Amruthadhaare ; ಮಲ್ಲಿಗೆ ಮತ್ತೊಂದು ಅಗ್ನಿ 'ಪರೀಕ್ಷೆ'- ಕನಸು ಭಗ್ನ, ಕಿಡ್ನ್ಯಾಪ್ ಸಂಚು? ಏನ್ಮಾಡ್ತಾನೆ ಜೈದೇವ್ ?

''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಈಗ ಕ್ಯಾಬ್ ಡ್ರೈವರ್ ಅಲ್ಲ. ಬದಲಿಗೆ ಉದ್ಯಮಿ. ತಾಯಿ ಭಾಗ್ಯ, ಪತ್ನಿ ಭೂಮಿಕಾ ಮತ್ತು ಅತ್ತೆ-ಮಾವನ ಆಶಯಕ್ಕೆ‌ ಮಣಿದು ಸ್ಟಾಕ್ ಬ್ರೋಕಿಂಗ್ ಬಿಸಿನೆಸ್ ಶುರು ಮಾಡಿದ್ದಾನೆ. ಆಫೀಸ್ ಕೂಡ ಉದ್ಘಾಟನೆ ಮಾಡಿದ್ದಾನೆ. ಗೌತಮ್ ತೆಗೆದುಕೊಂಡ ನಿರ್ಧಾರದಿಂದ ಮನೆಯವರೆಲ್ಲ ಖುಷಿಯಾಗಿದ್ದಾರೆ.

ಆದರೆ, ಜೈದೇವ್ ಹೊಟ್ಟೆಗೆ ಮತ್ತೆ ಬೆಂಕಿ ಬಿದ್ದಿದೆ. ಶಕುಂತಲಾ ಕೂಡ ಬೆಚ್ಚಿ ಬಿದ್ದಿದ್ದು ತನ್ನ ಅಣ್ಣ ಲಕ್ಷ್ಮೀಕಾಂತ್ ಎದುರು ತನ್ನ ಆತಂಕ ವ್ಯಕ್ತಪಡಿಸಿದ್ದಾಳೆ. ಆದರೆ ಇದಕ್ಕೂ ಮೊದಲು ಲಕ್ಷ್ಮೀಕಾಂತ್‌ನ ಜೈದೇವ್ ಅವಮಾನ ಮಾಡಿದ್ದಾನೆ.

Photo Credit Zee Kannada

ಮೊದಲೇ ಪ್ರತೀಕಾರದ ಜ್ವಾಲೆಯಲ್ಲಿ ಉರಿಯುತ್ತಿದ್ದ ಲಕ್ಷ್ಮೀಕಾಂತ್ ಗೆ ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದ್ದು ಲಕ್ಷ್ಮೀಕಾಂತ್ ಒಳಗೊಳಗೆ ಕುದಿಯುತ್ತಿದ್ದಾನೆ. ಮತ್ತೊಂದು ಕಡೆ ಸುನಿ ಮತ್ತು ಮಲ್ಲಿ ನಡುವೆ ನಿಶ್ಚಿತಾರ್ಥ ನಡೆದಿದೆ. ಮಲ್ಲಿ ಖುಷಿಯಾಗಿದ್ದಾಳೆ. ಆದರೆ ಸುನಿಗೆ ಆತಂಕ ಶುರುವಾಗಿದೆ. ಜೈದೇವ್ ಹತ್ತಿರ ತನ್ನ ಅಳಿಲು ತೋಡಿಕೊಂಡಿದ್ದಾನೆ. ಆದರೆ ಜೈದೇವ್ ಕಿಲಾಡಿ. ಮಾತಲ್ಲೇ ಯಾಮಾರಿಸಿದ್ದಾನೆ. ಹೀಗಾಗಿ ಪ್ರೇಮದಾಟ ಮುಂದುವರೆದಿದೆ.

ಇನ್ನೊಂದು ಕಡೆ ಸಿವಿಲ್ ಸರ್ವಿಸ್ ಪರೀಕ್ಷೆಯ ತಯಾರಿಯನ್ನು ಮಲ್ಲಿ‌ ಮಾಡಿಕೊಳ್ಳುತ್ತಿದ್ದು, ಸುನಿ ಭೇಟಿಯಾಗಲು ಬಂದಿದ್ದಾನೆ. ಮನೆಗೆ ಬಂದ ಸುನಿಗೆ ಭೇಟಿಗೆ ಅವಕಾಶ ಕೊಡಲು ಮೊದಲು ನಿರಾಕರಿಸುವ ಭೂಮಿಕಾ ಕೊನೆಗೆ ಐದು ನಿಮಿಷ ಮಾತನಾಡಲು ಅವಕಾಶ ನೀಡುತ್ತಾಳೆ. ಮಲ್ಲಿಯನ್ನು ಕರೆಯುತ್ತಾಳೆ.

ಮಲ್ಲಿಗೆ ಸುನಿ ಆಲ್ ದಿ ಬೆಸ್ಟ್ ಹೇಳಿದ್ದು, ಮಲ್ಲಿ ಜೊತೆ ಭೂಮಿಕಾ ಮಾತನಾಡಲು ಬಿಡ್ತಿಲ್ಲ ಎನ್ನುವ ವಿಚಾರವನ್ನು ಜೈದೇವ್ ಗೆ ಸುನಿ ಫೋನ್ ಮಾಡಿ ಹೇಳಿದ್ದಾನೆ.

ಇದರಿಂದ ಕೆರಳಿರುವ ಜೈದೇವ್, ಭೂಮಿಕಾನ ಶಪಿಸಿದ್ದು ಪರೀಕ್ಷೆಯಲ್ಲಿ ಪಾಸಾಗಿ ಮಲ್ಲಿ ಸಿವಿಲ್ ಸರ್ವೆಂಟ್ ಆದರೆ ರೂರಲ್ ಖೋಟಾ ಮಲ್ಲಿ ನನ್ನ ಬೆರಳ ತುದಿಯಲ್ಲಿ ಆಡಿಸುತ್ತಾಳೆ ಎಂದು ಜೈದೇವ್ ಆತಂಕದಲ್ಲಿದ್ದಾನೆ. ಅದ್ಹೇಗೆ ಎಕ್ಸಾಂ ಬರಿತಿಯಾ ನೋಡೇ ಬಿಡ್ತೀನಿ ಎಂದು ಮನದಲ್ಲೇ ಲೆಕ್ಕಾಚಾರ ಹಾಕ್ತಾನೆ.

Amruthadhaare March 9 Will Jaidev s Shadow Eclipse Malli s Dreams The Race to the Civil Exam Begins

ಈಗಾಗಲೇ ಎಲ್ಲರಿಗೆ ಗೊತ್ತಿರುವಂತೆ ಎಲ್ಲವನ್ನೂ ಜೈದೇವ್ ತಿಂದು ತೇಗಿದ್ದಾನೆ. ತಂದೆಯ ಸಮಾಧಿ ಇರುವ ಜಾಗವನ್ನು ಕೂಡ ಗೌತಮ್ ಕಡೆಯಿಂದ ಪಡೆದಿದ್ದಾನೆ. ಸಮಾಧಿ ಬದಲಿಗೆ ಡಿವೋರ್ಸ್ ಪೇಪರ್ ಮೇಲೆ ಕೂಡ ಸಹಿ ಹಾಕಿದ್ದಾನೆ.

ಆದರೂ ಜೈದೇವ್‌ಗೆ ಇನ್ನೂ ಮಲ್ಲಿಯ ಮೇಲಿನ ಕೋಪ-ದ್ವೇಷ ಕಡಿಮೆಯಾಗಿಲ್ಲ. ಹೀಗಾಗಿ ಮಲ್ಲಿಗೆ ಜೈದೇವ್ ಈಗ ಗತಿ ಕಾಣಿಸುತ್ತಾನಾ ಎನ್ನುವ ಚಿಂತೆ ಪ್ರೇಕ್ಷಕರನ್ನು ಕಾಡ್ತಿದೆ. ಈ ಹಿನ್ನೆಲೆ ಹಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ಪ್ರೇಕ್ಷಕರ ಅಭಿಪ್ರಾಯ

ಕಿಡ್ನ್ಯಾಪ್ ಮಾಡುವುದರಲ್ಲಿ ಮೊದಲಿಂದ ಜೈದೇವ್‌ದು ಎತ್ತಿದ ಕೈ. ಈ ಹಿನ್ನೆಲೆ ಹಲವರು ಮಲ್ಲಿಯನ್ನು ಮತ್ತೊಮ್ಮೆ ಜೈದೇವ್ ಕಿಡ್ನ್ಯಾಪ್ ಮಾಡಬಹುದು ಎಂದು ಊಹೆ ಮಾಡುತ್ತಿದ್ದಾರೆ. ಇನ್ನೂ ಕೆಲವರಿಗೆ ಗೌತಮ್‌ ಮೇಲೆ ನಂಬಿಕೆ ಇದೆ. ಈ ಹಿನ್ನೆಲೆ ಮಲ್ಲಿಯನ್ನು ಸುರಕ್ಷಿತವಾಗಿ ಗೌತಮ್ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯುತ್ತಾನೆ ಎನ್ನುವ ವಿಶ್ವಾಸ ಇದೆ. ಜೈದೇವ್ ಕಪಿಮುಷ್ಠಿಯಿಂದ ಈ ಬಾರಿ ಮಲ್ಲಿಯನ್ನು ಗೌತಮ್ ಕಾಪಾಡುತ್ತಾನೆ ಎನ್ನುವ ನಂಬಿಕೆ ಇದೆ.

ಇನ್ನೂ ಕೆಲವರು ಸುನಿಯ ಬಂಡವಾಳ ಗೌತಮ್ ಮತ್ತು ಭೂಮಿಕಾ ಎದುರು ಬಯಲಾಗುತ್ತೆ ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದು, ಮತ್ತೂ ಕೆಲವರು ಎಲ್ಲ ಅಡೆ ತಡೆಗಳನ್ನು ದಾಟಿಕೊಂಡು ಸುನಿ ಮತ್ತು ಮಲ್ಲಿ ಮದುವೆ ನಡೆಯುತ್ತೆ, ಜೈದೇವ್ ಮತ್ತು ಶಕುಂತಲಾಗೆ ಮುಖಭಂಗವಾಗುತ್ತೆ ಎಂದು ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮಲ್ಲಿಯನ್ನು ಜೈದೇವ್ ಕಿಡ್ನ್ಯಾಪ್ ಮಾಡುತ್ತಾನಾ..? ಬಿಸಿನೆಸ್ ಅಂಗಳಕ್ಕೆ ಮರಳಿರುವ ಗೌತಮ್ ಈ ಬಾರಿ ಮಲ್ಲಿಯನ್ನು ಕಾಪಾಡುತ್ತಾನಾ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Malli has worked so hard for her Civil Exam, but Jaidev is ready to play his deadliest card. Will he kidnap her before she reaches the hall? Don't miss the Amruthadhaare March 9 twist.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X