Amruthadhaare: ಗೌತಮ್- ಭೂಮಿಕಾ ಜೋಡಿ ಮೋಡಿ; ವೀಕ್ಷಕರು ಫುಲ್ ಫಿದಾ

By Poorva

ಅಮೃತಧಾರೆ ಹೆಸರೇ ತಕ್ಕ ಹಾಗೆಯೇ ಕಥೆಯ ಹಂದರವಿದೆ. ನಟನೆಯಲ್ಲಿ ನಾಯಕ ನಟ ಹಾಗೂ ನಟಿಯನ್ನು ಮೀರಿಸಲು ಯಾರಿಂದಲೂ ಸಾಧ್ಯ ಇಲ್ಲ ಎಂದು ವೀಕ್ಷಕರು ಪ್ರತಿ ಬಾರಿಯೂ ಹೇಳುತ್ತಿರುತ್ತಾರೆ. ಛಾಯಾ ಸಿಂಗ್ ಅಭಿನಯಕ್ಕೆ ನಟಿ ಮಣಿಯರು ಮಾರು ಹೋಗುತ್ತಿರುವುದಂತು ಸತ್ಯ. ಭೂಮಿಕಾ ಮಾತನಾಡುತ್ತಿರುವ ರೀತಿ, ಆಕೆಗೆ ಗಂಡನ ಮೇಲಿರುವ ಪ್ರೀತಿ, ಮನೆ ಮಂದಿಯ ಮೇಲೆ ಇರುವ ಅಕ್ಕರೆಯನ್ನು ನೋಡಿದ ಮಹಿಳೆಯರು ಫಿದಾ ಆಗಿಬಿಟ್ಟಿದ್ದಾರೆ.

ಇದೀಗ ಶಾಕುಂತಲಾ ದೇವಿ ಮಾಸ್ಟರ್ ಪ್ಲಾನ್ ಉಲ್ಟಾ ಆಗಿದೆ. ಮನೆ ಹಾಳು ಮಾಡುವ ಅದೆಷ್ಟೇ ಐಡಿಯಾ ಮಾಡಿ ಭೂಮಿಕಾ ಹಾಗೂ ಗೌತಮ್‌ನನ್ನು ಇನ್ನಷ್ಟು ಹತ್ತಿರ ಮಾಡುತ್ತಿದೆ ಹೊರತು ದೂರ ಮಾಡಲು ಸಾಧ್ಯವೇ ಇಲ್ಲ. ಇದೀಗ ರೌಡಿಗಳಿಂದ ಭೂಮಿಕಾಳನ್ನು ಕಿಡ್ನಾಪ್ ಮಾಡಿಸಲಾಗುತ್ತದೆ. ಗೌತಮ್ ಆತನ ಪ್ರೀತಿಯನ್ನು ಹೇಳುತ್ತಿರುವಾಗಲೇ ಭೂಮಿಕಾಳನ್ನು ಕಿಡಿಗೇಡಿಗಳು ಅಪಹರಿಸಿದ್ದಾರೆ. ಗೌತಮ್ ಹಾಗೂ ಆನಂದ್ ಭೂಮಿಕಾಳನ್ನು ಹುಡುಕುವ ಎಲ್ಲಾ ಪ್ರಯತ್ನ ಮಾಡಿದರು. ಆದರೆ ಎಲ್ಲಿಯೂ ಸಿಗದೆ ಇರುವಾಗ ಕಂಗಾಲಾಗುತ್ತಾನೆ.

Amruthadhaare kannada serial written update on Latest episode

ಗೌತಮ್‌ಗೆ ಏನು ಮಾಡಬೇಕು ಎಂದು ದಿಕ್ಕು ತೋಚದಂತೆ ಆಗುತ್ತದೆ. ಕೊನೆಗೆ ಆ ರೌಡಿಗಳ ಜಾಡು ಹಿಡಿದು ಕೈಯಲ್ಲಿ ಬಂದೂಕು ಹಿಡಿದು ಹೊರಟ ಗೌತಮ್‌ಗೆ ಪುಡಿ ರೌಡಿಗಳನ್ನು ಹೊಡೆದುರುಳಿಸುವುದು ಅಷ್ಟು ಸುಲಭದ ಮಾತಲ್ಲ. ಆದರೂ ಕೂಡ ರೌಡಿಗಳ ಅಟ್ಟಹಾಸವನ್ನು ಮೆಟ್ಟಿ ನಿಂತ ಗೌತಮ್ ಭೂಮಿಕಾಳನ್ನು ಹುಡುಕುತ್ತಾನೆ.

ಭೂಮಿಕಾಳನ್ನು ಮಣ್ಣಲ್ಲಿ ಹುದುಗಿಸಿ ಇಟ್ಟಿರುತ್ತಾರೆ. ಭೂಮಿಕಾಳನ್ನು ಮಣ್ಣಿನಡಿಯಿಂದ ತೆಗೆದು ಮರುಜನ್ಮ ಕೊಡುತ್ತಾನೆ ಗೌತಮ್. ಹಾಗೆಯೇ ಆಸ್ಪತ್ರೆಗೆ ಸೇರಿಸಿ ಗೌತಮ್ ಭೂಮಿಕಾ ಜೀವ ಉಳಿಸುತ್ತಾನೆ. ಗೌತಮ್ ಅವರೇ ನೀವು ನನಗೆ ಮರುಜನ್ಮ ನೀಡಿದಿರಿ ಎಂದು ಭೂಮಿಕಾ ಹೇಳಿದಾಗ ಗೌತಮ್ ಬಹಳ ಖುಷಿ ಪಡುತ್ತಾನೆ.

ಶಕುಂತಲಾ ದೇವಿ ಪ್ಲಾನ್ ಫ್ಲಾಪ್

ಭೂಮಿಕಾ ಹಾಗೂ ಗೌತಮ್ ಸೇಫ್ ಆಗಿದ್ದಾರೆ ಎಂದು ತಿಳಿದು ಶಕುಂತಲಾ ದೇವಿ ಬಹಳ ಕೋಪದಲ್ಲಿ ಇರುತ್ತಾಳೆ. ಆಕೆಗೆ ಮನೆಯಲ್ಲಿಯೇ ಇರುವ ಮಲ್ಲಿಯನ್ನು ಏನು ಮಾಡಲಾಗುತ್ತಿಲ್ಲ. ಹಾಗೆಯೇ ಕಾಫಿ ಎಸ್ಟೇಟ್‌ಗೆ ಭೂಮಿಕಾ ಹಾಗೂ ಗೌತಮ್‌ರನ್ನು ಕಳುಹಿಸಿ ಅವರಿಬ್ಬರನ್ನು ಮುಗಿಸುವ ಪ್ಲಾನ್ ಹಾಕಿಕೊಂಡು ಇದ್ದಳು. ಆದರೆ ಅದೆಲ್ಲವೂ ಫ್ಲಾಪ್ ಆಗಿದೆ. ಹಾಗೆಯೇ ಮಲ್ಲಿಯನ್ನು ಕಾವಲು ಕಾಯಲು ಮಹಿಮಾ ಮನೆಯಲ್ಲಿಯೇ ಠಿಕಾಣಿ ಹೂಡಿದ್ದಾಳೆ.

Amruthadhaare kannada serial written update on Latest episode

ಅಮ್ಮನನ್ನೇ ಪ್ರಶ್ನೆ ಮಾಡಿದ ಮಹಿಮಾ

ಮಹಿಮಾಳನ್ನು ಅದೆಷ್ಟೇ ಪ್ಲಾನ್ ಮಾಡಿ ಆಕೆಯ ಮನೆಗೆ ಕಳುಹಿಸುವ ಪ್ರಯತ್ನ ಮಾಡಿದರು ಮಹಿಮಾ ಮಾತ್ರ ಅಕ್ಕ ಈ ಮನೆಯಲ್ಲಿ ಇರಬಹುದು, ಆದರೆ ನಾನು ಯಾಕೆ ಈ ಮನೆಯಲ್ಲಿ ಇರಬಾರದು ಎಂದು ಅಮ್ಮನನ್ನೇ ಪ್ರಶ್ನೆ ಮಾಡುತ್ತಾಳೆ. ಹಾಗೆಯೇ ಶಕುಂತಲಾ ದೇವಿ ಜಾಸ್ತಿ ಪ್ರಶ್ನೆ ಮಾಡಿದರೆ ಮನೆ ಮಂದಿಗೆ ಮಹಿಮಾ ಹೇಳಿಬಿಟ್ಟರೆ ಎನ್ನುವ ಆತಂಕ ಆಕೆ ಇರುತ್ತಾಳೆ. ಆದಕ್ಕೆ ಮಹಿಮಾಗೆ ಏನು ಹೇಳದೇ ಅಲ್ಲಿಂದ ನೇರವಾಗಿ ಹೊರಟು ಹೋಗುತ್ತಾಳೆ.

ಭೂಮಿಕಾ, ಗೌತಮ್ ಜೋಡಿ ಮೋಡಿ

ಭೂಮಿಕಾ ಹಾಗೂ ಗೌತಮ್ ದಿವಾನ್ ಜೋಡಿಯನ್ನು ಸೀರಿಯಲ್ ಪ್ರೇಮಿಗಳು ಹಾಡಿ ಹೋಗುತ್ತಿದ್ದಾರೆ.ಇಬ್ಬರು ಒಬ್ಬರಿಗೊಬ್ಬರು ಬಹಳ ಪ್ರೀತಿ ಮಾಡುತ್ತಿದ್ದಾರೆ. ಆದರೆ ಹೇಳಿಕೊಳ್ಳಲು ಹಿಂದುಮುಂದು ನೋಡುತ್ತಿದ್ದಾರೆ. ಭೂಮಿಕಾ ಗೌತಮ್ ಹೇಳಲಿ ಎಂದು ಗೌತಮ್ ಕಾಯುತ್ತಿದ್ದಾನೆ. ಆ ಪ್ರಕಾರ ಇದೀಗ ಗೌತಮ್ ತನ್ನ ಮನದಲ್ಲಿರುವ ಪ್ರೀತಿಯನ್ನು ಭೂಮಿಕಾ ಬಳಿ ಹೇಳಿಕೊಂಡಿದ್ದಾನೆ. ಇನ್ನೂ ಮುಂದೆ ಭೂಮಿಕಾ ಹಾಗೂ ಗೌತಮ್ ಲವ್ ಸ್ಟೋರಿ ನೋಡಲು ವೀಕ್ಷಕರು ಮತ್ತಷ್ಟು ಉತ್ಸುಕರಾಗಿದ್ದಾರೆ.

More from Filmibeat

English summary
Amruthadhaare kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X