Amruthadhaare ; ಕೊನೆಗೂ ಸಕ್ಸಸ್ ಆಯ್ತು ಶಕುಂತಲಾ ಪ್ಲ್ಯಾನ್..!
ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಕಡೆ ಅಪೇಕ್ಷಾ ಕೆಟ್ಟ ದಾರಿಯಲ್ಲಿ ಸಾಗುತ್ತಿದ್ದಾಳೆ. ಇನ್ನೊಂದು ಕಡೆ ರಾಜೇಂದ್ರ ಭೂಪತಿ ಸಹವಾಸ ಮಾಡಿದ ಜೀವನ್ ಹಾಳಾಗುತ್ತಿದ್ದಾನೆ. ಇನ್ನೊಂದು ಕಡೆ ಈಗಾಗಲೇ ಕೆಟ್ಟ ಗುಣಗಳನ್ನೇ ಅಳವಡಿಸಿಕೊಂಡಿರುವ ಜೈದೇವ್ ತನ್ನದೇ ಲೋಕದಲ್ಲಿ ಮುಳುಗಿ ಹೋಗಿದ್ದಾನೆ. ಕಳೆದ ಕೆಲ ದಿನಗಳಿಂದ ಮಲ್ಲಿ ಕೂಡ ಕಾಣೆಯಾಗಿದ್ದಾಳೆ. ಕೆಟ್ಟ ಕೆಲಸಗಳನ್ನು ಮಾಡಿಕೊಂಡೇ ದಿವಾನ್ ಕುಟುಂಬಕ್ಕೆ ಸೇರಿದ ಶಕುಂತಲಾ, ಈಗ ತನ್ನ ಹಾಳು ಬುದ್ಧಿಯಿಂದಲೇ ಗೌತಮ್ ಸಂಸಾರವನ್ನು ಹಾಳುಗೆಡವಲು ಮುಂದಾಗಿದ್ದಾಳೆ.
ಮತ್ತೆ ಸೊಸೆಯನ್ನು ಪೀಡಿಸಿದ ಅತ್ತೆ
ಶಕುಂತಲಾ ಪದೇ ಪದೇ ಬೇಕಂತಲೇ ಭೂಮಿಕಾಳ ಮನಸ್ಸನ್ನು ಕಲಕುತ್ತಿದ್ದಾಳೆ. ಭೂಮಿಕಾಳಿಗೆ ಯೋಚನೆ ಮಾಡಲು ಕೂಡ ಸಮಯ ನೀಡದೇ ಅವಳ ಬೆನ್ನು ಬಿದ್ದಿದ್ದಾಳೆ. ಆದಷ್ಟು ಬೇಗ ಗೌತಮ್ ಗೆ ಮತ್ತೊಂದು ಮದುವೆ ಮಾಡಬೇಕು. ನೀನು ಬೇಗ ನಿರ್ಧಾರ ತೆಗೆದುಕೊಂಡರೆ ಈ ಮನೆಗೆ ಒಳ್ಳೆಯದು ಎಂದು ಕೇಳುತ್ತಾಳೆ. ಈಗಾಗಲೇ ಸತ್ಯ ಕೇಳಿ ಶಾಕ್ ಆಗಿರುವ ಭೂಮಿಕಾ, ಏನು ಮಾಡಬೇಕು ಎಂಬುದನ್ನು ಅರಿಯದೇ ಕುಗ್ಗಿದ್ದಾಳೆ. ಈಗ ಪದೇ ಪದೇ ಶಕುಂತಲಾ ವಂಶೋದ್ಧಾರಕ ಬೇಕು ಎಂದು ಹೇಳುತ್ತಿರುವುದಕ್ಕೆ ಭೂಮಿಕಾ ಕಂಪ್ಲೀಟ್ ಆಗಿ ಬ್ಲ್ಯಾಂಕ್ ಆಗಿದ್ದಾಳೆ.

ನಿರ್ಧಾರ ತಿಳಿಸಿದ ಭೂಮಿಕಾ
ದೇವರ ಮುಂದೆ ನಿಂತು ಏನೂ ಕೇಳದೇ ಇಷ್ಟೆಲ್ಲಾ ಕೊಟ್ಟೆ. ಆದರೆ ತಾಯಿ ಆಗುವ ಭಾಗ್ಯವನ್ನು ಕಿತ್ತುಕೊಂಡೆ. ಗೌತಮ್ ನನ್ನ ಸರ್ವಸ್ವ. ಅವರನ್ನು ನನ್ನಿಂದ ಮಾತ್ರ ಕಿತ್ತುಕೊಳ್ಳಬೇಡ ಎಂದು ಬೇಡಿ ಕೊಳ್ಳುತ್ತಾಳೆ. ಇನ್ನು ಶಕುಂತಲಾ ಬಳಿ, ನಾನು ಈಗಾಗಲೇ ನಿರ್ಧಾರ ಮಾಡಿದ್ದೇನೆ. ಈ ವಂಶವನ್ನು ಬೆಳೆಸುವ ಸಲುವಾಗಿ, ಗೌತಮ್ ಖುಷಿಗೋಸ್ಕರ ಈ ನಿರ್ಧಾರ ಮಾಡಿದ್ದೇನೆ. ನಾನು ಗೌತಮ್ ಗೆ ಇನ್ನೊಂದು ಮದುವೆಯನ್ನು ಮಾಡಿಸುತ್ತೇನೆ ಎಂದು ಭೂಮಿಕಾ ಶಕುಂತಲಾ ಬಳಿ ಹೇಳಿದ್ದಾಳೆ. ಬಳಿಕ ಗೌತಮ್ ಜೊತೆಗೆ ಮಾತನಾಡುತ್ತಾ ಭೂಮಿಕಾ ಕೇಳುತ್ತಾಳೆ. ನಾನಲ್ಲದೇ ನೀವು ಬೇರೆ ಯಾರನ್ನಾದರೂ ಇಷ್ಟಪಟ್ಟಿದ್ದೀರಾ. ನಿಮಗೆ ಎೆತಹ ಹುಗಿಸಿಗಬೇಕಿತ್ತು ಎಂದು ಪ್ರಶ್ನಿಸಿದ್ದಾಳೆ. ಗೌತಮ್ ಭೂಮಿಕಾಳ ಪ್ರಶ್ನೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ, ಹಾಗೆಲ್ಲಾ ಯಾರೂ ಇಲ್ಲ. ನೀವೊಬ್ಬರೆ ಎಂದು ಹೇಳುತ್ತಾನೆ. ಈಗ ಭೂಮಿಕಾ ಗೌತಮ್ ಬಳಿ ತನ್ನ ನಿರ್ಧಾರದ ಬಗ್ಗೆ ಹೇಳಬೇಕಿದೆ.
ಜೀವನಿಗೆ ಕ್ಲಾಸ್ ತೆಗೆದುಕೊಂಡ ಮಹಿಮಾ
ಇನ್ನು ಜೀವ ಬೇಡದ ಚಟಗಳಿಗೆ ಆಳಾಗುತ್ತಿದ್ದಾನೆ. ಸದಾಶಿವ ಮತ್ತು ಮಂದಾಕಿನಿಗೆ ತಮ್ಮ ಮಗನ ಹೊಸ ದಾರಿ ಕಾಣುತ್ತಿಲ್ಲ. ಮಹಿಮಾ ತನ್ನ ಪತಿಯನ್ನು ಒಳ್ಳೆಯ ದಾರಿಯಲ್ಲಿಡಲು ಪ್ರಯತ್ನಿಸುತ್ತಿದ್ದಾಳೆ. ಮಹಿಮಾ ಈ ಪರೀಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾಳೋ ಗೊತ್ತಿಲ್ಲ. ಕೈ ಮೀರಿದರೆ ಮತ್ತೆ ಹಳೆಯ ಮಹಿಮಾಳಾಗುತ್ತಾಳೋ ಇಲ್ಲವೇ ಮನೆಯವರ ಸಹಾಯವನ್ನು ಪಡೆಯುತ್ತಾಳೋ ಕಾದು ನೋಡಬೇಕಿದೆ. ಯಾಕೆಂದರೆ, ಈ ಬಾರಿ ಭೂಮಿಕಾ ತನ್ನದೇ ಸಮಸ್ಯೆಯನ್ನು ಎದುರಿಸುತ್ತಿದ್ದು, ಮಹಿಮಾ ಮತ್ತು ಜೀವನ್ ಬದುಕಿನ ಕಡೆ ಗಮನಿಸುವ ಸಾಮರ್ಥ್ಯ ಸದ್ಯಕ್ಕೆ ಭೂಮಿಕಾಳಲ್ಲಿ ಇಲ್ಲವಾಗಿದೆ.
ಭೂಮಿಕಾ ನಿರ್ಧಾರವನ್ನು ಗೌತಮ್ ಒಪ್ಪುತ್ತಾನಾ..??
ಭೂಮಿಕಾ ತನ್ನ ನಿರ್ಧಾರವನ್ನು ಸದ್ಯ ಶಕುಂತಲಾಳಿಗೆ ಮಾತ್ರವೇ ತಿಳಿಸಿದ್ದಾಳೆ. ಅದೇ, ಗೌತಮ್ ಬಳಿ ಹೇಳಿದಾಗ ಗೌತಮ್ ಭೂಮಿಕಾಳ ನಿರ್ಧಾರವನ್ನು ಒಪ್ಪುತ್ತಾನಾ..? ಇಲ್ಲವೇ ಭೂಮಿಕಾಗಾಗಿ ಬೇರೆ ಆಸ್ಪತ್ರೆಗೆ ತೋರಿಸಲು ಮುಂದಾಗುತ್ತಾನಾ. ಅಥವಾ ಭೂಮಿಕಾಳ ಮಾತಿಗೆ ಒಪ್ಪಿಕೊಳ್ಳುತ್ತಾನಾ ಎಂಬ ಕುತೂಹಲಗಳು ಒಂದು ಕಡೆಯಾದರೆ, ಇತ್ತ ಭಾಗ್ಯ ಭೂಮಿಕಾಳನ್ನು ಬಿಟ್ಟುಕೊಡುತ್ತಾಳಾ ಎಂಬ ಅನುಮಾನವೂ ಮೂಡಿದೆ. ಸಂಕಷ್ಟದಲ್ಲಿರುವ ಸೊಸೆಯನ್ನು ಭಾಗ್ಯ ಹೇಗೆ ಉಳಿಸಿಕೊಳ್ಳುತ್ತಾಳೆ ಎಂಬುದೇ ಕುತೂಹಲಕಾರಿಯಾಗಿದೆ.


Click it and Unblock the Notifications











