Amruthadhaare ; ಅಪ್ಪನ ಸಮಾಧಿಯನ್ನೂ ಬಿಡದ ಜೈದೇವ್ - ಇನ್ನೂ ಏನೇನು ನೋಡಬೇಕೋ
''ಅಮೃತಧಾರೆ'' ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿ ನಿಶ್ಚಿತಾರ್ಥದ ಸಂಭ್ರಮ ನೆರವೇರಿದೆ. ಮಲ್ಲಿಯ ಬದುಕಿನಲ್ಲಿ ಆಶಾಕಿರಣ ಮೂಡಿದ್ದು ಮಲ್ಲಿ ವಿಪರೀತವಾಗಿ ಸುನಿಯನ್ನು ಹಚ್ಚಿಕೊಂಡಿದ್ದಾಳೆ.ಮನಸಾರೆ ಪ್ರೀತಿ ಮಾಡುತ್ತಿದ್ದಾಳೆ. ಆದರೆ, ಸುನಿಯದ್ದು ಮುಖವಾಡದ ಪ್ರೀತಿ. ತಾನು ಹಿಂದೆ ಬಿದ್ದ ಮಲ್ಲಿ ಬೇರೆ ಯಾರು ಅಲ್ಲ ಬದಲಿಗೆ ತನ್ನ ಬಾಸ್ ಜೈದೇವ್ ಪತ್ನಿಯೆಂದು ತಿಳಿದ ಮೇಲೆ ವಿಚಲಿತಗೊಂಡಿರುವ ಸುನಿ ನೇರವಾಗಿ ಬಂದು ಜೈದೇವ್ ಬಳಿ ವಿಚಾರಿಸಿದ್ದಾನೆ. ಯಾವುದೇ ಕಾರಣಕ್ಕೂ ಮದುವೆಯಾಗಲ್ಲ ಎಂದು ಹೇಳಿದ್ದಾನೆ.
ಆದರೆ ಜೈದೇವ್ ಮತ್ತೊಮ್ಮೆ ತನ್ನ ಮಾತುಗಳಿಂದ ಮರಳು ಮಾಡಿದ್ದಾನೆ. ತನ್ನ ಅಣ್ಣ ಅತ್ತಿಗೆ ಜೊತೆ ಸೇರಿ ಮಲ್ಲಿ ತನಗೆ ದ್ರೋಹ ಎಸೆದಳು ಎಂದು ಹೇಳುವ ಜೈದೇವ್ ನಿನ್ನ ಹಿಂದೆ ನಾನು ಇದ್ದೇನೆ ಹೆದರಬೇಡ ಎನ್ನುತ್ತಾನೆ. ಸುವರ್ಣ ಅವಕಾಶ ನಿನ್ನ ಹತ್ರ ಇದೆ ಉಪಯೋಗ ಮಾಡಿಕೊಳ್ಳೋದು, ಎಡಗಾಲಿನಲ್ಲಿ ಒದಿಯೋದು ನಿನಗೆ ಬಿಟ್ಟಿದ್ದು ಎಂದು ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡುತ್ತಾನೆ.

ಮತ್ತೊಂದು ಕಡೆ ಧಾಂ ಧೂಂ ಅಂತ ಮದುವೆ ಮಾಡದಿದ್ದರೂ ತನ್ನ ಕೈಲಾದಷ್ಟು ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಅಂದುಕೊಂಡಿರುವ ಗೌತಮ್ ಸದ್ಯ ಮಲ್ಲಿಯ ಮುಂದಿನ ಬದುಕು ಚೆನ್ನಾಗಿರಬೇಕು, ಯಾವುದೇ ತೊಂದರೆ ಜೈದೇವ್ ಕಡೆಯಿಂದ ಆಗಬಾರದು ಎನ್ನುವ ಉದ್ದೇಶದಿಂದ ಜೈದೇವ್ ಕಡೆಯಿಂದ ಶಾಶ್ವತವಾಗಿ ಮಲ್ಲಿಗೆ ಮುಕ್ತಿ ಕೊಡಿಸಬೇಕೆಂದು ಗೌತಮ್ ಅಂದುಕೊಂಡಿದ್ದಾನೆ. ಡಿವೋರ್ಸ್ ಪೇಪರ್ ಗೆ ಜೈದೇವ್ ಬಳಿ ಸಹಿ ಮಾಡಿಸಿಕೊಂಡು ಬಾ ಎಂದು ತನ್ನ ಆಪ್ತಮಿತ್ರ ಆನಂದ್‌ನ ಕಳಿಸಿದ್ದಾನೆ.
ಆದರೆ, ಎಲ್ಲರಿಗೆ ಗೊತ್ತಿರುವಂತೆ ''ಆಸೆಯೇ ದುಖಕ್ಕೆ ಮೂಲ'' ಎಂಬ ಹಿರಿಯರ ಮಾತನ್ನು ಮೊದಲಿಂದ ಮರೆತಿರುವ ವ್ಯಕ್ತಿ ಜೈದೇವ್. ಈಗಾಗಲೇ ಎಲ್ಲ ಆಸ್ತಿಯನ್ನು ಕಬಳಿಸಿದ್ದರೂ ಕೂಡ ಜೈದೇವ್ ಗೆ ಸಮಾಧಾನ ಇಲ್ಲ. ಇದಕ್ಕೆ ಪುರಾವೆ ಎಂಬಂತೆ ತಂದೆಯ ಸಮಾಧಿಯ ಮೇಲೆ ಕೂಡ ಕಣ್ಣು ಹಾಕಿರುವ ಜೈದೇವ್ ಡಿವೋರ್ಸ್ ಪೇಪರ್ ಮೇಲೆ ಸಹಿ ಹಾಕು ಎಂದು ಹೇಳಲು ಬಂದ ಆನಂದ್ ಎದುರು ಷರತ್ತು ಹಾಕಿದ್ದಾನೆ

ಪ್ರೇಕ್ಷಕರ ಅಭಿಪ್ರಾಯ
ಸದ್ಯ ಈ ಪ್ರೋಮೋ ನೋಡಿ ಹಲವರು ಕೆರಳಿದ್ದು ಮಲ್ಲಿ ಮೇಲೆ ಸುನಿಲ್ ಗೆ ನಿಜವಾಗ್ಲೂ ಲವ್ ಆಗಿ ಅವನೇ ಮದ್ವೆ ಆಗಿ ಇಬ್ಬರು ಸೇರಿ ಜೆಡಿ ಗೆ ಪಾಠ ಕಲಿಸ್ತಾರೆ ಅನ್ಸುತ್ತೆ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಜೈದೇವ್ ಇನ್ನೊಂದು ಮದುವೆ ಆಗುವಾಗ ಇಲ್ಲದಾ ಕಾನೂನು ಮಲ್ಲಿಯ ಇನ್ನೊಂದು ಮದುವೆ ಅಲ್ಲಿ ಅಡ್ಡ ಬಂತಾ ಎಂದು ಪ್ರಶ್ನೆ ಮಾಡಿದ್ದಾರೆ. ಸಿಂಪಲ್ ಸುನಿ ಗೌತಮ್ ಜೊತೆ ಸೇರ್ಕೊಂಡು ನಮ್ಮ ಜೇಡಿಗೆ ಬತ್ತಿ ಇಡಬೇಕು ಅವಾಗ ಚೆನ್ನಾಗಿರುತ್ತೆ ನೋಡೋಕೆ ಎಂದು ಮತ್ತೊಬ್ಬರು ಹೇಳಿದ್ದರೆ, ಮಲ್ಲಿಗೆ ಒಂದ್ಸಲ ಅನ್ಯಾಯ ಆಗಿದೆ ಮತ್ತೆ ಯಾವುದೇ ರೀತಿ ಅನ್ಯಾಯ ಆಗ್ದೇ ಇದ್ರೆ ಸಾಕು ಎಂದು ಮತ್ತೊಬ್ಬರು ಪ್ರಾರ್ಥನೆ ಮಾಡಿದ್ದಾರೆ.
ಮುಂದೇನು ..?
ಸದ್ಯ ನಡೆದ ಈ ವಿದ್ಯಮಾನದಿಂದ ಸಹಜವಾಗಿಯೇ ಗೌತಮ್ ಕೆರಳುವ ಸಾಧ್ಯತೆ ಇದೆ. ಯಾರಿಗೆ ಗೊತ್ತು. ಮಲ್ಲಿಯ ಖುಷಿಗಾಗಿ ಗೌತಮ್ ತನ್ನ ತಂದೆಯ ಸಮಾಧಿ ಮೇಲೀನ ಹಕ್ಕನ್ನೂ ಕೂಡ ಜೈದೇವ್‌ಗೆ ಬರೆದು ಕೊಟ್ಟರೂ ಕೊಡಬಹುದು. ಇನ್ನೂ ಸುನಿ ಸದ್ಯ ಅಡ್ಡಕತ್ತರಿಯಲ್ಲಿ ಸಿಲುಕಿದ್ದಾನೆ. ಮುಂಬರುವ ದಿನಗಳಲ್ಲಿ ಸುನಿ ಯಾರ ಪರ ನಿಲ್ಲುತ್ತಾನೆ..? ಜೈದೇವ್‌ಗೆ ಸೆಡ್ಡು ಹೊಡೆಯುತ್ತಾನಾ..? ಅಥವಾ ಮಲ್ಲಿಗೆ ಮೋಸ ಮಾಡುತ್ತಾನಾ..? ಎನ್ನುವುದನ್ನು ಕೂಡ ಕಾದು ನೋಡಬೇಕಿದೆ. ಜೈದೇವ್ ಮತ್ತು ದಿಯಾ ನಡುವಿನ ಆಸ್ತಿ ಕಲಹ ಕೂಡ ಇನ್ನೂ ನೋಡುವುದು ಬಾಕಿ ಇದೆ.


Click it and Unblock the Notifications











