Amruthadhaare:ಅಧಿಕಾರದ ಮೇಲೆ ಕಣ್ಣು ಹಾಕಿದ ಶಕುಂತಲಾ ದೇವಿ; ಅಜ್ಜಿ ಪಾಲು ಭೂಮಿಕಾ ಕೈ ಸೇರುತ್ತಾ?

By ಪೂರ್ವ

ರಾತ್ರಿಯ ಹೊತ್ತು ನಕ್ಷತ್ರಗಳನ್ನು ನೋಡುತ್ತಾ ಮಲಗುವುದು ಎಂದರೆ ಭೂಮಿಕಾಗೆ ಬಹಳ ಇಷ್ಟ . ಆಕೆಗೆ ತನ್ನ ಗಂಡ ಗೌತಮ್ ಜೊತೆ ಆ ರೀತಿ ಇರಬೇಕು ಎನ್ನುವ ಆಸೆ. ಆ ಆಸೆಯನ್ನು ಗೌತಮ್ ಜೊತೆ ಭೂಮಿಕಾ ತೋಡಿಕೊಂಡು ಇರುತ್ತಾಳೆ. ಹಾಗೆಯೇ ತಾನು ಗಂಡನ ಜೊತೆ ನಕ್ಷತ್ರ ಎಣಿಸುತ್ತಾ ಮಲಗುತ್ತಾಳೆ. ಗೌತಮ್‌ಗೆ ಇದೆಲ್ಲ ಹೊಸದು. ಆತನಿಗೆ ತನ್ನ ಹೆಂಡತಿ ಎಂದರೆ ಇಷ್ಟ. ಆಕೆಯ ಜೊತೆ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡಬೇಕು ಎನ್ನುವ ಆಸೆ ಆತನಿಗೆ.

ಭೂಮಿಕಾ, ಗೌತಮ್ ಇಷ್ಟ ಕಷ್ಟಗಳನ್ನು ನೋಡಿಕೊಳ್ಳಲು ಶುರು ಮಾಡಿದ್ದಾಳೆ. ಗೌತಮ್ ತನ್ನ ಇಷ್ಟ ಹೇಳಿಕೊಳ್ಳುತ್ತಾನೆ ಅದೇನಂದರೆ, "ಈ ಮನೆಗೆ ಬರುವ ಮೊದಲ ಮಗು. ಯಾಕೆಂದರೆ ಈ ಮನೆಗೆ ಬರುವ ಮೊದಲ ಮಗು ಎಂದರೆ ಅದು ತನ್ನ ತಂದೆಯೇ. ಅವರನ್ನೇ ನಾನು ನನ್ನ ತಂದೆ ಎಂದುಕೊಂಡು ಇದ್ದೇನೆ. ಅದಕ್ಕಾಗಿ ಏನು ಮಾಡಲು ನಾನು ಸಿದ್ದ ಎಂದುಕೊಂಡಿರುತ್ತಾನೆ. ಇದೀಗ ಜೈ ದೇವ್ ಮಗು ನಮ್ಮ ಮನೆಗೆ ಕಾಲಿಡಲಿದೆ ಆದ ಕಾರಣ ಆ ಮಗುವನ್ನು ನಾನು ಬಹಳ ಚೆನ್ನಾಗಿಯೇ ನೋಡಿಕೊಳ್ಳುತ್ತೇನೆ" ಎಂದಾಗ ಭೂಮಿಕಾ ಮತ್ತಷ್ಟು ಖುಷಿ ಆಗುತ್ತದೆ.

Amruthadhaare Kannada serial June 13th episode update

ಯಾಕೆಂದರೆ, ಗೌತಮ್ ಬೇರೆಯವರ ಮಗುವನ್ನು ಇಷ್ಟೆಲ್ಲ ಮುದ್ದಾಡುತ್ತಿದ್ದಾರೆ ಎಂದರೆ ನಮ್ಮ ಮಗುವನ್ನು ಇನ್ನೆಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಮನಸ್ಸಿನಲ್ಲಿ ಅಂದುಕೊಂಡು ಬಹಳ ಖುಷಿ ಪಡುತ್ತಾಳೆ. ಇತ್ತ ಅಜ್ಜಿ ಮನೆ ಮಂದಿಯನ್ನು ಎಲ್ಲರನ್ನೂ ಕರೆಯುತ್ತಾರೆ. ಎಲ್ಲರೂ ಅಜ್ಜಿಯ ಸಮೀಪ ಬಂದು ನಿಂತುಕೊಳ್ಳುತ್ತಾರೆ. ಅಜ್ಜಿ ಎಲ್ಲರ ಜೊತೆ ಹೇಳುತ್ತಾರೆ. ನಾನು ಇನ್ಮೇಲೆ ನನ್ನ ಅಧಿಕಾರವನ್ನು ಈ ಮನೆಯ ಸದಸ್ಯರಿಗೆ ಹಸ್ತಾಂತರ ಮಾಡುತ್ತೇನೆ. ನನಗೆ ಕೂಡ ವಯಸ್ಸು ಆಗುತ್ತಿದೆ ಎನ್ನುತ್ತಾರೆ.

ಅಜ್ಜಿಯ ಮಾತಿಗೆ ಶಕುಂತಲಾ ದೇವಿ ಖುಷ್

"ವಯಸ್ಸಾದ ಕಾರಣ ನನಗೆ ಎಲ್ಲವನ್ನೂ ನೋಡಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ನಾನು ಅಧಿಕಾರವನ್ನು ಬೇರೆಯವರಿಗೆ ಬಿಟ್ಟು ಕೊಟ್ಟರೆ ಅವರು ನಮ್ಮ ಮನೆಯನ್ನು ಇನ್ನಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎನ್ನುವ ಭರವಸೆ" ಎಂದು ಹೇಳುತ್ತಾರೆ. ಇದನ್ನು ಕೇಳಿದ ಶಕುಂತಲಾ ದೇವಿ ಅವರ ತಮ್ಮ"ಅಕ್ಕ ನಿನ್ನ ಬಾಯಿಗೆ ಲಡ್ಡು ಬಂದು ಬಿತ್ತು" ಎಂದು ಹೇಳುತ್ತಾರೆ. ಇದನ್ನು ಕೇಳಿದ ಶಕುಂತಲಾ ದೇವಿ ಕೂಡ ಬಹಳ ಖುಷಿಯಲ್ಲಿ ಇರುತ್ತಾಳೆ.

Amruthadhaare Kannada serial June 13th episode update

ಅಜ್ಜಿಯ ಮಾತಿಗೆ ಗೌತಮ್ ಮಾತೇನು?

ಅತ್ತೆ ಅಧಿಕಾರವನ್ನು ನನಗೆ ಹಸ್ತಾಂತರ ಮಾಡಬಹುದು ಎನ್ನುವ ಭರವಸೆಯಲ್ಲಿ ಆಕೆ ಇರುತ್ತಾಳೆ. ಇನ್ನೂ ಅಜ್ಜಿ ಆ ದಿನ ಎಲ್ಲರನ್ನೂ ಕರೆದು ನಾನು ಖಂಡಿತವಾಗಿಯೂ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳುತ್ತಾರೆ.

ಗೌತಮ್ ಮೇಲೆ ಭೂಮಿಕಾ ಹುಸಿ ಮುನಿಸು

ಸೂಪ್ ತಂದಿದ್ದನ್ನು ನೋಡಿದ ಗೌತಮ್ "ಯಾವತ್ತೂ ಬೆಳಗ್ಗೆ ಕಾಫಿ ತರುತ್ತಿದ್ದವರು ಇವತ್ತೇನು ಚಿಕನ್ ಸೂಪ್ ಮಾಡಿದ್ದು" ಎಂದು ಹೇಳುತ್ತಾರೆ. ಇದನ್ನು ಕೇಳಿದ ಭೂಮಿಕಾ "ಇವತ್ತಿನ ದಿನ ನಿಮಗೆ ಚೆನ್ನಾಗಿ ಇರಲಿ ಎನ್ನುವ ಕಾರಣಕ್ಕೆ. ನಾನು ಹಾಗೆ ಮಾಡಿದೆ" ಎಂದು ಹೇಳುತ್ತಾಳೆ. ಹಾಗೆಯೇ ಡೈನಿಂಗ್ ರೂಮ್‌ಗೆ ಬಂದ ಗೌತಮ್‌ಗೆ ಚಿಕನ್ ವೆರೈಟಿ ವೆರೈಟಿ ಸ್ಪೆಷಲ್ ಅಡುಗೆ ಮಾಡಿರುತ್ತಾರೆ. ಭೂಮಿಕಾ ಇದನ್ನು ನೋಡಿದ ಗೌತಮ್‌ಗೆ ಬಹಳ ಖುಷಿ ಆಗುತ್ತದೆ. ಗೌತಮ್ "ಇದೆಲ್ಲ ಯಾರು ರಾಮಣ್ಣ ಮಾಡಿದ್ದ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಭೂಮಿಕಾಗೆ ಮತ್ತೆ ಹುಸಿ ಮುನಿಸು ಬರುತ್ತದೆ.

More from Filmibeat

English summary
Amruthadhaare Kannada serial June 13th episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X