Amruthadhaare:ಎಲ್ಲರ ಮೆಚ್ಚುಗೆ ಗಳಿಸಿದ 'ಅಮೃತಧಾರೆ' ಧಾರಾವಾಹಿ; ಈಗ ಕನ್ನಡ ಕಿರುತೆರೆಯ ನಂ 1 ಸೀರಿಯಲ್

By ಪೂರ್ವ

'ಅಮೃತಧಾರೆ' ಈ ಧಾರಾವಾಹಿಯಲ್ಲಿ ಏನಾಗುತ್ತಿದೆ ಎಂದು ನೋಡಲು ಹೋಗುವುದಾರೆ, ಗೌತಮ್ ಅಪೇಕ್ಷಾಗೆ ಅದೆಷ್ಟೇ ಬುದ್ದಿ ಮಾತು ಹೇಳಿದ್ದಾನೆ. ಆದರೆ, ಅದೆಷ್ಟೇ ಮಾತು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅಪೇಕ್ಷಾ ಇರುವುದಿಲ್ಲ. ಅಪೇಕ್ಷಾ ಬಹಳ ನೋವಿನಲ್ಲಿ ಇರುತ್ತಾಳೆ. ಅದಕ್ಕೆ ಕಾರಣ ಆಕೆಗೆ ತಂದೆ ತಾಯಿಯ ಮೇಲಿರುವ ಬೇಸರ. ತಂದೆ ತಾಯಿಯ ಮೇಲೆ ಮಕ್ಕಳಿಗೆ ಅದೆಷ್ಟೇ ಬೇಸರ ಇದ್ದರೂ ಕೂಡಾ ಹೆತ್ತವರಿಗೆ ತನ್ನ ಮಕ್ಕಳು ಮುದ್ದು. ಮಕ್ಕಳು ಅದೆಷ್ಟೇ ಹೆತ್ತವರಿಗೆ ನೋವು ನೀಡಿದರು ಕೂಡ ಅದೆಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಇರುತ್ತಾರೆ. ಇದೀಗ ಅಪ್ಪಿ ಮಾತಿನಿಂದ ಸದಾಶಿವ ಹಾಗೂ ಮಂದಾಕಿನಿಗೆ ಬಹಳಷ್ಟು ನೋವು ಆಗುತ್ತದೆ.

ಅಪೇಕ್ಷಳನ್ನು ಬಹಳ ಪ್ರೀತಿಯಿಂದ ಸಾಕಿದ ತಂದೆ ತಾಯಿಗೆ ಅಪ್ಪಿ ಕೊಡುತ್ತಿರುವ ಉಡುಗೊರೆ ಇದೇನಾ ಎಂದು ವೀಕ್ಷಕರು ಕೆಂಡ ಕಾರುತ್ತಿದ್ದಾರೆ. ತಂದೆಯ ಬಳಿ ಕ್ಷಮೆ ಕೇಳದೆ ಸುಮ್ಮನೆ ನಿಂತಿದ್ದ ಅಪ್ಪಿ ಬಗ್ಗೆ ಗೌತಮ್ ಕಟುವಾಗಿ ಮಾತಾಡಿದ್ದಾನೆ. ಕೊನೆಗೂ ಗೌತಮ್ ಮಾತಿಗೆ ಕಟ್ಟಿ ಬಿದ್ದು ತನ್ನ ಹೆತ್ತವರ ಬಳಿ ಕ್ಷಮೆ ಕೇಳುತ್ತಾಳೆ. ಭೂಮಿಕಾಗೆ ಅಪ್ಪಿಯ ವರ್ತನೆ ಹೊಸದು ಎಂದು ಎನಿಸುವುದು ಇಲ್ಲ. ಯಾಕೆಂದರೆ ಅಪ್ಪಿ ಇರುವುದೇ ಹಾಗೆ ಎನ್ನುವುದು ಆಕೆಗೆ ಈ ಮುಂಚಿತವಾಗಿ ತಿಳಿದಿದೆ. ಆದರೆ ತಂದೆ ತಾಯಿಯ ಬಳಿ ಈ ನಡೆದುಕೊಂಡಿದ್ದು ಸರಿಯಲ್ಲ ಎಂದು ಭೂಮಿಕಾಗೆ ಅನ್ನಿಸಿದೆ. ಆದರೆ ಅಪ್ಪಿ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಇದರಿಂದ ಭೂಮಿಕಾ ಅಪ್ಪಿ ಬಳಿ ಏನು ಮಾತನಾಡಲು ಹೋಗುವುದು ಇಲ್ಲ.

Amruthadhaare Kannada serial January 10th 2025 episode 498 update

ಮನೆಯಿಂದ ಭೂಮಿಕಾ ತಂದೆ ತಾಯಿ ಬಹಳ ನೋವಿನಿಂದ ಹೊರಡುತ್ತಾರೆ. ಮನೆಯಿಂದ ಹೊರ ಹೋಗುವ ಮುನ್ನ ಜೀವ ಹಾಗೂ ಮಹಿಮಾ ಮನೆಯ ಗೃಹಪ್ರವೇಶಕ್ಕೆ ಕರೆದು ಅಲ್ಲಿಂದ ಹೊರಟು ಹೋಗುತ್ತಾರೆ. ತಂದೆ ತಾಯಿಯ ಮೊಗದಲ್ಲಿ ಬಹಳಷ್ಟು ನೋವು ಇರುವುದನ್ನು ನೋಡಿದ ಭೂಮಿಕಾಗೆ ತಡೆದುಕೊಳ್ಳಲಾರದಷ್ಟು ನೋವು ಇರುತ್ತದೆ. ಯಾರ ಬಳಿಯೂ ತನ್ನ ನೋವನ್ನು ಹೇಳಲು ಆಗದೆ ಭೂಮಿಕಾ ಒದ್ದಾಡುತ್ತಿರುತ್ತಾಳೆ. ಆದರೆ ಗೌತಮ್ ಮಾತ್ರ ಅಪ್ಪಿ ಜೊತೆ ನಡೆದುಕೊಂಡ ರೀತಿ ಭೂಮಿಕಾಗೆ ಬಹಳ ಆಶ್ಚರ್ಯ ನೀಡಿತ್ತು. ಭೂಮಿಕಾ ಗಂಡನ ಬಳಿ ಈ ಬಗ್ಗೆ ಕೇಳಿದ್ದಕ್ಕೆ ನಿಮ್ಮ ತಂದೆ ತಾಯಿ ನನಗೆ ತಂದೆ ತಾಯಿ. ಆ ಕಾರಣಕ್ಕೆ ನನಗೆ ಅಪೇಕ್ಷಾ ಮಾತು ಇಷ್ಟ ಆಗಲಿಲ್ಲ. ಆಕೆಯ ಮಾತಿನ ದಾಟಿಗೆ ನಾನು ಹೀಗೆಯೇ ಉತ್ತರ ನೀಡಬೇಕಾಗಿತ್ತು ಎಂದು ಹೇಳುತ್ತಾನೆ.

ಇತ್ತ ಅಪ್ಪಿ ಬಹಳ ನೋವಿನಿಂದ ಅಳುತ್ತಿರಬೇಕಾದರೆ ಪಾರ್ಥ ಸಮಾಧಾನ ಹೇಳಿದ್ದಾನೆ. ಆದರೆ, ಪಾರ್ಥ ಮಾತಿಗೆ ಕ್ಯಾರೆ ಎನ್ನದೆ ಸುಮ್ಮನೆ ಒಂಟಿಯಾಗಿ ಕುಳಿತುಕೊಂಡು ಆಲೋಚನೆ ಮಾಡುತ್ತಿರುವಾಗ ಭೂಮಿಕಾ ಬರುತ್ತಾಳೆ. ಭೂಮಿಕಾ ಅಲ್ಲಿಗೆ ತನ್ನ ಕೈಯಲ್ಲಿ ಆದ ಸಮಾಧಾನ ಮಾಡುತ್ತಾಳೆ. ಆದರೆ ಅಪ್ಪಿ ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಜೀವ ಮನೆಯ ಗೃಹಪ್ರವೇಶಕ್ಕೆ ನಾನು ಬರುವುದು ಇಲ್ಲ ಎಂದು ಖಡಕ್ ಆಗಿ ಹೇಳುತ್ತಾಳೆ. ಅಪೇಕ್ಷಾಗೆ ತಾನು ತಪ್ಪಾಗಿ ನಡೆದುಕೊಳ್ಳುತ್ತಿದ್ದೇನೆ ಎಂಬುವುದು ಅರ್ಥ ಆಗುತ್ತಿಲ್ಲ ಎಂದು ಅನೇಕ ವೀಕ್ಷಕರು ಬೇಸರ ವ್ಯಕ್ತ ಪಡಿಸಿದ್ದಾರೆ.

ಹೀಗಾಗಿ ಟ್ವಿಸ್ಟ್, ಸೆಂಟಿಮೆಂಟ್ ಅಂತ ವೀಕ್ಷಕರನ್ನು ಈ ಧಾರಾವಾಹಿ ಹಿಡಿಟ್ಟುಕೊಂಡಿದೆ. 'ಅಮೃತಧಾರೆ' ಧಾರಾವಾಹಿ ಈಗಾಗಲೇ ಎಲ್ಲೆಡೆ ಮೆಚ್ಚುಗೆ ಗಳಿಸಿ ನಂಬರ್ ವನ್ ಸ್ಥಾನವನ್ನು ಆವರಿಸಿಕೊಂಡಿದೆ. ಕರ್ನಾಟಕದ ಮನೆ ಮನೆಯಲ್ಲಿ ಮೆರೆದ ಧಾರಾವಾಹಿ ಅಮೃತಧಾರೆ ಕನ್ನಡ ಧಾರಾವಾಹಿಗಳಲ್ಲಿ ಅಗ್ರ ಸ್ಥಾನ ಗಿಟ್ಟಿಸಿಕೊಂಡಿದೆ. ಎರಡನೇ ಸ್ಥಾನ 'ಅಣ್ಣಯ್ಯ' ಧಾರಾವಾಹಿಗೆ ಗಿಟ್ಟಿಸಿಕೊಂಡಿದೆ. 9.8 ಟಿಆರ್‌ಪಿ ಮೂಲಕ ಕರ್ನಾಟಕ ಪ್ರೇಕ್ಷಕರ ಮನಗೆದ್ದ ಧಾರಾವಾಹಿಯಾಗಿ 'ಅಮೃತಧಾರೆ' ಹೊರಹೊಮ್ಮಿದೆ.

Amruthadhaare Kannada serial January 10th 2025 episode 498 update

ಇನ್ನು ಎಪಿಸೋಡ್‌ನಲ್ಲಿ ಗೌತಮ್ ತನ್ನ ತಂಗಿಯನ್ನು ಕರೆದು ರಕ್ಷಾ ಬಂಧನದ ಕಟ್ಟುವಂತೆ ಹೇಳಿದಾಗ ಪಾಪ ಸುಧಾಗೆ ಬಹಳ ಖುಷಿ ಆಗುತ್ತೆ. ಪ್ರತಿ ವರ್ಷ ಗೌತಮ್ ರಕ್ಷಾ ಬಂಧನದ ದಿನದಂದು ತನ್ನ ಪ್ರೀತಿಯ ತಂಗಿಯ ನೆನಪಾಗಿ ಒಂದು ರಕ್ಷಾ ಬಂಧನ ಎತ್ತಿಡುತ್ತಿದ್ದರು. ಆದರೆ, ಇದೀಗ ತನ್ನ ತಂಗಿಯ ಬಳಿ ಇದೆಲ್ಲವನ್ನೂ ಒಂದೇ ದಿನ ತನ್ನ ಕೈಗೆ ಕಟ್ಟುವಂತೆ ಹೇಳಿದಾಗ ಸುಧಾಗೆ ಎಲ್ಲಿಲ್ಲದ ಖುಷಿ ಆಗುತ್ತದೆ.

More from Filmibeat

English summary
Amruthadhaare Kannada serial January 10th 2025 episode 498 update
Read more about: serial filmibeat original poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X