Amruthadhaare ; ಶಕುಂತಲಾ ಕೊಟ್ಟ ಶಾಕ್‌ಗೆ ಜೈದೇವ್ ಕಂಗಾಲು - ರಾಣವ್ ಗೌಡ ಆಕ್ಟಿಂಗ್‌ಗೆ ಪ್ರೇಕ್ಷಕರ ಬಹುಪರಾಕ್
''ಅಮೃತಧಾರೆ'' ಧಾರಾವಾಹಿ ಸದ್ಯ ಸಿನಿಮಾದಂತೆ ಸರಸರನೇ ಸಾಗುತ್ತಿದೆ. ಗೌತಮ್ ಮತ್ತು ಭೂಮಿಕಾ ತಮ್ಮ ಸಾಮ್ರಾಜ್ಯಕ್ಕೆ ಮರಳಿ ಬಂದಿದ್ಧಾರೆ. ಶಕುಂತಲಾ ಮನ ಪರಿವರ್ತನೆಯಾಗಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಇದೆ. ಮತ್ತೊಂದು ಕಡೆ ಇಲ್ಲಿಯವರೆಗೆ ಮೆರೆದಾಡುತ್ತಿದ್ದ ಜೈದೇವ್ ನ ಕೇಡುಕಾಲ ಶುರುವಾಗಿದೆ. ದಿವಾನ್ ಮನೆಯಿಂದ ಹೊರ ಬಂದ ಜೈದೇವ್ ಸದ್ಯ ಬೀದಿ ಪಾಲಾಗಿದ್ದಾನೆ. ತುತ್ತು ಅನ್ನಕ್ಕೂ ಪರದಾಡುತ್ತಿದ್ದಾನೆ.
ಕೊನೆ ಪಕ್ಷ ತನ್ನ ಬೇಬಿ ಆದರೂ ನೆರವಾಗುತ್ತಾಳೆ ಎನ್ನುವ ನಂಬಿಕೆ ಜೈದೇವ್ ಗೆ ಇತ್ತು. ಆದರೆ ಆ ನಂಬಿಕೆಗೆ ಕೂಡ ದ್ರೋಹ ಆಗಿದೆ. ದಿಯಾ ಕಾಲ ಕಸದಂತೆ ಜೈದೇವ್‌ನ ನೋಡುತ್ತಿದ್ದು ದಿಯಾ ಕೃಪೆಯಿಂದ ಸದ್ಯ ಜೈದೇವ್ ಪೊಲೀಸರ ಅತಿಥಿಯಾಗಿದ್ದಾನೆ.

ಜೈದೇವ್ ಮಾತು ಕೇಳಿ ಪೊಲೀಸರಿಗೆ ಗಾಬರಿ
ಆದರೆ.. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ವ್ಯಕ್ತಿತ್ವ ಜೈದೇವ್‌ನದ್ದು. ಇದಕ್ಕೆ ಕೈಗನ್ನಡಿ ಎಂಬಂತೆ ಜೈದೇವ್ ಪೊಲೀಸರಿಗೆ ಅವಾಜ್ ಹಾಕಿದ್ದಾನೆ. ನಾನು ಯಾರು ಗೊತ್ತಾ ಗೌತಮ್ ದಿವಾನ್ ತಮ್ಮ ಎಂದು ಹೇಳಿದ್ದಾನೆ. ಜೈದೇವ್ ಆಡಿದ ಈ ಮಾತು ಕೇಳಿ ಪೊಲೀಸರು ಕೂಡ ಗಾಬರಿಯಾಗಿದ್ದು ಯಾವುದಕ್ಕೂ ಒಮ್ಮೆ ಕನ್ಫರ್ಮ್ ಮಾಡಿಕೊಳ್ಳೋದು ಒಳ್ಳೆಯದು ಎಂದು ಗೌತಮ್ ಮನೆಗೆ ಕರೆ ಮಾಡುತ್ತಾರೆ.
ಮಗನ ಮಾತುಗಳಿಗೆ ಕರಗಲಿಲ್ಲ ಶಕುಂತಲಾ ಮನ
ಈ ಸಮಯದಲ್ಲಿ ಶಕುಂತಲಾ ಮನೆಯ ಲ್ಯಾಂಡ್ ಲೈನ್ ಸ್ವೀಕರಿಸಿದ್ದು ಪೊಲೀಸರಿಂದ ಫೋನ್ ಕಿತ್ತುಕೊಂಡು ತಾನು ಪೊಲೀಸ್ ಸ್ಟೇಷನ್‌ನಲ್ಲಿರುವ ವಿಚಾರ ಹೇಳುತ್ತಾನೆ. ಮಿಸ್ಟೇಕ್ ಮಾಡ್ಕೊಂಡು ನನ್ನ ಎಳ್ಕೊಂಡು ಬಂದಿದ್ದಾರೆ, ನಾನು ಜೈದೇವ್ ದಿವಾನ್ ಅಂತ ಹೇಳಿದರೂ ಕೂಡ ನಂಬ್ತಿಲ್ಲ, ನೀನಾದರೂ ನಾನು ನಿನ್ನ ಮಗ ಅಂತ ಹೇಳು ಎಂದು ತನ್ನ ತಾಯಿಯ ಮುಂದೆ ಗೊಗರೆಯುತ್ತಾನೆ.
ಶಕುಂತಲಾ ಕಣ್ಮುಂದೆ ಫ್ಲ್ಯಾಶ್ ಬ್ಯಾಕ್
ಆದರೆ, ಇದೇ ಸಮಯದಲ್ಲಿ ತನ್ನನ್ನೂ ತನ್ನ ಮಗ ಮನೆಯಿಂದ ಹೊರ ಹಾಕಿದ್ದ ದೃಶ್ಯಾವಳಿಗಳು ಶಕುಂತಲಾ ಕಣ್ಣೆದುರು ಬರುತ್ತವೆ. ಅವತ್ತು ಅವನಾಡಿದ ಮಾತುಗಳೆಲ್ಲವೂ ನೆನಪಾಗಿವೆ.
ಇನ್ನೂ ಈ ಹಿಂದೆ ಶಕುಂತಲಾ ಬದಲಾಗಿಲ್ಲ ಬದಲಿಗೆ ಡ್ರಾಮಾ ಮಾಡ್ತಿದ್ದಾಳೆ ಎನ್ನುವ ಅನುಮಾನ ಹಲವರಲ್ಲಿತ್ತು. ಆ ಅನುಮಾನ ಈಗ ದೂರವಾಗಿದ್ದು ಮಗನ ಮಾತುಗಳಿಗೆ ಕರಗದ ಶಕುಂತಲಾ ಕಲ್ಲು ಹೃದಯ ಮಾಡಿಕೊಂಡು ಅವನ್ಯಾರು ನನಗೆ ಗೊತ್ತಿಲ್ಲ ಎಂದು ಪೊಲೀಸರ ಬಳಿ ಹೇಳಿದ್ಧಾಳೆ. ಇಷ್ಟೇ ಅಲ್ಲ ಅವನನ್ನು ಸುಮ್ಮನೆ ಬಿಡಬೇಡಿ ಚೆನ್ನಾಗಿ ರುಬ್ಬಿ ಆಗಲೇ ಇಂತಹವರಿಗೆ ಬುದ್ದಿ ಬರುವುದು ಎಂದು ಕೂಡ ಹೇಳಿದ್ಧಾಳೆ.

ಬಾಸುಂಡೆ ಬರುವಂತೆ ಬಾರಿಸಿದರು ಪೊಲೀಸ್
ಶಕುಂತಲಾ ಹೀಗೆ ಹೇಳುತ್ತಿದ್ದಂತೆಯೇ ಪೊಲೀಸರು ಬಟ್ಟೆ ಬಿಚ್ಚಿಸಿ ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ಆದರೆ ಜೈದೇವ್ ಕಣ್ಣಲ್ಲಿ ಒಂದು ಹನಿ ನೀರು ಬಂದಿಲ್ಲ. ಬುದ್ದಿಯೂ ಬಂದಂತೆ ಇಲ್ಲ.
ರಾಣವ್ ಗೌಡ ಆಕ್ಟಿಂಗ್‌ಗೆ ಪ್ರೇಕ್ಷಕರ ಬಹುಪರಾಕ್
ಸದ್ಯ ''ಅಮೃತಧಾರೆ'' ಈ ಸಂಚಿಕೆಯಲ್ಲಿ ಜೈದೇವ್ ಅಲಿಯಾಸ್ ರಾಣವ್ ಗೌಡ ಅಭಿನಯಕ್ಕೆ ಹಲವರು ಮನ ಸೋತಿದ್ಧಾರೆ. ಕಾಮೆಂಟ್ ಮಾಡುವ ಮೂಲಕ ರಾಣವ್ ಅವರನ್ನು ಕೊಂಡಾಡುತ್ತಿದ್ದಾರೆ. ಸಖತ್ ಆಕ್ಟಿಂಗ್ ನಿಮ್ಮದು ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ನಿಮ್ಮ ಆಕ್ಟಿಂಗ್‌ಗೆ ನಾನು ಹುಚ್ಚ ಆಗಿದೀನಿ, ಕೈಮುಗಿತೀನಿ ಇದೇ ತರ ಮುಂದುವರೆಸಿ ಎಂದಿದ್ಧಾರೆ.
ಆಕ್ಟಿಂಗ್ ಸೂಪರ್ ಸರ್ ನಿಮ್ಧು.. ಜೈಬ್ರೋ ನಿಮಗೆ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಇನ್ನೂ ಹೆಚ್ಚೆಚ್ಚು ಒಳ್ಳೆಯ ಅವಕಾಶ ಸಿಗಲಿ, ಆಲ್ ದಿ ಬೆಸ್ಟ್.. ಏನ್ ಆಕ್ಟಿಂಗ್ ಜೆಡಿ.. ಜೆಡಿ ಆಕ್ಟಿಂಗ್ ಮಾತ್ರ ಸೂಪರ್.. ಜೆಡಿ ನೀನು ಹೀರೋ ಆಗಬೇಕು.. ಅಮೃತದಾರೆ ಸೀರಿಯಲ್ ನಲ್ಲಿ ಬೆಸ್ಟ್ ಆಕ್ಟಿಂಗ್ ಅವಾರ್ಡ್ ಜೈದೇವಗೆ ಕೊಡಬೇಕು ಆಕ್ಟಿಂಗ್ ಮಾತ್ರ ಸೂಪರ್, ಮೂವಿ ನಲ್ಲಿ ವಿಲನ್ ಪಾತ್ರ ಮಾಡಬಹುದು.. ಹೀಗೆ ಹಲವರು ರಾಣವ್ ಗೌಡ ಅವರ ಅಭಿನಯವನ್ನು ಮೆಚ್ಚಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ಧಾರೆ.


Click it and Unblock the Notifications