಂದು ಗೊಣಗುತ್ತಾಳೆ. ಆಗ ಮಹಿಮಾ ಅಷ್ಟೆಲ್ಲಾ ಯೋಚಿಸಬೇಡಿ. ನನ್ನ ಬ್ಯಾಗ್‌ನಲ್ಲೇ ಐಶ್ವರ್ಯ ಇದೆ. ಮೇಕಪ್ ಕಿಟ್ ಸೇರಿದಂತೆ ಹಲವು ಗಿಫ್ಟ್‌fಗಳನ್ನು ತಂದಿದ್ದೇನೆ ಎಂದು ಹೇಳುತ್ತಾಳೆ.

ಲೈಟರ್‌ನಲ್ಲಿ ದೀಪ ಹಚ್ಚಿನ ಮಹಿಮಾ

ಮನೆ ತುಂಬಿಸಿಕೊಂಡ ಮೇಲೆ, ದೇವರ ಮನೆಯಲ್ಲಿ ದೀಪ ಹಚ್ಚಲು ಹೇಳಿದರೆ, ಲೈಟರ್ ನಂದ ದೀಪ ಹಚ್ಚುತ್ತಾಳೆ. ಮನೆಯವರೆಲ್ಲಾ ಗಾಬರಿಯಾಗುತ್ತಾರೆ. ಜೀವ ದೇವರ ಮನೆಗೆ ಹೋಗಿ ಮ್ಯಾಚ್ ಬಾಕ್ಸ್ ಕೊಡುತ್ತಾನೆ. ಬಳಿಕ ದೀಪ ಹಚ್ಚಿಸಿ ದೇವರ ಪೂಜೆಯನ್ನು ಮಾಡುವುದಕ್ಕೆ ಹೇಳಿಕೊಡುತ್ತಾನೆ.

More from Filmibeat

English summary
Amruthadhaare Kannada Serial today Episode:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X