Amruthadhaare ; ಮಿಂಚು ಜನ್ಮ ರಹಸ್ಯ ಬಯಲು, ಶಕುನಿ ಮಾವನ ಪ್ರಾಣವನ್ನೇ ಬಲಿ ಪಡೆಯುತ್ತಾನಾ ಜೈದೇವ್ ?
''ಅಮೃತಧಾರೆ'' ಧಾರಾವಾಹಿಯಲ್ಲಿ ಮಗು ಸಿಕ್ಕಿರುವ ವಿಚಾರವನ್ನು ಜೈದೇವ್‌ಗೆ ಲಕ್ಷ್ಮೀಕಾಂತ್ ಹೇಳ್ತಾನೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ, ಲಕ್ಷ್ಮೀಕಾಂತ್ ಮತ್ತು ಅಖಿಲಾಂಡೇಶ್ವರಿಯ ಸಂಭಾಷಣೆ ಪೂರ್ತಿ ಕೇಳಿಸಿಕೊಂಡಿರುವ ಆಫೀಸ್‌ನಲ್ಲಿ ಕೆಲಸ ಮಾಡುವ ವ್ಯಕ್ತಿ ಜೈದೇವ್‌ಗೆ ಕರೆ ಮಾಡಿದ್ದಾನೆ. ಮಗು ವಿಚಾರ ಹೇಳಿದ್ದಾನೆ.ಈ ಮೂಲಕ ಉಂಡ ಮನೆಗೆ ದ್ರೋಹ ಬಗೆದಿದ್ದಾನೆ. ಈ ವಿಚಾರ ತಿಳಿದು ಇದು ಹೊಸ ವೈಲ್ಡ್ ಕಾರ್ಡ್ ಎಂಟ್ರಿ ಎಂದು ಜೈದೇವ್ ಅಬ್ಬರಿಸಿದ್ದಾನೆ. ವಿಳಾಸ ಬೇರೆ ಸಿಕ್ಕಿದೆ.
ವಿಶೇಷ ಅಂದರೆ ಜೈದೇವ್‌ಗೆ ಗೊತ್ತಾದ ವಿಚಾರ ಇನ್ನೂ ಗೌತಮ್‌ಗೆ ಗೊತ್ತಾಗಿಲ್ಲ. ಅಖಿಲಾಂಡೇಶ್ವರಿ ಹೇಳಿದ ವಿವರ ಮತ್ತು ವಿಚಾರವನ್ನು ಗೌತಮ್‌ಗೆ ಹೇಳದೇ ಲಕ್ಷ್ಮೀಕಾಂತ್ ತಾನೇ ಆ ಮಗುವನ್ನು ಹುಡುಕಿಕೊಂಡು ಹೋಗಿದ್ದಾನೆ. ಅಲ್ಲಿ ಮಿಂಚುನೇ ಗೌತಮ್ ಮಗಳು ಎನ್ನುವ ಸತ್ಯ ಲಕ್ಷ್ಮೀಕಾಂತ್ ಗೆ ಗೊತ್ತಾಗಿದೆ.

ಇದೇ ಸಮಯದಲ್ಲಿ ಅದೇ ಜಾಗಕ್ಕೆ ಜೈದೇವ್ ಕೂಡ ಬಂದಿದ್ದಾನೆ. ಅಲ್ಲಿಗೆ ಜೈದೇವ್‌ಗೆ ಮಿಂಚುನೇ ಗೌತಮ್ ಮಗಳು ಎನ್ನುವ ವಿಚಾರ ಕೂಡ ಗೊತ್ತಾದಂತಾಗಿದೆ. ಆದರೆ ಮಿಂಚುನೇ ಗೌತಮ್ ಮಗಳು ಎನ್ನುವ ವಿಚಾರ ಇವರೆಲ್ಲರಿಗಿಂತ ಮೊದಲು ಗೊತ್ತಾಗಿದ್ದು ಪ್ರೇಕ್ಷಕರಿಗೆ. ಹೀಗಾಗಿಯೇ ತಮ್ಮ ಊಹೆ ನಿಜವಾಗಿದ್ದಕ್ಕೆ ಹಲವರು ಸಂಭ್ರಮ ಪಡುತ್ತಿದ್ದಾರೆ.
ಪ್ರೇಕ್ಷಕರ ಅಭಿಪ್ರಾಯ
*ಮಿಂಚುನೇ ಗುಂಡು ಭೂಮಿ ಮಗಳು ಅನ್ನೋದು ಮುಂಚೆನೇ ಯಾರಿಗೆಲ್ಲಾ ಗೊತ್ತಿತ್ತು!
*ಕೊನೆಗೂ ಮಿಂಚು ಅವರ ಮಗಳು ಎನ್ನುವುದು ಗೊತ್ತಾಯ್ತು. ಆದರೆ ಈ ಜೆಡಿ ಇನ್ನೂ ಏನೇನು ಪ್ಲಾನ್ ಮಾಡ್ತಾನೋ
* ಗೌತಮ್,ಭೂಮಿಕಾಗಿಂತ ಮುಂಚೆನೇ ಈ ಜೆಡಿಗೆ ಗೊತ್ತಾಯಿತು
* ಮಿಂಚುನೇ ಗೌತಮ್ ಭೂಮಿಕಾ ಮಗಳು ಅನ್ನೋ ಸತ್ಯ ಗೊತ್ತಾಗಿದ್ದಕ್ಕೆ ಯಾರಿಗೆಲ್ಲ ಖುಷಿ ಆಯ್ತು
* ನಮಗೆ ಮೊದಲೇ ಗೊತ್ತಿತ್ತು
* ಇದು ನಮಗೆ ಮೊದಲೇ ಗೊತ್ತಿತ್ತು. ನನಗೆ ಕೇಳಿದ್ದರೆ ನಾನು ಅವತ್ತೇ ಮಿಂಚು ಸಿಕ್ಕ ದಿನಾನೇ ಹೇಳ್ತಿದ್ದೇ, ಅವಳು ಗೌತಮ್ ಮಗಳು ಅಂತಾ
* ಇದು ಡೈರೆಕ್ಟರ್ ಗೆ ಗೊತ್ತಾಗುವ ಮುಂಚೆಯೇ ನಮಗೆಲ್ಲಾ ಗೊತ್ತಿತ್ತು ಅನ್ನೋರು ಲೈಕ್ ಮಾಡಿ.

ಗೌತಮ್‌ಗೆ ಲಕ್ಷ್ಮೀಕಾಂತ್ ಇನ್ನೂ ಯಾಕೆ ಹೇಳಿಲ್ಲ ಮಗಳ ವಿಚಾರ ?
ಮಗಳ ವಿಚಾರದಲ್ಲಿ ಗೌತಮ್ ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ. ಪಡಬಾರದ ಕಷ್ಟವನ್ನೆಲ್ಲಾ ಗೌತಮ್ ಪಟ್ಟಿದ್ದ. ಮಗಳ ವಿಚಾರದಿಂದಲೇ ಭೂಮಿಕಾಳಿಂದ ದೂರ ಕೂಡ ಆಗುವಂತಾಯ್ತು. ಇದೆಲ್ಲವೂ ಲಕ್ಷ್ಮೀಕಾಂತ್ ಗೆ ಗೊತ್ತು. ಆದರೂ ಮಗಳು ಸಿಕ್ಕಿರುವ ಸಿಹಿ ಸುದ್ದಿಯನ್ನು ಗೌತಮ್‌ಗೆ ಹೇಳದೇ ಲಕ್ಷ್ಮೀಕಾಂತ್ ಒಬ್ಬನೇ ಹೋಗಿದ್ದಾನೆ. ಜೈದೇವ್ ಎಂತಹ ಅಪಾಯಕಾರಿ ವ್ಯಕ್ತಿ ಎನ್ನುವುದು ಗೊತ್ತಿದ್ದರೂ ಕೂಡ ಈ ಸಾಹಸವನ್ನು ಲಕ್ಷ್ಮೀಕಾಂತ್ ಮಾಡಿದ್ದಾನೆ.
ಜೈದೇವ್ ಸೇಡಿಗೆ ಬಲಿಯಾಗ್ತಾನಾ ಶಕುನಿ ಮಾವ ?
ಈಗ ಜೈದೇವ್‌ಗೆ ಕೂಡ ಮಿಂಚು ವಿಚಾರ ಗೊತ್ತಾಗಿದೆ. ಮುಂದೆ ಕಿಡ್ನ್ಯಾಪ್ ಡ್ರಾಮಾ ಮತ್ತೆ ಶುರುವಾದರು ಆಗಬಹುದು. ಈ ಸಮಯದಲ್ಲಿ ಗೌತಮ್ ಮೊದಲು ಲಕ್ಷ್ಮೀಕಾಂತ್ ಪ್ರಾಣಕ್ಕೆ ಅಪಾಯ ಎದುರಾದರು ಆಗಬಹುದು. ಅಥವಾ ಮಿಂಚು ಜೊತೆ ಲಕ್ಷ್ಮೀಕಾಂತ್ ನನ್ನು ಕೂಡಿ ಹಾಕಿ ಗೌತಮ್‌ನ ಜೈದೇವ್ ಬ್ಲ್ಯಾಕ್ ಮೇಲ್ ಮಾಡಿದರು ಮಾಡಬಹುದು. ಈ ಸಾಧ್ಯತೆ ಕೂಡ ಇದೆ. ಯಾರಿಗೆ ಗೊತ್ತು ಗೌತಮ್‌ಗೆ ಮಿಂಚು ರಹಸ್ಯ ಗೊತ್ತಾಗಬಾರಾದೆಂದು ದಾರಿ ಮಧ್ಯದಲ್ಲಿ ಶಕುನಿ ಮಾವನಿಗೆ ಜೈದೇವ್ ಆಕ್ಸಿಡೆಂಟ್ ಮಾಡಿಸಿದರೂ ಮಾಡಿಸಬಹುದು.
ಅಂದ್ಹಾಗೇ ಮಗಳಿಂದ ಕಂಟಕ ಇದೆ ಎಂದು ಈ ಹಿಂದೆ ಜ್ಯೋತಿಷಿ ಭವಿಷ್ಯ ನುಡಿದಿದ್ದಾನೆ. ಹೀಗಾಗಿ ಜೈದೇವ್‌ನ ಕಪಿಮುಷ್ಠಿಯಿಂದ ಮಗುವನ್ನು ಪಾರು ಮಾಡಲು ಹೋದಾಗ ಗೌತಮ್ ಪ್ರಾಣಕ್ಕೆ ಅಪಾಯವಾದರೂ ಆಗಬಹುದು.
ಒಟ್ನಲ್ಲಿ ''ಅಮೃತಧಾರೆ'' ಸದ್ಯ ರೋಚಕ ಹಂತಕ್ಕೆ ತಲುಪಿದೆ. ಕ್ಲೈಮ್ಯಾಕ್ಸ್ ಹಂತ ಬಂದಂತೆ ಇದೆ. ಮುಂದೆ ಮತ್ತೆ ಯಾವೆಲ್ಲ ತಿರುವುಗಳು ಎದುರಾಗುತ್ತವೆ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications