Amruthadhaare; ಸೊಸೆ ಮೇಲೆ ಅತ್ತೆ ದೂರು : ಹೆಂಡತಿ ಪರ ಬ್ಯಾಟ್ ಬೀಸಿದ ಗೌತಮ್ ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ತನಗೆ ಫ್ಯಾಶನ್ ಶೋ ಸ್ಫರ್ಧೆ ಇದ್ದರೂ, ಅದನ್ನು ಬಿಟ್ಟು ಅತ್ತೆ ಮಂದಾಕಿನಿಯ ಸೇವೆಯನ್ನು ಮಾಡಿದ್ದಾಳೆ. ಮನೆಯಲ್ಲಿ ಎಲ್ಲಾ ಕೆಲಸವನ್ನು ಮಾಡಿರುವ ಮಹಿಮಾ ಕೈ ರುಚಿಯನ್ನು ಮನೆಯವರು ಸವಿದಿದ್ದಾರೆ. ಜೀವನ್ ಗೆ ಮಹಿಮಾ ಅಡುಗೆ ಮಾಡುವುದನ್ನು ನೋಡಿ ಆಶ್ಚರ್ಯವಾಗಿದೆ. ಮಂದಾಕಿನಿ ಮತ್ತು ಸದಾಶಿವ ಇಬ್ಬರೂ ತಮ್ಮ ಸೊಸೆಯನ್ನು ಹೊಗಳಿದ್ದಾರೆ. ಮಹಿಮಾ ಕೂಡ ಮನೆಯಲ್ಲಿ ಇದ್ದುಕೊಂಡು ಎಲ್ಲಾ ಕೆಲಸ ಮಾಡಿದರೂ ಖುಷಿಯನ್ನು ವ್ಯಕ್ತಪಡಿಸಿದ್ದಾಳೆ.

ಎಲ್ಲರ ಕಾರ್ಡ್ ಬ್ಲಾಕ್ ಮಾಡಿಸಿದ ಭೂಮಿಕಾ

ಇತ್ತ ಭೂಮಿಕಾ ಬೇಕಂತಲೇ ಆನಂದ್ ಗೆ ಹೇಳಿ ಎಲ್ಲರ ಕಾರ್ಡ್ ಗಳನ್ನು ಬ್ಲಾಕ್ ಮಾಡಿಸಿದ್ದಾಳೆ. ಇದರಿಂದ ಜೈದೇವ್, ಅಶ್ವಿನಿ, ಲಕ್ಷ್ಮೀಕಾಂತ ಹಾಗೂ ಶಕುಂತಲಾ ನಾಲ್ವರು ಕೂಡ ಹಣವನ್ನು ಬಳಸಲು ಸಾಧ್ಯವಾಗಿಲ್ಲ. ಇದರಿಂದ ಎಲ್ಲರೂ ಗಾಬರಿಯಾಗಿದ್ದಾರೆ. ಇನ್ನು ಭುಮಿಕಾ ಗೌತಮ್ ಬಳಿ ತಾನು ಯಾಕೆ ಹೀಗೆ ಮಾಡುತ್ತಿದ್ದೇನೆ ಎಂಬ ಬಗ್ಗೆ ವಿವರವಾಗಿ ತಿಳಿಸಿದ್ದಾಳೆ. ಖರ್ಚು ಮಾಡುವ ಹಣಕ್ಕೆ ಲೆಕ್ಕ ಇಡಬೇಕು ಎಂಬುದನ್ನು ತಿಳಿಸಿ ಹೇಳಿದ್ದಾಳೆ. ಮಲ್ಲಿ ಮಾತ್ರ ಕಾರ್ಡ್ ಗಳು ಬ್ಲಾಕ್ ಮಾಡಿಸಿರುವುದಕ್ಕೆ ಭೂಮಿಕಾ ಅಕ್ಕನ ಬಳಿ ಸಂತಸವನ್ನು ವ್ಯಕ್ತಪಡಿಸಿದ್ದಾಳೆ. ಹಣ ಖರ್ಚು ಮಾಡುವಾಗ ಯೋಚಿಸಿ ಮಾಡಬೇಕು. ಪಾರ್ಟಿಯಲ್ಲಿ ಒಂದೇ ರಾತ್ರಿಗೆ 67 ಸಾವಿರ ಬಿಲ್ ಮಾಡಿರುವುದು ನೋಡಿ ನನಗೂ ಗಾಬರಿಯಾಯ್ತು ಎಂದು ಹೇಳುತ್ತಾಳೆ.

amruthadhaare-serial-01-july-episode-written-update

ಗೌತಮ್ ಗೆ ಬುದ್ಧಿ ಹೇಳಿದ ಅಜ್ಜಿ

ಅಜ್ಜಿ ಘೌತಮ್ ನನ್ನು ಕೂರಿಸಿಕೊಂಡು ಬುದ್ಧಿ ಹೇಳುತ್ತಾರೆ. ಭೂಮಿಕಾಳಿಗೆ ಬುದ್ಧಿ ಇದೆ. ಯಾವಾಗ ಏನು ಂಆಡಬೇಕು. ಮನೆಯವರಿಗೆ ಯಾವುದು ಮುಖ್ಯ ಎಂಬುದನ್ನು ತಿಳಿದುಕೊಂಡಿದ್ದಾಳೆ. ಈ ಮನೆಯನ್ನು ನಿಭಾಯಿಸಲು ಭೂಮಿಕಾಳೇ ಸರಿಯಾದ ವ್ಯಕ್ತಿ. ಹೆಂಡತಿ ಮಾತನ್ನು ಕೇಳುವುದರಿಂದ ಯಾರೂ ಹಾಳಾಗುವುದಿಲ್ಲ. ಭೂಮಿಕಾಳಿಗೆ ನೀನು ಎಲ್ಲರ ಮುಂದೆ ಬೈದಿದ್ದು ತಪ್ಪು. ಆಗ ನಾನು ಮಾತನಾಡಿದ್ದರೆ, ನಿನಗೆ ಅವಮಾನ ಆಗುತ್ತಿತ್ತು. ಹಣಕ್ಕೆ ಲೆಕ್ಕ ಕೇಳಿದ್ದರಲ್ಲಿ ಭೂಮಿಕಾಳ ತಪ್ಪೇನು ಇರಲಿಲ್ಲ ಎಂದು ಅಜ್ಜಿ ಗೌತಮ್ ಗೆ ಹೇಳುತ್ತಾರೆ. ಗೌತಮ್ ಗೂ ಅಜ್ಜಿ ಹೇಳಿದ ಮಾತುಗಳು ಸರಿ ಎನಿಸುತ್ತದೆ.

ಮಗನ ಬಳಿ ಶಕುಂತಲಾ ದೂರು

ಎಲ್ಲರ ಕಾರ್ಡ್ ಗಳು ಒಂದೇ ಸಲಕ್ಕೆ ಖಾಲಿ ಆಗಿರುವುದಕ್ಕೆ ಗಾಬರಿಯಾಗಿದ್ದಾರೆ. ಶಕುಂತಲಾ ಇದೆಲ್ಲಾ ಯಾರ ಕೆಲಸ ಎಂದು ಮಾಹಿತಿ ಪಡೆದಿದ್ದಾಳೆ. ಭಾಗಶಃ ಭುಮಿಕಾಳೇ ಹೀಗೆ ಮಾಡಿರಬೇಕು ಎಂದು ಗೆಸ್ ಮಾಡಿದ್ದಾಳೆ. ಸೀದಾ ಗೌತಮ್ ಬಳಿ ಹೋಗಿ ನಮ್ಮೆಲ್ಲರ ಕಾರ್ಡ್ ಕೂಡ ಬ್ಲಾಕ್ ಆಗಿದೆ. ಯಾವುದೇ ಟ್ರಾನ್ಸ್ಯಾಕ್ಷನ್ ಮಾಡಲು ಸಾಧ್ಯವಾಗುತ್ತಿಲ್ಲ. ಆನಂದ್ ಗೆ ಭೂಮಿಕಾ ಹೇಳಿ ಬ್ಲಾಕ್ ಮಾಡಿಸಿರಬೇಕು. ಸ್ವಲ್ಪ ಬ್ಲಾಕ್ ರಿಮೂವ್ ಮಾಡಲು ಹೇಳು. ಇದು ಕೂಡು ಕುಟುಂಬ. ನಾವೆಲ್ಲರೂ ಕೂಡಿ ಬಾಳಬೇಕು. ಹೀಗೆಲ್ಲಾ ಮಾಡುವುದು ತಪ್ಪು ಎಂದು ಬಿಡಿಸಿ ಹೇಲು ಎಂದು ಗೌತಮ್ ಗೆ ಹೇಳುತ್ತಾಳೆ.

amruthadhaare-serial-01-july-episode-written-update


ಭೂಮಿಕಾ ಮಾತನ್ನು ಕೇಳಲು ಹೇಳಿದ ಗೌತಮ್

ಗೌತಮ್ ಮನೆಯವರೆಲ್ಲರನ್ನೂ ಒಟ್ಟಿಗೆ ಸೇರಿಸುತ್ತಾನೆ. ಅಮ್ಮ ಹಾಗೂ ಅಜ್ಜಿ ಈ ಮನೆಯನ್ನು ಇಷ್ಟು ವರ್ಷ ಯಾವುದೇ ಸಮಸ್ಯೆ ಬಾರದಂತೆ ಮುನ್ನೆಡೆಸಿಕೊಂಡು ಬಂದಿದ್ದಾರೆ. ಈಗ ಆ ಜವಾಬ್ದಾರಿ ಭೂಮಿಕಾ ಮೇಲಿದೆ. ಎಲ್ಲರೂ ಪ್ರತೀ ಬಾರಿ ನನ್ನನ್ನು ಹಣ ಕೇಳಿ ನನ್ನ ಮೂಲಕ ಭೂಮಿಕಾಳಿಂದ ಹಣ ಪಡೆಯುವುದು ಸರಿಯಲ್ಲ. ನೀವೇ ಭೂಮಿಕಾ ಬಳಿ ಹೋಗಿ ಯಾವುದಕ್ಕೆ ಹಣ ಎಷ್ಟು ಬೇಕು ಎಂದು ಕೇಳಿದರೆ ಅವಳೇ ಕೊಡುತ್ತಾಳೆ. ಕಾರಣ ಕೇಳುವುದು ಲೆಕ್ಕ ಇಡುವ ಸಲುವಾಗಿ ಅಷ್ಟೇ ಎಂದು ಸಾಫ್ಟ್ ಆಗಿ ಹೇಳಿ ಮಾತು ಮುಗಿಸುತ್ತಾನೆ. ಶಕುಂತಲಾಗೆ ಈಗ ಬೇರೆ ದಾರಿ ಇಲ್ಲದಂತಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X