Amruthadhaare: ಗೌರಿ ಹಬ್ಬದ ದಿನವೇ ಜಗಳ ಆಡಿದ ಮಹಿಮಾ-ಜೀವ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌರಿ ಗಣೇಶ ಹಬ್ಬ ಜೋರಾಗಿ ನಡೆಯುತ್ತಿದೆ. ಗೌತಮ್ ಹಾಗೂ ಭೂಮಿಕಾ ಇಬ್ಬರ ಮನೆಯಲ್ಲೂ ಈ ಬಾರಿ ಹೊಸ ಜೋಡಿಗಳಿಂದ ಹಬ್ಬ ವಾತಾವರಣ ಹೆಚ್ಚಾಗಿದೆ.

ಮಹಿಮಾಳಿಗೆ ಚಿಕ್ಕ ಮನೆಯಲ್ಲಿ ಎಸಿ ಇಲ್ಲದೇ ಇರಲು ಆಗದಿದ್ದರೂ ಕೂಡ ಜೀವನ್‌ಗಾಗಿ ಸಹಿಸಿಕೊಂಡಿದ್ದಾಳೆ. ಸ್ವಲ್ಪ ದಿನ ಹೇಗೋ ಮ್ಯಾನೇಜ್ ಮಾಡಿ ನಂತರ ತನ್ನಿಷ್ಟದಂತೆ ಬದುಕಬೇಕು ಎನ್ನುವುದು ಅವಳ ಆಲೋಚನೆ.

ಯಾಕೆಂದರೆ, ಸದ್ಯ ಮಹಿಮಾ ಗರ್ಭಿಣಿ ಆಗಿದ್ದು, ಈ ವಿಚಾರ ಇನ್ನೂ ಜೀವನ್‌ಗಾಗಲೀ ಅವರ ಅಣ್ಣನಿಗಾಗಲೀ ಗೊತ್ತಿಲ್ಲ. ಗೊತ್ತಾದರೆ ತೊಂದರೆ ಆಗುತ್ತದೆ ಎಂದು ಶಕುಂತಲಾ ಹೆದರಿಸಿದ್ದಾಳೆ.

amruthadhaare-kannada-serial

ಗೌರಿ-ಗಣೇಶ ಹಬ್ಬ ಜೋರು

ಇಬ್ಬರ ಮನೆಯಲ್ಲೂ ಭೂಮಿಕಾ-ಗೌತಮ್ ಹಾಗೂ ಜೀವನ್-ಮಹಿಮಾ ಬೆಳಗ್ಗೆ ಬೇಗ ಎದ್ದು ಗೌರಮ್ಮನ ಪೂಜೆಯನ್ನು ಮಾಡಿದ್ದಾರೆ. ಇಬ್ಬರ ಮನೆಯಲ್ಲೂ ಹಬ್ಬ ಸಡಗರದಿಂದ ಸಾಗಿದೆ. ಇದೇ ವೇಳೆ ಭೂಮಿಕಾ ತನ್ನ ತಾಯಿಯ ಮನೆಯನ್ನು ಮಿಸ್ ಮಾಡಿಕೊಂಡಿದ್ದು, ತವರು ಮನೆಗೆಹೋಗಿ ಬರುತ್ತೇನೆ ಎಂದು ಶಕುಂತಲಾ ಬಳಿ ಕೇಳುತ್ತಾಳೆ. ಆದರೆ, ಶಕುಂತಲಾ ಬೇಕಂತಲೇ ಹಬ್ಬದ ದಿನ ಮನೆ ಸೊಸೆ ಹೊರಗೆ ಎಲ್ಲೂ ಹೋಗಬಾರದು. ನಮ್ಮ ಮನೆಯಲ್ಲಿ ಹಬ್ಬ ಮಾಡಬೇಕು. ಅದೇ ಪದ್ಧತಿ ಎಂದು ಹೇಳಿ ಭೂಮಿಕಾ ಎಲ್ಲೂ ಹೋಗದಂತೆ ತಡೆದಿದ್ದಾಳೆ.

ಗೌತಮ್ ಹೊಸ ಬದುಕಿನ ಬಗ್ಗೆ ಕುತೂಹಲ

ಇತ್ತ ಆನಂದ್‌ಗೆ ಗೆಳೆಯ ಗೌತಮ್ ದಾಂಪತ್ಯ ಜೀವನವನ್ನು ಶುರು ಮಾಡಿದ್ದು ಹೇಗೆ ನಡೆಯುತ್ತಿದೆ ಎಂಬ ಕುತೂಹಲ ಹೆಚ್ಚಾಗಿದೆ. ಯಾಕೆಂದರೆ, ಗೌತಮ್ ಮದುವೆ ಬೇಡ ಬೇಡ ಎಂದು ಹೇಳಿ 45 ವರ್ಷಗಳವರೆಗೂ ಒಂಟಿಯಾಗಿದ್ದ. ಈಗ ಭೂಮಿಕಾಳನ್ನು ಮದುವೆಯಾಗಿದ್ದು, ಇವರಿಬ್ಬರ ದಾಂಪತ್ಯ ಜೀವನ ಸುಖವಾಗಿರಲಿ ಎಂದು ಬಯಸಿದ್ದಾನೆ. ಹೀಗಾಗಿ ಗೌತಮ್ ಆಫಿಸಿಗೆ ಬಂದ ಕೂಡ ಹೇಗೆ ನಡೆಯುತ್ತಿದೆ ನಿನ್ನ ರೊಮ್ಯಾಂಟಿಕ್ ಜೀವನ ಎಂದು ಕೇಳುತ್ತಾನೆ. ಸತ್ಯ ಹೇಳಿದರೆ, ಆನಂದ್ ಬೇಸರ ಮಾಡಿಕೊಳ್ಳುತ್ತಾನೆ ಎಂದು ಭಾವಿಸಿ, ಗೌತಮ್‌ ಸುಳ್ಳು ಹೇಳುತ್ತಾನೆ. ಚೆನ್ನಾಗಿದೆ ಎಂದು ಹೇಳಿ ಮ್ಯಾನೇಜ್ ಮಾಡುತ್ತಾನೆ.

amruthadhaare-kannada-serial

ಗಂಡ-ಹೆಂಡತಿ ಕೋಳಿ ಜಗಳ

ಭೂಮಿಕಾ ಮತ್ತು ಗೌತಮ್ ಇಬ್ಬರೂ ಸದಾ ಕಿತ್ತಾಡುತ್ತಿರುತ್ತಾರೆ. ಮದುವೆಗೆ ಮುನ್ನ ಹೇಗೆ ಕೋಳಿ ಜಗಳ ಮಾಡುತ್ತಿದ್ದರೋ, ಈಗಲೂ ಹಾಗೆ ಮಾಡುತ್ತಿದ್ದಾರೆ. ರೂಮ್ ಶೇರ್ ಮಾಡಿಕೊಳ್ಳುವುದಕ್ಕೂ ಇಬ್ಬರೂ ಮುಜುಗರಗೊಂಡಿದ್ದು, ಗೌತಮ್ ಆಫಿಸಿನಿಂದ ಬರುವ ಮುನ್ನವೇ ಭೂಮಿಕಾ ಎಸಿ ಆಫ್ ಮಾಡಿ ಮಲಗಿರುತ್ತಾಳೆ. ರೂಮ್ಗೆ ಬಂದು ಎಸಿ ಆನ್ ಮಾಡಲು ಗೌತಮ್ ರಿಮೋಟ್ ಹುಡುಕುತ್ತಾನೆ. ನೋಡಿದರೆ, ಭೂಮಿಕಾ ಎಸಿ ರಿಮೋಟ್ ಅನ್ನು ಕೈಯಲ್ಲಿ ಹಿಡಿದುಕೊಂಡು ಮಲಗಿರುತ್ತಾಳೆ. ಅದನ್ನು ತೆಗೆದುಕೊಳ್ಳಲು ಹೋದಾಗ ಎಚ್ಚರಗೊಳ್ಳುವ ಭೂಮಿಕಾ ಮತ್ತೆ ಗೌತಮ್ ಜೊತೆಗೆ ಜಗಳ ಮಾಡುತ್ತಾಳೆ. ಇಬ್ಬರೂ ಚಿಕ್ಕ ಚಿಕ್ಕ ವಿಚಾರಕ್ಕೂ ಕೋಳಿ ಜಗಳ ಮಾಡುತ್ತಲೇ ಇರುತ್ತಾರೆ.

ಜಗಳ ಮಾಡಿದ ಮಹಿಮಾ

ಇತ್ತ ಗಣೇಶ ಹಬ್ಬದ ದಿನ ಪೂಜೆಗೆ ತಯಾರಿ ನಡೆಸಿ, ಜೀವನ್ ಹಾಗೂ ಮಹಿಮಾರನ್ನು ಬೇಗ ರೆಡಿಯಾಗಲು ಹೇಳುತ್ತಾರೆ. ಜೀವ ಮಹಿಮಾಳನ್ನು ಎಚ್ಚರ ಮಾಡಿಸಲು ಪ್ರಯತ್ನಿಸುತ್ತಾನೆ. ಮಹಿಮಾ ಏಳುವುದಿಲ್ಲ. ಕೊನೆಗೆ ಕೋಪ ಮಾಡಿಕೊಂಡು ಜಗಳ ಮಾಡುತ್ತಾಳೆ. ನಾನು ಎಷ್ಟು ಸಹಿಸಿಕೊಳ್ಳಲಿ. ನನಗೆ ನಿದ್ದೆ ಮಾಡಲು ಬಿಡಲು ಬಿಡು ಎಂದು ಕಿರುಚುತ್ತಾಳೆ. ಜೀವ ಮತ್ತು ಮಹಿಮಾ ರೂಮ್‌ನಲ್ಲಿ ಜಗಳ ಆಡುವುದನ್ನು ಮನೆಯವರೆಲ್ಲಾ ಕೇಳಿಸಿಕೊಂಡು ಶಾಕ್ ಆಗುತ್ತಾರೆ.

More from Filmibeat

English summary
Amruthadhaare Kannada Serial Latest episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X