Amruthadhaare ; ಜೈದೇವ್ ಕೇಳಿದ್ದನ್ನೆಲ್ಲ ಕೊಡೋದಾ ? ಗೌತಮ್‌ಗೆ ಬುದ್ದಿ ಇಲ್ವಾ ? ಪ್ರೇಕ್ಷಕರ ಸಿಡಿಮಿಡಿ

''ಅಮೃತಧಾರೆ'' ಧಾರಾವಾಹಿಯಲ್ಲಿ ಸುನಿ ಜೊತೆ ಮಲ್ಲಿಯ ಮದುವೆ ಮಾಡಿಸಲು ಗೌತಮ್ ಮತ್ತು ಭೂಮಿಕಾ ರೆಡಿಯಾಗಿದ್ದಾರೆ. ನಿಶ್ಚಿತಾರ್ಥ ಸಮಾರಂಭ ಕೂಡ ಮಾಡಿ ಮುಗಿಸಿದ್ದಾರೆ. ಇದೇ ಸಮಯದಲ್ಲಿ ಭೂಮಿಕಾ ತಾಯಿ ಗೌತಮ್ ಗೆ ಸಲಹೆಯನ್ನು ನೀಡಿದ್ದು ಹೇಗೂ ಒಳ್ಳೆಯ ಕಾರ್ಯಕ್ಕೆ ಮುಂದಾಗಿದ್ದೀರಾ, ಆ ಕೇಡಿಯಿಂದ ಡಿವೋರ್ಸ್ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುವಂತೆ ಹೇಳುತ್ತಾಳೆ. ಮುಂದೆ ಸಮಸ್ಯೆಯಾಗದಿರಲಿ ಎಂದು ಹೇಳುತ್ತಾಳೆ.

ಅತ್ತೆಯ ಮಾತು ಗೌತಮ್ ಗೆ ಕೂಡ ಸರಿ ಎನಿಸಿದ್ದು ಆನಂದ್ ನ ಜೈದೇವ್ ಮನೆಗೆ ಕಳಿಸಿದ್ದಾನೆ. ಡಿವೋರ್ಸ್ ಪೇಪರ್ ಗೆ ಸಹಿ ಹಾಕುವಂತೆ ಆನಂದ್ ಜೈದೇವ್ ಗೆ ಹೇಳಿದ್ದಾನೆ. ಆದರೆ ಜೈದೇವ್ ಹಣ ಅಂದರೆ ಬಾಯಿ ಬಿಡುವ ವ್ಯಕ್ತಿ. ಈಗಾಗಲೇ ಎಲ್ಲ ಆಸ್ತಿಯನ್ನು ಕಬಳಿಸಿರುವ ಜೈದೇವ್ ಗೆ ಇನ್ನೂ ಸಮಾಧಾನ ಆಗಿಲ್ಲ.

Amruthadhaare March 5 Gautham Bows to Jaidev s Demand Malli s Divorce Sparks Fan Fury

ಎಲ್ಲಕ್ಕಿಂತ ಮುಖ್ಯವಾಗಿ ತಂದೆಯ ಕಾರ್ಯದಂದು ಗೌತಮ್ ಹೊಡದ ಏಟು ಜೈದೇವ್ ನ ಇನ್ನೂ ಕೆರಳಿಸಿದೆ. ಹೀಗಾಗಿಯೇ ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿರುವ ಜೈದೇವ್ ಗೆ ಈಗ ಗೌತಮ್ ವಿರುದ್ದ ಹಗೆತನ ತೀರಿಸಿಕೊಳ್ಳಲು ಇನ್ನೊಂದು ಅವಕಾಶ ಸಿಕ್ಕಂತಾಗಿದೆ. ಹೀಗಾಗಿಯೇ ಡಿವೋರ್ಸ್ ಪೇಪರ್ ಗೆ ಸಹಿ ಹಾಕುವಂತೆ ಕೇಳಲು ಬಂದ ಆನಂದ್ ಎದುರು ಜೈದೇವ್ ಷರತ್ತು ಹಾಕಿದ್ದಾನೆ.

ಜೈದೇವ್‌ ಹಾಕಿದ ಷರತ್ತು ಕೇಳಿ ಆಘಾತಕ್ಕೀಡಾದ ಆನಂದ್, ಗೌತಮ್ ಬಳಿ ಬಂದು ಅವನ ಬಳಿ ಭಾವನೆಗಳಿಗೆ ಎಲ್ಲ ಜಾಗ ಇಲ್ಲ, ಸ್ವಾರ್ಥಿ ಅವನು ಎಂದೆಲ್ಲಾ ಹೇಳುತ್ತಾನೆ. ಮಲ್ಲಿ ಮದುವೆ ನಡೆಯಲು ಬಿಡಲ್ಲ ಎಂದು ಜೈದೇವ್ ಹೇಳಿರುವುದಾಗಿ ಹೇಳುವ ಆನಂದ್ ನಡೆದ ವಿಚಾರವನ್ನೆಲ್ಲಾ ಹೇಳಿದ್ದು ಗೌತಮ್ ಕೂಡ ಆಘಾತಕ್ಕೊಳಗಾಗುತ್ತಾನೆ .

Amruthadhaare March 5 Gautham Bows to Jaidev s Demand Malli s Divorce Sparks Fan Fury

ಸದ್ಯ ಗೌತಮ್‌ ಅಪ್ಪನ ಸಮಾಧಿ ಮುಂದೆ ನಿಂತು, ಅಪ್ಪ ನಾನು ಜೀವನದಲ್ಲಿ ಏನೇ ನಿರ್ಧಾರ ತೆಗೆದುಕೊಂಡಿದ್ದರೂ ನೀವು ನೆನಪಾಗುತ್ತಿದ್ರಿ. ನಾನು ಈಗಲೂ ನಿರ್ಧಾರ ಮಾಡಿದೆ. ಜೀವ ಇರೋರಗೆ ಜೀವನ ಸಿಗೋದು ಮುಖ್ಯನಾ, ನಿಮ್ಮ ಸಮಾಧಿ ಇರೋ ಜಾಗ ಮುಖ್ಯನಾ ಅಂತ ತೂಕ ಮಾಡಿದೆ. ಮಲ್ಲಿ ಜೀವನ ಮುಖ್ಯ ಅನ್ನಿಸಿತು ಎಂದಿದ್ದಾನೆ. ಆನಂದ್ ಜೊತೆ ಜೈದೇವ್ ಬಳಿ ಬಂದು ಗೌತಮ್ ತಂದೆಯ ಸಮಾಧಿ ಜಾಗದ ಪೇಪರ್ ಮೇಲೆ ಸಹಿ ಮಾಡಿದ್ಧಾನೆ. ಡಿವೋರ್ಸ್ ಪೇಪರ್ ಗೆ ಸಹಿ ಹಾಕುವಂತೆ ಜೈದೇವ್‌ಗೆ ಹೇಳಿದ್ದಾನೆ. ಇಷ್ಟೇ ಅಲ್ಲ ಇದೇ ಕೊನೆ ಇನ್ಯಾವತ್ತು ಮಲ್ಲಿಯ ತಂಟೆಗೆ ಬರಬಾರದು, ಬಂದೀದೀಯಾ ಅಂತ ಗೊತ್ತಾದರೆ ನಾನು ಸುಮ್ಮನೆ ಇರಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ.

ಪ್ರೇಕ್ಷಕರು ಸಿಡಿಮಿಡಿ

ಸದ್ಯ ಹಲವು ಪ್ರೇಕ್ಷಕರು ಗೌತಮ್ ನಡೆ ಮತ್ತು ಜೈದೇವ್ ನುಡಿಯ ಬಗ್ಗೆ ತಕರಾರು ತೆಗೆಯುತ್ತಿದ್ದಾರೆ. ಡೈವೋರ್ಸ್ ಕೊಡದೇ ಜೈದೇವ್ ಮದುವೆ ಆಗಬೋದು, ಮಲ್ಲಿ ಮದುವೆ ಆಗ್ಬಾರ್ದಾ..? ಏನ್ ತಲೆ ಮಾರಯ್ಯ..ಅವ್ನು ಮಲ್ಲಿ ಡೈವೋರ್ಸ್ ಕೊಡದೇನೆ ಮತ್ತೊಬ್ಳನ್ನ ಕಟ್ಕೊಂಡಿದಾನಲ್ಲ. ಮಲ್ಲಿನೇ ಕೇಸ್ ಹಾಕಿದ್ರೆ.. ತುಂಬ ಅತೀ ಆಯ್ತು ಅವನಿಗೆ ಸರಿಯಾಗಿ ಬುದ್ಧಿ ಕಲಿಸೋದು ಬಿಟ್ಟು, ಏನ್ ಕೇಳಿದ್ರೆ ಅದು ಕೊಡೋದು, ಆಗ ಎಸ್ಟೊಂದು ಕೇಸ್ ಹಾಕ್ಬೇಕಿತು ಅವನ ಮೇಲೆ, ಕಿಡ್ನಾಪ್ attempt to murder second marriage ಎಸ್ಟಿದೆ ಒಂದು ಸಾರಿ ಅದ್ರು ಇವರು ಅವನನ್ನ ಆಟ ಆಡ್ಸೋದು ತೋರ್ಸಿ ಬರಿ ಇವ್ನ ಆರ್ಭಟನೇ ಆಯಿತು.. ಅಮೃತಧಾರೆ ಅಂತ ಹೆಸರಿಟ್ಟು ದಾನ ಶೂರ ಕರ್ಣ ಮಾಡುತ್ತಿದ್ದಾರೆ.. ಎಲ್ಲದಕ್ಕೂ ಸೋಲೋದು ಯಾಕೆ ಗೌತಮ್.. ಎಂದೆಲ್ಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

ಮುಂದೇನು..?

ಸದ್ಯ ಜೈದೇವ್‌ನ ಮತ್ತೊಂದು ಆಸೆಯನ್ನು ಗೌತಮ್ ಈಡೇರಿಸಿದ್ದು, ಮಲ್ಲಿಯ ಮದುವೆ ಸುನಿ ಜೊತೆ ಮಾಡಲು ಮುಂದಾಗಿದ್ದಾನೆ. ಆದರೆ, ಇಷ್ಟಕ್ಕೆ ಜೈದೇವ್ ಸುಮ್ಮನಾಗುತ್ತಾನಾ..? ಖಂಡಿತ ಇಲ್ಲ. ಮತ್ತೊಂದು ಕ್ಯಾತೆ ತೆಗೆಯುತ್ತಾನೆ. ಇನ್ನು ಮಲ್ಲಿ ಮದುವೆಯಾಗುತ್ತಿರುವ ಹುಡುಗ ಸುನಿಯನ್ನು ಕಳಿಸಿದ್ದು ಬೇರೆ ಯಾರು ಅಲ್ಲ. ಬದಲಿಗೆ ಸುನಿ ಎನ್ನುವ ವಿಚಾರ ಇನ್ನೂ ಗೌತಮ್‌ ಮತ್ತು ಭೂಮಿಕಾಗೆ ಗೊತ್ತಾಗಿಲ್ಲ. ಸುನಿ ಕೂಡ ಮಲ್ಲಿಯನ್ನು ಮನಸಾರೆ ಪ್ರೀತಿ ಮಾಡುತ್ತಿಲ್ಲ. ಈ ಹಿನ್ನೆಲೆ ಮುಂದೇನಾಗುತ್ತೆ..? ಸತ್ಯ ಗೊತ್ತಾದ ನಂತರ ಗೌತಮ್ ಹೇಗೆ ಪ್ರತಿಕ್ರಿಯಿಸುತ್ತಾನೆ ಎನ್ನುವುದು ಕಾದು ನೋಡಬೇಕಿದೆ.

More from Filmibeat

English summary
Jaidev wins? Amruthadhaare viewers are upset after Gautham agrees to the divorce deal. Get the full story on the massive fan demand for Jaidev’s downfall here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X