Amruthadhaare ; ಕೋಚಿಂಗ್ ಕ್ಲಾಸ್ ಗೆ ಸೇರಿಕೊಂಡ ಭೂಮಿಕಾಳಿಗೆ ಕಾಟ ಕೊಡ್ತಾಳಾ ಶಕುಂತಲಾ..?
ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥ ಹಾಗೂ ಅಪೇಕ್ಷಾಳನ್ನು ಗೌತಮ್ ನೋಡದಂತೆ ಭೂಮಿಕಾ ತಡೆಯುತ್ತಾಳೆ. ಸುಳ್ಳು ಹೇಳಿ ಆ ಕ್ಷಣವನ್ನು ಮ್ಯಾನೇಜ್ ಮಾಡುತ್ತಾಳೆ. ಅದಾದ ಬಳಿಕ ಸುಮ್ಮನಿರದ ಭೂಮಿಕಾ ಪಾರ್ಥನನ್ನು ವಯಕ್ತಿಕವಾಗಿ ಭೇಟಿ ಮಾಡುತ್ತಾಳೆ. ನಿಮ್ಮ ಪ್ರೀತಿ ಏನೇ ಇದ್ದರೂ ಮಿತಿಯಲ್ಲಿದ್ದರೆ ಬಹಳ ಒಳ್ಳೆಯದು ಎನ್ನುತ್ತಾಳೆ. ಅಲ್ಲದೇ, ಇಬ್ಬರೂ ಹೀಗೆ ಎಲ್ಲೆಂದರಲ್ಲಿ ಮೈಮರೆತು ನಡೆದುಕೊಳ್ಲುವುದು ತಪ್ಪು. ಇದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಕಷ್ಟವನ್ನು ಅನುಭವಿಸಬೇಕಾಗಿ ಬರಬಹುದು ಎನ್ನುತ್ತಾಳೆ.
ಭೂಮಿಕಾಗಾಗಿ ಡೈರಿ ಬರೆದ ಗೌತಮ್
ನೀವಿಬ್ಬರೂ ರೂಮ್ ನಲ್ಲಿ ಇದ್ದದ್ದು, ಅಲ್ಲಿ ಒಬ್ಬರಿಗೊಬ್ಬರು ಮೈಮರೆತು ತಬ್ಬಿಕೊಂಡಿದ್ದನ್ನು ನಾನು ನೋಡಿದ್ದೇನೆ. ಸ್ವಲ್ಪ ಯಾಮಾರಿದ್ದರೂ ಗೌತಮ್ ಗೆ ವಿಷಯ ಗೊತ್ತಾಗುತ್ತಿತ್ತು. ಮೈಮೇಲೆ ಸ್ವಲ್ಪ ಪ್ರಜ್ಞೆ ಇರಲಿ ಎಂದು ಪಾರ್ಥನಿಗೆ ಭೂಮಿಕಾ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಇನ್ನು ಗೌತಮ್ ಬರ್ತಡೇ ಪಾರ್ಟಿ ಎಲ್ಲಾ ಮುಗಿದ ಮೇಲೆ ಬಹಳ ಖುಷಿಯಾಗಿರುತ್ತಾನೆ. ಭೂಮಿಕಾ ಗೊಂಬೆಯನ್ನು ಉಡುಗೊರೆಯಾಗಿ ನೀಡಿದ್ದಕ್ಕೆ ಖುಷಿಯಾಗಿರುತ್ತಾನೆ. ಇದೆಲ್ಲಾ ಸಂತಸವನ್ನು ಭೂಮಿಕಾ ಬಳಿ ಹಂಚಿಕೊಂಡು ಥ್ಯಾಂಕ್ಸ್ ಕೇಳುವಾಸೆ. ಆದರೆ, ಅವಳಂತೆಯೇ ಡೈರಿ ಬರೆಯಲು ಗೌತಮ್ ಮುಂದಾಗುತ್ತಾನೆ. ಎಲ್ಲ ಬರೆದು ಕೊನೆಯಲ್ಲಿ ಭೂಮಿಕಾಳಿಗೆ ಥ್ಯಾಂಕ್ಸ್ ಕೇಳುತ್ತಾನೆ.

ಸಾಲ ತೀರಿಸಲು ಕೆಲಸಕ್ಕೆ ಹೊರಟ ಭೂಮಿಕಾ
ಇನ್ನು ಭೂಮಿಕಾ ಇದೇ ಸಮಯದಲ್ಲಿ ಇವತ್ತು ಪಾರ್ಟಿ ಖುಷಿಯಾಗಿ ನಡೆಯಬೇಕಿತ್ತು ಆದರೆ ಏನೆಲ್ಲಾ ನಡೆದು ಹೋಯ್ತು ಎಂದು ನೆನಪಿಸಿಕೊಂಡು ಬೇಸರ ಮಾಡಿಕೊಳ್ಳುತ್ತಾಳೆ. ರೋಲ್ಡ್ ಗೋಲ್ಡ್ ಚೈನ್, ತನ್ನ ನೆಕ್ಲೆಸ್ ಬಗ್ಗೆ ನೆನೆದು ನೊಂದುಕೊಳ್ಳುತ್ತಾಳೆ. ಗೌತಮ್ ಡೈರಿ ಬರೆಯುತ್ತಿದ್ದನ್ನು ನೋಡಿ ಕೇಳುತ್ತಾಳೆ. ಏನೆಂದು ಹೇಳಿ ಎಂದಾಗ ಇಲ್ಲ ಹೇಳೊಲ್ಲ ಎಂದು ಗೌತಮ್ ಹೇಳುತ್ತಾನೆ. ಇನ್ನು ಭೂಮಿಕಾ ತನಗೆ ಮನೆಯಲ್ಲಿ ತುಂಬಾ ಬೋರ್ ಆಗುತ್ತದೆ. ಸಮಯ ಕಳೆಯುವುದಕ್ಕೆ ಕಷ್ಟವಾಗುತ್ತದೆ. ನೀವು ಒಪ್ಪಿದರೆ ನಾನು ಮತ್ತೆ ಕೋಚಿಂಗ್ ಕ್ಲಾಸ್ ಗೆ ತೆರಳುತ್ತೇನೆ ಎಂದು ಹೇಳುತ್ತಾಳೆ. ಗೌತಮ್ ನೀವು ಮನೆಯಲ್ಲೇ ಇರಿ. ಕೆಲಸಕ್ಕೆ ಹೋಗುವ ಅಗತ್ಯವಿಲ್ಲ ಎಂದಿದ್ದಕ್ಕೆ ಭೂಮಿಕಾ ಸಮರ್ಥನೆಯನ್ನು ಕೊಡುತ್ತಾಳೆ.
ಭೂಮಿಕಾ ವಿರುದ್ಧ ಶಕುಂತಲಾ ಕೆಂಗಣ್ಣು
ಭೂಮಿಕಾ ಮಾತನ್ನು ಕೇಳಿದ ಗೌತಮ್ ಗೆ ಅವಳು ಹೇಳಿದ ಮಾತು ಸರಿ ಎನಿಸಿದ್ದಕ್ಕೆ ಒಪ್ಪಿಗೆ ಕೊಡುತ್ತಾನೆ. ಭೂಮಿಕಾ ಕೋಚಿಂಗ್ ಕ್ಲಾಸ್ ಗೆ ಹೋಗುವುದನ್ನು ನೋಡಿದ ಅರ್ಚನಾ, ಶಕುಂತಲಾ ಬಳಿ ಚಾಡಿ ಹೇಳುತ್ತಾಳೆ. ಶಕುಂತಲಾ ತನ್ನ ಮಾತನ್ನು ಭೂಮಿಕಾ ಕೇಳುವುದಿಲ್ಲ ಎಂದು ಕೋಪ ಮಾಡಿಕೊಳ್ಳುತ್ತಾಳೆ. ಇದೇ ವಿಚಾರವಾಗಿ ಗೌತಮ್ ಬಳಿ ಚರ್ಚೆ ಮಾಡುತ್ತಾಳೆ. ಗೌತಮ್ ಅವಳಿಗೆ ಟೈಂ ಪಾಸ್ ಆಗಲಿ ಎಂದು ಹೋಗುತ್ತಿದ್ದಾಳೆ ಬಿಡು ಎಂದು ಹೇಳುತ್ತಾನೆ. ಶಕುಂತಲಾ ಸುಮ್ಮನಿರದೇ ಕೋಚಿಂಗ್ ಸೆಂಟರ್ ನ ಮ್ಯಾನೇಜರ್ ಗೆ ಫೋನ್ ಮಾಡಿ ತನ್ನ ಸೊಸೆಗೆ ದೊಡ್ಡ ಪೋಸ್ಟ್ ಕೊಡಿ ಎಂದು ಹೇಳುತ್ತಾಳೆ.

ಭೂಮಿಕಾ ಬಗ್ಗೆ ಗೌತಮ್ ಮನದಲ್ಲಿ ಆತಂಕ
ಭೂಮಿಕಾಳಿಗೆ ಈಗ ದೊಡ್ಡ ಪೋಸ್ಟ್ ಕೊಟ್ಟರೆ ಮುಜುಗರವಾಗಬಹುದು. ಇನ್ನು ಇತ್ತ ಗೌತಮ್ ಭೂಮಿಕಾ ಕೆಲಸಕ್ಕೆ ಹೋಗುತ್ತಿರುವುದನ್ನು ನೋಡಿ ಅವಳಿಗೆ ಏನೋ ಸಮಸ್ಯೆ ಇದೆ. ಅದಕ್ಕೇ ಈ ನಿರ್ಧಾರ ಮಾಡಿದ್ದಾಳೆ. ನನ್ನ ಬಳಿ ಹೇಳಿಕೊಳ್ಳುತ್ತಿಲ್ಲ ಎಂದು ಆನಂದ್ ಬಳಿ ಹೇಳಿಕೊಳ್ಳುತ್ತಾನೆ. ಆನಂದ್ ಹಾಗೇನು ಇಲ್ಲ ಎಂದು ಹೇಳಿ ಮ್ಯಾನೇಜ್ ಮಾಡಲು ಪ್ರಯತ್ನಿಸುತ್ತಾನೆ. ಆದರೆ, ಗೌತಮ್ ಗೆ ಸಮಾಧಾನ ಆಗುವುದಿಲ್ಲ. ಈ ವಿಚಾರ ಮುಂದೆ ಎಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ.


Click it and Unblock the Notifications











