Amruthadhaare: ಅಪ್ಪನಿಗೆ ಗೇಟ್ ಪಾಸ್; ಮಗನಿಂದ ಸದಾಶಿವಗೆ ಅವಮಾನ

By ಪ್ರಿಯಾ ದೊರೆ

'ಅಮೃತಧಾರೆ' ಧಾರಾವಾಹಿಯಲ್ಲಿ ಜೀವ ಈಗ ಮೊದಲಿನಂತಿಲ್ಲ ಕಂಪ್ಲೀಟ್ ಆಗಿ ಬದಲಾಗಿದ್ದಾನೆ. ಕೆಲಸ ಕಳೆದುಕೊಂಡಾತ ಇವನೇನಾ ಎನ್ನುವಷ್ಟು ಬದಲಾಗಿದ್ದಾನೆ.

ರಾಜೇಂದ್ರ ಭೂಪತಿಯ ಸಹಾಯದಿಂದ ಸ್ವಂತ ಮನೆಯನ್ನು ಕಟ್ಟಿದ. ಬಳಿಕ ಈಗ ಹೊಸ ಪ್ರಾಜೆಕ್ಟ್ ಗೆ ಮತ್ತೆ ರಾಜೇಂದ್ರ ಭೂಪತಿಯ ಸಹಾಯ ಪಡೆದಿದ್ದಾನೆ.

Amruthadhaare kannada Serial 24th April episode written update

ಇದು ಗೌತಮ್ ಮನೆಯಲ್ಲಾಗಲೀ ಅಥವಾ ಜೀವ ನ ಮನೆಯಲ್ಲಾಗಲೀ ಯಾರಿಗೂ ಇಷ್ಟವಿಲ್ಲ. ಆದರೆ, ಜೀವ ಎಲ್ಲರ ವಿರುದ್ಧ ನಡೆದುಕೊಳ್ಳುತ್ತಿದ್ದಾನೆ.

ತಂದೆ-ತಾಯಿ ಹೊರಕ್ಕೆ

ನಿತ್ಯ ಮಗ ಕುಡಿದುಕೊಂಡು ಬರುತ್ತಿದ್ದದ್ದನ್ನು ನೋಡಿದ ಸದಾಶಿವನಿಗೆ ಬಹಳ ಬೇಸರವಾಗಿತ್ತು. ಎಷ್ಟೇ ಬುದ್ಧಿ ಹೇಳಿದರೂ ಕೂಡ ಜೀವ ತನ್ನ ತಂದೆಯ ಮಾತನ್ನು ಕೇಳಲಿಲ್ಲ. ನಾನು ಇಷ್ಟೆಲ್ಲಾ ಸಂಪಾಧಿಸಿರುವುದನ್ನು ನಿಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಉಪದೇಶ ಕೊಡುವುದರಿಂದ ಯಾವುದೂ ಸರಿ ಹೋಗಲ್ಲ. ನನಗೆ ಬೇಕಾದಂತೆಯೇ ನಾನು ಬದುಕುವುದು ಎಂದು ತನ್ನ ದಾರಿಯಲ್ಲೇ ಇದ್ದ. ನಿತ್ಯ ಮಗ ಕುಡಿದು ಕುಡಿದು ಹಾಳಾಗುತ್ತಿದ್ದಾನೆ. ಹೇಗಾದರೂ ಮಾಡಿ ಇದರಿಂದ ಮಗನನ್ನು ಹೊರಗೆ ತರಬೇಕು ಎಂದು ಯೋಚಿಸಿದ ಸದಾಶಿವ ಸೊಸೆಯ ಮೂಲಕ ತನ್ನ ಆಲೋಚನೆಯನ್ನು ಜಾರಿಗೆ ತರುತ್ತಾನೆ. ಇದರಿಂದಾಗಿ ತಂದೆ-ತಾಯಿಯನ್ನೇ ಜೀವ ಮನೆಯಿಂದ ಹೊರಹಾಕಿದ್ದಾನೆ.

ಅಮಲಿನಲ್ಲಿ ಜೀವ

ಮಹಿಮಾಳಿಗೆ ಮಾಮೂಲಿ ಜ್ಯೂಸ್ ತಂದುಕೊಟ್ಟು ಅದನ್ನು ಡ್ರಿಂಕ್ಸ್ ಮಾಡುತ್ತಿರುವಂತೆ ನಟಿಸುತ್ತಾಳೆ. ಮಹಿಮಾ ಮನೆಯಲ್ಲೇ ಕುಳಿತು ಕುಡಿಯುತ್ತಿರುವುದನ್ನು ಕಂಡ ಜೀವ ಗಾಬರಿಯಾಗುತ್ತಾನೆ. ಮಹಿಮಾಳಿಗೆ ಬುದ್ಧಿ ಹೇಳುತ್ತಾನೆ. ಬಳಿಕ ತಂದೆ ಮತ್ತು ತಾಯಿ ಬಳಿ ಈ ವಿಚಾರ ಹೇಳಿದಾಗ ಅವರು ನಾವೇನು ಮಾಡುವುದಕ್ಕೆ ಆಗೋದಿಲ್ಲ. ಮಗನಿಗೆ ಬುದ್ಧಿ ಹೇಳಲು ಆಗದವರು ಸೊಸೆಗೆ ಹೇಗೆ ಬುದ್ಧಿ ಮಾತು ಹೇಳಲು ಸಾಧ್ಯ ಅಂತ ಹೇಳುತ್ತಾನೆ. ಸದಾಶಿವನ ಮಾತುಗಳನ್ನು ಕೇಳಿ ಈವು ಈ ಮನೆಯಲ್ಲಿ ಇರೋದಿಕ್ಕೆ ಲಾಯಕ್ಕಿಲ್ಲ ಎಂದು ಹೇಳಿ ಹೊರಗೆ ಕಳಿಸುತ್ತಾನೆ.

Amruthadhaare kannada Serial 24th April episode written update

ಅಣ್ಣನಿಗೆ ಜೈದೇವ್ ಖೆಡ್ಡಾ

ಇನ್ನು ಜೈದೇವ್ ಮತ್ತು ರಾಜೇಂದ್ರ ಭೂಪತಿ ಸೇರಿಕೊಂಡು ಗೌತಮ್ ದಿವಾನ್ ಅನ್ನು ನೆಲಕ್ಕುರುಳಿಸಲು ಲೆಕ್ಕಾಚಾರ ಹಾಕಿದ್ದಾರೆ. ಕಂಪನಿಯ ಒಡೆತನದ ಆಸೆ ಜೈದೇವ್ ನಲ್ಲಿದ್ದರೆ, ಗೌತಮ್ ಬೀದಿಗೆ ಬರುವುದನ್ನು ನೋಡಲು ರಾಜೇಂದ್ರ ಕಾಯುತ್ತಿದ್ದಾನೆ. ಕಂಪನಿಯ ಬೋರ್ಡ್ ಮೆಂಬರ್ಸ್ ಅನ್ನು ತನ್ನೆಡೆಗೆ ಸೆಳೆದುಳ್ಳಬೇಕು. ಈ ಮೂಲಕ ಗೌತಮ್ ಆಟವನ್ನು ಮುಗಿಸಬೇಕು. ಬಳಿಕ ದಿಯಾ ಜೊತೆಗೆ ಮದುವೆಯಾಗಿ ಜಮ್ ಅಂತ ಕಂಪನಿಯ ಒಡೆತನವನ್ನು ಅನುಭವಿಸಬೇಕು ಎಂದು ಜೈದೇವ್ ಪ್ಲಾನ್ ಮಾಡಿದ್ದಾನೆ. ಇದಕ್ಕೆ ರಾಜೇಂದ್ರ ಭೂಪತಿಯೂ ಕೂಡ ಕೈ ಜೋಡಿಸಿದ್ದಾನೆ.

ದಂಪತಿ ಕೆಟ್ಟ ನಿರ್ಧಾರ

ಮತ್ತೆ ಯಾವತ್ತೂ ಈ ಮನೆಗೆ ಬರಬೇಡಿ ಎಂದು ಹೇಳುತ್ತಾನೆ. ನಿಮ್ಮಿಂದ ನನ್ನ ಬದುಕು ಹಾಳಾಗುತ್ತೆ. ಎಲ್ಲಾದರೂ ಹೋಗಿ ಎಂದು ಕಳಿಸಿದ್ದಾನೆ. ಮನೆಯಿಂದ ಹೊರ ಬಂದ ಸದಾಶಿವ ಮತ್ತು ಮಂದಾಕಿನಿ ಎಲ್ಲಿಗೆ ಹೋಗುವುದು ಎಂಬುದು ಗೊತ್ತಾಗದೇ, ಸಾಯುವುದೇ ಮೇಲು ಎಂದು ಆಲೋಚಿಸಿದ್ದಾರೆ. ಅವಮಾನವನ್ನು ಅನುಭವಿಸುದರ ಬದಲು ಸಾಯುವುದೇ ಸರಿ ಎಂದು ಅಂದುಕೊಂಡಿದ್ದಾರೆ. ಮಗಳನ್ನು ನೋಡಲೆಂದು ಬಯಕೆ ಬುತ್ತಿ ತೆಗೆದುಕೊಂಡು ಭೂಮಿಕಾ ಮನೆಗೆ ಹೋಗಿದ್ದಾರೆ. ಇದೇ ಸಂದರ್ಭಕ್ಕೆ ಸರಿಯಾಗಿ ಮಹಿಮಾ ಬೇರೆ ದಾರಿ ಕಾಣದೆ ಗೌತಮ್ ಗೆ ಫೋನ್ ಮಾಡಿದ ನಡೆದ ಘಟನೆಯನ್ನು ವಿವರಿಸಿದ್ದಾನೆ. ಈಗ ಗೌತಮ್ ಯಾವ ರೀತಿಯಲ್ಲಿ ಸದಾಶಿವ ಮತ್ತು ಮಂದಾಕಿನಿಯನ್ನು ಬದುಕಿಸಿಕೊಳ್ಳುತ್ತಾನೆ. ಹಾಗೆಯೇ ಜೀವನಿಗೆ ಹೇಗೆ ಪಾಠ ಕಲಿಸುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Zee Kannada Amruthadhaare Serial, Sadashiva and mandakini get out of house;
Read more about: actress kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X