200 ಸಂಚಿಕೆ ಸಂಭ್ರಮದಲ್ಲಿ 'ಅಮೃತಧಾರೆ'; ಧಾರಾವಾಹಿಯಲ್ಲೀಗ ಏನು ನಡೀತಿದೆ?

By ಪೂರ್ವ

'ಅಮೃತಧಾರೆ' ಸೀರಿಯಲ್ ಜೀ ಕನ್ನಡದ ಸೂಪರ್ ಹಿಟ್ ಧಾರಾವಾಹಿ ಎಂದರೆ ತಪ್ಪಾಗದು. ಅಷ್ಟು ಅದ್ಭುತವಾಗಿ ಧಾರಾವಾಹಿ ಮೂಡಿ ಬರುತ್ತಿದೆ. ಇದೀಗ 'ಅಮೃತಧಾರೆ' ಧಾರಾವಾಹಿಗೆ 200 ದಿನದ ಸಂಭ್ರಮ. ಇದೂವರೆಗೆ ಈ ಧಾರಾವಾಹಿ 200 ಸಂಚಿಕೆಯನ್ನು ಪೂರೈಸಿದ್ದು ನೋಡುಗರಿಗೆ ಮತ್ತಷ್ಟು ಖುಷಿಯನ್ನು ನೀಡಿದೆ. ಪ್ರತಿ ಸಂಚಿಕೆಯು ಬಹಳ ಕುತೋಹಲದಿಂದ ಮೂಡಿ ಬರುತ್ತಿದ್ದು, ಧಾರಾವಾಹಿ 200 ದಿನ ಪೂರೈಸಿದೆ.

ಇದೀಗ ಧಾರಾವಾಹಿಯಲ್ಲಿ ಜೈ ದೇವ್ ಹಾಗೂ ಅಪೇಕ್ಷಾ ಮದುವೆ ಸಂಭ್ರಮ ನಡೆಯುತ್ತಿದೆ. ಆದರೆ ಜೈ ದೇವ್ ನಿಜ ಬಣ್ಣ ತಿಳಿದ ಬಳಿಕ ಭೂಮಿಕಾ ಹೇಗೆ ಸುಮ್ಮನೆ ಇರುತ್ತಾಳೆ ಎನ್ನುವುದು ಕೂಡ ಅಭಿಮಾನಿಗಳ ಪ್ರಶ್ನೆ. ತನ್ನ ತಂಗಿ ಜೊತೆ ಜೈ ದೇವ್ ಮದುವೆ ಆದರೆ ಆಕೆಯ ಜೀವನ ಹಾಳಾಗಿ ಹೋಗುತ್ತದೆ ಭೂಮಿಕಾಗೆ ಆತಂಕ. ಆಕೆ ನನ್ನ ಮುದ್ದಿನ ತಂಗಿ ಆಕೆ ಚೆನ್ನಾಗಿ ಇರಬೇಕು. ಇಂತಹ ದುಷ್ಟರ ಕೈ ಗೆ ಆಕೆಯ ಜೀವನ ಸಿಕ್ಕಿ ನಲುಗಬಾರದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

Amruthadhaare kannada serial completed 200 episode

ಇತ್ತ ಭೂಮಿಕಾ ಕಿವಿಗೆ ಜೈ ದೇವ್ ವಿಷಯ ಬೀಳುತ್ತಿದ್ದಂತೆ ಮಲ್ಲಿಯನ್ನು ಹುಡುಕಿಸುತ್ತಿರುತ್ತಾಳೆ. ಆದರೆ ಈ ವಿಚಾರ ಶಕುಂತಲಾ ದೇವಿಗೆ ಗೊತ್ತಿರುವುದಿಲ್ಲ. ಜೈ ದೇವ್ ಮಾತ್ರ ಏನೂ ಗೊತ್ತಿಲ್ಲದ ಹಾಗೆ ನಟನೆ ಮಾಡುತ್ತಾ ಮದುವೆ ಮಂಟಪದಲ್ಲಿ ಕುಳಿತುಕೊಂಡು ಇರುತ್ತಾನೆ. ಆತನಿಗೆ ಮಲ್ಲಿಯನ್ನು ಸ್ವತಃ ತನ್ನ ಅತ್ತಿಗೆ ಕರೆದುಕೊಂಡು ಬರುತ್ತಾರೆ ಅನ್ನೋ ಚಿಕ್ಕ ಸುಳಿವು ಕೂಡ ಇರುವುದಿಲ್ಲ.

ಜೈ ದೇವ್ ಮಾಸ್ಟರ್ ಪ್ಲಾನ್‌ಗೆ ಭೂಮಿಕಾ ಬ್ರೇಕ್

ಜೈ ದೇವ್ ಮಾಡಿದ ಪ್ಲಾನ್‌ಗೆ ಅಪ್ಪಿ ಜೀವನ ಹಾಳಾಗಿದೆ. ಇತ್ತ ಜೈ ದೇವ್‌ಗೆ ಇದೆಲ್ಲ ತಿಳಿದಿದ್ದರೂ, ಆತ ಮಾತ್ರ ಏನು ತಿಳಿಯದೇ ಇರುವವರ ಹಾಗೇ ಬಂದು ಇಬ್ಬರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಇದೆಲ್ಲ ವಿಚಾರ ಗೌತಮ್‌ಗೆ ಒಂದೂ ತಿಳಿದಿಲ್ಲ. ಗೌತಮ್ ತನ್ನ ತಮ್ಮನ ಮದುವೆ ಅದ್ದೂರಿಯಾಗಿ ನಡೆಯಬೇಕು ಎಂದು ಆಲೋಚನೆ ಮಾಡುತ್ತಿರುತ್ತಾನೆ. ಜೈ ದೇವ್ ಇನ್ನೊಂದು ಮುಖ ಆತನಿಗೆ ತಿಳಿದಿರುವುದಿಲ್ಲ. ತನ್ನ ತಮ್ಮ ಇಷ್ಟೊಂದು ಕೆಟ್ಟವನಾ ಎನ್ನುವುದು ಆನಂದ್ ಹಾಗೂ ಗೌತಮ್ ಮಧ್ಯೆ ತಂದಿಟ್ಟಾಗಲೇ ಯೋಚನೆ ಮಾಡಬೇಕಾಗಿತ್ತು. ಆದರೆ ಅದ್ಯಾವುದನ್ನೂ ಯೋಚನೆ ಮಾಡದೆ ನನ್ನ ತಮ್ಮ ಒಳ್ಳೆಯವನು ಎಂದು ಎಲ್ಲರೊಂದಿಗೆ ಹೇಳಿಕೊಂಡು ಬರುತ್ತಾನೆ.

ಅದ್ದೂರಿಯಾಗಿ ನಡೆಯುತ್ತಿರುವ ಮದುವೆ

ಪ್ರೋಮೋದಲ್ಲಿ ತೋರಿಸಿದ ಹಾಗೆ ಮದುವೆ ಅದ್ದೂರಿಯಾಗಿ ನಡೆಯುತ್ತಿರುತ್ತದೆ. ಆದರೆ, ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮಲ್ಲಿಯ ತಂದೆ ಜೈ ದೇವ್ ಕುತ್ತಿಗೆಯ ಬಳಿ ಕತ್ತಿ ಹಿಡಿದುಕೊಂಡು ನಿಂತು ಇರುತ್ತಾನೆ. ಇದನ್ನು ನೋಡಿದ ಜೈ ದೇವ್ ಮಾತ್ರ ಬಹಳ ಆತಂಕದಲ್ಲಿ ಇರುತ್ತಾನೆ. ಗೌತಮ್ ಕುಟುಂಬಕ್ಕೆ ಇದೊಂದು ಬಹಳ ದೊಡ್ಡ ಆಘಾತ ಆಗುತ್ತದೆ. ಆ ವೇಳೆ ಧ್ವನಿ ಎತ್ತಿದ್ದು ಶಕುಂತಲಾ ದೇವಿ "ಏನಿದು ನನ್ನ ಮಗನ ಜೀವನದಲ್ಲಿ ಏನು ಆಗುತ್ತಿದೆ?" ಎಂದಾಗ ಅತ್ತ ಕಡೆಯಿಂದ ಭೂಮಿಕಾ ನಾನು ಹೇಳುತ್ತೇನೆ ಎನ್ನುವ ಧ್ವನಿ ಬರುತ್ತದೆ.

Amruthadhaare kannada serial completed 200 episode

ಭೂಮಿಕಾ ಮಾತಿಗೆ ಮನೆಯವರೇ ಶಾಕ್

ಬಳಿಕ ಬಂದು ಜೈ ದೇವ್ ನಿಜವಾದ ಮುಖವಾಡವನ್ನು ಗೌತಮ್ ಹಾಗೂ ಎಲ್ಲರ ಎದುರು ಅನಾವರಣ ಮಾಡುತ್ತಾಳೆ. ಇದೆಲ್ಲ ನೋಡಿದ ಶಕುಂತಲಾ ಮಾತ್ರ ನಾಟಕೀಯವಾಗಿ "ನನ್ನ ಮಗ ಆ ತರದವನು ಅಲ್ಲ.. ಆತ ಒಳ್ಳೆಯವನು ಎಂದೆಲ್ಲ ಹೇಳುತ್ತಿರುತ್ತಾಳೆ. ಆದರೆ, ಇದ್ಯಾವುದನ್ನೂ ಕೇಳಲು ಭೂಮಿಕಾ ತಯಾರಿಲ್ಲ. ಆದರೆ ತಾಯಿ ಮಾತಿಗೆ ಗೌತಮ್ ಏನು ಹೇಳುತ್ತಾನೆ ಎನ್ನುವುದನ್ನು ಎಲ್ಲರೂ ಕಾಯುತ್ತ ಇದ್ದಾರೆ.

More from Filmibeat

English summary
Amruthadhaare kannada serial February 24th update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X