Amruthadhaare:ಬದಲಾದ ಜೀವನನ್ನು ನೋಡಿ ಮರುಗಿದ ಗೌತಮ್; ಮತ್ತೊಂದು ಅಧ್ಯಾಯ ಶುರು!

By ಪೂರ್ವ

ಭೂಮಿಕಾ ತವರು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಭೂಮಿಕಾಗೆ ತನ್ನ ತವರು ಮನೆಯೆಂದರೆ ಎಲ್ಲಿಲ್ಲದ ಪ್ರೇಮ. ಆಕೆಗೆ ತನ್ನ ತಮ್ಮ, ತಂಗಿ, ಅಪ್ಪ, ಅಮ್ಮ ಎಂದರೆ ಸಾಕು ಒಂದು ಕ್ಷಣ ಹಳೆಯ ನೆನಪುಗಳ ಮಧ್ಯೆ ಜಾರಿ ಬಿಡುತ್ತಾಳೆ. ಆದರೆ, ಇದೀಗ ಜೀವ ಪಾತ್ರಧಾರಿಯ ಸ್ವಭಾವ ಬದಲಾಗಿದೆ. ಹಾಗೆಯೇ ಧಾರಾವಾಹಿಯಲ್ಲಿ ಈ ಪಾತ್ರ ಮಾಡುತ್ತಿದ್ದ ಶಶಿ ಹೆಗಡೆ ಕೂಡ ಬದಲಾಗಿದ್ದಾರೆ. ಹೌದು, ಶಶಿ ಹೆಗಡೆ ಜಾಗಕ್ಕೆ ಇದೀಗ ಹೊಸ ನಟನ ಆಗಮನವಾಗಿದೆ. ಶಶಿ ಹೆಗಡೆ ಯಾಕೆ ಅಮೃತಧಾರೆ ಧಾರಾವಾಹಿಯಿಂದ ದೂರ ಹೋದರು ಎನ್ನುವ ವಿಚಾರ ಇನ್ನಷ್ಟೇ ತಿಳಿಯಬೇಕಾಗಿದೆ.

ಧಾರಾವಾಹಿಯ ಪಾತ್ರಧಾರಿಯ ಬದಲಾವಣೆ ಒಂದು ಕಡೆಯಾದರೆ, ಜೀವ ಕೂಡ ತನ್ನ ಬಾವನ ವಿರುದ್ದವಾಗಿ ನಿಂತಿರುವುದು ಇನ್ನೊಂದು ಕಡೆ. ಗೌತಮ್‌ಗೆ ಜೀವ ಎಂದರೆ ಬಹಳಷ್ಟು ಪ್ರೀತಿ. ಆತನಿಗೆ ಬ್ಯುಸಿನೆಸ್ ಮಾಡಲು ಸಹಾಯ ಮಾಡಿದ್ದು ಇದೇ ಗೌತಮ್. ತನ್ನ ತಂಗಿ ಮಹಿಮಾ ಜೀವನನ್ನು ಪ್ರೀತಿ ಮಾಡುತ್ತಿದ್ದಾಳೆ ಎಂದು ತಿಳಿದ ಕೂಡಲೇ ಶಕುಂತಲಾ ದೇವಿಯ ಮನವೊಲಿಸಿ ಮದುವೆ ಮಾಡಿದ್ದೆ ಗೌತಮ್. ಆದರೆ ಇದೀಗ ಗೌತಮ್‌ಗೆ ಎದುರಾಗಿ ಜೀವ ನಿಂತಿದ್ದಾನೆ.

Amruthadhaare Kannada serial January 16th episode 503 update

ಜೀವ ಮತ್ತು ಮಹಿಮಾ ಗೃಹ ಪ್ರವೇಶದ ಸಂಭ್ರಮದಲ್ಲಿ ಎಲ್ಲರೂ ಕೂಡ ಇದ್ದಾರೆ. ಬಹಳ ಸುಂದರವಾದ ಮನೆಯನ್ನು ಜೀವ ಹಾಗೂ ಮಹಿಮಾ ಕಟ್ಟಿಸಿದ್ದಾರೆ. ಜೀವ ನಡೆದುಕೊಂಡು ಬಂದ ಹಾದಿಯನ್ನು ನೋಡಿದ ಭೂಮಿಕಾಗೆ ಬಹಳಷ್ಟು ಖುಷಿಯಾಗಿದೆ. ತನ್ನ ತಮ್ಮ ಕಟ್ಟಿಸಿದ ಮನೆ ಎನ್ನುವ ಹೆಮ್ಮೆ ಆಕೆಗೆ. ಆದರೆ ಅಪ್ಪಿ ಒಂದು ಕಡೆ ಭೂಮಿಕಾ ವಿರುದ್ಧ ನಿಂತಿದ್ದರೆ. ಇತ್ತ ಜೀವ ತನ್ನ ಬಾವನ ವಿರುದ್ಧವೇ ನಿಂತು ಬಿಟ್ಟಿದ್ದಾನೆ. ಭೂಮಿಕಾಗೆ ಸ್ವಂತ ಸಹೋದರ ಸಹೋದರಿ ಉಲ್ಟಾ ಹೊಡೆಯುತ್ತಿದ್ದಾರೆ.

ಬಹಳ ಖುಷಿಯಲ್ಲಿದ್ದ ಗೌತಮ್ ಬಂದು "ಜೀವ ಮನೆ ತುಂಬಾ ಚೆನ್ನಾಗಿದೆ. ನೀನು ಅಂದುಕೊಂಡಿದ್ದನ್ನು ಅಚೀವ್ ಮಾಡಿಯೇ ಬಿಟ್ಟೆ. ನಾನು ನಿನ್ನ ಕೆಲಸದ ಬಗ್ಗೆ ಬಹಳ ಹೆಮ್ಮೆ ಪಡುತ್ತೇನೆ" ಎಂದಾಗ ಜೀವ ಬಹಳ ಕಟುವಾಗಿ "ನಾನು ಇದೀಗ ಹಳೆಯ ಜೀವ ಅಲ್ಲ" ಎಂದು ಹೇಳುತ್ತಾನೆ. ಆ ಕೂಡಲೇ ಜೀವನ ಹೊಸ ಮನೆಗೆ ರಾಜೇಂದ್ರನ ಎಂಟ್ರಿ ಆಗುತ್ತದೆ. ರಾಜೇಂದ್ರನನ್ನು ನೋಡಿದ ಜೀವ ಓಡಿ ಹೋಗಿ ತಬ್ಬಿಕೊಳ್ಳುತ್ತಾನೆ. ಜೀವ, ಮಹಿಮಾ ಗೃಹ ಪ್ರವೇಶದಲ್ಲಿ ರಾಜೇಂದ್ರನನ್ನು ನೋಡಿದ ಗೌತಮ್‌ಗೆ ಶಾಕ್ ಆಗುತ್ತೆ.

ಜೀವ ನಡವಳಿಕೆಗೆ ದಂಗಾದ ಗೌತಮ್

ಗೌತಮ್ ಹಾಗೂ ರಾಜೇಂದ್ರ ಹಾವು ಮುಂಗುಸಿಯ ಹಾಗೆ. ಆದರೆ, ಜೀವ ಹಿಂದೆ ರಾಜೇಂದ್ರ ಇದ್ದಾನೆ ಎಂದು ತಿಳಿದು ಬಹಳಷ್ಟು ಕೋಪ ಕೂಡ ಬರುತ್ತೆ. ರಾಜೇಂದ್ರನಿಗೆ ಗೌತಮ್ ಕಂಡರೆ ಆಗುವುದು ಇಲ್ಲ. ಗೌತಮ್ ಕೊಟ್ಟ ಒಂದೇ ಒಂದು ಕಂಪ್ಲೇಂಟ್‌ನಿಂದಾಗಿ ರಾಜೇಂದ್ರ ಸಾಕಷ್ಟು ದಿನ ಜೈಲಲ್ಲಿ ಕಳೆದಿದ್ದಾನೆ. ಆದರೆ, ಇದೆಲ್ಲವನ್ನೂ ನೆನಪಲ್ಲಿ ಇಟ್ಟುಕೊಂಡ ರಾಜೇಂದ್ರ, ಗೌತಮ್ ದಿವಾನ್‌ನನ್ನು ನಾನು ಸುಮ್ಮನೆ ಬಿಡುವುದು ಇಲ್ಲ. ಆತ ಮಾಡಿರುವುದು ಸರಿಯಲ್ಲ ಎಂದು ಪದೇ ಪದೇ ಹೇಳುತ್ತಿರುತ್ತಾನೆ. ಜೀವವನ್ನು ಮುಂದಿಟ್ಟುಕೊಂಡು ಗೌತಮ್ ಆಟ ಆಡಿಸುವ ಪ್ರಯತ್ನ ಆಗುತ್ತಿರುವುದು ಗೊತ್ತಾಗಿದೆ.

ರಾಜೇಂದ್ರನ ಮುಖವಾಡ ಕಳಚುತ್ತಾನಾ ಗೌತಮ್?

ರಾಜೇಂದ್ರ ಒಳ್ಳೆಯವನು ಎಂದು ನಂಬಿಕೊಂಡ ಜೀವ, ಗೌತಮ್ ವಿರುದ್ಧ ತಿರುಗಿ ಬೀಳುವುದು ಖಾತ್ರಿಯಾಗಿದೆ. 'ಅಮೃತಧಾರೆ' ಧಾರಾವಾಹಿ ಇದೀಗ ಟಿಆರ್‌ಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹಿಂದೆಲ್ಲ ಟಾಪ್ 5ನಲ್ಲಿ ಇದ್ದ ಧಾರಾವಾಹಿ ಇದೀಗ ಏಕಾ ಏಕಿ ಟಾಪ್ ಒನ್ ಪಟ್ಟಕ್ಕೆರಿರುವುದು ಮಾತ್ರ ಸತ್ಯ. ಗೌತಮ್ ದಿವಾನ್‌ಗೆ ಇದೀಗ ಕಳೆದು ಹೋಗಿದ್ದ ತಂಗಿ ಹಾಗೂ ಅಮ್ಮ ಸಿಕ್ಕಿದ್ದಾರೆ. ಆದರೆ ತಂಗಿಯ ಗಂಡ ಯಾರು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

More from Filmibeat

English summary
Amruthadhaare Kannada serial January 16th episode 503 update;
Read more about: serial poorva filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X