ತಂದೆ-ತಾಯಿಯ ಎದುರು ಅಪೇಕ್ಷಾ ದುರಹಂಕಾರ; ಅಪ್ಪಿಗೆ ಮಾತಲ್ಲೇ ಪೆಟ್ಟು ಕೊಟ್ಟ ಗೌತಮ್

By ಪೂರ್ವ

ಅಪೇಕ್ಷಾ ದುರಹಂಕಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಇದಕ್ಕೆ ಪ್ರೇಕ್ಷಕ ಪ್ರಭುಗಳು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ. ಹೆತ್ತ ತಂದೆ ತಾಯಿಯ ಬಗ್ಗೆ ಯಾರು ಕೂಡ ತುಚ್ಛವಾಗಿ ಮಾತನಾಡುವುದಿಲ್ಲ. ಅಪ್ಪ ಎಂದರೆ ಆಕಾಶ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅಪ್ಪಿಗೆ ಅಪ್ಪ ಅಮ್ಮ ಎಂದರೆ ಆಗುವುದೇ ಇಲ್ಲ. ಕಾರಣ ಆಕೆಯ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದರು ಎನ್ನುವ ಕಾರಣಕ್ಕೆ. ಹೀಗಾಗಿ ಮನಸ್ಸಿನಲ್ಲಿ ಸಿಕ್ಕಾಪಟ್ಟೆ ದ್ವೇಷ ತುಂಬಿರುವುದು ಮಾತ್ರ ಸತ್ಯ.

ದೊಡ್ಡ ಮನೆಯ ಸೊಸೆಯಾದ ಅಪ್ಪಿಗೆ ಯಾರ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಗೊತ್ತಿರುವುದಿಲ್ಲ. ಇತ್ತ ಭೂಮಿಕಾಗೆ ತನ್ನ ತಂದೆ ಸದಾಶಿವ ಹಾಗೂ ಅಮ್ಮ ಮಂದಾಕಿನಿ ಎಂದರೆ ಪ್ರಾಣ. ಅವರ ಬಗ್ಗೆ ಯಾರು ಏನೇ ಮಾತಾಡಿದರೂ ಅದಕ್ಕೆ ವಿರೋಧ ಇದ್ದೇ ಇದೆ.

Amruthadhaare Kannada Serial January 8th episode 496 update

ಹೆತ್ತ ತಂದೆ ತಾಯಿ ಮನೆಗೆ ಬಂದಾಗ ಅವರನ್ನು ಬಹಳ ಪ್ರೀತಿಯಿಂದ ಮನೆಗೆ ವೆಲ್ ಕಮ್ ಮಾಡುತ್ತಾಳೆ ಉಪಚರಿಸುತ್ತಾಳೆ. ಬಹಳ ದಿನ ಆದ ಬಳಿಕವಷ್ಟೇ ಅಮೃತಧಾರೆ ಧಾರಾವಾಹಿಯಲ್ಲಿ ಮಂದಾಕಿನಿ ಹಾಗೂ ಸದಾಶಿವ ಪಾತ್ರಗಳು ಕಾಣಿಸಿಕೊಂಡಿವೆ. ಇನ್ನೂ ಮನೆಗೆ ಬಂದ ತಂದೆ ತಾಯಿಯ ಬಳಿ ಮಾತನಾಡುವುದು ಬಿಡಿ. ಅವರ ಮುಖ ನೋಡಲು ಅಫೇಕ್ಷಾ ಬರುವುದಿಲ್ಲ. ತಂದೆ ತಾಯಿಗೆ ಈ ಮೊದಲೇ ತಿಳಿದಿರುತ್ತೆ. ಅವಳಿಗೆ ತಮ್ಮಿಂದ ನೋವಾಗಿದೆ. ಆಕೆಗೆ ಸಮಾಧಾನ ಹೇಳಬೇಕು ಎಂದುಕೊಂಡಿರುತ್ತಾರೆ.

ಇತ್ತ ಗೌತಮ್ ತನ್ನ ಮಾವನ ಬಳಿ ಕುಶಲೋಪರಿ ಮಾತನಾಡುತ್ತಾರೆ. ಹಾಗೆಯೇ ಅಪೇಕ್ಷಾಗೆ ಸದಾಶಿವ ಮೇಲೆ ಕೋಪ ಇದೆ ಎಂದು ತಿಳಿದುಕೊಂಡ ಗೌತಮ್‌ಗೆ ಅವರ ಮನದಾಳದ ಮಾತು ಕೇಳಿ ಮನ ತುಂಬಿ ಬರುತ್ತೆ. ಅಪ್ಪಿ ಮಾಡಿದ್ದು ತಪ್ಪು ಆಗಿರಬಹುದು. ಆದರೆ ಅದನ್ನೇ ಮನದಲ್ಲಿ ಇಟ್ಟುಕೊಳ್ಳುವುದು ಸರಿಯಲ್ಲ ಎನ್ನುವುದು ಅವರ ವಾದ .

Amruthadhaare Kannada Serial January 8th episode 496 update

ಇತ್ತ ಭೂಮಿಕಾ ತನ್ನ ತಂದೆ ಒಳ್ಳೆಯ ಮನೆ ಕಟ್ಟಿಸಿದ್ದಾರೆಂದು ತಿಳಿದು ಬಹಳಷ್ಟು ಖುಷಿಯಾಗುತ್ತೆ. ಮಂದಾಕಿನಿ ಹಾಗೂ ಸದಾಶಿವ ತನ್ನ ಮನೆಯ ಗೃಹಪ್ರವೇಶಕ್ಕೆ ಕರೆಯುವುದಕ್ಕೆ ಮಗಳ ಮನೆಗೆ ಬಂದಿರುತ್ತಾರೆ. ಭೂಮಿಕಾ ಬಳಿ ಮಾತನಾಡಿದ ಸದಾಶಿವ, ಮಂದಾಕಿನಿ ಅಪ್ಪೇಕ್ಷಾಳನ್ನು ಬಹಳ ಹುಡುಕುತ್ತಾರೆ. ತಾನು ಬಂದಿರುವ ವಿಚಾರ ಆಕೆಗೆ ತಿಳಿದಿದೆಯೋ ಇಲ್ಲವೋ ಎನ್ನುವ ಯೋಚನೆಯಲ್ಲಿ ಅವರು ಇರುತ್ತಾರೆ. ಆದರೆ ಅಪ್ಪಿಗೆ ತಂದೆ ತಾಯಿ ಬಂದಿರುವ ಬಗ್ಗೆ ತಿಳಿದಿರುತ್ತದೆ. ಆದರೆ, ಅವರ ಬಳಿ ಮಾತನಾಡಲು ಹಿಂದೇಟು ಹಾಕಿದ ಅಪ್ಪಿ ಮಹಡಿ ಮೇಲೆ ಒಬ್ಬಳೆ ಕುಳಿತುಕೊಂಡಿರುತ್ತಾಳೆ.

ಅಪ್ಪಿ ಬಳಿ ಓಡೋಡಿ ಬಂದ ಆಕೆಯ ತಂದೆ ತಾಯಿ ಅಪೇಕ್ಞಾ ನೀನು ಇಲ್ಲಿ ಇದ್ದೀಯಾ? ನಿನಗಾಗಿ ನಾವು ಬಹಳಷ್ಟು ಹುಡುಕಾಡಿದೆ. ನಿನ್ನ ಬಳಿ ನಾವು ಮಾತನಾಡಬೇಕು ಎಂದಾಗ ಕೋಪಗೊಂಡ ಅಪೇಕ್ಷಾ "ನೀವು ನನ್ನ ಬಳಿ ಸುಳ್ಳು ಹೇಳುತ್ತಿದ್ದೀರಿ. ನಿಮಗೆ ಯಾಕೆ ಇಷ್ಟು ದಿನ ನೆನಪೇ ಬರಲಿಲ್ವ? ನನ್ನ ಬಳಿ ಮಾತನಾಡಲೂ ಇಲ್ಲ. ಮನೆಗೆ ಬರಲು ಇಲ್ಲ. ಈಗ ಅಕ್ಕ ಕರೆದಳು ಎನ್ನುವ ಕಾರಣಕ್ಕೆ ಮನೆಗೆ ಬಂದಿದ್ದೀರಾ" ಎಂದು ಕಟುವಾಗಿ ಹೇಳುತ್ತಾಳೆ. ಆಕೆಯ ಸಿಟ್ಟಿಗೆ ಉತ್ತರ ಕೊಡೋಣ ಎಂದು ಹೊರಟಾಗ ಅಪ್ಪಿ ಅವರ ಮಾತು ಕೇಳಲು ತಯಾರಿರಲಿಲ್ಲ.

"ನಾನೀಗ ಅಪೇಕ್ಷಾ ಸದಾಶಿವ ಅಲ್ಲ. ನಾನು ಅಪೇಕ್ಷ ಪಾರ್ಥ ದಿವಾನ್" ಎಂದು ಜೋರಾಗಿ ಹೇಳುತ್ತಾಳೆ. ಹಾಗೇ ತನ್ನ ತಂದೆ ತಾಯಿ ಬಳಿ ಇಲ್ಲಿಂದ ಹೊರಟು ಹೋಗಿ ಎಂದು ಕಟುವಾಗಿ ಹೇಳುತ್ತಾಳೆ. ಆಕೆಯ ಮಾತು ಕೇಳಿ ಸದಾಶಿವ ಹಾಗೂ ಮಂದಾಕಿನಿಗೆ ಬಹಳ ನೋವು ಆಗುತ್ತೆ. ಆ ಕೂಡಲೇ ಅಲ್ಲಿಗೆ ಬಂದ ಗೌತಮ್ ಅಪೇಕ್ಷಾಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾನೆ. ತಂದೆ ತಾಯಿಯ ಬಳಿ ಹೇಗೆ ಮಾತನಾಡಬೇಕು ಎನ್ನುವ ಸಣ್ಣ ಅರಿವು ನಿಮಗೆ ಇಲ್ಲವೇ? ಎಂದು ಕೋಪಗೊಳ್ಳುತ್ತಾನೆ. ಆ ಕೂಡಲೇ ಅಪೇಕ್ಷಾ ಬಳಿ ತಂದೆ ತಾಯಿ ಬಳಿ ಕ್ಷಮೆ ಕೇಳುವಂತೆ ಗೌತಮ್ ಹೇಳಿದಾಗ ಅಪ್ಪಿ ಮಾತ್ರ ಸುಮ್ಮನೆ ನಿಂತುಕೊಂಡು ತನ್ನ ಭಾವನ ಮುಖ ನೋಡುತ್ತಿರುತ್ತಾಳೆ.

More from Filmibeat

English summary
Amruthadhaare Kannada Serial January 8th episode 496 update;
Read more about: serial filmibeat original poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X