Amruthadhaare:ಆನಂದ್ ಆಸೆ ನೆರವೇರಿಸಿದ ಗೆಳೆಯ; ಗೌತಮ್ ಭೂಮಿಕಾ ನಡುವೆ ರೊಮ್ಯಾಂಟಿಕ್ ಮೇನಿಯಾ
'ಅಮೃತಧಾರೆ' ಧಾರಾವಾಹಿಯಲ್ಲಿ ಮಾನ್ಯ ಮನೆಗೆ ಬರುತ್ತಿದ್ದಂತೆ ಶಕುಂತಲಾ ತಲೆ ನೋವು ಹೆಚ್ಚಾಗಿದೆ. ಅಷ್ಟೇ ಅಲ್ಲದೇ, ಮಾನ್ಯ ಗೌತಮ್ ಹಾಗೂ ಶಕುಂತಲಾಳಿಗೆ ಚಮಕ್ ಕೊಟ್ಟಿದ್ದಾಳೆ.
ಶಕುಂತಲಾ ಮಾನ್ಯಾಳನ್ನು ಕೂಡಿ ಹಾಕಿ ಕೊಟ್ಟ ಹಿಂಸೆಗೆ ತಕ್ಕ ಶಾಸ್ತಿ ಮಾಡುವುದಾಗಿ ಬೆದರಿಸಿದ್ದಾಳೆ. ಭೂಮಿಕಾಳನ್ನು ಮುಂದೆ ಇಟ್ಟುಕೊಂಡು ಶಕುಂತಲಾಳನ್ನು ಆಟವಾಡಿಸಿದ್ದಾಳೆ.
ಗೌತಮ್ ಬಳಿಯೂ ಹೋಗಿ ಹಳೆಯ ವಿಚಾರವನ್ನು ಭೂಮಿಕಾ ಬಳಿ ಹೇಳಿಕೊ ಇಲ್ಲದೇ ಹೋದರೆ ನನ್ನಿಂದಲೇ ನಿನಗೆ ತೊಂದರೆ ಆಗೊದು ಪಕ್ಕಾ ಎಂದು ವಾರ್ನಿಂಗ್ ಕೊಟ್ಟಿದ್ದಾಳೆ.

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಶಕುಂತಲಾ
ಶಕುಂತಲಾ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ, ಮಾನ್ಯಾಳ ತಾಯಿಗೆ ತೊಂದರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಹೆದರಿದ ಮಾನ್ಯಾ, ಭೂಮಿಕಾ ಬಳಿ ಯಾವುದೇ ಸತ್ಯ ಹೇಳಿಲ್ಲ. ಬದಲಿಗೆ ಮಲ್ಲಿ ಬಳಿ ಹೋಗಿ ಈ ಮನೆಯಲ್ಲಿ ಎಚ್ಚರವಾಗಿರು. ಯಾರೂ ಒಳ್ಳೆಯವರಲ್ಲ. ಈ ಮನೆಯವರಿಂದ ನನಗೆ ಆದ ತೊಂದರೆ ನಿನಗೆ ಆಗುವುದು ಬೇಡ ಎಂದು ಬುದ್ಧಿ ಮಾತು ಹೇಳಿ, ಮನೆಯಲ್ಲಿ ಯಾರಿಗೂ ತಿಳಿಸದೇ ಹೊರಟು ಹೋಗಿದ್ದಾಳೆ. ಸದ್ಯ ಭೂಮಿಕಾಳಿಗೆ ಪತ್ರ ಬರೆದಿದ್ದು, ಮತ್ತೆ ನಿಮ್ಮ ಮನೆಗೆ ಬಂದೇ ಬರುತ್ತೇನೆ ಎಂದು ಹೇಳಿದ್ದಾಳೆ. ಈ ಮಾತು ಕೇಳಿದ ಗೌತಮ್ ಹಾಗೂ ಶಕುಂತಲಾಳಿಗೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ.
ಅಮ್ಮನಿಗೆ ಬುದ್ಧಿವಾದ ಹೇಳಿದ ಮಹಿಮಾ
ಇನ್ನು ಮಹಿಮಾ ಭೂಮಿಕಾ ಜಾತಕದಲ್ಲಿ ಸಮಸ್ಯೆ ಇದ್ದು, ಎಚ್ಚರವಾಗಿರಿ ಎಂದು ಹೇಳಲು ಮನೆಗೆ ಬಂದಿದ್ದಾಳೆ. ಆದರೆ, ಭೂಮಿಕಾ ಮಹಿಮಾ ಮಾತನ್ನು ಕೇಳಿ ಅದಕ್ಕೆಲ್ಲಾ ಹೆದರಬಾರದು ನನಗೆ ಏನೂ ಆಗುವುದಿಲ್ಲ ಎಂದು ಮಹಿಮಾಳಿಗೆ ಧೈರ್ಯ ತುಂಬಿದ್ದಾಳೆ. ಮಹಿಮಾ ನೇರವಾಗಿ ಶಕುಂತಲಾ ಬಳಿ ಹೋಗಿ ನಿನ್ನಿಂದಲೇ ಜೈದೇವ್ ಅಣ್ಣ ಹಾಳಾಗಿರುವುದು. ನೀನು ಬದಲಾಗಬೇಕಿದೆ. ಭೂಮಿಕಾ ಅತ್ತಿಗೆ ತುಂಬಾ ಒಳ್ಳೆಯವರು. ಮಲ್ಲಿ ಅತ್ತಿಗೆಯನ್ನು ಚೆನ್ನಾಗಿ ನೋಡಿಕೋ. ಇಲ್ಲದೇ ಹೋದರೆ, ಮುಂದೆ ಒಂದು ದಿನ ಎಲ್ಲಾವುದಕ್ಕೂ ನೀನು ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಬುದ್ಧಿ ಹೇಳುತ್ತಾಳೆ. ಇದರಿಂದ ಶಕುಂತಲಾ ಮನಸ್ಸಿಗೆ ಬಹಳ ಗಾಸಿಯನ್ನುಂಟು ಮಾಡುತ್ತದೆ.

ಗೊಂದಲದಲ್ಲಿ ಸಿಲುಕಿದ ಗೌತಮ್-ಭೂಮಿಕಾ
ಇತ್ತ ಆನಂದ್‌ಗೆ ತನ್ನ ಗೆಳೆಯನ ಬದುಕಿನದ್ದೇ ಯೋಚನೆ. ಹಾಗಾಗಿ ಪ್ರತೀ ದಿನವೂ ಭೂಮಿಕಾ ಅತ್ತಿಗೆಗೆ ಮುತ್ತು ಕೊಡು ಎಂದು ಕೊಟ್ಟಿರುವ ಟಾಸ್ಕ್ ಅನ್ನು ನೆನಪಿಸುತ್ತಲೇ ಇದ್ದಾನೆ. ಭೂಮಿಕಾ ಮನದಲ್ಲೂ ಗೌತಮ್ ಮೇಲೆ ಅಪಾರವಾದ ಪ್ರೀತಿಯಿದ್ದು, ಹೇಳಿಕೊಳ್ಳಲಾಗದೇ ಒದ್ದಾಡುತ್ತಿದ್ದಾಳೆ. ಅಲ್ಲದೇ, ಗೌತಮ್‌ಗೂ ಮಾನ್ಯ ಹೇಳಿದ ಮಾತುಗಳು ಮನದಲ್ಲಿ ಕೊರೆಯುವಂತೆ ಮಾಡಿದೆ. ಜೊತೆಗೆ ಭೂಮಿಕಾಳ ಬಳಿ ಹೇಗೆ ಮಾತನಾಡುವುದು? ಏನು ಮಾಡಬೇಕು? ಎಂಬುದು ಅರ್ಥವಾಗದೇ ಗೊಂದಲಕ್ಕೆ ಒಳಗಾಗಿದ್ದಾನೆ.
ಆನಂದ್ ಆಸೆ ನೆರವೇರಿಸಿದ ಗೌತಮ್
ಆಫೀಸಿನಿಂದ ಮನೆಗೆ ಇದೇ ಯೋಚನೆಯಲ್ಲಿ ಬರುವ ಗೌತಮ್, ಭೂಮಿಕಾ ಬಳಿ ಮಾತನಾಡಲು ಯತ್ನಿಸುತ್ತಾನೆ. ಇಬ್ಬರೂ ಅಕಸ್ಮಾತ್ ಆಗಿ ಡಿಕ್ಕಿಯಾಗಿ ಒಬ್ಬರಗೊಬ್ಬರು ಮುತ್ತು ಕೊಡುತ್ತಾರೆ. ಇದು ಭೂಮಿಕಾಳಲ್ಲಿ ಖುಷಿಯನ್ನು ತಂದಿದೆ. ಆದರೆ, ಗೌತಮ್‌ಗೆ ಗಾಬರಿ ಉಂಟು ಮಾಡಿದ್ದು, ವಾಪಸ್ ಆಫೀಸಿಗೆ ಹೋಗಿ ಆನಂದ್ ಬಳಿ ನಡೆದ ಘಟನೆಯನ್ನು ಹೇಳಿಕೊಂಡಿದ್ದಾನೆ. ಆನಂದ್‌ಗೆ ಸಿಕ್ಕಾಪಟ್ಟೆ ಖುಷಿಯಾಗಿದ್ದು, ಗೌತಮ್ ಹಾಗೂ ಭೂಮಿಕಾ ಲವ್ ಸ್ಟೋರಿಗೆ ಭೂಮಿಕಾ ಅದಾಗಲೇ ಮುನ್ನುಡಿ ಬರೆಯಲು ಆರಂಭಿಸಿದ್ದಾಳೆ. ಆದಷ್ಟು ಬೇಗ ಗೌತಮ್ ಮತ್ತು ಭೂಮಿಕಾ ಒಂದಾಗಬೇಕು, ಧಾರಾವಾಹಿಯಲ್ಲಿ ಲವ್ ಸ್ಟೋರಿ ಶುರುವಾಗಲಿ ಎಂದು ಬಯಸಿದ ವೀಕ್ಷಕರು ದಿಲ್ ಖುಷ್ ಆಗಿದ್ದಾರೆ.


Click it and Unblock the Notifications











