ಅಪ್ಪಿಗಾಗಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಭೂಮಿಕಾ; ಮೇಷ್ಟ್ರು ಮಕ್ಕಳ ಸ್ಥಿತಿ ನೋಡಿ ಎಸ್ ಐ ಬೇಸರ
Amruthadhaare Serial:ಸದಾಶಿವ ಮೇಷ್ಟ್ರು ಊರಿಗೆಲ್ಲ ಒಳ್ಳೆಯ ಸಂಸಾರವನ್ನು ಹೇಳಿಕೊಟ್ಟ ಮಹಾನ್ ವ್ಯಕ್ತಿ. ಭೂಮಿಕಾಗೆ ತನ್ನ ತಂದೆ ಎಂದರೆ ಬಹಳಷ್ಟು ಪ್ರೀತಿ. ತನ್ನ ತಂದೆಯ ಜೊತೆ ಬಹಳಷ್ಟು ಕಾಲವನ್ನು ಕಳೆದ ಹುಡುಗಿ ಭೂಮಿಕಾ. ಜೊತೆಗೆ ಅಪ್ಪಿಗೆ ಕೂಡ ಸದಾಶಿವ ಅದೇ ಸಂಸ್ಕಾರವನ್ನು ಹೇಳಿಕೊಟ್ಟಿದ್ದಾರೆ. ಆದರೆ ಅಪ್ಪಿ ಅದೆಲ್ಲವನ್ನು ಮರೆತಿದ್ದಾಳೆ.
ಅಪ್ಪಿಗೆ ತಂದೆ ಎಂದರೆ ಕೊಂಚಮಟ್ಟಿಗೆ ಭಯ ಭಕ್ತಿ ಎಲ್ಲವೂ ಇತ್ತು. ಆದರೆ, ಭೂಮಿಕಾಗೆ ತನ್ನ ತಂದೆ ಎಂದರೆ ಭಯ ಭಕ್ತಿಯ ಜೊತೆಗೆ ಪ್ರೀತಿ ಕೂಡ ಇತ್ತು. ಇದೀಗ ಅಪ್ಪಿ ಹಾಗೂ ಭೂಮಿಕಾ ದೊಡ್ಡ ಮನೆಗೆ ಸೇರಿದ್ದಾರೆ. ಅಪ್ಪಿ ದೊಡ್ಡ ಮನೆಯಲ್ಲಿ ಹೇಗಿರಬೇಕು ಹಾಗೆಯೇ ನಡೆದುಕೊಳ್ಳುತ್ತಿದ್ದಾಳೆ. ದೊಡ್ಡ ಮನೆಯಲ್ಲಿ ದುಡ್ಡಿಗೆ ಏನು ಕೊರತೆ ಇರಲಿಲ್ಲ . ಆದರೆ ಭೂಮಿಕಾಗೆ ತನ್ನಲ್ಲಿ ಎಷ್ಟೇ ಹಣ ಇದ್ದರೂ ಕೂಡ ಆಕೆ ತಗ್ಗಿ ಬಗ್ಗಿ ನಡೆದುಕೊಳ್ಳುತ್ತಾಳೆ.

ಜೀವ ಕಟ್ಟಿಸಿದ ಮನೆಯ ಗೃಹಪ್ರವೇಶ. ಇದರಿಂದಾಗಿ ಅಪ್ಪಿಗೆ ಕೂಡ ಜೀವ ಎಂದರೆ ಬಹಳ ಇಷ್ಟ. ಆದ ಅಪ್ಪಿ ಮನೆಯ ಗೃಹ ಪ್ರವೇಶಕ್ಕೆ ಹೋಗುತ್ತಾಳೆ. ಆದರೆ ಸಣ್ಣ ಕಾರಣಕ್ಕೋಸ್ಕರ ಕೋಪ ಮಾಡಿಕೊಂಡು ಬಂದ ಅಪ್ಪಿ ಮಧ್ಯಪಾನ ಮಾಡುತ್ತಾಳೆ. ಕುಡಿದರೆ ಮಾತ್ರ ತನ್ನ ಸಮಸ್ಯೆಗೆ ಪರಿಹಾರ ಎಂದುಕೊಳ್ಳುತ್ತಾಳೆ. ಕುಡಿದು ಕಾರು ಚಲಾವಣೆ ಮಾಡುತ್ತಾಳೆ. ಮೊದಲೇ ಅಪ್ಪಿಗೆ ಭೂಮಿಕಾ ಬುದ್ಧಿ ಮಾತುಗಳನ್ನು ಹೇಳಿರುತ್ತಾಳೆ. ಆದರೆ, ಅಪ್ಪಿ ಅದ್ಯಾವುದನ್ನು ಕೇಳುವ ಗೋಜಿಗೆ ಹೋಗಲಿಲ್ಲ. ಆಕೆಗೆ ತಾನೇನು ಮಾಡುತ್ತೇನೋ ಅದೇ ಸರಿ. ಬೇರೆಯವರು ಏನು ಮಾಡಿದರು ಅದೆಲ್ಲವೂ ತಪ್ಪು ಎಂದು ಕೊಳ್ಳುತ್ತಿದ್ದಳು.
ಜೈಲಿನಲ್ಲಿರುವ ಅಪ್ಪಿಯನ್ನು ಬಿಡಿಸಿದ ಭೂಮಿಕಾ
ಭೂಮಿಕಾಗೆ ಅದೆಷ್ಟೋ ಬಾರಿ ತನ್ನ ತಂಗಿಗೆ ಬುದ್ಧಿ ಮಾತು ಹೇಳಿದರು ಕೂಡ ಅದು ಯಾವುದನ್ನು ತಲೆಗೆ ಹಾಕಿಕೊಳ್ಳುವುದಿಲ್ಲ. ಮೊದಲೇ ಅಪ್ಪಿ ಕುಡಿತದ ದಾಸನಾಗಿದ್ದರಿಂದ ಡ್ರಿಂಕ್ ಅಂಡ್ ಡ್ರೈವ್ ಮಾಡಿ ಪೊಲೀಸ್ ಅವರ ಅತಿಥಿಯಾಗಿದ್ದಾಳೆ. ಹಾಗೆಯೇ ಪೊಲೀಸರ ಜೊತೆ ಬಹಳ ದೌಲತ್ತಿನಿಂದ ನಡೆದುಕೊಂಡಿದ್ದಾಳೆ. ಅಪ್ಪಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು ಭೂಮಿಕಾ ತವರು ಮನೆಗೆ ಗೊತ್ತಾಯಿತು. ಸದಾಶಿವ ಮೇಷ್ಟ್ರು ಪೊಲೀಸ್ ಸ್ಟೇಷನ್‌ಗೆ ಹೋಗಲು ರೆಡಿಯಾದರು. ಆದರೆ ತನ್ನ ತಂದೆಯನ್ನು ನಿಲ್ಲಿಸಿ ತಾನೇ ಪೊಲೀಸ್ ಸ್ಟೇಷನ್‌ಗೆ ಹೋಗಿ ಅಪ್ಪಿಯನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳುತ್ತಾಳೆ. ಕೂಡಲೇ ಭೂಮಿಕಾ ಪೊಲೀಸ್ ಸ್ಟೇಷನ್‌ಗೆ ಹೋಗುತ್ತಾಳೆ.
ತಂಗಿಯಾಗಿ ಬೇಡಿಕೊಂಡ ಭೂಮಿಕಾ
ತನ್ನ ತಂಗಿಯನ್ನು ಬಿಡುವಂತೆ ಪೊಲೀಸರ ಜೊತೆ ಬೇಡಿಕೊಳ್ಳುತ್ತಾಳೆ ಭೂಮಿಕಾ. ಆದರೆ, ಎಸ್ಐ ಮಾತ್ರ ಅದಕ್ಕೆ ಒಪ್ಪುವುದೇ ಇಲ್ಲ. ಇಂತಹ ದುರಂಕಾರ ಇರುವವರನ್ನು ಖಂಡಿತವಾಗಿಯೂ ನಾನು ಬಿಡುವುದಿಲ್ಲ. ಆಕೆಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಭೂಮಿಕಾ ಮಾತನಾಡದೆ ಸುಮ್ಮನಾಗುತ್ತಾಳೆ. ಇನ್ನು ಸ್ಟೇಷನ್‌ನಲ್ಲಿ ತನ್ನ ತಂದೆಯ ಮನೆಯ ಗೃಹಪ್ರವೇಶದ ಪತ್ರಿಕೆಯನ್ನು ನೋಡಿದ ಭೂಮಿಕಾಗೆ ಕೊಂಚ ಸಮಾಧಾನ ಆಗುತ್ತೆ. ಹಾಗೆಯೆ ಎಸ್ ಐ ಕೂಡಲೇ ಒಂದು ಕಾರ್ಯಕ್ರಮಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಡಲು ಅನುವಾಗುತ್ತಾರೆ.

ಭೂಮಿಕಾ ಮಾತಿಗೆ ಆಶ್ಚರ್ಯಪಟ್ಟ ಎಸ್ ಐ
ಆಗ ಭೂಮಿಕಾ ನೀವು ಯಾವ ಕಾರ್ಯಕ್ರಮಕ್ಕೆ ಹೋಗಲು ಸಿದ್ದರಾಗಿದ್ದೀರಿ ಎಂದು ಕೇಳುತ್ತಾಳೆ. ಆ ಕೂಡಲೇ ಸದಾಶಿವ ಮೇಷ್ಟ್ರು ಬಗ್ಗೆ ಆ ಎಸ್ ಐ ಬಹಳ ಒಳ್ಳೆಯ ಮಾತುಗಳನ್ನು ಮಾತನಾಡುತ್ತಾರೆ. ನಾನು ಅವರ ಶಿಷ್ಯ ಆದ ಕಾರಣ ನಾನು ಅವರ ಮನೆಯ ಗೃಹಪ್ರವೇಶಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದಾಗ ಭೂಮಿಕಾ ಎಸ್ ಐ ಬಳಿ ಹೇಳುತ್ತಾಳೆ. ನಾನು ಸದಾಶಿವ ಮೇಷ್ಟ್ರು ಮಗಳು. ಹಾಗೆಯೇ ಜೈಲು ಕಂಬಿ ಹಿಂದೆ ಕುಳಿತವಳು ಕೂಡ ಅವರ ಮಗಳೇ ಎಂದಾಗ ಎಸ್ ಐಗೆ ಆಶ್ಚರ್ಯ ಆಗುತ್ತದೆ ಎಂತಹ ತಂದೆಗೆ ಎಂತಹ ಮಗಳು ಹುಟ್ಟಿದಳು ಎಂದು ಭೂಮಿಕಾ ಜೊತೆ ಹೇಳುತ್ತಾರೆ. ಆದ ಕಾರಣ ನಾನು ಇವರನ್ನು ಜೈಲಿನಿಂದ ರಿಲೀಸ್ ಮಾಡುತ್ತಿದ್ದೇನೆ ಎಂದು ಹೇಳಿ ಜೈಲಿನಿಂದ ಅಪ್ಪಿಯನ್ನು ರಿಲೀಸ್ ಮಾಡುತ್ತಾರೆ.


Click it and Unblock the Notifications











