Amruthadhaare ; ತನ್ನ ಕೈಯಾರೆ ತಾನೇ ಖೆಡ್ಡಾ ತೋಡಿಕೊಂಡ ದಿಯಾ ; ಬೇಬಿ ಪ್ರಾಣ ಬಲಿ ಪಡೆಯುತ್ತಾನಾ ಬಾಡಿಗಾರ್ಡ್ ಜೈದೇವ್ ?

''ಅಮೃತಧಾರೆ'' ಧಾರಾವಾಹಿಯಲ್ಲಿ ಜೈದೇವ್ ಜೈಲು ಪಾಲಾದ ವಿಚಾರ ಶಕುಂತಲಾ ಮೂಲಕ ಲಕ್ಷ್ಮೀಕಾಂತ್‌ಗೆ ಗೊತ್ತಾಗಿದೆ. ಮಗನ ಸಹಾಯಕ್ಕೆ ಯಾಕೆ ಹೋಗಲಿಲ್ಲ ಎಂಬ ಪ್ರಶ್ನೆಗೆ ಶಕುಂತಲಾ ನೀಡಿದ ಉತ್ತರದಿಂದ ಲಕ್ಷ್ಮೀಕಾಂತ್ ಶಾಕ್ ಆಗಿದ್ದಾನೆ. ಕೊನೆಗೆ ಅಳಿಮಯ್ಯಗೆ ತಾನೇ ಜಾಮೀನು ಕೂಡ ಕೊಡಿಸಿದ್ದಾನೆ.

ಪೊಲೀಸ್ ಠಾಣೆಯಲ್ಲಿ ನಿಮ್ಮ ಸಹವಾಸ ನನಗೆ ಬೇಡ ಎಂದು ಜೈದೇವ್ ಹೇಳಿದ್ದರೂ ಆ ನಂತರ ಪೊಲೀಸರು ಹಾಕಿದ ಅವಾಜ್‌ಗೆ ಹೆದರಿ ಲಕ್ಷ್ಮೀಕಾಂತನ ಜೊತೆ ಹೋಗಲು ಒಪ್ಪಿಕೊಂಡಿದ್ದಾನೆ. ಹೊರ ಬಂದಿದ್ದಾನೆ. ಹೊರ ಬರುತ್ತಿದ್ದಂತೆಯೇ ಬದಲಾಗುವಂತೆ ಜೈದೇವ್‌ಗೆ ಲಕ್ಷ್ಮೀಕಾಂತ್ ಹೇಳಿದ್ದಾನೆ. ಬದಲಾವಣೆ ಜಗದ ನಿಯಮ. ನಾನು ಮತ್ತು ನಿಮ್ಮ ಅಮ್ಮಾ ಸಹ ಬದಲಾದ್ಳು. ಈಗ ನೀನು ಬದಲಾದ್ರೆ ನಮ್ಮೊಂದಿಗಿರಲು ಸಾಧ್ಯವಾಗುತ್ತದೆ ಎಂದು ಜೈದೇವ್‌ಗೆ ಮಾವ ಲಕ್ಷ್ಮೀಕಾಂತ್ ಹೇಳಿದ್ದಾನೆ.

Amruthadhaare s Twist Is Jaidev Plotting Dia s End After Her Fatal Revenge Move

ಆದರೆ, ಹುಟ್ಟುತ್ತಾ ಯಾರು ಕೆಟ್ಟವರಲ್ಲ. ಪ್ರವಚನ ನೀಡಲು ಬಂದ ಲಕ್ಷ್ಮೀಕಾಂತ್ ಎದುರು ಜೈದೇವ್ ಇದೇ ಮಾತುಗಳನ್ನಾಡಿದ್ದು ದ್ವೇಷ ಇಟ್ಕೊಂಡು ನಾನು ಹುಟ್ಟಿದ್ದಾ? ಇಲ್ಲ, ನನ್ನನ್ನು ಆ ರೀತಿ ಬೆಳೆಸಿದ್ದು ನೀವೆಲ್ಲಾ ಎಂದು ಹೇಳಿದ್ದಾನೆ. ಈ ಜೈದೇವ್ ಗುರಿ ತಲುಪವರೆಗೂ ನಿಲ್ಲೋವನು ಅಲ್ಲ. ನನ್ನ ಗುರಿಗೆ ನೀನು, ಆ ಗೌತಮ್ ದಿವಾನ್ ಅಥವಾ ಅಮ್ಮಾ ಎದುರಾದರೂ ನಾನು ಸುಮ್ಮನೇ ಬಿಡುವನಲ್ಲ. ಯಾರನ್ನೂ ಸುಮ್ಮನೇ ಬಿಡೋದಿಲ್ಲ ಎಂದು ಹೇಳಿ ಅಲ್ಲಿಂದ ಜೈದೇವ್ ಹೊರಡುತ್ತಾನೆ.

ದಿಯಾ ಮನೆಗೆ ಬಂದ ಜೈದೇವ್

ಲಕ್ಷ್ಮೀಕಾಂತನ ಪ್ರವಚನ ಕೇಳಿಸಿಕೊಂಡು ಜೈದೇವ್ ಸೀದಾ ತನ್ನ ಬೇಬಿ ಮನೆಗೆ ಬಂದಿದ್ದಾನೆ.ಆದರೆ, ಜೈಲಿನಿಂದ ನೇರವಾಗಿ ಹೆಂಡತಿ ದಿಯಾ ಮನೆಗೆ ಬಂದಿದ್ದಾನೆ. ಮನೆಯಿಂದ ಹೊರಗಡೆ ಬರುವಂತೆ ಕೂಗಿದ್ದಾನೆ. ಜೈದೇವ್‌ನ ರಂಪ ರಾಮಾಯಣದಿಂದ ಬೆಚ್ಚಿ ಬಿದ್ದಿರುವ ದಿಯಾ ಮನೆಯ ಟೆರೇಸ್‌ ಮೇಲೆ ಬಂದು ನಿಂತಿದ್ದು, ಇಷ್ಟು ದಿನ ಪ್ರೀತಿಯ ನಾಟಕ ಆಡಿ, ಹಾಡಿ ಹೊಗಳಿ ಹಗ್​ ಎಲ್ಲಾ ಮಾಡಿದ್ದು ನೀನೇನಾ, ನಿನ್ನ ಜನ್ಮಕ್ಕೆ ಇಷ್ಟು. ಥೂ ಎಂದು ಜೈದೇವ್ ಉಗುಳಿದ್ದಾನೆ.

ಮನೆ ಹಾಳು ಐಡಿಯಾ ನೀಡಿದ ಗೆಳತಿ

ಇದೇ ಸಮಯದಲ್ಲಿ ನೀನು ಅನುಭವಿಸಿದ ನೋವು, ನರಕವನ್ನು ಜೈದೇವ್ ತನ್ನ ಕಣ್ಣಾರೆ ನೋಡಬೇಕು ಎಂದು ಹೇಳಿರುವ ಗೆಳತಿ ಲೆಕ್ತಾ ಚುಕ್ತಾ ಮಾಡಬೇಕು ಅಂದರೆ ಶತ್ರು ನಮ್ಮ ಕಣ್ಣೆದುರು ಇರಬೇಕು ಎಂದಿದ್ದಾಳೆ.

ಅವನು ಹೊರಗಡೆ ಇದ್ದರೆ ನೀನೇ ಭಯದಲ್ಲಿ ಬದುಕಬೇಕು, ಅದೇ ಅವನು ನಿನ್ನ ಕಣ್ಣಳತೆಯಲ್ಲಿ ಬಾಡಿಗಾರ್ಡ್ ಆಗಿ ಇದ್ದರೆ ಅವನ ಮೇಲೆ ನಿಗಾ ಇಡಬಹುದು ಎಂಬ ಸಲಹೆ ನೀಡಿದ್ದಾಳೆ. ಗೆಳತಿಯ ಈ ಸಲಹೆ ದಿಯಾಗೆ ಮಾಸ್ಟರ್ ಪ್ಲಾನ್ ಎಂದು ಅನಿಸಿದೆ. ಹೀಗಾಗಿ ಮನೆಯೊಳಗೆ ಸೇರಿಸಿಕೊಳ್ಳುವ ನಿರ್ಧಾರವನ್ನು ದಿಯಾ ಮಾಡಿದ್ದಾಳೆ. ಆದರೆ ತಾನು ಮಾಡುತ್ತಿರುವ ಈ ಕೆಲಸ ಹಾವಿಗೆ ಹಾಲೆರದಂತೆ ಎನ್ನುವುದು ದಿಯಾಗೆ ಗೊತ್ತಿಲ್ಲ.

Amruthadhaare s Twist Is Jaidev Plotting Dia s End After Her Fatal Revenge Move

ಬಾಡಿಗಾರ್ಡ್ ರೂಪದಲ್ಲಿ ಬಂದ ಬೇಟೆಗಾರ

ಗೆಳತಿಯ ಮಾತು ಕೇಳಿ ಸದ್ಯ ದಿಯಾ, ಜೈದೇವ್‌ನ ಮನೆಯೊಳಗಡೆ ಕರೆದುಕೊಂಡಿದ್ದು ಮನೆ ಕೆಲಸವನ್ನು ಜೈದೇವ್‌ನಿಂದ ಮಾಡಿಸುತ್ತಿದ್ದಾಳೆ. ಹೊಟ್ಟೆ ಹಸಿವಿನಿಂದ ಬಳಲುತ್ತಿರುವ ಜೈದೇವ್ ಕೂಡ ನಾನು ಮಾಡ್ತೀನಿ ಎಂದು ದಿಯಾ ಹೇಳಿದ ಕೆಲಸ ಮಾಡಿದ್ದಾನೆ. ಇದನ್ನು ಕಂಡು ದಿಯಾ ಒಳಗೊಳಗೆ ಖುಷಿಯಾಗಿದ್ದು , ನೋಡ್ತೀರು ಜೈ ನಿನ್ನ ಹೆಂಗೆಲ್ಲಾ ಯೂಸ್ ಮಾಡ್ಕೋಂತೀನಿ ಅಂತ ಮನದಲ್ಲಿಯೇ ಖುಷಿಯಾಗಿದ್ದಾಳೆ.

ದಿಯಾ ಪ್ರಾಣಕ್ಕೆ ಸಂಚಕಾರ ?

ಜೈದೇವ್ ರಕ್ತ ಕೊತ ಕೊತ ಕುದಿಯುತ್ತಿದೆ. ಅಂಹಕಾರಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಸೇಡು ಒಂದೇ ಸದ್ಯ ಜೈದೇವ್‌ನ ಗುರಿ. ಹೀಗಿರುವಾಗ ಬೀದೀಲಿ ಹೋಗೋ ಮಾರಿನ ಮನೆಯೊಳಗೆ ಕರೆದುಕೊಂಡು ಬಂದಿದ್ದಾಳೆ ದಿಯಾ. ಜೈದೇವ್‌ನ ಮಾನಿಟರ್ ಮಾಡಬಹುದು ಎಂದು ದಿಯಾ ಅಂದುಕೊಂಡಿರಬಹುದು. ಆದರೆ ಜೈದೇವ್ ಮತ್ತೆ ಸ್ಕೆಚ್ ಹಾಕದೇ ಸುಮ್ಮನೆಯಂತೂ ಕೂರುವುದಿಲ್ಲ. ಹೀಗಾಗಿ ದಿಯಾ ಪ್ರಾಣವನ್ನು ಜೈದೇವ್ ಬಲಿ ಪಡೆಯುತ್ತಾನಾ..? ಎನ್ನುವ ಅನುಮಾನ ಪ್ರೇಕ್ಷಕರನ್ನು ಈಗ ಕಾಡುತ್ತಿದೆ.

ಶ್ವೇತಾ ಗೌಡ ಮದುವೆ

ಮತ್ತೊಂದು ಕಡೆ ಇದೇ ಮೇ 14ರಂದು ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರ ಮದುವೆ ಇದೆ. ಈ ಹಿನ್ನೆಲೆ ''ಅಮೃತಧಾರೆ'' ಧಾರಾವಾಹಿಯಲ್ಲಿ ದಿಯಾ ಪಾತ್ರ ಅಂತ್ಯವಾಗುತ್ತಾ..? ಅಥವಾ ಕೆಲ ದಿನಗಳವರೆಗೆ ದಿಯಾ ಪಾತ್ರವನ್ನು ಕಣ್ಮರೆ ಮಾಡಲಾಗುತ್ತಾ..? ಎನ್ನುವ ಪ್ರಶ್ನೆ ಕೂಡ ಹಲವರಲ್ಲಿದೆ. ಒಟ್ನಲ್ಲಿ ಸದ್ಯ ''ಅಮೃತಧಾರೆ'' ಧಾರಾವಾಹಿಯಲ್ಲಿ ದಿಯಾ ಟ್ಯಾಲಿ ಲೆಕ್ಕದಿಂದ ಬೀದಿಯಲ್ಲಿದ್ದ ಜೈದೇವ್‌ಗೆ ಸೂರು ಸಿಕ್ಕಿದೆ. ಮುಂದೆ ಜೈದೇವ್ ಏನೆಲ್ಲ ಮಾಡ್ತಾನೆ ಎನ್ನುವುದನ್ನು ಕಾದು ನೋಡಬೇಕಿದೆ.

English summary
Keep your enemies close, or invite your own murder? Dia’s plan to monitor Jaidev under the roof of Amruthadhaare is backfiring fast. As the lines between captor and bodyguard blur, find out if Jaidev is preparing for a final, bloody strike against Dia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X