Amruthadhaare: 'ಅಮೃತಧಾರೆ'ಯಲ್ಲೀಗ ಜೈದೇವ್ ಮಲ್ಲಿ ಪಾತ್ರವೇ ಹೈಲೈಟ್; ಸದ್ಯದಲ್ಲೇ ಇದೆ ಟ್ವಿಸ್ಟ್

By ಪೂರ್ವ

ಮಲ್ಲಿಗೆ ಇದೀಗ ತನ್ನ ಗಂಡನ ಬಗ್ಗೆ ಎಲ್ಲವೂ ವಿಷಯವೂ ತಿಳಿದು ಹೋಗಿದೆ. ತನ್ನಿಂದ ಏನೆಲ್ಲಾ ವಿಷಯವನ್ನು ಜೈದೇವ್ ಮುಚ್ಚಿಟ್ಟಿದ್ದಾನೆ. ಹಾಗೆ ತನ್ನನ್ನು ಪ್ರೀತಿಸುವ ಹಾಗೆ ನಟನೆ ಮಾಡಿ, ಬೇರೊಬ್ಬಳ ಜೊತೆ ಅಕ್ರಮ ಸಂಬಂಧವನ್ನ ಇಟ್ಟುಕೊಂಡಿರುವ ಜೈದೇವ್ ಬಗ್ಗೆಯೂ ಮಲ್ಲಿಗೆ ಗೊತ್ತಾಗಿದೆ. ಆದರೆ, ಅದ್ಯಾವುದನ್ನೂ ತೋರಿಸಿಕೊಳ್ಳುತ್ತಿಲ್ಲ. ತನ್ನ ಗಂಡ ಯಾರು ಎದುರು ಕೂಡ ತಲೆ ತಗ್ಗಿಸಬಾರದು ಎನ್ನುವುದು ಮಲ್ಲಿಯ ಉದ್ದೇಶ ಇನ್ನು ಜೈದೇವ್ ಅನ್ನು ಕಾಪಾಡಿಕೊಂಡು ಬರುತ್ತಿದೆ.

ಒಂದು ವೇಳೆ ಈ ವಿಚಾರ ತಿಳಿದರೆ ಆತ ಮಲ್ಲಿಯನ್ನು ಸಾಯಿಸಲು ಕೂಡ ಹಿಂದೆ ಮುಂದೆ ನೋಡುದಿಲ್ಲ. ಜೈದೇವ್‌ಗೆ ಮಲ್ಲಿಯ ಮೇಲೆ ಸ್ವಲ್ಪವೂ ಪ್ರೀತಿ ಇಲ್ಲ. ಹೇಗಪ್ಪ ಇವಳಿಂದ ತಪ್ಪಿಸಿಕೊಳ್ಳುವುದು ಅಂತ ಸಿಕ್ಕಾಪಟ್ಟೆ ಪ್ಲ್ಯಾನ್ ಮಾಡಿರುತ್ತಾನೆ. ಹಾಗೆ ಮಲ್ಲಿಯನ್ನು ಸಾಯಿಸಲು ಆಸ್ಪತ್ರೆಯಲ್ಲಿಯೇ ಜೈದೇವ್ ಪ್ಲಾನ್ ಕೂಡ ಮಾಡಿರುತ್ತಾನೆ. ಇದೆಲ್ಲವನ್ನ ಮೆಟ್ಟಿನಿಂತು ಇದೀಗ ಮಲ್ಲಿ ಬದುಕಿದ್ದಾಳೆ. ಆದರೆ ತನ್ನ ಗಂಡ ತನ್ನ ಸಾಯಿಸಲು ಯತ್ನಿಸಿದ ಎನ್ನುವ ವಿಚಾರ ಮಲ್ಲಿಗೆ ಇನ್ನೂ ತಿಳಿದಿಲ್ಲ.

Amruthadhaare Kannada serial highlighting Malli and Jaydev Character

ಮಲ್ಲಿಯ ಗೆಳತಿ ಜೈದೇವ್ ಎಲ್ಲಾ ಪ್ಲ್ಯಾನ್‌ಗಳನ್ನು ಹಾಳು ಮಾಡಿ ಮಲ್ಲಿಯನ್ನು ಕಾಪಾಡಿಕೊಂಡಿದ್ದಾಳೆ. ಇನ್ನು ಮಲ್ಲಿ ತನ್ನ ಮಗು ಬಗ್ಗೆ ಹೆಚ್ಚಾಗಿ ಚಿಂತೆ ಮಾಡುತ್ತಿರುತ್ತಾಳೆ. ಭೂಮಿಗೆ ಬರುವ ಮುಂಚೆಗೆ ತನ್ನ ಕಂದ ದೇವರ ಪಾದ ಸೇರಿಕೊಂಡಿದೆ ಎನ್ನುವ ಸುದ್ದಿ ಕೇಳಿ ಮಲ್ಲಿಗೆ ಬಹಳ ನೋವಾಗಿದೆ. 9 ತಿಂಗಳು ಹೊಟ್ಟೆಯಲ್ಲಿ ಹೊತ್ತುಕೊಂಡು ತಿರುಗಾಡಿದೆ. ಆದರೆ ಮಗುವನ್ನು ಕೈಯಲ್ಲಿ ಹಿಡಿದುಕೊಳ್ಳುವ ಭಾಗ್ಯ ಮಗು ಜೊತೆ ಆಟ ಆಡುವ ಭಾಗ್ಯ ನನಗೆ ಇನ್ನೂ ಕೂಡ ಬಂದಿಲ್ಲ ಎಂದು ಬಹಳ ಬೇಸರ ಪಟ್ಟುಕೊಳ್ಳುತ್ತಾಳೆ.

ಮಲ್ಲಿಯ ಮಾತಿಗೆ ಭೂಮಿಕಾ ಕಣ್ಣೀರು

ಮಲ್ಲಿಯ ಮಾತಿಗೆ ಭೂಮಿಕಾ ಕೂಡ ಕಣ್ಣೀರು ಹಾಕುತ್ತಾರೆ. ಭೂಮಿಕಾಗೆ ಮಲ್ಲಿ ಎಂದರೆ ಬಹಳ ಪ್ರೀತಿ. ತನ ಸ್ವಂತ ತಂಗಿಗಿಂತ ಹೆಚ್ಚು ಪ್ರೀತಿಯನ್ನು ಮಲ್ಲಿಗೆ ನೀಡುತ್ತಾಳೆ. ಮಲ್ಲಿಗೆ ತನ್ನ ಗಂಡನ ಬಗ್ಗೆ ಇದ್ದ ಯೋಚನೆ ತಪ್ಪು, ಆತ ತನಗೆ ಸರಿಯಾದ ಗಂಡನಲ್ಲ. ಆತ ಬೇರೆಯವರ ಜೊತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಾನೆ ಎನ್ನುವುದು ಮಲ್ಲಿಗೆ ಸ್ಪಷ್ಟವಾಗಿ ಗೊತ್ತದ ಬಳಿಕ ಭೂಮಿಕಾ ಬಳಿ ಕ್ಷಮೆಯನ್ನು ಕೂಡ ಕೇಳುತ್ತಾಳೆ.

Amruthadhaare Kannada serial highlighting Malli and Jaydev Character

ದುಃಖ ತೋಡಿಕೊಂಡ ಮಲ್ಲಿ

"ನನಗೆ ಇನ್ನೊಂದು ಚಾನ್ಸ್ ಕೊಡಿ. ಯಾವತ್ತೂ ಹೀಗೆ ಮಾಡುವುದಿಲ್ಲ" ಎಂದು ಬೇಡಿಕೊಂಡಿದ್ದಾಳೆ. ಭೂಮಿಕಾ ಬಹಳ ಒಳ್ಳೆಯವಳು. ಆಕೆಗೆ ಇದೆಲ್ಲವನ್ನೂ ನೋಡಿ ಬಹಳ ಬೇಸರವಾಗಿದೆ. ಇನ್ನು ಮಲ್ಲಿ ಒಬ್ಬಳೆ ಕುಳಿತುಕೊಂಡು ಯೋಚನೆ ಮಾಡುತ್ತಿರುವಾಗ ಜೈದೇವ್ ಮಲ್ಲಿಯ ಹತ್ತಿರ ಬರುತ್ತಾನೆ.

ಜೈ ದೇವ್‌ನನ್ನು ನೋಡಿ ಬೆಚ್ಚಿದ್ದ ಮಲ್ಲಿ

"ಏನು ಮಲ್ಲಿ ಏನು ಯೋಚನೆ ಮಾಡುತ್ತಿದ್ದೀಯಾ? ನೀನು ಈಗ ಏನು ಯೋಚನೆ ಮಾಡಬಾರದು. ನೀನು ಚೆನ್ನಾಗಿರಬೇಕು" ಎಂದು ಹೇಳುತ್ತಾನೆ. ಇದನ್ನು ಕೇಳಿದ ಮಲ್ಲಿಗೆ ಏನು ಹೇಳಬೇಕು ತಿಳಿಯುವುದಿಲ್ಲ. ಮಲ್ಲಿಗೆ ಸಮಾಧಾನ ಮಾಡುವ ನೆಪದಲ್ಲಿ ಆಕೆಯ ಮೈ ಮುಟ್ಟಲು ಜೈ ದೇವ್ ಬರುತ್ತಾನೆ. ಆದರೆ ಮಲ್ಲಿ ಇದೆಲ್ಲವನ್ನೂ ನೋಡಿ ಬೆಚ್ಚಿ ಬೀಳುತ್ತಾಳೆ. ಬೇಡ ಬೇಡ ಎಂದು ಅರಚಿಕೊಳ್ಳುತ್ತಾಳೆ. ಇದೆಲ್ಲವನ್ನೂ ನೋಡಿದ ಜೈ ದೇವ್‌ಗೆ ಶಾಕ್ ಆಗುತ್ತೆ. ಇಲ್ಲಿವರೆಗೆ ಚೆನ್ನಾಗಿದ್ದ ಮಲ್ಲಿಗೆ ಈಗ ಸಡನ್ ಆಗಿ ಏನಾಯ್ತು? ಎನ್ನುವ ಪ್ರಶ್ನೆ ಆತನನ್ನು ಕಾಡುತ್ತದೆ.

ಇನ್ನು ಭೂಮಿಕಾ ರಾತ್ರಿ ನಿದ್ದೆ ಮಾಡುವ ಹೊತ್ತಲ್ಲಿ ಲೈಟ್ ಆಫ್ ಮಾಡುತ್ತಾಳೆ. ಇದನ್ನು ನೋಡಿದ ಗೌತಮ್‌ಗೆ ಬಹಳ ಹೆದರಿಕೆಯಾಗುತ್ತದೆ. "ನನಗೆ ಲೈಟ್ ಹಾಕಿ ಮಲಗಿ ಅಭ್ಯಾಸ. ದಯವಿಟ್ಟು ಲೈಟ್ ಆರಿಸಬೇಡಿ" ಎಂದು ಭೂಮಿಕಾ ಬಳಿ ಪರಿಪರಿಯಾಗಿ ಕೇಳಿಕೊಳ್ಳುತ್ತಾನೆ. ಆಗ ಭೂಮಿಕಾ "ಕತ್ತಲು ಎಂದರೆ ನಿಮಗೆ ಯಾಕೆ ಭಯ? ಎಂದು ಹೇಳಿದಾಗ ಗೌತಮ್ "ತನ್ನ ತಾಯಿ" ಎಂದು ಹೇಳಿ ಅಲ್ಲಿಗೆ ಸುಮ್ಮನಾಗುತ್ತಾರೆ. ಅಲ್ಲಿಗೆ ಇನ್ನೊಂದು ಟ್ವಿಸ್ಟ್ ಸದ್ಯದಲ್ಲೇ ಇದೆ ಅಂತಾಯ್ತು.

More from Filmibeat

English summary
Amruthadhaare Kannada serial highlighting Malli and Jaydev Character
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X