Amruthadhaare ; ತಲೆಗಳು ಉರುಳಿ ಹೋದರು ಸರಿ, ಗೌತಮ್ ಭೂಮಿಕಾ ಜೊತೆ ಮಿಂಚು ಇರಬೇಕು-ಅಮೃತಧಾರೆ ಮೇಲೆ ಶ್ರೀರಸ್ತು ಶುಭಮಸ್ತು ನೆರಳು?

''ಅಮೃತಧಾರೆ'' ಧಾರಾವಾಹಿಯಲ್ಲಿ ಲಕ್ಷ್ಮೀಕಾಂತ್‌ನನ್ನು ಜೈದೇವ್ ಕಿಡ್ನ್ಯಾಪ್ ಮಾಡಿದ್ದಾನೆ. ಮಿಂಚಿನ ರಹಸ್ಯ ತಿಳಿದುಕೊಳ್ಳುವ ಪ್ರಯತ್ನವನ್ನು ಜೈದೇವ್ ಮಾಡಿದ್ದು ಮಿಂಚು ಫೋಟೊ ಜೈದೇವ್ ಕೈಗೆ ಸಿಗದಂತೆ ಲಕ್ಷ್ಮೀಕಾಂತ್ ಫೋಟೊವನ್ನು ನುಂಗಿದ್ದಾನೆ. ಗೌತಮ್‌ಗೆ ಸತ್ಯ ಹೇಳಲು ಆಗದಿದ್ದಕ್ಕೆ ಚಡಪಡಿಸುತ್ತಿದ್ದಾನೆ.

ಇನ್ನೊಂದು ಕಡೆ ಲಕ್ಷ್ಮೀಕಾಂತ್‌ನಿಗೆ ಗೌತಮ್ ಕರೆ ಮಾಡುತ್ತಿದ್ದಾನೆ. ಆದರೆ, ಗೌತಮ್‌ ಎಷ್ಟೇ ಕಾಲ್‌ ಮಾಡಿದರೂ ರಿಸೀವ್‌ ಮಾಡಲಾಗದ ಸ್ಥಿತಿಯಲ್ಲಿ ಲಕ್ಷ್ಮೀಕಾಂತ್ ಇದ್ದಾನೆ. ಸದ್ಯ ಜೈದೇವ್ ತನ್ನ ಶಕುನಿ ಮಾವನನ್ನೇ ದಾಳವನ್ನಾಗಿಟ್ಕೊಂಡು ಗೌತಮ್‌ಗೆ ಮತ್ತೆ ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿದ್ದಾನೆ.

Amruthadhaare Will Minchu Be Given Away or A New Child Born

ಮತ್ತೊಂದು ಕಡೆ ಗೌತಮ್‌ ದಿವಾನ್‌ ತಂಗಿ ಮಹಿಮಾಗೆ ಮತ್ತೆ ಗರ್ಭಪಾತ ಆಗಿದೆ. ಈ ಹಿಂದೆ ಅವಳೇ ಗರ್ಭಪಾತ ಮಾಡಿಸಿಕೊಂಡಿದ್ದಳು. ಈಗ ಅವಳು ಬಯಸಿದರೂ ಕೂಡ ತಾಯಿ ಆಗೋಕೆ ಆಗ್ತಿಲ್ಲ. ತಾಯಿ ಆಗೋಕೆ ಆಗ್ತಿಲ್ಲ ಅನ್ನೋ ವಿಚಾರದಿಂದ ಮಹಿಮಾ ಕುಗ್ಗಿ ಹೋಗಿದ್ದಾಳೆ.

ಮಹಿಮಾಳ ಈ ಕಣ್ಣೀರ ಕಥೆಯನ್ನು ಕಂಡು ಭೂಮಿಕಾ ತಂದೆ ಮತ್ತು ತಾಯಿ ಮರಗಿದ್ದಾರೆ. ಮಹಿಮಾ ಮೊಗದಲ್ಲಿ ಮತ್ತೆ ಮಂದಹಾಸ ಮೂಡಬೇಕು ಅಂದರೆ ಅದು ಮಿಂಚು ನಮ್ಮ ಮನೆಗೆ ಬರಬೇಕೆಂದುಕೊಂಡು ಸದಾಶಿವ ದಂಪತಿ ಗೌತಮ್ ಮತ್ತು ಭೂಮಿಕಾ ಬಳಿ ಬಂದಿದ್ದಾರೆ.

ಮಹಿಮಾ ನಾರ್ಮಲ್‌ ಆಗಿರುತ್ತಾಳೆ, ಒಮ್ಮೊಮ್ಮೆ ವಿಚಿತ್ರವಾಗಿ ಆಡ್ತಾಳೆ. ಅವಳಿಗೆ ಮಗು ಇಲ್ಲ ಎಂದು ತುಂಬ ಬೇಸರ ಆಗಿದೆ. ಮಿಂಚುಳನ್ನು ಅವಳಿಗೆ ದತ್ತು ಕೊಟ್ಟರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ. ಸದಾಶಿವ ದಂಪತಿ ಆಡಿದ ಈ ಮಾತು ಕೇಳಿ ಭೂಮಿಕಾ ಮತ್ತು ಗೌತಮ್‌ ಹೈರಾಣಾಗಿದ್ದಾರೆ.

ಪ್ರಪಂಚದಲ್ಲಿ ಸಾವಿರ ಅನಾಥ ಮಕ್ಕಳಿವೆ, ಆ ಪೈಕಿ ಮಹಿಮಾಗೆ ಇಷ್ಟ ಆಗುವಂತೆ ಬೇರೆ ಯಾವುದಾದರೂ ಮಗುನ ದತ್ತು ಪಡೆಯಲಿ ಎಂದು ಭೂಮಿಕಾ ಬಳಿ ಗೌತಮ್ ಮಾತನಾಡಿದ್ದಾನೆ. ಇದೇ ಸಮಯದಲ್ಲಿ ಮಿಂಚುಗೆ ಆಕಾಶ್ ನೀನು ಮಹಿಮಾ ಮನೆಗೆ ಹೋಗ್ತಿದ್ದೀಯಾ ಎನ್ನುವ ವಿಚಾರ ಹೇಳಿದ್ದು, ಮಿಂಚು ಬಂದು ಗೌತಮ್ ಮತ್ತು ಭೂಮಿಕಾನ ಪ್ರಶ್ನೆ ಮಾಡಿದ್ದಾಳೆ.

Amruthadhaare Will Minchu Be Given Away or A New Child Born

ಪ್ರೇಕ್ಷಕರ ಅಭಿಪ್ರಾಯ

* ತಲೆಗಳು ಉರುಳಿ ಹೋದರು ಸರಿ ಮಿಂಚು ಗೌತಮ್ ಭೂಮಿ ಜೊತೆ ಇರಬೇಕು ಅಷ್ಟೇ ಡೈರಕ್ಟ್ರೇ.

* ಬೇಡ ಮಿಂಚು ಪುಟ್ಟ ನಾ ದತ್ತು ಕೊಡಬೇಡಿ ಅನ್ನೋರು ಲೈಕ್ ಮಾಡಿ

*ಆಕಾಶ್ ತಲೆಹರಟೆ ಬರೀ ಕಿತಾಪತಿ ಮಾಡೋದೇ

*ಮಿಂಚು ಗೌತಮ್ ಭೂಮಿ ಜೊತೇನೆ ಇರ್ಬೇಕು

* ಪ್ರಪಂಚದಲ್ಲಿ ಎಷ್ಟು ಜನ ಮಕ್ಕಳು ಇದ್ದಾರೆ ಅದೆಲ್ಲಾ ಬಿಟ್ಟು ಗೌತಮ್ ಮಗುನೇ ಬೇಕಾ...... ಇನ್ನೂ ಸ್ವಲ್ಪ ದಿನ ಕಥೆ ಏಳಿಬೇಕಲ್ವಾ ಏನು ರಾಮಾಯಣನೋ ಇದು ಸುಮ್ಮನೆ ಮುಗಿಸೋದು ಬಿಟ್ಟು ನೋಡೋರು ಇದ್ದಾರೆ ಎಂದು ಹೀಗೆಲ್ಲ ಟಾರ್ಚರ್ ಕೊಡಬಾರದು

ಮುಂದೇನು ?

ಮಿಂಚು ಬೇರೆ ಯಾರು ಅಲ್ಲ ಬದಲಿಗೆ ತಾವೇ ಹೆತ್ತ ಮಗಳು ಎನ್ನುವ ವಿಚಾರ ಗೌತಮ್ ಮತ್ತು ಭೂಮಿಕಾಗೆ ಇನ್ನೂ ಗೊತ್ತಿಲ್ಲ. ಆದರೂ ಕೂಡ ಮಗಳಂತೆಯೇ ಪ್ರೀತಿಸುತ್ತಿರುವ ಇಬ್ಬರು ಮಹಿಮಾಗೆ ಮಿಂಚುನ ಒಪ್ಪಿಸುವುದು ಅನುಮಾನ. ಇನ್ನು ಜ್ಯೋತಿಷಿ ಹೇಳಿದ ಭವಿಷ್ಯದಂತೆ ಭೂಮಿಕಾಗೆ ಇನ್ನೊಂದು ಹೆಣ್ಣು ಮಗು ಹುಟ್ಟಬೇಕು. ಆ ಮಗುವಿನಿಂದ ಗೌತಮ್ ಪ್ರಾಣಕ್ಕೆ ಕಂಟಕ ಇದೆ ಎನ್ನುವ ಮಾತನ್ನು ಜ್ಯೋತಿಷಿ ಹೇಳಿದ್ದು, ಆ ಮಗುವನ್ನು ಮಹಿಮಾ ಮಡಿಲಿಗೆ ಗೌತಮ್ ಮತ್ತು ಭೂಮಿಕಾ ಹಾಕ್ತಾರಾ ಎನ್ನುವ ಪ್ರಶ್ನೆ ಸದ್ಯ ಹಲವರಲ್ಲಿದೆ. ಮಹಿಮಾಗೆ ಕೊಡುವ ಸಲುವಾಗಿ ಭೂಮಿಕಾ-ಗೌತಮ್​ ಮತ್ತೊಂದು ಮಗುವನ್ನು ಮಾಡಿಕೊಳ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ.

ಶ್ರೀರಸ್ತು ಶುಭಮಸ್ತು ನೆನಪಿಸಿದ ಅಮೃತಧಾರೆ

ಸುಧಾರಾಣಿ ಅಭಿನಯದ ''ಶ್ರೀರಸ್ತು ಶುಭಮಸ್ತು'' ಸದ್ಯ ''ಅಮೃತಧಾರೆ'' ನೆನಪಿಸಿದೆ. ಯಾಕೆಂದರೆ ಅಲ್ಲಿಯೂ ಕೂಡ ತುಳಸಿ ಮಗುವಾಗದ ತನ್ನ ಸೊಸೆ ಪೂರ್ಣಿಗಾಗಿ ಮಗುವನ್ನು ಹೆತ್ತು ಕೊಟ್ಟಿದ್ದಳು. ಅದೇ ರೀತಿ ಮಹಿಮಾಗಾಗಿ ಭೂಮಿಕಾ ಮಗುಗೆ ಜನ್ಮ ಕೊಡುತ್ತಾಳಾ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದ್ದು, ಗೌತಮ್ ಮತ್ತು ಭೂಮಿಕಾ ಮುಂದಿನ ನಡೆ ಏನು..? ಲಕ್ಷ್ಮೀಕಾಂತ್ ಕಥೆ ಏನು..? ಮಿಂಚು ರಹಸ್ಯ ಗೌತಮ್ ಮತ್ತು ಭೂಮಿಕಾಗೆ ಗೊತ್ತಾಗಲು ಇನ್ನೆಷ್ಟು ದಿನ ಬೇಕು..? ಎನ್ನುವುದನ್ನು ಕಾದು ನೋಡಬೇಕಿದೆ.

English summary
Mega twist in Amruthadhaare! Will Gautam and Bhoomika give Minchu to Mahima, or is Bhoomika planning another big surprise? Get the full May 27 update here!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X