'ಅಮೃತಧಾರೆ'ಗೆ 500 ಎಪಿಸೋಡ್; "ಸೀರಿಯಲ್ ಬರುವಾಗ ಕರೆಂಟ್ ಹೋದರೆ ಬೇಜರಾಗುತ್ತೆ" ಎಂದ ನೆಟ್ಟಿಗರು

By ಪೂರ್ವ

'ಅಮೃತಧಾರೆ' ಧಾರಾವಾಹಿ ಈಗಾಗಲೇ ಎಲ್ಲೆಡೆ ಮೆಚ್ಚುಗೆ ಗಳಿಸಿ ನಂಬರ್ ವನ್ ಸ್ಥಾನವನ್ನು ಆವರಿಸಿಕೊಂಡಿದೆ. ಕರ್ನಾಟಕದ ಮನೆ ಮನೆಯಲ್ಲಿ ಮೆರೆದ ಧಾರಾವಾಹಿ 'ಅಮೃತಧಾರೆ' ಸಂಭ್ರಮದಲ್ಲಿ ಮುಳುಗಿದೆ. ಗೌತಮ್ ಹಾಗೂ ಭೂಮಿಕಾ ಲವ್ ಸ್ಟೋರಿ ಇಷ್ಟ ಆಗಿದೆ. ಇಬ್ಬರೂ ಜೋಡಿಯಾಗಿ ಇಷ್ಟ ಆಗಿದ್ದಾರೆ. ವೀಕ್ಷಕರು ಬಾಯ್ತುಂಬ ಹೊಗಳುತ್ತಿರುವ ಈ ಧಾರಾವಾಹಿಗೆ ಈಗ ಎರಡೆರಡು ಸಂಭ್ರಮ.

ವೀಕ್ಷಕರು ಮೆಚ್ಚಿದ ಈ ಕೌಟುಂಬಿಕ ಧಾರಾವಾಹಿ ಇತ್ತೀಚೆಗಷ್ಟೇ ನಂಬರ್ 1 ಧಾರಾವಾಹಿಯಾಗಿ ಹೊರಹೊಮ್ಮಿತ್ತು. ಅದರ ಬೆನ್ನಲ್ಲೇ 500 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಹೀಗಾಗಿ ಜೀ ಕನ್ನಡದ ಈ ಧಾರಾವಾಹಿ ತಂಡ ಡಬಲ್ ಖುಷಿಯಲ್ಲಿ ಇದೆ. ಹಾಗೇ ಈ ಸೀರಿಯಲ್‌ನ ಅಭಿಮಾನಿಗಳು ಕೂಡ ಇನ್ನೂ ಹೆಚ್ಚು ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಸೀರಿಯಲ್ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ. ಸೀರಿಯಲ್ ಬರೋವಾಗ ಕರೆಂಟ್ ಹೋದರೆ ಬೇಸರ ಆಗುತ್ತೆ ಅಂತೆಲ್ಲ ಪ್ರತಿಕ್ರಿಯೆ ನೀಡಿದ್ದಾರೆ.

Amruthadhaare Kannada serial completed 500 episodes

ಸದ್ಯ 'ಅಮೃತಧಾರೆ' ಧಾರಾವಾಹಿಯಲ್ಲಿ ಏನಾಗುತ್ತಿದೆ ಅನ್ನೋದನ್ನು ನೋಡುವುದಾರೆ, ಗೌತಮ್ ಅಪೇಕ್ಷಾಗೆ ಅದೆಷ್ಟೇ ಬುದ್ದಿ ಮಾತು ಹೇಳಿದರು ಕೂಡ ಕೇಳುವ ಸ್ಥಿತಿಯಲ್ಲಿ ಇಲ್ಲ. ಯಾಕಂದ್ರೆ ಅಪೇಕ್ಷಾ ಬಹಳ ನೋವಿನಲ್ಲಿ ಇರುತ್ತಾಳೆ. ಅದಕ್ಕೆ ಕಾರಣ ಆಕೆಗೆ ತಂದೆ ತಾಯಿಯ ಮೇಲಿರುವ ಬೇಸರ. ತಂದೆ ತಾಯಿಯ ಮೇಲೆ ಮಕ್ಕಳಿಗೆ ಅದೆಷ್ಟೇ ಬೇಸರ ಇದ್ದರೂ ಕೂಡಾ ಹೆತ್ತವರಿಗೆ ತನ್ನ ಮಕ್ಕಳು ಮುದ್ದು. ಹೆತ್ತವರಿಗೆ ಅವರು ಅದೆಷ್ಟೇ ನೋವು ನೀಡಿದರೂ ಕೂಡ ಅದೆಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಇರುತ್ತಾರೆ. ಇದೀಗ ಅಪ್ಪಿ ಮಾತಿನಿಂದ ಸದಾಶಿವ ಹಾಗೂ ಮಂದಾಕಿನಿಗೆ ಬಹಳಷ್ಟು ನೋವಾಗಿದೆ.

ಅಪೇಕ್ಷಾಳನ್ನು ಬಹಳ ಪ್ರೀತಿಯಿಂದ ಸಾಕಿದ ತಂದೆ ತಾಯಿಗೆ ಅಪ್ಪಿ ಕೊಡುತ್ತಿರುವ ಉಡುಗೊರೆ ಇದೇನಾ ಎಂದು ವೀಕ್ಷಕರು ಕೂಡ ಬೇಸರ ಪಟ್ಟುಕೊಂಡಿದ್ದಾರೆ. ತಂದೆಯ ಬಳಿ ಸಾರಿ ಕೂಡ ಕೇಳದೆ ಸುಮ್ಮನೆ ನಿಂತಿದ್ದ ಅಪ್ಪಿ ಬಗ್ಗೆ ಗೌತಮ್ ಕಟುವಾಗಿ ಮಾತನಾಡಿದ್ದಾರೆ. ಮನೆಯಿಂದ ಭೂಮಿಕಾ ತಂದೆ ತಾಯಿ ಬಹಳ ನೋವಿನಿಂದ ಹೊರಡುತ್ತಾರೆ. ಮನೆಯಿಂದ ಹೊರ ಹೋಗುವ ಮುನ್ನ ಜೀವ ಹಾಗೂ ಮಹಿಮಾ ಮನೆಯ ಗೃಹಪ್ರವೇಶಕ್ಕೆ ಕರೆದು ಅಲ್ಲಿಂದ ಹೊರಟು ಹೋಗುತ್ತಾರೆ.

Amruthadhaare Kannada serial completed 500 episodes

ಇತ್ತ ಅಪ್ಪಿ ಬಹಳ ನೋವಿನಿಂದ ಅಳುತ್ತಿರಬೇಕಾದರೆ ಪಾರ್ಥ ಸಮಾಧಾನ ಹೇಳಿದನು. ಆದರೆ ಪಾರ್ಥ ಮಾತಿಗೆ ಕ್ಯಾರೆ ಎನ್ನದೆ ಸುಮ್ಮನೆ ಒಂಟಿಯಾಗಿ ಕುಳಿತುಕೊಂಡು ಆಲೋಚನೆ ಮಾಡುತ್ತಿರುವಾಗ ಭೂಮಿಕಾ ಬರುತ್ತಾಳೆ. ಭೂಮಿಕಾ ಅಲ್ಲಿಗೆ ತನ್ನ ಕೈಯಲ್ಲಿ ಆದ ಸಮಾಧಾನ ಮಾಡುತ್ತಾಳೆ. ಆದರೆ ಅಪ್ಪಿ ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ.

ಇನ್ನು ಗೌತಮ್‌ಗೆ ಬಹಳ ವರ್ಷಗಳಿಂದ ಹುಡುಕಾಡುತ್ತಿದ್ದ ತನ್ನ ತಾಯಿ ಹಾಗೂ ತಂಗಿ ಸಿಕ್ಕಿದ್ದಾರೆ. ಆದರೆ, ಅಮ್ಮನಿಗೆ ಯಾವುದು ನೆನಪಿರಲಿಲ್ಲ. ಶಾಕುಂತಲಾ ದೇವಿಯನ್ನು ಗುರುತು ಹಿಡಿದಿರಲಿಲ್ಲ. ಹೀಗಾಗಿ ಶಾಕುಂತಲಾ ದೇವಿ ನಿಟ್ಟುಸಿರು ಬಿಟ್ಟಿದ್ದರು. ಆದ್ರೀಗ ಗೌತಮ್ ತಾಯಿಗೆ ಶಾಕುಂತಲಾ ದೇವಿ ನೋಡಿ ಹಳೆಯದ್ದು ನೆನಪಾಗುವ ಸನ್ನಿವೇಶ ಎದುದಾಗಿದೆ. ಭೂಮಿಕಾ ಮುಂದೆ ಭಾಗ್ಯಮ್ಮನ ಭಯಕ್ಕೆ ಕಾರಣ ಹೊರಬೀಳುತ್ತಾ? ಶಕುಂತಲಾ ದೇವಿ ಅಸಲಿ ಮುಖವಾಡ ಕಳಚಿ ಬೀಳುತ್ತಾ? ನೋಡಬೇಕಿದೆ.

More from Filmibeat

English summary
Amruthadhaare Kannada serial completed 500 episodes;
Read more about: serial filmibeat original poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X