Amruthadhaare: ಜೀವಾಗೂ ಸತ್ಯ ಗೊತ್ತಾಯ್ತು; ಮಹಿಮಾಗೆ ಹಿಂಸೆ ಕೊಟ್ಟವನಿಗೆ ಕಪಾಳಮೋಕ್ಷ

By Poorva

ಭೂಮಿಕಾ ಬಳಿ ಮಹಿಮಾ ನಡೆದ ಸಂಗತಿಯನ್ನೆಲ್ಲಾ ಹೇಳಿ ಬಿಡುತ್ತಾಳೆ. ಆದರೆ ಮಹಿಮಾ ಬಗ್ಗೆ ಭೂಮಿಕಾಗೆ ಬಹಳ ಬೇಸರವಾಗುತ್ತದೆ. ಯಾಕೆ ಇಂತಹ ಕೆಲಸ ಮಾಡಿದೆ ಮಹಿಮಾ? ಅಮಾಯಕವಾದ ಆ ಮಗು ಎನು ತಪ್ಪು ಮಾಡಿತ್ತು? ಎಂದು ಬಹಳ ಬೇಸರದಿಂದ ಕೇಳುತ್ತಾಳೆ.

ಬೇಸರ ಮಾಡಿಕೊಂಡು ಪ್ರಯೋಜನವಿಲ್ಲ ಎನ್ನುವುದು ಭೂಮಿಕಾಗೆ ಅರಿವಾಗುತ್ತದೆ. ಈಗ ಬೇಸರ ಮಾಡಿಕೊಂಡು ಇದ್ದರೆ ಏನು ಪ್ರಯೋಜನ ಆಗಿದ್ದು ಆಗಿ ಹೋಗಿದೆ, ಮಹಿಮಾ ಜೀವನವನ್ನು ಹೇಗಾದರೂ ಸರಿಪಡಿಸಬೇಕು, ನನ್ನನ್ನು ನಂಬಿ ಮಹಿಮಾ ಎಲ್ಲಾ ವಿಚಾರವನ್ನು ಹೇಳಿಕೊಂಡಿದ್ದಾಳೆ. ಆದರೆ ಈ ವಿಚಾರ ಯಾರ ಬಳಿಯೂ ಹೇಳಿಕೊಳ್ಳದೇ ಇದ್ದರೆ ಮಹಿಮಾಗೆ ಬಹಳ ದೊಡ್ಡ ತೊಂದರೆ ಆಗುತ್ತಿತ್ತು ಎಂದು ಭೂಮಿಕಾ ಅಂದುಕೊಳ್ಳುತ್ತಾಳೆ.

Amruthadhaare kannada serial written update on 05th April episode

ಹೇಗಾದರೂ ಮಾಡಿ ನನಗೆ ಆ ನೀಚನಿಂದ ಅತ್ತಿಗೆ ಮುಕ್ತಿ ಕೊಡಿಸಿಯೇ ಕೊಡಿಸುತ್ತಾರೆ ಎನ್ನುವ ನಂಬಿಕೆ ಮಹಿಮಾಗೆ ಬಲವಾಗಿದೆ. ನಿನ್ನ ಗೆಳೆಯನನ್ನು ಇಲ್ಲಿಗೆ ಬರಲು ಹೇಳು, ಹಾಗೆಯೇ ಆತನ ಜೊತೆ ಕೊಂಚ ನಾಟಕ ಮಾಡು ಎಂದು ಮಹಿಮಾಗೆ ಭೂಮಿಕಾ ಹೇಳುತ್ತಾಳೆ. ಆ ಪ್ರಕಾರವಾಗಿ ಮಹಿಮಾ ಆತನ ಗೆಳೆಯನನ್ನು ಕರೆಯುತ್ತಾಳೆ. ಅರೇ ಇಷ್ಟು ಬೇಗ ಮಹಿಮಾ ನನ್ನ ಪ್ರೀತಿಯನ್ನು ಒಪ್ಪಿಕೊಂಡು ಬಿಟ್ಟಳು ಎಂದು ಅವನು ಬಹಳ ಖುಷಿ ಪಡುತ್ತಾನೆ. ಬೇಗ ಮಹಿಮಾ ಬಳಿಗೆ ಓಡೋಡಿ ಬರುತ್ತಾನೆ.

ನೀನು ಇಷ್ಟು ಬೇಗ ನನ್ನ ಪ್ರೀತಿಯನ್ನು ಒಪ್ಪುಕೊಳ್ಳುತ್ತಿಯಾ ಎಂದು ಅಂದುಕೊಂಡು ಇರಲಿಲ್ಲ ಎಂದು ಬಹಳ ರೊಮ್ಯಾಂಟಿಕ್ ಆಗಿ ಮಹಿಮಾ ಐ ಲವ್ ಯು ಎಂದು ಹೇಳಿದಾಗ ಅದನ್ನು ಮಹಿಮಾ ರಿಜೆಕ್ಟ್ ಮಾಡುತ್ತಾಳೆ. ಏನೋ ಲವ್ ಗಿವ್ ಎಂದುಕೊಂಡು, ಇದೆಲ್ಲ ನನಗೆ ಆಗಿ ಬರಲ್ಲ ನನ್ನನ್ನು ಬ್ಲಾಕ್ ಮೇಲ್ ಮಾಡುತ್ತೀಯಾ ಅಷ್ಟು ಧೈರ್ಯ ನಿನಗೆ ಅಲ್ವಾ? ಎಂದು ಮಹಿಮಾ ಕೊಂಚ ಖಡಕ್ ಆಗಿ ಹೇಳುತ್ತಾಳೆ.

Amruthadhaare kannada serial written update on 05th April episode

ಪ್ರೀತಿ ನಾಟಕವಾಡಿದ ಮಹಿಮಾ

ಮಹಿಮಾ ಮಾತಿಗೆ ಗೆಳೆಯ ಶಾಕ್ ಆಗುತ್ತಾನೆ, ಏನಿದು ಮಹಿಮಾ ನನ್ನ ಇಲ್ಲಿಗೆ ಕರೆಸಿಕೊಂಡು ಮಾತನಾಡಬೇಕು ಎಂದೆಲ್ಲ ಹೇಳಿದಳು, ಇದೀಗ ಸಡನ್ ಚೇಂಜ್ ಆಗಿದ್ದು ಯಾಕೆ? ಎಂದು ಮನದಲ್ಲಿ ಅಂದುಕೊಂಡು ಮಹಿಮಾ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದು ಯಾಕೆ? ಎಂದು ಹೇಳಿದಾಗ ಅತ್ತ ಕಡೆಯಿಂದ ಭೂಮಿಕಾ ಧ್ವನಿ ಕೇಳಿಸುತ್ತದೆ. ನಿಮ್ಮನ್ನು ಕರೆಸಿಕೊಂಡಿದ್ದು ನಾನೇ, ನನಗೆ ಎಲ್ಲಾ ವಿಚಾರ ತಿಳಿದಿದೆ. ಅದನ್ನು ವಾಪಸ್ ನನ್ನ ಜೊತೆ ಹೇಳುವ ಅಗತ್ಯ ಇಲ್ಲ ಎಂದಾಗ ಭೂಮಿಕಾಗೆ ವಾರ್ನಿಂಗ್ ಮಾಡುತ್ತಾನೆ. ಇದನ್ನು ಕೇಳಿದ ಭೂಮಿಕಾ ಕೊಂಚ ಖಡಕ್ ಆಗಿ ಮಾತನಾಡುತ್ತಾಳೆ .

ಭೂಮಿಕಾ ತಿರುಗೇಟು

ಕೊನೆಗೆ ಆತ ಬ್ಲಾಕ್ ಮೇಲ್ ಮಾಡುತ್ತಾನೆ, ಮಹಿಮಾ ಮಗು ಅಬಾರ್ಷನ್ ಮಾಡಿಕೊಂಡಿದ್ದನ್ನು ನಾನು ಎಲ್ಲರಿಗೂ ಹೇಳುತ್ತೇನೆ . ಗೌತಮ್ ದಿವಾನ್ ಬಳಿ ಹೇಳುತ್ತೇನೆ ಹಾಗೆಯೇ ಈಕೆಯ ಗಂಡ ಜೀವಾ ಬಳಿ ಈ ವಿಚಾರ ಹೇಳುತ್ತೇನೆ ಎನ್ನುತ್ತಾರೆ. ಸರಿ ಹಾಗಾದರೆ ಜೀವನಿಗೆ ಕರೆ ಮಾಡಿ ಈ ರೀತಿ ಎಲ್ಲಾ ಇದೆ , ಈ ರೀತಿ ಆಗಿದೆ ಎಂದು ಕಾಲ್ ಮಾಡಿ ಹೇಳು ಎಂದು ಭೂಮಿಕಾ ಹೇಳಿದಾಗ ಜೀವ ಮೊಬೈಲ್‌ಗೆ ಕರೆ ಮಾಡಿದಾಗ ಜೀವಾ ಮೊಬೈಲ್ ಅಲ್ಲೇ ರಿಂಗ್ ಆಗುವುದು ಕೇಳಿಸುತ್ತದೆ.

ಕೆನ್ನೆಗೆ ಬಾರಿಸಿದ ಜೀವಾ

ತನ್ನ ಹೆಂಡತಿ ಮಾಡಿದ್ದು ತಪ್ಪು, ಆದರೆ ಅದನ್ನೇ ಅಡ್ವಾಂಟೇಜ್ ತೆಗೆದುಕೊಂಡಿರುವುದು ಸರಿಯಲ್ಲ, ಆಕೆ ಖುಷಿಯಾಗಿ ಇರಬೇಕು ಎನ್ನುವುದು ನನ್ನ ಆಸೆ. ಆದರೆ ಈ ತರ ಬ್ಲಾಕ್ ಮೇಲ್ ಮಾಡುವುದು ಸರಿಯಲ್ಲ ಎಂದು ಹೇಳಿ ಜೀವಾ ಆತನ ಕೆನ್ನೆಗೆ ಜೋರಾಗಿ ಹೊಡೆಯುತ್ತಾನೆ.

ಗೌತಮ್‌ಗೆ ಶುರುವಾಯಿತು ಭೀತಿ

ಇನ್ನೂ ಭೂಮಿಕಾಳಿಂದ ನಾನು ದೂರ ಇರಬೇಕು ಎಂದು ಗೌತಮ್ ಬಹಳ ನೊಂದುಕೊಂಡು ಇರುತ್ತಾನೆ. ಆದರೆ ಆನಂದ್‌ಗೆ ಅದ್ಯಾಕೋ ಶಕುಂತಲಾ ದೇವಿ ಅವರ ಮೇಲೆ ಡೌಟ್ ಬರುತ್ತದೆ. ಭೂಮಿಕಾ ಹಾಗೂ ಗೌತಮ್ ಒಂದಾಗಿ ಇರದಂತೆ ಮಾಡಿರುವುದು ಬೇರೆ ಯಾರೂ ಅಲ್ಲ, ಇದೆಲ್ಲ ಆಕೆಯದೇ ಕೆಲಸ ಎಂದು ಮನದಲ್ಲಿ ಹೇಳಿಕೊಂಡು ಸ್ನೇಹಿತನಿಗೆ ಸಮಾಧಾನ ಹೇಳುತ್ತಾನೆ. ಹಾಗೆಯೇ ಭೂಮಿಕಾ ಜೊತೆ ನೀನು ಉತ್ತಮ ಒಡನಾಟ ಹೊಂದಿದ್ದಿಯಾ ಅವರ ಜೊತೆ ಈ ಮಾತನ್ನು ಹೇಳಿಬಿಡು ಎಂದು ಸಲಹೆ ನೀಡುತ್ತಾನೆ.

More from Filmibeat

English summary
Amruthadhaare kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X