Amruthadhaare:ಹ್ಯಾಪಿ ಮೂಡ್‌ನಲ್ಲಿ ಗೌತಮ್, ಭೂಮಿಕಾ; ಆದರೂ ಗೌತಮ್‌ ಚಿಂತೆಯಲ್ಲಿರೋದೇಕೆ?

By ಪೂರ್ವ

ಭೂಮಿಕಾ ಹಾಗೂ ಗೌತಮ್ ಪಾರ್ಟಿ ಮೂಡ್‌ನಲ್ಲಿ ಇದ್ದಾರೆ. ಹಾಗೆಯೇ ಈ ಪಾರ್ಟಿಯನ್ನೂ ಆನಂದ್ ಹಾಗೂ ಅಪರ್ಣಾ ಅರೇಂಜ್ ಮಾಡಿದ್ದಾರೆ. ಪಾರ್ಟಿಗೆ ಅಪ್ಪಿ ಹಾಗೆಯೇ ಪಾರ್ಥ ಕೂಡ ಆಗಮಿಸಿದ್ದಾರೆ. ಪಾರ್ಟಿಯನ್ನು ಬಹಳ ಚೆನ್ನಾಗಿಯೇ ಎಂಜಾಯ್ ಮಾಡಿದ್ದಾರೆ. ಪಾರ್ಥ ಬಳಿ ಏನಾದರು ಒಂದು ಯುನೀಕ್ ಆದ ಅಭಿನಯವನ್ನು ಮಾಡಿ ತೋರಿಸಲು ಆನಂದ್ ಹಾಗೂ ಅಪರ್ಣಾ ಹೇಳುತ್ತಾರೆ. ಇದನ್ನೇ ಅಡ್ವಾಂಟೇಜ್ ತೆಗೆದುಕೊಂಡ ಪಾರ್ಥ ಇದಕ್ಕೆ ಯಾರಾದರೂ ಒಬ್ಬರು ಹುಡುಗಿ ಬೇಕು ಎಂದಾಗ ಅಪರ್ಣಾ, ಆನಂದ್ ಅನ್ನೆ ಹುಡುಗಿ ಎಂದುಕೊಂಡು ಆಕ್ಟ್ ಮಾಡು ಎಂದು ಹೇಳುತ್ತಾಳೆ.

ಇದನ್ನು ಕೇಳಿದ ಭೂಮಿಕಾ ಕಿಸಕ್ ಎಂದು ನಕ್ಕು ಬಿಡುತ್ತಾಳೆ. ಭೂಮಿಕಾಗೆ ನಗು ತಡೆಯಲು ಆಗುವುದಿಲ್ಲ. ಕೊನೆಗೆ ಆನಂದ್ ಹೇಳುತ್ತಾನೆ. ಅಪ್ಪಿ ಇದ್ದಾಳಲ್ಲ. ಆಕೆಗೆ ಅದೇನು ಹೇಳಬೇಕು ಅದನ್ನು ಹೇಳು ಎಂದು ಹೇಳುತ್ತಾರೆ. ಇದನ್ನು ಕೇಳಿದ ಅಪ್ಪಿ ಮಾತ್ರ ಶಾಕ್. ಆದರೆ, ಭೂಮಿಕಾ ಇವರಿಬ್ಬರ ನಡುವಿನ ನಾಚಿಕೆ ನೋಡಿ ಎಂಜಾಯ್ ಮಾಡುತ್ತಿರುತ್ತಾರೆ. ಪಾರ್ಥ ಪ್ರಪೋಸ್ ಮಾಡಿದ್ದ ರೀತಿ ಕಂಡು ಭೂಮಿಕಾಗೆ ಬಹಳ ಖುಷಿ. ಆದರೆ, ಅಪ್ಪಿ ಕಳೆದೆ ಹೋಗಿದ್ದಾಳೆ.

Amruthadhaare kannada serial June 11th episode

ಇಷ್ಟೆಲ್ಲ ಚೆನ್ನಾಗಿ ನನ್ನ ಹುಡುಗ ನನಗೆ ಪ್ರಪೋಸ್ ಮಾಡಬಹುದಾ ಅಂದುಕೊಳ್ಳುತ್ತಾಳೆ. ಇನ್ನೂ ಪಾರ್ಟಿಯಲ್ಲಿ ಎಲ್ಲಾ ರೀತಿಯ ಅಡುಗೆಯನ್ನು ಮಾಡಿದ್ದು ಮಾತ್ರ ಭೂಮಿಕಾ. ಆದರೆ ಹೊಗಳಿಕೆ ಮಾತ್ರ ಅಪರ್ಣಾಗೆ ಸಿಗುತ್ತಿದೆ. ಇದಕ್ಕೆ ಭೂಮಿಕಾಗೆ ಹುಸಿ ಕೋಪ ಕೂಡ ಬರುತ್ತದೆ. ನಾನು ಏನೇ ಮಾಡಿದರೂ ಅದನ್ನು ಹೊಗಳುವುದು ಇಲ್ಲ. ಆದರೆ, ನಾನು ಮಾಡಿದ ಕೆಲಸವನ್ನು ಅಪರ್ಣಾ ಅಕ್ಕ ಮಾಡಿದ್ದಾರೆ ಎಂದು ಹೋಗುತ್ತಿರುವುದು ನನಗೆ ಸ್ವಲ್ಪವೂ ಸರಿ ಕಾಣಿಸುತ್ತಿಲ್ಲ ಎಂದು ಮನದಲ್ಲಿಯೇ ಅಂದುಕೊಳ್ಳುತ್ತಾರೆ.

ಭೂಮಿಕಾ ಮಾತಿಗೆ ಸುಮ್ಮನಾದ ಪಾರ್ಥ

ಪಾರ್ಟಿ ಎಲ್ಲಾ ಮುಗಿಯಿತು. ಪಾರ್ಥ ಹಾಗೂ ಭೂಮಿಕಾ ಒಂದು ಕಡೆ ನಿಂತು ಮಾತಿ ಶುರು ಮಾಡುತ್ತಾರೆ.ಪಾರ್ಥ ನೀನು ಇವತ್ತು ಅಪ್ಪಿಗೆ ಪ್ರಪೋಸ್ ಮಾಡಿದ ರೀತಿ ನನಗೆ ಬಹಳ ಖುಷಿ ನೀಡಿದೆ. ನಿನಗೆ ಹಾಗೂ ಅವಳಿಗೆ ಇಲ್ಲಿ ಬಹಳ ಖುಷಿ ಆಗಿರಬಹುದು ಎಂದು ಅಂದುಕೊಂಡಿದ್ದೇನೆ. ಅಪ್ಪಿ ಕೂಡ ಬಹಳ ಖುಷಿಯಾಗಿ ಇದ್ದಳು ಎಂದು ಭೂಮಿಕಾ ಹೇಳುತ್ತಾಳೆ.

Amruthadhaare kannada serial June 11th episode

ಪಾರ್ಥಗೆ ಜವಾಬ್ದಾರಿ ನೀಡಿದ ಭೂಮಿಕಾ

ಅದನ್ನು ನೀನೇ ಮಾಡಬೇಕು. ನನ್ನ ಅಪ್ಪ ಅಮ್ಮ ಶ್ರೀಮಂತರ ಸಹವಾಸ ಇನ್ಮೇಲೆ ನಮಗೆ ಬೇಡ ಎಂದು ಹೇಳಿದ್ದಾರೆ. ಇನ್ನೂ ನಮ್ಮ ಮನೆಗೆ ಅಪ್ಪಿ ಸೊಸೆಯಾಗಿ ಬರುವುದು ಬಹಳ ಕಷ್ಟ ಇದೆ. ಅಪ್ಪ ಅಮ್ಮನನ್ನು ಹೇಗಾದರು ಮಾಡಿ ಒಪ್ಪಿಸಬೇಕು ಎಂದಾಗ ಪಾರ್ಥ ಅತ್ತಿಗೆಯ ಬಳಿ ಮನೆ ಮಂದಿಯನ್ನು ಒಪ್ಪಿಸುವಂತೆ ಕೇಳಿಕೊಳ್ಳುತ್ತಾನೆ. ಆದರೆ, ಅದನ್ನು ಕೇಳಿದ ಭೂಮಿಕಾ ಮಾತ್ರ ಅದೆಲ್ಲ ಆಮೇಲಿನ ಮಾತು . ಪಾರ್ಟಿ ಮೂಡಿನಲ್ಲಿ ಇದ್ದೀರಾ ಅದನ್ನು ಹಾಳು ಮಾಡಬೇಡಿ. ಈ ಮೂಡ್‌ನಲ್ಲಿ ಮನೆಗೆ ಹೋಗಿ ಆಮೇಲೆ ಮಾತನಾಡೋಣ ಎಂದು ಹೇಳಿ ಅಲ್ಲಿಂದ ಪಾರ್ಥನನ್ನು ಕಳುಹಿಸಿ ಕೊಡುತ್ತಾಳೆ.

ಅಪ್ಪಿ ಮದುವೆ ಬಗ್ಗೆ ಗೌತಮ್ ಚಿಂತೆ

ಇತ್ತ ಗೌತಮ್ ಅಪೇಕ್ಷನನ್ನು ನೋಡಿ ಹೇಳುತ್ತಾನೆ. "ಅಪ್ಪಿ ನೀನೇನು ಬೇಸರ ಪಟ್ಟುಕೊಳ್ಳಬೇಡ. ನಿನಗೆ ಬಹಳಷ್ಟು ನೋವು ಆಗಿದೆ ಎಂದು ನನಗೆ ತಿಳಿದಿದೆ. ಹಾಗೆಂದ ಮಾತ್ರಕ್ಕೆ ನೀನು ಬೇಸರ ಪಡುವ ಅಗತ್ಯ ಇಲ್ಲ. ನಿನ್ನನ್ನು ಒಳ್ಳೆಯ ಮನೆಗೆ ಸೇರಿಸುವ ಗುರಿ ನನ್ನದು ಅದಕ್ಕೆ ನಾನು ಏನು ಬೇಕಾದರೂ ಮಾಡುತ್ತೇನೆ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಅಪೇಕ್ಷಾಗೆ ತಲೆ ಕೆಟ್ಟು ಹೋಗುತ್ತದೆ. ಮುಂದೆ ಏನು ಮಾಡಬೇಕು ಎಂದು ತಲೆ ಕೆಟ್ಟು ಹೋಗುತ್ತದೆ.

More from Filmibeat

English summary
Amruthadhaare kannada serial June 11th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X