Amruthadhaare: ಭೂಮಿಕಾ ಗೌತಮ್ ಮೊದಲ ರಾತ್ರಿಗೆ ಮುಹೂರ್ತ ಫಿಕ್ಸ್; ಅಜ್ಜಿ ಮಾಸ್ಟರ್ ಪ್ಲಾನ್

By ಪೂರ್ವ

ಭೂಮಿಕಾ ಹಾಗೂ ಗೌತಮ್ ಮೊದಲ ರಾತ್ರಿಗೆ ಆನಂದ್ ಎಲ್ಲಾ ತರದಲ್ಲಿ ಕೂಡ ಪ್ರಿಪರೇಷನ್ ಮಾಡಿ ಇರುತ್ತಾನೆ. ತನ್ನ ಗೆಳೆಯ ಕೂಡ ಸಂಸಾರದ ಭಾರ ಹೊರಬೇಕು ಆತನಿಗೆ ಎರಡು ಮಕ್ಕಳಾಗಬೇಕು. ಫ್ಯಾಮಿಲಿ ಜೊತೆ ನಗುತ್ತಾ ಎಂಜಾಯ್ ಮಾಡಬೇಕು . ಎಲ್ಲರ ಹಾಗೆ ಆತ ಕೂಡ ಖುಷಿಯಾಗಿ ಇರಬೇಕು ಎಂದು ಮನದಲ್ಲಿ ಅಂದುಕೊಂಡು ಇರುತ್ತಾನೆ. ನನ್ನ ಗೆಳೆಯ ಕಷ್ಟದಲ್ಲಿ ಮೇಲೆ ಬಂದವನು, ಹುಟ್ಟುತ್ತಲೇ ಆತ ಶ್ರೀಮಂತನಲ್ಲ, ಇದುವರೆಗೆ ಆತ ತನ್ನ ಎರಡನೇ ತಾಯಿ ಹಾಗೂ ಆಕೆಯ ಮಕ್ಕಳಿಗೋಸ್ಕರ ದುಡಿದು ಅವರನ್ನು ಒಂದು ಸ್ಥಿತಿ ಗೆ ತಂದಿರುತ್ತಾರೆ. ಆದರೆ ಅವರು ಯಾರು ಗೌತಮ್ ಜೀವನದ ಬಗ್ಗೆ ಚಿಂತೆಯೇ ಮಾಡಲಿಲ್ಲ. ಅದು ಅವರಿಗೆ ಬೇಕಾಗಿ ಕೂಡ ಇರಲಿಲ್ಲ. ಗೌತಮ್ ಯಾವತ್ತೂ ಹೀಗೆಯೇ ಇರಬೇಕು.

ಆತ ಎಲ್ಲಾದರೂ ಹೆಂಡತಿ ಮಕ್ಕಳು ಎಂದು ಹೋಗಿಬಿಟ್ಟರೆ ಮತ್ತೆ ಯಾವತ್ತೂ ಆತ ತಮ್ಮ ಕೈಗೆ ಸಿಗುವುದು ಇಲ್ಲ ಎಂದು ಶಕುಂತಲಾ ದೇವಿ ಹೇಳುತ್ತಿರುತ್ತಾರೆ. ಆದರೆ, ಆನಂದ್ ಮಾತ್ರ ತನ್ನ ಗೆಳೆಯನ ಜೀವನವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆತ ಜೀವನದಲ್ಲಿ ಚೆನ್ನಾಗಿ ಇರಬೇಕು ಎಂದು ಅಂದುಕೊಂಡಿರುತ್ತಾನೆ. ಆನಂದ್‌ಗೆ ಗೌತಮ್ ಮೇಲೆ ಇರುವ ಕಾಳಜಿಯನ್ನು ಅಜ್ಜಿ ಗಮನಿಸುತ್ತಾರೆ. ಅವರು ಆನಂದ್‌ನನ್ನು ಕರೆದು ಹೇಳುತ್ತಾರೆ. ಈಗಿನ ಕಾಲದಲ್ಲಿ ನಿನ್ನಂತಹ ಸ್ನೇಹಿತನನ್ನು ಪಡೆಯಲು ಗುಂಡು ಬಹಳ ಪುಣ್ಯ ಮಾಡಿ ಇದ್ದ. ಆತನ ಜೀವನ ಚೆನ್ನಾಗಿ ಆಗಬೇಕು. ಆತ ಖುಷಿಯಲ್ಲಿ ಇರಬೇಕು ಎಂದು ಅಂದುಕೊಂಡು ಎಷ್ಟೆಲ್ಲ ಆತನಿಗೆ ಧೈರ್ಯ ತುಂಬುತ್ತಿಯಾ? ಎನ್ನುತ್ತಾರೆ

Amruthadhaare kannada serial June 4th Episode update

"ಮನದಲ್ಲಿ ಸ್ವಲ್ಪವೂ ಕಲ್ಮಶ ಇರುವುದು ಇಲ್ಲ. ದುರಾಸೆ ಇಲ್ಲ. ಅಸೂಯೆ ಕೂಡ ಇಲ್ಲ ಅಂತದ್ದರಲ್ಲಿ ನಿನ್ನಂತಹ ಒಳ್ಳೆಯ ಗೆಳೆಯನನ್ನು ಪಡೆಯಲು ಗುಂಡು ಬಹಳ ಪುಣ್ಯ ಮಾಡಿದ್ದರು" ಎಂದು ಹೇಳುತ್ತಾರೆ. ಇದನ್ನು ಕೇಳಿದ ಆನಂದ್ ಮಾತ್ರ "ಅಜ್ಜಿ ಹಾಗೇನೂ ಇಲ್ಲ. ನನ್ನ ಗೆಳೆಯ ಎಲ್ಲರಂತೆ ಖುಷಿಯಾಗಿ ಇರಬೇಕು ಅನ್ನುವ ಆಸೆ" ಎಂದು ಹೇಳಿ ಗೌತಮ್ ರೆಡಿ ಆದನಾ ಎನ್ನುವುದನ್ನು ನೋಡಲು ಹೋಗುತ್ತಾನೆ. ಆನಂದ್ ಗೌತಮ್ ಕಾಲು ಎಳೆಯುತ್ತಿರುತ್ತಾನೆ. ಆತನಿಗೆ ಬಹಳ ಭಯ ಆಗುತ್ತದೆ. ಭೂಮಿಕಾಳನ್ನು ಬಹಳ ಇಷ್ಟ ಪಡುತ್ತೇನೆ. ಅದನ್ನು ಬಾಯಿ ಬಿಟ್ಟು ಹೇಳಿ ಆಯಿತು. ಆದರೆ, ಇವೆಲ್ಲ ಹೇಗೆ ಅವರ ಬಳಿ ಎಂದು ಹೇಳಿದಾಗ ಆನಂದ್ ಅರ್ಧದಲ್ಲಿ ಗೌತಮ್ ಮಾತನ್ನು ನಿಲ್ಲಿಸುತ್ತಾನೆ.

ಆನಂದ್ ಮಾತಿಗೆ ಗೌತಮ್ ತತ್ತರ

ಹಾಗೆಯೇ ಆನಂದ್, ಗೌತಮ್‌ಗೆ ಧೈರ್ಯ ಹೇಳುತ್ತಾನೆ. "ನೋಡು ಗೆಳೆಯ ಯಾವುದಕ್ಕೂ ಹೆದರಬೇಡ" ಎಂದೆಲ್ಲ ಹೇಳುತ್ತಾನೆ. ಇತ್ತ ಭೂಮಿಕಾ ಬಹಳ ನಾಚಿ ನೀರಾಗಿ ಇರುತ್ತಾಳೆ. ಭೂಮಿಕಾಳನ್ನು ನೋಡಿದ ಮಲ್ಲಿ "ಇದೇನು ಅಕ್ಕ ಇಷ್ಟೊಂದು ನಾಚಿಕೊಳ್ಳುತ್ತಿದ್ದೀರಾ? ನೀವು ಇಷ್ಟೊಂದು ನಾಚಿಕೊಂಡು ಇರುವುದನ್ನು ನಾನು ಇದೆ ಮೊದಲ ಬಾರಿಗೆ ನೋಡುತ್ತಿರುವುದು" ಎಂದು ಹೇಳಿದಾಗ ಭೂಮಿಕಾ ಕೆನ್ನೆ ಕೆಂಪಗಾಗಿ ಹೋಗಿತ್ತು. ಆಕೆಗೆ ಏನು ಮಾತನಾಡಬೇಕು ಎನ್ನುವುದು ತಿಳಿಯದ ಹಾಗೆ ಆಗಿತ್ತು.

ಭಯದಲ್ಲಿ ತತ್ತರಿಸಿ ಹೋದ ಗೌತಮ್

ಇತ್ತ ಆನಂದ್, ಗೌತಮ್‌ಗೆ ಹೇಳುತ್ತಾನೆ. "ನೋಡು ಗೆಳೆಯ ನಾಚಿಗೆ ಮಾಡಿಕೊಂಡು ರೂಮ್‌ನಿಂದ ಹೊರಗೆ ಬಂದರೆ, ಅಜ್ಜಿಗೆ ಫಿಟ್ಟಿಂಗ್ ಇಟ್ಟು ಬಿಡುತ್ತೇನೆ" ಎನ್ನುತ್ತಾನೆ . ಹೀಗೆಲ್ಲ ಮಾತನಾಡುತ್ತಾ ಆನಂದ್, ಗೌತಮ್‌ನನ್ನು ರೆಡಿ ಮಾಡಿಸುತ್ತಾ ಇರುತ್ತಾನೆ. ಗೌತಮ್‌ಗೆ ಪಂಚೆ ಶಲ್ಯ ಹಾಕಿಸಿ, ಒಳ್ಳೆ ಮದುಮಗನ ಹಾಗೆ ಸಿಂಗಾರ ಮಾಡುತ್ತಾನೆ. ಗೌತಮ್ ನೋಡಲು ಮಾತ್ರ ಎರಡು ಕಣ್ಣು ಸಾಲದು ಅಷ್ಟು ಮುದ್ದಾಗಿ ಕಾಣಿಸುತ್ತಿದ್ದಾರೆ. ಹಾಗೆಯೇ ಆನಂದ್ ಗೌತಮ್‌ನನ್ನು ನೋಡಿ ಏನೋ ಒಂದು ಮಿಸ್ಸಿಂಗ್ ಇದೆ ಅಲ್ವಾ. ಏನದು? ಎಂದು ಯೋಚನೆ ಮಾಡುತ್ತಿರುತ್ತಾನೆ. ಕೊನೆಗೆ ಮಲ್ಲಿಗೆ ಹೂವಿನ ಮಾಲೆಯನ್ನು ಕೈಗೆ ಸುತ್ತಿಕೊಳ್ಳುವಂತೆ ಹೇಳುತ್ತಾನೆ.

Amruthadhaare kannada serial June 4th Episode update

ಆನಂದ್ ಮಾತಿಗೆ ಸುಮ್ಮನಾದ ಗೆಳೆಯ

ಇದು ಯಾವುದೂ ಗೌತಮ್‌ಗೆ ಇಷ್ಟ ಇಲ್ಲ ಆತನಿಗೆ ತಳಮಳ ಆಗುತ್ತಿರುತ್ತದೆ. ಆದರೆ, ಆನಂದ್ ಮಾತ್ರ "ಯಾವುದೇ ಕಾರಣಕ್ಕೂ ಇವತ್ತು ಶಾಸ್ತ್ರ ನಡೆಯಬೇಕು" ಎಂದು ಖಡಕ್ ಆಗಿ ಗೌತಮ್‌ಗೆ ಹೇಳಿರುತ್ತಾನೆ . ಆನಂದ್ ಕಿವಿ ಮಾತೊಂದನ್ನು ಗೌತಮ್‌ಗೆ ಹೇಳುತ್ತಾನೆ. "ಗೆಳೆಯ ಈ ಸಂಕೋಚವನ್ನು ಬಿಟ್ಟರೆ ನಿನ್ನ ಸಂತತಿ ಬೆಳೆಯುವುದು" ಎಂದು ಹೇಳಿದಾಗ ಗೌತಮ್‌ಗೆ ಏನು ಮಾಡಬೇಕು ತಿಳಿಯದೇ ಮೌನವಾಗಿ ಇರುತ್ತಾನೆ.

More from Filmibeat

English summary
Amruthadhaare kannada serial June 4th Episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X