Amruthadhaare ; ಗೌತಮ್ ಗಾಗಿ ತನ್ನ ಕೈಯಾರೆ ಅಡುಗೆ ಮಾಡಿದ ಭೂಮಿಕಾ ; ಅಪೇಕ್ಷಾ-ಪಾರ್ಥ ಪ್ರೇಮಕಥೆ ಏನಾಯಿತು..?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಗೆ ಕತ್ತಲೆ ಎಂದರೆ ಬಹಳ ಭಯ. ಈ ವಿಚಾರ ಭೂಮಿಕಾಗೆ ಗೊತ್ತಿರಲಿಲ್ಲ. ಆದರೆ, ರಾತ್ರಿ ಕರೆಂಟ್ ಹೋದಾಗ ಗೌತಮ್ ಹೆದರಿಕೊಳ್ಳುತ್ತಾನೆ. ಆಗ ಭೂಮಿಕಾಳನ್ನು ಗೌತಮ್ ತಬ್ಬಿಕೊಳ್ಳುತ್ತಾನೆ.
ತನ್ನ ಜೊತೆಗೆ ಇರುವಂತೆ ಕೇಳಿಕೊಳ್ಳುತ್ತಾನೆ. ಗೌತಮ್ ಭಯವನ್ನು ಕಂಡ ಭೂಮಿಕಾಳಿಗೆ ಖುಷಿ ಆಗುತ್ತದೆ. ಈ ಸಂದರ್ಭವನ್ನು ಬಳಸಿಕೊಳ್ಳುತ್ತಾಳೆ. ಗೌತಮ್ ಗೆ ಇನ್ನಷ್ಟು ಹತ್ತಿರವಾಗಲು ಭೂಮಿಕಾ ಯತ್ನಿಸುತ್ತಾಳೆ. ಈ ವಿಚಾರದ ಬಗ್ಗೆ ತಿಳಿದ ಆನಂದ್ ಗೆ ಖುಷಿಯೋ ಖುಷಿ.

ಅತ್ತಿಗೆ ತಂಗಿಗೆ ಪ್ರಪೋಸ್ ಮಾಡಿದ ಪಾರ್ಥ
ಇನ್ನೊಂದು ಕಡೆ ಅಪೇಕ್ಷಾ ಮತ್ತು ಪಾರ್ಥ ಇಬ್ಬರೂ ಒಬ್ಬರನ್ನೊಬ್ಬರು ತೀರಾ ಹಚ್ಚಿಕೊಂಡಿದ್ದಾರೆ. ರಾತ್ರಿ ಎಲ್ಲರೂ ಮಲಗಿದ ಬಳಿಕವೂ ಫೋನ್ ನಲ್ಲಿ ಮಾತನಾಡುವುದು, ಚಾಟ್ ಮಾಡುವುದು ಹವ್ಯಾಸವಾಗಿರುತ್ತೆ. ಇನ್ನೂ ಇಬ್ಬರೂ ಹಗಲಿನಲ್ಲಿ ಭೇಟಿಯಾಗ್ತಾರೆ ಆದರೂ, ಬಿಟ್ಟಿರಲಾರದ ಬಾಂಧವ್ಯ ಇಬ್ಬರ ನಡುವೆ ಬೆಳೆದಿದೆ.
ಹೀಗಾಗಿ ಪಾರ್ಥ ಅಪೇಕ್ಷಾ ಬಳಿ ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕೆಂದು ನಿರ್ಧರಿಸಿ, ಅಪೇಕ್ಷಾಳನ್ನ ಭೇಟಿ ಮಾಡುತ್ತಾನೆ. ಬೆಟ್ಟದ ತುದಿಗೆ ಕರೆದುಕೊಂಡು ಹೋಗಿ ಕೈಯಲ್ಲಿ ಕೆಂಪು ಗುಲಾಬಿಯ ಹೂ ಗುಚ್ಛವನ್ನು ಹಿಡಿದು ಪ್ರಪೋಸ್ ಮಾಡಿಯೇ ಬಿಡುತ್ತಾನೆ.

ಆದರೆ, ಅಪೇಕ್ಷಾ ಪಾರ್ಥನನ್ನು ಆಟವಾಡಿಸುತ್ತಾಳೆ. ಅಯ್ಯೋ ನನಗೆ ಈಗಾಗಲೇ ಭಾಯ್ ಫ್ರೆಂಡ್ ಇದ್ದಾನೆ ಎಂದು ಹೇಳುತ್ತಾಳೆ. ಇದೇ ಸಮಯಕ್ಕೆ ಸರಿಯಾಗಿ ಜೈದೇವ ಫೋನ್ ಮಾಡುತ್ತಾನೆ ಆಗ ಅಪೇಕ್ಷಾ ಪಾರ್ಥನನ್ನು ಇನ್ನಷ್ಟು ಹೆದರಿಸುತ್ತಾಳೆ. ಪಾರ್ಥ ಬೇಸರ ಮಾಡಿಕೊಂಡ ಬಳಿಕ ಅವನನ್ನು ಅಪ್ಪಿಕೊಂಡು ಅವನ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ.
ಮಲ್ಲಿ-ಜೈದೇವ ಬಗ್ಗೆ ತಿಳಿದ ಲಕ್ಷ್ಮೀಕಾಂತ
ಇನ್ನು ಇತ್ತ ಜೈದೇವನಿಗೆ ಬಹಳ ಕೆಟ್ಟ ಅಭ್ಯಾಸಗಳಿವೆ. ಇದೆಲ್ಲವೂ ಲಕ್ಷ್ಮೀಕಾಂತನಿಗೂ ತಿಳಿದಿದೆ. ಹಾಗಿದ್ದರೂ ಕೂಡ ಲಕ್ಷ್ಮೀಕಾಂತ ಯಾವುದೇ ರೀತಿಯಲ್ಲಿಯೂ ತಂಗಿಯ ಮಗನನ್ನು ತಿದ್ದಲು ಯತ್ನಿಸುವುದಿಲ್ಲ. ಜೈದೇವ, ಅಪೇಕ್ಷಾ ಹಿಂದೆಯೂ ಬಿದ್ದಿದ್ದ ಆದರೆ, ಪಾರ್ಥನ ಆಗಮನದಿಂದ ಅಪೇಕ್ಷಾ ಸ್ವಲ್ಪದರಲ್ಲೇ ಎಸ್ಕೇಪ್ ಆಗಿದ್ದಳು. ಈಗ ಜೈದೇವ ತಮ್ಮ ಮನೆಯ ಕೆಲಸ ಮಾಡುವ ಮುದುಕನ ಮೊಮ್ಮಗಳು ಮಲ್ಲಿ ಹಿಂದೆ ಬಿದ್ದಿದ್ದಾನೆ. ಮಲ್ಲಿ ಮತ್ತು ತನ್ನ ನಡುವೆ ಇರುವ ಸಂಬಂಧದ ಬಗ್ಗೆ ಲಕ್ಷ್ಮೀಕಾಂತನಿಗೆ ಸತ್ಯ ಗೊತ್ತಾಗುತ್ತದೆ.

ಗಂಡನಿಗಾಗಿ ನಾನ್ ವೆಜ್ ತಯಾರಿಸಿದ ಭೂಮಿಕಾ
ಇನ್ನು ಭೂಮಿಕಾ ಗೌತಮ್ ಗೆ ಆದಷ್ಟು ಹತ್ತಿರವಾಗಲು ಪ್ರಯತ್ನಪಡುತ್ತಿದ್ದಾಳೆ. ಮೊದ ಮೊದಲು ದೂರ ಹೋಗುತ್ತಿದ್ದ ಭೂಮಿಕಾ ಈಗ ಗೌತಮ್ ಸಾಂಗತ್ಯವನ್ನು ಬಯಸಿದ್ದಾಳೆ. ಹೀಗಾಗಿ ಭೂಮಿಕಾ ಗೌತಮ್ ಗೆ ಯಾವೆಲ್ಲಾ ತಿಂಡಿ ಇಷ್ಟ ಎಂಬುದನ್ನು ಅರಿತು ನಾನ್ ವೆಜ್ ಮಾಡಲು ತಯಾರಾಗಿದ್ದಾಳೆ.
ಇದಕ್ಕೆ ಪಾರ್ಥನ ಬಳಿ ಸಹಾಯ ಕೇಳಿದ್ದು, ಮನೆಯವರನ್ನೆಲ್ಲಾ ಸಿನಿಮಾಗೆ ಕಳಿಸಿದ್ದಾಳೆ. ಮನೆ ಖಾಲಿಯಾದ ಮೇಲೆ ಥರೇವಾರಿ ನಾನ್ ವೆಜ್ ಅಡುಗೆಯನ್ನು ತಯಾರಿಸಿ, ಮನೆಯ ಅಂಗಳದಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಸಿದ್ಧತೆಯನ್ನ ಮಾಡಿಕೊಂಡಿದ್ದಾಳೆ.
ಒಟ್ಟಿಗೆ ಕೂತು ಊಟ ಮಾಡಿದ ಭೂಮಿ-ಗೌತಮ್
ಗೌತಮ್ ಗೆ ಇದ್ಯಾವುದೂ ತಿಳಿಯದಂತೆ ಭೂಮಿಕಾ ನೋಡಿಕೊಂಡಿದ್ದು, ಸರ್ಪ್ರೈಸ್ ನೀಡಿದ್ದಾಳೆ. ಗೌತಮ್ ಭೂಮಿಕಾ ಮಾಡಿದ ಊಟವನ್ನು ಸವಿದು ಸಂತೃಪ್ತಿಗೊಂಡಿದ್ದಾನೆ. ಭೂಮಿಕಾ ಕೈ ರುಚಿಗೆ ಫಿದಾ ಆಗಿದ್ದಾನೆ. ಇಬ್ಬರೂ ಕೂಡ ಏಕಾಂತದಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಮಾಡುತ್ತಾ ಖುಷಿಯಾಗಿದ್ದಾರೆ. ಗೌತಮ್ ಗೆ ಭೂಮಿಕಾ ಕೊಟ್ಟ ಸರ್ಪ್ರೈಸ್ ಇಷ್ಟವಾಗಿದೆ. ಮಹಿಮಾ ವಿಚಾರವನ್ನು ಮರೆತು ಈಗ ಗೌತಮ್ ಭೂಮಿಕಾ ಬಗ್ಗೆ ಒಲವು ತೋರಿದ್ದಾನೆ


Click it and Unblock the Notifications











