Amruthadhaare: ಅಂದಕ್ಕಾಗಿ ಅಣ್ಣನ ಆಸೆಗೆ ಕೊಳ್ಳಿ ಇಟ್ಟ ಮಹಿಮಾ!, ಗೌತಮ್‌ಗೆ ವಿಷಯ ತಿಳಿದರೇ ಏನಾಗಲಿದೆ?
ಮಹಿಮಾ ತನ್ನ ಅಣ್ಣನ ಕನಸನ್ನೇ ನುಚ್ಚು ನೂರು ಮಾಡಿದ್ದಾಳೆ. ಗೌತಮ್ ತನ್ನ ತಂಗಿ ಮಹಿಮಾ ಮಗುವಿನ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡು ಇರುತ್ತಾನೆ. ತನ್ನ ತಂದೆ ತಂಗಿಯ ಹೊಟ್ಟೆಯಲ್ಲಿ ತನ್ನ ತಂದೆ ಮತ್ತೆ ಹುಟ್ಟಿ ಬರುತ್ತಾನೆ ಎಂದು ಕನಸನ್ನು ಕಾಣುತ್ತಾ ಇರುತ್ತಾನೆ . ಆದರೆ ಗೌತಮ್ ಕನಸು ಕನಸಾಗಿಯೇ ಉಳಿದಿದೆ. ಮಹಿಮಾ ತನ್ನ ಮಗುವನ್ನು ಬೇಡ ಎಂದು ತೆಗೆಸಿದ್ದಾರೆ.
ಆಕೆಗೆ ಮಗುವಿಗಿಂತ ಬ್ಯೂಟಿ ಮುಖ್ಯ. ಆಕೆಯ ಕಿರಿಯರ್ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಜೀವನಪೂರ್ತಿ ಜೊತೆಗಿರುವ ಮಗುವನ್ನು ತೆಗೆದು ಹಾಕಿಸಿ ಬಿಟ್ಟಿದ್ದಾಳೆ. ಆದರೆ ಇದೀಗ ಮಹಿಮಾಗೆ ಮಾಡಿದ ತಪ್ಪಿಗೆ ಗಿಲ್ಟ್ ಆಗುತ್ತದೆ. ತನ್ನ ಅಣ್ಣ ನನ್ನನ್ನು ಹಾಗೆಯೇ ಮಗುವನ್ನು ಬಹಳ ಪ್ರೀತಿ ಮಾಡುತ್ತಾನೆ. ಆದರೆ ನಾನು ಅವನ ಯಾವ ಆಸೆಯನ್ನು ಈಡೇರಿಸಿಲ್ಲ. ಕೊನೆಯದಾಗಿ ಇದೊಂದು ಆಸೆಯನ್ನು ಈಡೇರಿಸಬಹುದಿತ್ತು.

ಅಣ್ಣ ನಮಗಾಗಿ ಏನೇನೆಲ್ಲ ಮಾಡಿಲ್ಲ. ಆದರೆ, ಇದೀಗ ಅಣ್ಣನ ನಂಬಿಕೆಗೆ ದ್ರೋಹ ಮಾಡಿದ್ದೇನೆ ಎಂದು ತಿಳಿದರೆ ಅಣ್ಣ ಹೇಗೆ ರಿಯಾಕ್ಟ್ ಮಾಡುತ್ತಾನೆ ಎನ್ನುವ ಭಯ ಒಂದು ಕಡೆ ಇದ್ದರೆ. ಮತ್ತೊಂದು ಕಡೆ ಜೀವ ಹಾಗೂ ಆತನ ಕುಟುಂಬವನ್ನು ಎದುರಿಸುವುದು ಹೇಗೆ ಎನ್ನುವ ಯೋಚನೆ ಮಹಿಮಾಗೆ ಆಗುತ್ತದೆ. ಇನ್ನು ಮಹಿಮಾ ಮಗುವಿಗಾಗಿ ತೊಟ್ಟಿಲನ್ನು ಕೂಡ ತರಿಸಿ ಬಿಟ್ಟಿದ್ದಾನೆ ಗೌತಮ್. ಇದನ್ನು ನೋಡಿದ ಮಹಿಮಾಗೆ ಎನು ಹೇಳಬೇಕು ಎಂದು ಮಾತೇ ಹೊರಡುತ್ತಾ ಇರಲಿಲ್ಲ.
ಮಹಿಮಾ ಮಗುವಿಗೆ ತೊಟ್ಟಿಲು ತರಿಸಿದ ಗೌತಮ್
ಮಹಿಮಾ ಅಜ್ಜಿಯ ಖುಷಿಗೆ ಪಾರವೇ ಇರಲಿಲ್ಲ. ಮೊಮ್ಮಗಳ ಮಗುವನ್ನು ಎತ್ತಿ ಆಡಿಸಬೇಕು ಎನ್ನುವ ಆಸೆ ಬಹಳ ಹೆಚ್ಚಾಗಿದೆ ಅಜ್ಜಿಗೆ. ಇನ್ನು ಗೌತಮ್ ಬಳಿ ಬಂದ ಮಹಿಮಾ ಅಣ್ಣನ ಬಳಿ ಪ್ರಶ್ನೆ ಮಾಡುತ್ತಾಳೆ. ಅಣ್ಣ ನಿನಗೆ ಈ ಮಗು ಅಂದರೆ ಅಷ್ಟು ಇಷ್ಟಾನ ಅಣ್ಣ ಎಂದು ಪ್ರಶ್ನೆ ಮಾಡುತ್ತಾಳೆ ಅದಕ್ಕೆ ಗೌತಮ್ ಹೇಳುತ್ತಾನೆ

ಯಾಕೆ ಹೀಗೆ ಪ್ರಶ್ನೆ ಮಾಡುತ್ತೀಯಾ ನೀನು ಚಿಕ್ಕ ಮಗು ಇರಬೇಕಾದರೆ ನಿನಗೆ ಜಾಸ್ತಿ ಟೈಮ್ ಕೊಡಲು ಆಗುತ್ತಾ ಇರಲಿಲ್ಲ. ಅದಕ್ಕೆ ನಿನಗೆ ಮಗು ಆದ ಬಳಿಕ ಸಾಧ್ಯ ಆದಷ್ಟು .. ನನಗೆ ಮನಸ್ಸಿಗೆ ತೃಪ್ತಿ ಆಗುವವರೆಗೆ ನಿನ್ನ ಮಗುವಿನ ಜೊತೆ ಟೈಮ್ ಸ್ಪೆಂಡ್ ಮಾಡಬೇಕು ಎನ್ನುವ ಆಸೆ ಎಂದು ಹೇಳುತ್ತಾನೆ.
ಭೂಮಿಕಾ ಮಾತಿಗೆ ಮಹಿಮಾ ಶಾಕ್
ಇನ್ನು ಮಹಿಮಾ ಬಳಿ ಭೂಮಿಕಾ ಹೇಳುತ್ತಾಳೆ. ಮಹಿಮಾ ನಿನಗಾಗಿ ಗೌತಮ್ ಏನೆಲ್ಲ ಮಾಡಿದ್ದಾನೆ ಗೊತ್ತಾ ? ಎಂದಾಗ ಮಹಿಮಾ ಹೇಳಿ ಹೇಳಿ ಅತ್ತಿಗೆ ಎಂದು ಹೇಳುತ್ತಾಳೆ . ಇದನ್ನು ಕೇಳಿದ ಭೂಮಿಕಾ ನಾನು ಎನು ಹೇಳುವುದು ನಿಮ್ಮ ಅಣ್ಣನನ್ನೆ ಕೇಳು ಎಂದು ಹೇಳುತ್ತಾರೆ. ಮಹಿಮಾ ಅಣ್ಣನ ಬಳಿ ನನ್ನ ಆರೈಕೆಗಾಗಿ ಏನೆಲ್ಲಾ ಪ್ಲಾನ್ ಮಾಡಿದ್ದೀಯಾ ಅಣ್ಣ ಎಂದು ಕೇಳುತ್ತಾಳೆ.
ಮಗುವಿನ ಬಗ್ಗೆ ಕನಸು ಕಂಡ ಗೌತಮ್
ಗೌತಮ್ ಹೇಳುತ್ತಾನೆ... ನಾನು ಇದೆಲ್ಲ ಮಾಡಿರುವುದು ಓವರ್ ಅನ್ನಿಸಬಹುದು. ನಿನ್ನ ಮಗುವಿಗಾಗಿ ಗುರುಕುಲದಲ್ಲಿ ಒಂದು ಸೀಟ್ ಬುಕ್ ಮಾಡಿದ್ದೇನೆ. ಹಾಗೆಯೇ ಮಗು ಗುರುಕುಲದಲ್ಲಿ ಓದಬೇಕು, ಹಾಗೆಯೇ ಅಲ್ಲಿನ ವಾತಾವರಣದಲ್ಲಿ ಬೆಳೆಯಬೇಕು ಎನ್ನುವುದು ನನ್ನ ಆಸೆ. ಮಗುವಿನ ವಿಧ್ಯಾಭ್ಯಾಸದ ಬಗ್ಗೆ ಎಷ್ಟರವರೆಗೆ ಕಲಿಯಬೇಕು ಅಷ್ಟರವರೆಗೆ ಆಲೋಚನೆ ಮಾಡಿದ್ದೇನೆ ಎಂದು ತಂಗಿಯ ಬಳಿ ತನಗಿದ್ದ ಆಸೆಯನ್ನು ಹೇಳಿಕೊಂಡು ಬಿಡುತ್ತಾನೆ.
ಅಣ್ಣನ ಆಸೆಯನ್ನು ಕೇಳಿ ಮಹಿಮಾ ಗೆ ತಾನು ಮಾಡಿದ ತಪ್ಪು ಅರಿವಾಗುತ್ತದೆ. ಅಲ್ಲಿಂದ ಎದ್ದು ಅಳುತ್ತಾ ರೂಮ್ ಕಡೆ ಹೋಗುತ್ತಾಳೆ . ಇದನ್ನು ಕಂಡ ಗೌತಮ್ ಏನಾಯಿತು ಎಂದಾಗ ಭೂಮಿಕಾ ಆನಂದಕ್ಕೆ ಬಂದ ಕಣ್ಣೀರು ಆಗಿರಬಹುದು ಎಂದು ಗೌತಮ್ ನನ್ನು ಸಮಾಧಾನ ಮಾಡುತ್ತಾಳೆ. ಜೊತೆಗೆ ತಂಗಿಯ ಮಗುವಿಗೆ ಇಷ್ಟು ಕನಸು ಕಾಣುವವರು ತನ್ನ ಮಗುವಿನ ಬಗ್ಗೆ ಇನ್ನೆಷ್ಟು ಕನಸು ಕಾಣಲಿಕ್ಕೆ ಇಲ್ಲ ಎಂದು ಆಲೋಚನೆ ಮಾಡುತ್ತಾಳೆ.


Click it and Unblock the Notifications











