Amruthadhaare: ಅತ್ತಿಗೆ ಎದುರು ನಿಜ ಬಾಯ್ಬಿಟ್ಟ ಮಹಿಮಾ; ಭೂಮಿಕಾ ನಡೆಯೇನು?
ಮಹಿಮಾ ದೊಡ್ಡ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾಳೆ. ಆಕೆ ನಂಬಿದ್ದ ಆಕೆಯ ಗೆಳೆಯನೇ ಆಕೆಯ ಬದ್ದ ವೈರಿ ಆಗಿದ್ದಾನೆ. ಮಹಿಮಾ ಗೆಳೆಯನಿಗೆ ಆಕೆಯನ್ನು ಪಡೆದುಕೊಳ್ಳುವ ಆಸೆ. ಆತ ಮೊದಲಿನಿಂದಲೂ ಮಾಡಿದ್ದು ಜೀವನಿಂದ ಮಹಿಮಾಳನ್ನು ದೂರ ಮಾಡಬೇಕು ಎಂದು.
ಬಹಳ ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಆದರೆ ಅದು ಸಾಧ್ಯವಾಗದೇ ಹೋದಾಗ ಸುಮ್ಮನೆ ಪೆಚ್ಚು ಮೋರೆ ಹಾಕಿ ಕುಳಿತುಕೊಂಡು ಬಿಡುತ್ತಾನೆ, ಆತನಿಗೆ ಏನು ಮಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗುತ್ತದೆ.

ಮಹಿಮಾ ಗರ್ಭಿಣಿ ಆಗಿರುವ ವಿಚಾರ ತಿಳಿದ ಬಳಿಕವಂತೂ ಆ ಮಗುವನ್ನು ಹೇಗಾದ್ರೂ ಮಾಡಿ ತೆಗೆಸಬೇಕು ಎಂದು ಇಲ್ಲಸಲ್ಲದ ಮಾತುಗಳನ್ನು ಆಡುತ್ತಾನೆ. ಇದರಿಂದ ಮಹಿಮಾ ಮನದಲ್ಲಿ ನೂರಾರು ಆಲೋಚನೆ ಬರುತ್ತದೆ. ಕೊನೆಗೆ ಮಹಿಮಾ ಮಗುವನ್ನು ತೆಗೆಸುವ ನಿರ್ಧಾರ ತೆಗೆದುಕೊಳ್ಳುತ್ತಾಳೆ . ಕೊನೆಗೆ ಆತನ ಗೆಳೆಯನನ್ನು ಕರೆದುಕೊಂಡು ಹೋಗಿ ಮಗುವನ್ನು ಅಬಾರ್ಟ್ ಮಾಡುತ್ತಾಳೆ.
ಅಬಾರ್ಷನ್ ವಿಚಾರ ತಿಳಿದಿದ್ದು ಆಕೆಯ ಗೆಳೆಯನಿಗೆ ಮಾತ್ರ. ಆದರೆ ಆತ ಇದನ್ನೇ ಬಳಸಿಕೊಂಡು ಮಹಿಮಾಗೆ ಬ್ಲಾಕ್ ಮೇಲ್ ಮಾಡುತ್ತಾನೆ. ನಾನು ಕರೆದ ಕಡೆ ನೀನು ಬರಬೇಕು, ನನ್ನ ಜೊತೆ ನೀನು ಸುತ್ತಾಡಬೇಕು, ಇಲ್ಲವಾದರೆ ನೀನು ಮಾಡಿದ ಎಲ್ಲಾ ಕೆಟ್ಟ ಕೆಲಸ ಎಲ್ಲರ ಮುಂದೆ ಹೇಳುತ್ತೇನೆ ಎಂದು ಬೆದರಿಸುತ್ತಾನೆ. ಮಹಿಮಾಗೆ ದಿಕ್ಕೇ ತೋಚದಂತಾಗುತ್ತದೆ. ಮನದಲ್ಲಿ ಇರುವ ನೋವನ್ನು ಯಾರ ಬಳಿ ಹೇಳಬೇಕು ಎಂದು ಆಲೋಚನೆ ಮಾಡುತ್ತಿದ್ದ ವೇಳೆ ಆಕೆಗೆ ಹೊಳೆದದ್ದು ಭೂಮಿಕಾ.

ಅತ್ತಿಗೆ ಬಳಿ ಸತ್ಯ ಹೇಳಲು ಮುಂದಾದ ಮಹಿಮಾ
ಭೂಮಿಕಾಗೆ ಹೇಳಿದರೆ ಇದಕ್ಕೆಲ್ಲ ಪರಿಹಾರ ಸಿಗಬಹುದು ಎಂದುಕೊಂಡು ಭೂಮಿಕಾಗೆ ಕರೆ ಮಾಡುತ್ತಾಳೆ ಮಹಿಮಾ. ಅತ್ತಿಗೆ ನಿಮ್ಮ ಬಳಿ ನಾನು ಒಂದು ಮುಖ್ಯವಾದ ವಿಚಾರ ಮಾತನಾಡಬೇಕಿತ್ತು, ದಯವಿಟ್ಟು ನನ್ನ ಶಾಪ್ ಬಳಿ ಬನ್ನಿ ಎಂದು ಕರೆಯುತ್ತಾಳೆ. ಬಹಳ ಆತುರದಿಂದ ಭೂಮಿಕಾ ಶಾಪ್‌ಗೆ ಬರುತ್ತಾಳೆ. ಭೂಮಿಕಾಳನ್ನು ನೋಡಿದ ಮಹಿಮಾಗೆ ಕೊಂಚ ಆರಾಮ ಅನಿಸುತ್ತದೆ. ಆಕೆಯ ಮುಖದಲ್ಲಿ ಖುಷಿ ಎದ್ದು ಕಾಣುತ್ತದೆ. ಕೊನೆಗೆ ತಾನು ಮಾಡಿರುವ ತಪ್ಪನ್ನು ಭೂಮಿಕಾ ಮುಂದೆ ಬಿಚ್ಚಿಡುತ್ತಾಳೆ.
ಮಹಿಮಾ ಮಾತಿಗೆ ಭೂಮಿಕಾ ಶಾಕ್
ನನ್ನನ್ನು ಕ್ಷಮಿಸಿ ಅತ್ತಿಗೆ ನನ್ನ ಮಗುವನ್ನು ನಾನೇ ಅಬೋರ್ಟ್ ಮಾಡಿಕೊಂಡೆ. ಆದರೆ ಮನೆಯಲ್ಲಿ ನಾನು ಸುಳ್ಳು ಹೇಳಿದೆ , ಆದರೆ ನನ್ನನ್ನು ಈ ವಿಚಾರದಲ್ಲಿ ಒಬ್ಬ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಮನದಲ್ಲಿರುವ ಆಲೋಚನೆಯನ್ನು ಹೊರ ಹಾಕುತ್ತಾಳೆ. ಇತ್ತ ಗೌತಮ್‌ಗೆ ತನ್ನ ಮನದಲ್ಲಿ ನೂರಾರು ಆಲೋಚನೆ ಇರುತ್ತದೆ. ನಾನು ಮತ್ತು ಭೂಮಿಕಾ ಒಂದಾದರೆ ನನ್ನ ತಾಯಿಯವರಿಗೆ ಏನೋ ಕಂಟಕ ಕಾದಿದೆ ಎಂದು ಮನದಲ್ಲಿ ನೊಂದುಕೊಂಡು ಇರುತ್ತಾನೆ.
ಆನಂದ್ ಬಳಿ ನೋವು ತೋಡಿಕೊಂಡ ಗೌತಮ್
ಆನಂದ್‌ಗೆ ಯಾವುದೇ ವಿಚಾರ ತಿಳಿದಿರುವುದಿಲ್ಲ. ಆತ ಏನೇನೋ ಕಾಮೆಂಟ್ ಮಾಡಿ ಗೌತಮ್‌ನನ್ನು ನಗಿಸಲು ಪ್ರಯತ್ನ ಮಾಡುತ್ತಿರುತ್ತಾನೆ. ಆದರೆ ಕೊನೆಗೆ ಆನಂದ್ ಬಳಿ ಗೌತಮ್ ತನ್ನ ಮನದಲ್ಲಿರುವ ನೋವನ್ನು ಹೇಳಿಕೊಂಡು ಅಳುತ್ತಾನೆ. ಇದಕ್ಕೆ ಆನಂದ್ ಯಾವ ರೀತಿ ಸಮಾಧಾನ ಮಾಡುತ್ತಾನೋ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











