Amruthadhaare ; ಸತ್ಯ ಹೇಳಲು ಬಂದ ಭೂಮಿಕಾನ ತಡೆದ ಗೌತಮ್ - ಹೆಣ್ಣಿನ ಕಣ್ಣೀರು ಯುದ್ಧದ ಆರಂಭ ಎಂದ ಮಲ್ಲಿ
''ಅಮೃತಧಾರೆ'' ಧಾರಾವಾಹಿಯಲ್ಲಿ ಸುನಿ ಬೇರೆ ಯಾರು ಅಲ್ಲ ಬದಲಿಗೆ ಜೈದೇವ್ ಶಿಷ್ಯ ಎನ್ನುವ ವಿಚಾರ ಭೂಮಿಕಾಗೆ ಗೊತ್ತಾಗಿದ್ದು, ಜೈದೇವ್ ನ ಮೈಚಳಿ ಬಿಡಿಸಿ ಭೂಮಿಕಾ ಬಂದಿದ್ದಾಳೆ. ನೀನೇನೂ ಮದುವೆ ನಿಲ್ಲಿಸೋದು ನಾನೇ ಮದುವೆ ನಿಲ್ಲಿಸ್ತೀನಿ ಎಂದು ಹೇಳಿದ್ದಾಳೆ. ಭೂಮಿಕಾ ರೌದ್ರಾವತಾರ ಕಂಡು ಜೈದೇವ್ ಟೆನ್ಶನ್ ಆಗಿದ್ದು ಸುನಿಗೆ ಫೋನ್ ಮೇಲೆ ಫೋನ್ ಮಾಡಿದ್ದಾನೆ.
ಆದರೆ ಗಾಬರಿ ಮತ್ತು ಗೊಂದಲದಲ್ಲಿಯೇ ಮದುವೆಗೆ ಅಣಿಯಾಗಿರುವ ಸುನಿ ಫೋನ್ ಕರೆ ಸ್ವೀಕರಿಸಿಲ್ಲ. ಇದರಿಂದ ಜೈದೇವ್ ಟೆನ್ಶನ್ ಹೆಚ್ಚಾಗಿದ್ದು ದಿಯಾ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾಳೆ. ನಿಜವಾಗಿಯೂ ಈ ಮದುವೆ ನಿಲ್ಲುತ್ತಾ ಎಂದು ಪ್ರಶ್ನೆ ಮಾಡಿದ್ದಾಳೆ.

ದಿಯಾಳ ಈ ಪ್ರಶ್ನೆಗೆ ಉತ್ತರ ನೀಡಿರುವ ಜೈದೇವ್ ಅವನೇ ಎದ್ದು ಬಂದು ಮದುವೆ ನಿಲ್ಲಿಸಿದರೆ ಸರಿ, ಇಲ್ಲವಾದಲ್ಲಿ ಅವನ ಹೆಣ ಬೀಳಿಸಿ ಆದರೂ ಮದುವೆ ನಿಲ್ಲಿಸುವ ಮಾತುಗಳನ್ನಾಡಿದ್ದಾನೆ.
ಇಷ್ಟೇ ಅಲ್ಲ ಮಾವ ಲಕ್ಷ್ಮೀಕಾಂತ್ ಕಾವಲಿಗೆ ನಿಯೋಜಿಸಿರುವ ತನ್ನ ರೌಡಿಗಳನ್ನು ಮದುವೆ ಮಂಟಪಕ್ಕೆ ಕಳಿಸಿದ್ದಾನೆ. ಮತ್ತೊಂದು ಕಡೆ ಮದುವೆಯನ್ನು ನಿಲ್ಲಿಸಲೇಬೇಕೆಂದು ಶಪಥ ಮಾಡಿರುವ ಭೂಮಿಕಾಗೆ ಮಾರ್ಗಮಧ್ಯದಲ್ಲಿ ಅಡೆ ತಡೆಗಳು ಎದುರಾಗಿವೆ.
ಭೂಮಿಕಾ ಹೋಗುವ ದಾರಿಯಲ್ಲಿ ಆಕ್ಸಿಡೆಂಟ್ ಆಗಿ ರೋಡ್ ಬ್ಲಾಕ್ ಆಗಿದ್ದು ಭೂಮಿಕಾ ಕಾರನ್ನು ಅಲ್ಲಿಯೇ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ನಡೆಯುತ್ತಾ,ಓಡುತ್ತಾ ಮದುವೆ ನಡೆಯುತ್ತಿರುವ ದೇವಸ್ಥಾನದತ್ತ ಹೆಜ್ಜೆ ಹಾಕಿದ್ದಾಳೆ.
ಇನ್ನೊಂದು ಕಡೆ ಭೂಮಿಕಾಳನ್ನು ಗೌತಮ್ ಹುಡುಕುತ್ತಿದ್ದು ಆನಂದ್ ಬಂದು ಪ್ರಶ್ನೆ ಮಾಡಿದ್ದಾನೆ. ನಿನ್ನ ದೇಹ ಮಾತ್ರ ಇಲ್ಲಿದೆ ಮನಸು ಬೇರೆ ಕಡೆ ಇದೆ ಏನಾಯ್ತು ಎಂದೆಲ್ಲಾ ಕೇಳುತ್ತಾನೆ. ಆಗ ಭೂಮಿಕಾನ ಹುಡುಕುತ್ತಿರುವುದಾಗಿ ಗೌತಮ್ ಹೇಳಿದ್ದು ಫೋನ್ ಕನೆಕ್ಟ್ ಆಗ್ತಿಲ್ಲ ಎಂದು ಹೇಳುತ್ತಾನೆ.

ಹೀಗೆ ಮದುವೆಯ ಸಂಭ್ರಮದ ನಡುವೆ ಆತಂಕ ಗಾಬರಿ ಮಾಡಿದ ಸಮಯದಲ್ಲೇ ಭೂಮಿಕಾ ಮದುವೆ ಮಂಟಪಕ್ಕೆ ಬಂದಿದ್ದು ಭೂಮಿಕಾ ಹಾವ ಭಾವ ನೋಡಿ ಗೌತಮ್‌ಗೆ ಎಲ್ಲಾ ವಿಷಯ ಭೂಮಿಕಾಗೆ ಗೊತ್ತಾಗಿದೆ ಎಂದು ಅರ್ಥ ಆಗಿದೆ.
ಇದನ್ನರಿಯದ ಭೂಮಿಕಾ ತನಗೆ ಗೊತ್ತಾದ ಸತ್ಯ ಹೇಳಲು ಮುಂದಾಗಿದ್ದು ನನಗೆಲ್ಲಾ ಗೊತ್ತು ಎಂದು ಗೌತಮ್ ಹೇಳಿದ್ದಾನೆ. ಈ ಮಾತು ಕೇಳಿ ಭೂಮಿಕಾ ಶಾಕ್ ಆಗಿದ್ದಾಳೆ. ಆ ನಂತರ ಗೌತಮ್ ನಂಬಿಕೆಯ ದಾಳ ಉರುಳಿಸಿದ್ದಾನೆ. ಮಲ್ಲಿಗೆ ಅವನು ತಾಳಿ ಕಟ್ಟಿದ್ದರೆ ಆತ ನಂಬಿಕೆಹೆ ಅರ್ಹ ಎಂದರ್ಥ ಎಂದು ಹೇಳಿದ್ದಾನೆ.
ಗೌತಮ್ ಆಡಿದ ಈ ಮಾತುಗಳಿಂದ ಭೂಮಿಕಾ ಕನ್ವಿನ್ಸ್ ಆದಂತೆ ಇದ್ದು, ಸದ್ಯ ಮಲ್ಲಿ ಮತ್ತು ಸುನಿ ಮದುವೆ ಸಾಂಗವಾಗಿ ನೆರವೇರಿದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ವಾರವಿಡೀ ಮನರಂಜನೆ ಂದು ''ಜೀ ಕನ್ನಡ'' ಮತ್ತೊಂದು ಪ್ರೋಮೋ ಹಂಚಿಕೊಂಡಿದ್ದು ಈ ಪ್ರೋಮೋದಲ್ಲಿ ಮಲ್ಲಿ ಕತ್ತಿನಲ್ಲಿ ತಾಳಿ ಕಾಣಿಸಿದೆ.
ಹೀಗಾಗಿ ಮದುವೆ ನಡೆದಿದೆ ಎನ್ನುವುದು ಸದ್ಯ ಸ್ಪಷ್ಟವಾಗಿದೆ. ಹೆಣ್ಣಿನ ಕಣ್ಣೀರು, ಯುದ್ಧದ ಆರಂಭ ಎಂದು ಮಲ್ಲಿ ಎಚ್ಚರಿಕೆಯನ್ನು ಕೂಡ ಜೈದೇವ್‌ಗೆ ನೀಡಿದ್ದು ತನ್ನ ಮದುವೆಯ ಸುತ್ತ ನಡೆದ ಪೂರ್ತಿ ಡ್ರಾಮಾ ಮಲ್ಲಿಗೆ ಗೊತ್ತಾದಂತೆ ಇದೆ. ಸುನಿ ಅಸಲಿಯತ್ತು ಮಲ್ಲಿಗೆ ಕೂಡ ಗೊತ್ತಾದಂತೆ ಇದೆ.
ಪ್ರೇಕ್ಷಕರ ಅಭಿಪ್ರಾಯ ?
ಸದ್ಯ ಇಂದು ( ಮಾರ್ಚ್ 30) ''ಅಮೃತಧಾರೆ'' ಕಾರ್ಯಕ್ರಮವನ್ನು ನೋಡಿದ ಹಲವರು ಭೂಮಿಕಾ ಮೇಡಂ ನೀವು ಮಾತ್ರ ಬೆಂಕಿ.. ಈ ಮದುವೆ ನಡೆದೇ ನಡೆಯುತ್ತೆ ಎನ್ನೋರು ಲೈಕ್ ಮಾಡಿ.. ಸುನಿ ಮತ್ತು ಮಲ್ಲಿಯ ಮದುವೆ ಆಗಬೇಕು.. ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಮುಂದೇನು..?
ಸದ್ಯ ''ಅಮೃತಧಾರೆ'' ಧಾರಾವಾಹಿ ಕುತೂಹಲ ಕೆರಳಿಸಿದ್ದು, ಮದುವೆಯಾದ ನಂತರ ಮಲ್ಲಿ ಹೇಗೆ ಜೈದೇವ್ ವಿರುದ್ದ ತಿರುಗಿ ಬೀಳ್ತಾಳೆ..? ಗೌತಮ್ ಮತ್ತು ಭೂಮಿಕಾ ಇಬ್ಬರು ಸೇರಿ ಜೈದೇವ್‌ಗೆ ಹೇಗೆ ಬುದ್ದು ಕಲಿಸುತ್ತಾರೆ..? ಜೈದೇವ್ ಕಪಿಮುಷ್ಟಿಯಲ್ಲಿರುವ ಲಕ್ಷ್ಮೀಕಾಂತ್ ಕಥೆ ಏನಾಗುತ್ತೆ..? ಆಸ್ತಿ ಕಬಳಿಸಲು ಕಾದಿರುವ ದಿಯಾ ಏನ್ಮಾಡ್ತಾಳೆ..? ಶಕುಂತಲಾ ನಡೆ ಏನು..? ಎನ್ನುವುದನ್ನು ಕಾದು ನೋಡಬೇಕಿದೆ. ಸುನಿಯ ಮನಸ್ಸು ಬದಲಾಗುತ್ತಾ..? ಸುನಿ ಮುಂದೇನು ಮಾಡ್ತಾನೆ ಎನ್ನುವ ಕುತೂಹಲ ಕೂಡ ಇದೆ.


Click it and Unblock the Notifications











