Amruthadhaare: ಅಮ್ಮನನ್ನು ಕಂಡು ಕಣ್ಣೀರು ಹರಿಸಿದ ಗೌತಮ್; ಈಗ ಧಾರಾವಾಹಿಗೆ ಮತ್ತೊಂದು ಪಾತ್ರ ಎಂಟ್ರಿ

By ಪ್ರಿಯಾ ದೊರೆ

'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ ಮತ್ತು ಅವರ ತಾಯಿಯನ್ನು ಒಂದು ಮಾಡಲು ಭೂಮಿಕಾ ಕಾತುರಳಾಗಿದ್ದಾಳೆ. ಆನಂದ್ ಸತ್ಯ ತಿಳಿದು ಬಹಳ ಖುಷಿಪಟ್ಟಿದ್ದಾಳೆ.

ಸುಧಾ, ಭಾಗ್ಯಾ ಮತ್ತು ಸುಧಾ ಮಗಳನ್ನು ಭೂಮಿಕಾ ನೇರವಾಗಿ ಗೌತಮ್ ಇರುವ ಜಾಗಕ್ಕೆ ಕರೆದುಕೊಂಡು ಹೋಗುತ್ತಾಳೆ. ಗೌತಮ್ ಕಣ್ಣು ಮುಚ್ಚಿಕೊಂಡು ದೇವರಲ್ಲಿ ಪ್ರಾರ್ಥನೆ ಮಾಡುತ್ತಿರುತ್ತಾನೆ.

Amruthadhaare Kannada Serial January 3rd 2025 episode 491 update

ಭೂಮಿಕಾ ಭಾಗ್ಯಾಳನ್ನು ಗೌತಮ್ ಎದುರಿಗೆ ನಿಲ್ಲಿಸುತ್ತಾಳೆ. ಏನೂ ಅರ್ಥವಾಗದ ಭಾಗ್ಯಾ ಸುಮ್ಮನೆ ನಿಂತು ಸುತ್ತಲೂ ನೋಡುತ್ತಿರುತ್ತಾಳೆ. ಗೌತಮ್ ಮಂಗಳಾರತಿ ತೆಗೆದುಕೊಳ್ಳಲು ಕಣ್ಣು ತೆರೆಯುತ್ತಾನೆ.

ಅಮ್ಮನನ್ನು ಕಂಡು ಕಣ್ಣೀರಿಟ್ಟ ಗೌತಮ್

ಗೌತಮ್ ಕಣ್ಣು ತೆರೆಯುತ್ತಿದ್ದಂತೆ ಕಣ್ಣಿನ ಎದುರಿಗೆ ತನ್ನ ತಾಯಿಯನ್ನು ನೋಡುತ್ತಾನೆ. ಅಮ್ಮ ಸತ್ತಿದ್ದಾಳೆ ಎಂದು ತಿಳಿದು ಮೊನ್ನೆ ಮೊನ್ನೆಯಷ್ಟೇ ತಿಥಿ ಕಾರ್ಯವನ್ನು ಮಾಡಿದ್ದಾನೆ. ಇದೇ ದುಃಖದಲ್ಲಿ ಗೌತಮ್ ಇರುವಾಗಲೇ ಈಗ ಅವನ ಕಣ್ಣ ಎದುರಿಗೆ ಅಮ್ಮನನ್ನು ಕಂಡು ಮೂಕ ವಿಸ್ಮಿತನಾಗಿದ್ದಾನೆ. ಗೌತಮ್ ಕಣ್ಣೀರಿನಿಂದ ಕಣ್ಣೀರು ತಾನಾಗಿಯೇ ಹರಿಯುತ್ತಿದ್ದು, ಅಮ್ಮನನ್ನು ತಬ್ಬಿಕೊಳ್ಳುತ್ತಾನೆ. ನಾನು ನಿಮ್ಮ ಗುಂಡು ಅಮ್ಮ, ನಿಮಗಾಗಿ ಎಷ್ಟು ವರ್ಷ ಹುಡುಕಾಡಿದ್ದೇನೆ ಎಂದು ಭಾವುಕನಾಗಿ ಮಾತನಾಡುತ್ತಾನೆ. ಭಾಗ್ಯಾ ಗುಂಡು ಎಂಬ ಪದವನ್ನು ಕೇಳಿಸಿಕೊಂಡು ಗುಂಡು, ಗುಂಡು ಎಂದು ಮಾತ್ರವೇ ಕರೆಯುತ್ತಾಳೆ. ಆಗ ಗೌತಮ್ ಚುನ್ನುಮರಿ ನನ್ನ ತಂಗಿ ಎಲ್ಲಿ ಎಂದು ಕೇಳುತ್ತಾನೆ. ಆದರೆ, ಭಾಗ್ಯಾ ಏನನ್ನೂ ಮಾತನಾಡುವುದಿಲ್ಲ.

ಅಮ್ಮನ ತುಲಾಭಾರ ಮಾಡಿಸಿದ ಗೌತಮ್

ಇತ್ತ ಸುಧಾ ಅಣ್ಣ ಎಂದು ಹಿಂದಿನಿಂದ ಕೂಗುತ್ತಾಳೆ. ಸುಧಾಳನ್ನು ನೋಡಿದ ಕೂಡಲೇ ಗೌತಮ್ ಹಳೆಯದೆಲ್ಲಾ ನೆನಪು ಮಾಡಿಕೊಳ್ಳುತ್ತಾನೆ. ಕೊನೆಗೆ ಸುಧಾ ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳುತ್ತಾಳೆ. ಮಗು ಮತ್ತು ಅಮ್ಮನ ಪ್ರಾಣಕ್ಕೆ ಅಪಾಯ ಮಾಡುವುದಾಗಿ ಬೆದರಿಸಿದ್ದಕ್ಕೆ ನಿಮ್ಮ ಫೈಲ್ ಮಾಹಿತಿಯನ್ನು ಜಯರಾಂ ಅವರಿಗೆ ನೀಡಬೇಕಾಯ್ತು ಎಂದು ಕ್ಷಮೆ ಕೇಳುತ್ತಾಳೆ. ಗೌತಮ್ ಸುಧಾಳನ್ನು ತಬ್ಬಿಕೊಳ್ಳುತ್ತಾನೆ. ಬಳಿಕ ಭೂಮಿಕಾ ಅಮ್ಮನ ತುಲಾಭಾರ ಮಾಡಿಸಲು ವ್ಯವಸ್ಥೆ ಮಾಡಿರುವ ಬಗ್ಗೆ ಹೇಳುತ್ತಾಳೆ. ಬೆಳ್ಳಿಯಲ್ಲಿ ಗೌತಮ್ ಭಾಗ್ಯಾಳ ತುಲಾಭಾರ ಮಾಡಿಸುತ್ತಾನೆ. ಬಳಿಕ ಮನೆಗೆ ಕರೆದುಕೊಂಡು ಹೋಗಲು ಮುಂದಾಗುತ್ತಾನೆ.

Amruthadhaare Kannada Serial January 3rd 2025 episode 491 update

ಭಾಗ್ಯಾ ಸಿಕ್ಕಿಬಿದ್ದಿದ್ದಕ್ಕೆ ಖುಷಿಯಾಗಿರುವ ಶಕುಂತಲಾ

ಇತ್ತ ಶಕುಂತಲಾ ಫುಲ್ ಹ್ಯಾಪಿ ಮೂಡ್‌ನಲ್ಲಿ ಇರುತ್ತಾಳೆ. ಭಾಗ್ಯಾ, ಸುಧಾ ಸಿಕ್ಕಿ ಬಿದ್ದಿದ್ದಾರೆ. ಅವರ ಪ್ರಾಣವನ್ನು ತೆಗೆದರೆ ತನಗಿರುವ ಸಂಕಷ್ಟ ಬಹಳ ಸುಲಭವಾಗಿ ಕಳೆದು ಹೋಗುತ್ತದೆ. ಅದಾದ ನಂತರ ಈ ಇಡೀ ಮನೆ ತನ್ನ ಹಿಡಿತದಲ್ಲೇ ಇರುತ್ತದೆ ಎಂದು ಖುಷಿಯಾಗಿದ್ದಾಳೆ. ಇದೇ ಸಮಯಕ್ಕೆ ಸರಿಯಾಗಿ ಗೆಳತಿಯ ಫೋನ್ ಕಾಲ್ ಬಂದಿದ್ದು, ವಿದೇಶದಿಂದ ಮನೆಗೆ ಬರುತ್ತಿರುವಂತೆ ಹೇಳುತ್ತಾರೆ. ಶಕುಂತಲಾ ಭಾಗ್ಯಾಳನ್ನು ಕೊಲ್ಲಬೇಕು ಎಂದುಕೊಂಡ ಸಮಯವನ್ನು ಮುಂದಕ್ಕೆ ಹಾಕುತ್ತಾಳೆ. ತನ್ನ ಸ್ನೇಹಿತೆ ಬಂದು ಹೋದ ಬಳಿಕ ಮಾಡೋಣ, ಹೇಗಿದ್ದರೂ ಭಾಗ್ಯಾ ತಮ್ಮ ಸುಪರ್ಧಿಯಲ್ಲಿದ್ದಾಳೆ ಎಂದು ಭಾವಿಸಿದ್ದಾಳೆ.

ಹೊಸ ಪಾತ್ರದ ಆಗಮನಕ್ಕೆ ಶಕುಂತಲಾ ವೈಟಿಂಗ್

ದಾಮಿನಿ ಎಂಬ ಹೊಸ ಪಾತ್ರ ಮನೆಗೆ ಬರುತ್ತಿದ್ದು, ಯಾರಿರಬಹುದು ಈಗ ಯಾಕೆ ಈ ಹೊಸ ಪಾತ್ರ ಆಗಮಿಸುತ್ತಿದೆ ಎಂಬ ಕುತೂಹಲ ಮೂಡಿದೆ. ಇದರ ಜೊತೆಗೆ ಭಾಗ್ಯಾ ಕಿಡ್ನ್ಯಾಪ್ ಆಗಿದ್ದಾಳೆ ಎಂದು ಸಮಾಧಾನವಾಗಿರುವ ಶಕುಂತಲಾಳಿಗೆ ಗೌತಮ್ ತನ್ನ ಕುಟುಂಬವನ್ನು ಮನೆಗೆ ಕರೆದುಕೊಂಡು ಬಂದಾಗ ಏನು ಮಾಡುತ್ತಾಳೆ. ಇನ್ನು ಕಿಡ್ನ್ಯಾಪ್ ಮಾಡಿರುವವರು ಯಾರಿರಬಹುದು..? ಇದೆಲ್ಲಾ ಕನಸಾಗಿರಬಹುದಾ ಎಂಬ ಪ್ರಶ್ನೆಗಳು ಎದ್ದಿವೆ. ಆದರೆ, ಮುಂದಿನ ಸಂಚಿಕೆಯಲ್ಲಿ ಸತ್ಯ ಏನು ಎಂಬುದು ತಿಳಿಯಬೇಕಿದೆ.

More from Filmibeat

English summary
Amruthadhaare Kannada Serial January 3rd 2025 episode 491 update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X