Amruthadhaare ; ಪ್ರತೀಕಾರದ ಜ್ವಾಲೆಯಲ್ಲಿ ಜೈದೇವ್ ಧಗಧಗ - ಹನಿಮೂನ್‌ನಲ್ಲಿ ಮಲ್ಲಿ, ಸುನಿಗೆ ಕಾದಿದೆಯಾ ಆಪತ್ತು?
''ಅಮೃತಧಾರೆ'' ಧಾರಾವಾಹಿಯಲ್ಲಿ ಜೈದೇವ್ ಪರಿಸ್ಥಿತಿ ಇರುಳು ಕಂಡ ಬಾವಿಗೆ ಹಗಲು ಬಿದ್ದಂತಾಗಿದೆ. ಗೌತಮ್, ಭೂಮಿಕಾ, ಸುನಿ ಮತ್ತು ಮಲ್ಲಿ ನೀಡಿದ ಚಮಕ್ ದಿಂದ ಆಘಾತಕ್ಕೊಳಗಾದ ಜೈದೇವ್ ಸದ್ಯ ತಲೆ ಮೇಲೆ ಕೈಹೊತ್ತು ಕುಂತಿದ್ದಾನೆ.
ಇನ್ನೊಂದು ಕಡೆ ಮಲ್ಲಿ ಐಪಿಎಸ್ ಅಧಿಕಾರಿ ಆಗಬೇಕೆಂಬ ಕನಸೊತ್ತ ಮಲ್ಲಿ, ಯುಪಿಎಸ್ ಪರೀಕ್ಷೆ ಬೇರೆ ಪಾಸ್ ಆಗಿದ್ದಾಳೆ. ಕಳೆದ ಐದು ವರ್ಷದಿಂದ ಮಲ್ಲಿ ಮಾಡಿದ ತಪಸ್ಸಿಗೆ ಫಲ ಸಿಕ್ಕಿದೆ. ಮತ್ತೊಂದು ಕಡೆ ಜೀರೋದಿಂದ ಮತ್ತೆ ಗೌತಮ್ ಹೀರೋ ಆಗುತ್ತಿದ್ದಾನೆ. ತನ್ನ ಸಾಮ್ರಾಜ್ಯ ಕಟ್ಟುತ್ತಿದ್ದಾನೆ. ಇದೇ ಸಮಯದಲ್ಲಿ ಜೈದೇವ್‌ಗೋಸ್ಕರ ದುಡಿಯುತ್ತಿದ್ದ ಹಲವರು ವಲಸೆ ಹೋಗಿದ್ದಾರೆ. ಗೌತಮ್ ಕಂಪನಿ ಸೇರಿಕೊಂಡಿದ್ದಾರೆ. ಇದರಿಂದ ಜೈದೇವ್‌ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದು ಸಾಲದೆಂಬಂತೆ ಪಾರ್ಥ ಬೇರೆ ಜೈದೇವ್‌ಗೆ ಬುದ್ದಿ ಹೇಳುವ ಪ್ರಯತ್ನ ಮಾಡಿದ್ದಾನೆ. ಗೌತಮ್ ನಿನ್ನ ತಪ್ಪುಗಳನ್ನೆಲ್ಲಾ ಕ್ಷಮಿಸುತ್ತಾ ಬಂದಿದ್ದಾನೆ. ಹಾಗಂಥ ಮತ್ತೆ ಮತ್ತೆ ತಪ್ಪು ಮಾಡಬೇಡ, ನಿನ್ನ ಪಾಪದ ಕೊಡ ತುಂಬಿದೆ ಎಂದೆಲ್ಲಾ ಹೇಳುತ್ತಾನೆ.
ಅಪೇಕ್ಷಾ ಕೂಡ ಅಕ್ಕ ಮತ್ತು ಭಾವಗೆ ಎಷ್ಟು ಅಂತ ಸಮಸ್ಯೆ ತಂದೊಡ್ಡುತ್ತೀರಾ...? ಹಗತೆನ ಸಾಧಿಸ್ತೀರಾ..? ಇದಕ್ಕೆಲ್ಲಾ ಕೊನೆ ಇಲ್ವಾ ಎಂದು ಪ್ರಶ್ನೆ ಮಾಡುತ್ತಾಳೆ. ನೀವೇನೆ ಮಾಡಿದರೂ ಅವರ ವಿರುದ್ಧ ಗೆಲ್ಲಲು ಸಾಧ್ಯ ಇಲ್ಲ ಎಂದು ಹೇಳುತ್ತಾಳೆ.ಸಾಧ್ಯ ಆದರೆ ನಿನ್ನ ದುರಂಹಕಾರ ಬದಿಗಿಟ್ಟು ಕಂಪನಿ ಉದ್ದಾರ ಹೇಗೆ ಮಾಡೋದು ಎಂದು ಯೋಚನೆ ಮಾಡು ಎಂದು ಕೂಡ ಪಾರ್ಥ ಹೇಳುತ್ತಾನೆ.
ಸದ್ಯ ಗೌತಮ್ ಮತ್ತು ಭೂಮಿಕಾ ನವಜೋಡಿಯನ್ನು ಮನೆ ತುಂಬಿಸಿಕೊಂಡಿದ್ದಾರೆ. ಮಲ್ಲಿ ಮತ್ತು ಸುನಿಯನ್ನು ಹನಿಮೂನ್‌ಗೆ ಕಳಿಸುವ ತಯಾರಿಯಲ್ಲಿದ್ದಾರೆ. ಗೌತಮ್ ಕೆಲವು ಹನಿಮೂನ್ ಸ್ಥಳಗಳನ್ನು ಆಯ್ಕೆ ಮಾಡಿದ್ದು, ಮಲ್ಲಿ ನಾವು ಹನಿಮೂನ್‌ಗೆ ಹೋಗಬೇಕೆಂದರೆ ನೀವು ಇಬ್ಬರೂ ಕೂಡ ನಮ್ಮ ಜೊತೆ ಬರಬೇಕೆಂದು ಬೇಡಿಕೆ ಇಟ್ಟಿದ್ದಾಳೆ.
ಹೀಗೆ ತನ್ನ ಬದುಕಿನಲ್ಲಿ ಮತ್ತೊಮ್ಮೆ ಜೈದೇವ್ ಮುಖಭಂಗಕ್ಕೊಳಗಾದರೂ ಸೋಲನ್ನು ಒಪ್ಪಿಕೊಂಡಿಲ್ಲ. ಯಾಕೆಂದರೆ ಜೈದೇವ್‌ನದ್ದು ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ವ್ಯಕ್ತಿತ್ವ. ಹೀಗಾಗಿಯೇ ಮತ್ತೆ ಪ್ಲಾನ್ ಮಾಡುತ್ತಿರುವ ಜೈದೇವ್, ಅವರೆಲ್ಲಾ ನಾನು ಸೋತೆ ಎಂದುಕೊಂಡು ಖುಷಿ ಪಡುತ್ತಿರಬಹುದು, ಆದರೆ...ಸೋತಿರುವನ ಪ್ರತೀಕಾರ ಗೆದ್ದಿರುವನ ಜಯಕ್ಕಿಂತ ಭಯಂಕರವಾಗಿರುತ್ತೆ ಎಂದೆಲ್ಲಾ ದಿಯಾ ಎದುರು ಗೊಣಗಿದ್ದಾನೆ. ಜೈದೇವ್‌ನ ಈ ಮಾತುಗಳನ್ನು ಕೇಳಿ ದಿಯಾ ಒಳಗೊಳಗೆ ಸಂಭ್ರಮಿಸಿದ್ದಾಳೆ.

ಮುಂದೇನು..?
ಸದ್ಯ ಮಲ್ಲಿ ಮತ್ತು ಸುನಿ ಹನಿಮೂನ್ ಮೂಡಿನಲ್ಲಿದ್ದಾರೆ. ಆದರೆ ಜೈದೇವ್ ಪ್ರತೀಕಾರದ ಜ್ವಾಲೆಯಲ್ಲಿ ಬೇಯುತ್ತಿದ್ದಾನೆ. ರಾಮೇಶ್ವರಕ್ಕೆ ಹೋದ್ರು ಶನೇಶ್ವರ ಕಾಟ ತಪ್ಪಲಿಲ್ಲ ಎಂಬಂತೆ ಸದ್ಯ ಜೈದೇವ್ ಮತ್ತೊಂದು ಆಟಕ್ಕೆ ಸಿದ್ಧವಾಗಿದ್ದಾನೆ. ಈ ಬಾರಿ ಮಲ್ಲಿ ಮತ್ತು ಸುನಿಗೆ ಕೇಡಿ ಜೈದೇವ್ ಯಾವ ರೀತಿ ಕಾಡುತ್ತಾನೆ ಎನ್ನುವುದನ್ನು ಕಾದು ನೋಡಬೇಕಿದೆ. ಮಲ್ಲಿ ಪೈಲ್ವಾನ್ ಸುನಿಯ ಪ್ರಾಣಕ್ಕೆ ಜೈದೇವ್‌ನಿಂದ ಸದ್ಯ ಅಪಾಯವಂತೂ ಇದೆ. ಈ ಅಪಾಯವನ್ನು ಅರಿತು ಗೌತಮ್ ಮತ್ತು ಭೂಮಿಕಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ತಾರಾ..? ಅಥವಾ ಜೈದೇವ್‌ನ ನಿರ್ಲಕ್ಷ್ಯಿಸುವ ತಪ್ಪು ಮಾಡುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.
ಪ್ರೇಕ್ಷಕರ ಅಭಿಪ್ರಾಯ
ಸದ್ಯ ಹಲವರು ಸಂಚಿಕೆ ಮತ್ತು ಪ್ರೋಮೋ ನೋಡಿ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದು, ನಾಯಿ ಬಾಲ ಹೇಗೆ ನೆಟ್ಟುಗೆ ಆಗಲ್ವೋ ಹಾಗೆ ಜೈ ದುರ್ಬುದ್ದಿನು ಬದಲಾಗಲ್ಲ..ಸೂಪರ್ ಚನ್ನಾಗಿ ಬರ್ತಾ ಇದೆ.. ಮಾತಲ್ಲಿ ಸರಿಯಾಗಿ ಏಟು ಕೊಟ್ಟಿದ್ದಾರೆ ಗೌತಮ್ sir ಇನ್ನೂ ಕೇಳಲಿಲ್ಲ ಅಂದ್ರೆ ಕೈ ಅಲ್ಲಿ ಕೊಡ್ತಾರೆ..ನೀನು ಹೀಗೆ ಮಾಡ್ತಿದ್ರೆ ಪಕ್ಕಾ ಜೈಲಿಗೆ ಹೋಗ್ತೀಯಾ.. ಕೇಡಿ ನಿನ್ ಆಟ ಏನು ನಡೆಯೋದಿಲ್ಲ ಈ ಪಗಡೆ ಆಟದಲ್ಲಿ ಗೆಲ್ಲೋದು ಭೂಮಿ ಗೌತಮ್ ಸರ್ ಅಷ್ಟೆ.. ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











