Amruthadhaare:ಶಕುಂತಲಾ ಲೆಕ್ಕಾಚಾರ ತಲೆಕೆಳಗೆ; ಗೌತಮ್ ಮನೆಗೆ ಭಾಗ್ಯಾ ಬಂದಾಯ್ತು ಮುಂದೇನು?

By ಪೂರ್ವ

ಶಕುಂತಲಾ ಆಟಕ್ಕೆ ಪೂರ್ಣ ವಿರಾಮ ಇಟ್ಟಾಯಿತು. ಗೌತಮ್ ತಾಯಿ ಭಾಗ್ಯಾ ಮನೆಗೆ ಬಂದಾಯ್ತು. ಇನ್ಮೇಲೆ ಶಕುಂತಲಾ ಆಟ ಹೇಗಿರುತ್ತೆ ಎನ್ನುವುದನ್ನು ನೋಡಬೇಕಿದೆ. ಶಕುಂತಲಾಗೆ ಭಾಗ್ಯಾ ಮೇಲೆ ಬಹಳಷ್ಟು ದ್ವೇಷ. ಭಾಗ್ಯಾಗಳನ್ನು ಕಂಡರೆ ಶಕುಂತಲಾಗೆ ಆಗುವುದಿಲ್ಲ. ಇದೀಗ ಗೌತಮ್ ಜೊತೆ ಭಾಗ್ಯಾ ಮಗನ ಮನೆಗೆ ಆಗಮಿಸಿದ್ದಾಳೆ.

ಗೌತಮ್ ದಿವಾನ್ ತನ್ನ ತಾಯಿ, ತನ್ನ ತಂಗಿ ಹಾಗೂ ತಂಗಿಯ ಮಗಳನ್ನು ಗೌತಮ್ ಮನೆಗೆ ಕರೆದುಕೊಂಡು ಬಂದಿದ್ದಾನೆ. ಅವರೆಲ್ಲರನ್ನೂ ನೋಡಿ ಗೌತಮನ ಅಜ್ಜಿಗೆ ಶಾಕ್ ಆಗುತ್ತದೆ. ಮನೆಯಲ್ಲಿ ಬಹಳ ಸಂಭ್ರಮ ಮನೆ ಮಾಡಿರುತ್ತದೆ.

Amruthadhaare Kannada Serial January 4th episode 492 update

ಭಾಗ್ಯಾಗಳನ್ನು ನೋಡಿದ ಗೌತಮ್‌ ಅಜ್ಜಿ ಖುಷಿಯಲ್ಲಿ ತೇಲಾಡುತ್ತಿರುತ್ತಾರೆ. ಇಷ್ಟರವರೆಗೆ ಭಾಗ್ಯಾ ಎಲ್ಲಿದ್ದಳು? ಏನು ಮಾಡುತ್ತಿದ್ದಳು? ಎನ್ನುವುದೇ ಯಾರಿಗೂ ತಿಳಿದಿಲ್ಲ. ಆದರೆ, ಅದನ್ನು ತಿಳಿದುಕೊಳ್ಳುವ ಕುತೂಹಲವೀಗ ಭೂಮಿಕಾಗಿದೆ. ಭೂಮಿಕಾಗೆ ಸುಧಾ ಎಂದರೆ ಬಹಳಷ್ಟು ಇಷ್ಟ. ಹಾಗೆಯೇ ತನ್ನ ಗಂಡನ ಕಷ್ಟದ ಸಮಯದಲ್ಲಿ ಕೈ ಹಿಡಿದಾಕೆ ಎನ್ನುವ ಕಾರಣಕ್ಕೆ ಭೂಮಿಕಾಗೆ ಸುಧಾ ಮೇಲೆ ಪ್ರೀತಿ. ಆದರೆ ಇದೀಗ ಸುಧಾ, ಗೌತಮ್ ದಿವಾನನ ತಂಗಿ ಎಂದು ತಿಳಿದು ಆಕೆಗೆ ಇನ್ನಷ್ಟು ಖುಷಿಯಾಗಿದೆ.

ಈಗ ಗೌತಮ್ ದಿವಾನ್ ಮನೆಗೆ ಭಾಗ್ಯಾ ಬಂದಾಗಿದೆ. ಇನ್ನೇನು ಶಕುಂತಲಾ ದೇವಿಯನ್ನು ಮೀಟ್ ಮಾಡುವುದಷ್ಟೇ ಬಾಕಿ. ಇದಕ್ಕಿಂತ ಮೊದಲು ಶಕುಂತಲಾ ದೇವಿಯನ್ನು ನೋಡಿದ ಭಾಗ್ಯಾ ಭಯ ಪಟ್ಟುಕೊಂಡು ಅಲ್ಲಿಂದ ಎಸ್ಕೇಪ್ ಆಗಿರುತ್ತಾಳೆ. ಇದೀಗ ಮತ್ತೆ ಶಕುಂತಲಾ ದೇವಿಯನ್ನು ನೋಡಿದ ಬಳಿಕ ಭಾಗ್ಯಾಗೆ ಇನ್ನೆಷ್ಟು ಭಯ ಕಾಡುತ್ತಾ ಎನ್ನುವುದನ್ನು ನೋಡಬೇಕಾಗಿದೆ. ಇತ್ತ ಭಾಗ್ಯಾಳನ್ನು ನೋಡಿ ಅಜ್ಜಿ "ನಮ್ಮ ಮನೆಯ ಭಾಗ್ಯ ದೇವತೆ ಆಗಮಿಸಿದ್ದಾಳೆ" ಎಂದು ಮನ ತುಂಬಿ ಹರಸುತ್ತಾರೆ. ಆದರೆ ಭಾಗ್ಯಾಗೆ ಇದ್ಯಾವುದೂ ತಿಳಿಯುತ್ತಲೇ ಇಲ್ಲ .

Amruthadhaare Kannada Serial January 4th episode 492 update

ಆಕೆಗೆ ಎಲ್ಲಿದ್ದೇನೆ? ಏನು ಮಾಡುತ್ತಿದ್ದೇನೆ? ಎನ್ನುವ ಅರಿವು ಇಲ್ಲ. ಆದರೂ ಗೌತಮ್ ಬಳಿ ಸುಮ್ಮನೆ ನಿಂತು ಇರುತ್ತಾಳೆ. ಇನ್ನು ಗೌತಮ್ ತನ್ನ ತಾಯಿ ಭಾಗ್ಯಾಳನ್ನು ಶಕುಂತಲಾ ದೇವಿಯವರ ಬಳಿ ಕರೆದುಕೊಂಡು ಹೋಗಬೇಕು ಎಂದು ಬಹಳ ಆಸೆ. ತನ್ನನ್ನು ಸಾಕಿದ ಅಮ್ಮ ಎನ್ನುವ ಕಾರಣಕ್ಕೆ ಶಕುಂತಲಾ ದೇವಿ ಮೇಲೆ ಅಪಾರವಾದ ಗೌರವ, ಪ್ರೀತಿಯನ್ನು ಇಟ್ಟುಕೊಂಡಿದ್ದಾನೆ. ಭಾಗ್ಯಾಳ ಕಥೆ ಮುಗೀತು ಎಂದುಕೊಂಡ ಶಕುಂತಲಾ ದೇವಿಗೆ ಇದೀಗ ಗೌತಮ್ ಬಹಳ ದೊಡ್ಡ ಟ್ವಿಸ್ಟ್ ನೀಡುತ್ತಿದ್ದಾನೆ. ಶಕುಂತಲಾ ದೇವಿ ಪ್ಲಾನ್ ಮಾಡಿದ ಹಾಗೆಯೇ ಎಲ್ಲಾ ನಡೆಯುತ್ತದೆ ಎನ್ನುವ ಆಲೋಚನೆ ಯಲ್ಲಿ ಇರುವಾಗಲೇ ಎಲ್ಲಾ ಉಲ್ಟಾ ಆಗಿದೆ.

ಭಾಗ್ಯಾಳನ್ನು ಮೊದಲಿಗೆ ಶಕುಂತಲಾಳ ತಮ್ಮ ನೋಡುತ್ತಾನೆ. ಆತನಿಗೆ ಭಾಗ್ಯಾ ಮನೆಗೆ ಬಂದಿರುವುದು ನೋಡಿ ನಡುಕ ಹೆಚ್ಚಾಗುತ್ತದೆ. ಭಾಗ್ಯಾ ಇನ್ಯಾವತ್ತೂ ಈ ಮನೆಗೆ ಕಾಲಿಡುವುದು ಇಲ್ಲ ಎಂದುಕೊಂಡ ಆತನಿಗೆ ಭಾಗ್ಯಾ ಮನೆಗೆ ಬಂದಿರುವುದು ಮತ್ತಷ್ಟು ಆತಂಕ ತಂದೊಡ್ಡುತ್ತದೆ. ಶಕುಂತಲಾ ಬಳಿ ಇನ್ನಷ್ಟೇ ಗೌತಮ್ ತನ್ನ ತಾಯಿಯನ್ನು ಕರೆದುಕೊಂಡು ಹೋಗಬೇಕು ಎಂದುಕೊಂಡಿರುತ್ತಾನೆ. ಈಗ ಭಾಗ್ಯಾಳನ್ನು ನೋಡಿ ಶಾಕುಂತಲಾ ದೇವಿ ರಿಯಾಕ್ಷನ್ ಹೇಗಿರುತ್ತೆ ಅನ್ನೋದು ಅಮೃತಧಾರೆ ಧಾರಾವಾಹಿಯ ಟ್ವಿಸ್ಟ್.

More from Filmibeat

English summary
Amruthadhaare Kannada Serial January 4th episode 492 update;
Read more about: serial filmibeat original poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X