ಅಪ್ಪಿ-ಪಾರ್ಥ ಲವ್ ಸ್ಟೋರಿ ಬಯಲು; ಮನೆಯವರ ಮುಂದೆ ನಿಜ ಹೇಳುತ್ತಾಳಾ ಭೂಮಿಕಾ?
ಭೂಮಿಕಾ ಮತ್ತು ಜೈ ದೇವ್ ಮಧ್ಯೆ ಕೋಲ್ಡ್ ವಾರ್ ನಡೆಯುತ್ತಿದೆ. ಮಲ್ಲಿ, ದಿವಾನ್ ಕುಟುಂಬಕ್ಕೆ ಸೊಸೆ ಆಗಿ ಬಂದಿರುವುದು ಶಕುಂತಲಾ ದೇವಿಗೆ ಮಾತ್ರ ಸ್ವಲ್ಪವೂ ಇಷ್ಟ ಇರುವುದು ಇಲ್ಲ. ಇನ್ನೂ ಜೈ ದೇವ್ ಕೂಡ ಮಲ್ಲಿಯನ್ನು ಇನ್ನೂ ಹೆಂಡತಿ ಎಂದು ಒಪ್ಪಿಕೊಂಡಿಲ್ಲ.
ಈ ವಿಚಾರವನ್ನು ಭೂಮಿಕಾಗೆ ಹೇಳುತ್ತಾನೆ. ಅದಕ್ಕೆ ಭೂಮಿಕಾ "ಈ ಪೊಲೀಸ್ ಸ್ಟೇಶನ್‌ನಲ್ಲಿ ಸುಳ್ಳು ಕಂಪ್ಲೇಂಟ್ ಕೊಟ್ಟಿದ್ದು ನೀವೇ ಎನ್ನುವುದು ನನಗೆ ತಿಳಿದಿದೆ. ಆದರೆ, ಇಷ್ಟರವರೆಗೆ ನಿಮ್ಮ ಆಟ ನಡೆಯುತ್ತಿತ್ತು. ಆದರೆ, ಇನ್ನೂ ಮುಂದೆ ನನ್ನ ಆಟ ಶುರು ಆಗಿದೆ" ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ನೆಗೆ ವಕೀಲರನ್ನು ಆನಂದ್ ಕರೆದುಕೊಂಡು ಬರುತ್ತಾನೆ. ಆಫೀಸ್‌ನ ಕೆಲಸಕ್ಕೆ ಗೌತಮ್ ಹಾಗೂ ಭೂಮಿಕಾ ಮದುವೆ ರಿಜಿಸ್ಟ್ರೇಷನ್ ರಿಪೋರ್ಟ್ ಬೇಕಾಗಿದೆ. ಅದೇ ಕಾರಣಕ್ಕೆ ಲಾಯರ್ ಮನೆವರೆಗೂ ಬರುತ್ತಾರೆ. ವಕೀಲರು ಬಂದಿರುವುದನ್ನು ನೋಡಿ ಮನೆ ಮಂದಿಗೆ ಖುಷಿ ಆಗುತ್ತದೆ. ಹಾಗೆಯೇ ಭೂಮಿಕಾಗೆ ಕೂಡ. ಹೇಗಾದರೂ ಮಾಡಿ ಜೈ ದೇವ್ ಹಾಗೂ ಮಲ್ಲಿ ಮದುವೆಯನ್ನು ರಿಜಿಸ್ಟರ್ ಮಾಡಬೇಕು ಎಂದು ಯೋಚನೆ ಮಾಡುತ್ತಿರುತ್ತಾರೆ.
ಇನ್ನೂ ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ಭೂಮಿಕಾ ಮಾತ್ರ ಜೈ ದೇವ್ ಹಾಗೂ ಮಲ್ಲಿ ಮದುವೆಯನ್ನು ಕಾನೂನು ಮುಖಾಂತರ ರಿಜಿಸ್ಟರ್ ಆಗಲಿ ಎಂದಾಗ ಗೌತಮ್ ಕೂಡ ಅದಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಲಾಯರ್ ಒಪ್ಪಿಗೆ ಕೊಡುತ್ತಿದ್ದಂತೆ ಅವರ ಮಾತು ಕೇಳಿ ಜೈ ದೇವ್‌ಗೆ ಸಿಡಿಲು ಬಡಿದ ಹಾಗೆ ಆಗುತ್ತೆ. ಇನ್ನೂ ಲಾಯರ್ ಇಬ್ಬರ ಮದುವೆಯನ್ನು ರಿಜಿಸ್ಟ್ರರ್ ಮಾಡುತ್ತಾರೆ. ಮಲ್ಲಿಗೆ ಇದರಿಂದ ಬಹಳ ಖುಷಿ ಆಗುತ್ತೆ. ಇತ್ತ ಜೈ ದೇವ್‌ಗೆ ಮಾತ್ರ ಕೋಪ ನೆತ್ತಿಗೆ ಹತ್ತಿರುತ್ತೆ. ಆದರೂ ಭೂಮಿಕಾ ಮಾತ್ರ ಇದಕ್ಕೆಲ್ಲ ಕ್ಯಾರೆ ಅನ್ನುವುದಿಲ್ಲ.
ಅಪ್ಪಿ-ಪಾರ್ಥ ನೋಡಿ ಭೂಮಿಕಾ ಶಾಕ್
ಭೂಮಿಕಾ ಯಾವುದೋ ಕೆಲಸದ ಮೇಲೆ ಮನೆಯಿಂದ ಆಚೆ ಬರುತ್ತಾಳೆ. ಆ ವೇಳೆ ಐಸ್ ಕ್ರೀಮ್ ಪಾರ್ಲರ್ ಬಳಿ ಅಪ್ಪಿಯನ್ನು ನೋಡಿ ಆಟೋ ನಿಲ್ಲಿಸುತ್ತಾರೆ. ಅಲ್ಲಿ ಪಾರ್ಥ ಕೂಡ ಇದ್ದಿದ್ದನ್ನು ಕಂಡು ಭೂಮಿಕಾಗೆ ಶಾಕ್ ಆಗುತ್ತೆ. ಇದೇನಿದು ಅಪ್ಪಿ ಪಾರ್ಥನ ಲವ್ ಮಾಡುತ್ತಾ ಇದ್ದಾಳಾ? ಜೈ ದೇವ್ ಜೊತೆ ಮದುವೆಗೆ ಒಪ್ಪಿಕೊಂಡಿರುವುದು ಯಾಕೆ? ಅನ್ನೋ ಗೊಂದಲದಲ್ಲಿರುತ್ತಾರೆ.

ಮದುವೆಯ ವೇಳೆ ಡಲ್ ಆಗಿದ್ದ ಅಪ್ಪಿ
ಮದುವೆ, ನಿಶ್ಚಿತಾರ್ಥದ ವೇಳೆ ಅಪ್ಪಿ ಸಪ್ಪೆ ಮುಖ ಹಾಕಿಕೊಂಡಿದ್ದು ಇದೆ ಕಾರಣಕ್ಕೆ ಎನ್ನುವ ವಿಚಾರ ಭೂಮಿಕಾಗೆ ತಿಳಿದಿದೆ. ಭೂಮಿಕಾ, ಅಪ್ಪಿ ಹಾಗೂ ಪಾರ್ಥನನ್ನು ಕಂಡು ಶಾಕ್ ಆಗಿದ್ದಾರೆ. ಹಾಗೆಯೇ ನನ್ನ ತಂಗಿ ಇದೀಗ ದೊಡ್ಡವಳು ಆಗಿ ಬಿಟ್ಟಿದ್ದಾಳೆ ಎಂದು ಅರಿವಿಗೆ ಬಂದಿದೆ. ಇನ್ನೂ ಮನೆಗೆ ಬಂದ ಭೂಮಿಕಾ ವಿಶೇಷವಾಗಿ ಅಪ್ಪಿಯನ್ನು ಹೊಗಳಿ ಮಾತನಾಡುತ್ತಾರೆ .
ಅಕ್ಕನ ಮಾತಿಗೆ ಅನುಮಾನಗೊಂಡ ಅಪ್ಪಿ
ಆಕೆಯ ಮಾತು ಕೇಳಿ ಅಪ್ಪಿ ಮೊದ ಮೊದಲು ಖುಷಿ ಪಟ್ಟರೆ, ಆ ಬಳಿಕ ಆಕೆಗೆ ಅನುಮಾನ ಶುರು ಆಗಿ ಬಿಡುತ್ತದೆ. ಅಕ್ಕ ಯಾಕೆ ಹೀಗೆ ಮಾತನಾಡುತ್ತಾ ಇದ್ದಾಳೆ ಎಂದು ಗೆಸ್ ಮಾಡುವುದಕ್ಕೆ ಶುರು ಮಾಡಿದ್ದಾಳೆ. ಇನ್ನೂ ಮನೆಯವರ ಎದುರು ಭೂಮಿಕಾ, ಅಪ್ಪಿ ಹಾಗೂ ಪಾರ್ಥ ಲವ್ ಸ್ಟೋರಿ ಹೇಳುತ್ತಾರಾ ಮುಂದಿನ ಸಂಚೆಕೆಯಲ್ಲಿ ನೋಡಬೇಕಿದೆ.


Click it and Unblock the Notifications











