Amruthadhaare; ತಾಯಿ ಬಗ್ಗೆ ಮನಬಿಚ್ಚಿ ಮಾತನಾಡಿದ ಗೌತಮ್ : ಭಾಗ್ಯಳನ್ನು ಕೊಂದಿದ್ದು ಶಕುಂತಲಾ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಜೈದೇವ್ ನನ್ನು ದೂರ ಮಾಡುತ್ತಿದ್ದು, ಸತ್ಯವನ್ನು ಭೂಮಿಕಾ ಬಳಿ ಹೇಳಿಕೊಳ್ಳಬೇಕಾ ಬೇಡವಾ ಎಂಬ ಅನುಮಾನದಲ್ಲೇ ಇದ್ದಾಳೆ. ಜೊತೆಯಲ್ಲೇ ಇದ್ದುಕೊಂಡು ತನ್ನ ಸ್ವಂತ ಗಂಡನೇ ಮೋಸ ಮಾಡುತ್ತಿದ್ದಾನೆ. ಆದರೂ ಕೂಡ ಅದು ತನಗೆ ಗೊತ್ತಾಗದೇ ಇರುವಷ್ಟು ದಡ್ಡಳಾದೆನಾ ಎಂದು ಬೇಸರ ಮಾಡಿಕೊಂಡಿದ್ದಾಳೆ. ಜೊತೆಗೆ ಭೂಮಿಕಾ ಅಕ್ಕ ಪ್ರತಿ ಬಾರಿ ಎಚ್ಚರಿಕೆ ಕೊಟ್ಟಾಗಲೂ ತಾನು ನಂಬದೇ ಹೋದೆ. ಈಗ ಮಗುವನ್ನು ಕಳೆದುಕೊಳ್ಳಬೇಕಾಯ್ತಲ್ಲ ಎಂದು ಮಲ್ಲಿ ನೊಂದುಕೊಂಡಿದ್ದಾಳೆ.

ತಲೆಹರಟೆ ಮಾಡಿದ ಅಪೇಕ್ಷಾ

ಪಾರ್ಥನಿಗೆ ಭೂಮಿಕಾ ಎಂದರೆ ಇಷ್ಟ. ಆದರೆ, ಅತಿಗೆ ಮೇಲಿರುವ ಅಭಿಪ್ರಾಯವನ್ನು ಬದಲಾಯಿಸಲು ಅಪೇಕ್ಷಾ ಯತ್ನಿಸದಾಗ ಸೋಲುತ್ತಾಳೆ. ಇದು ಸರಿಯಲ್ಲ ತನ್ನದೇ ದಾರಿಯಲ್ಲಿ ಪಾರ್ಥನನ್ನು ಸೆಳೆದುಕೊಳ್ಳಬೇಕು ಎಂದು ತೀರ್ಮಾನಿಸಿದ್ದಾಳೆ. ಹೀಗಾಗಿ ನಾಟಕೀಯವಾಗಿ ಪಾರ್ಥನ ಬಳಿ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದಾಳೆ. ಪಾರ್ಥನಿಗೆ ಅಪೇಕ್ಷಾ ಜೊತೆಗೆ ಜಗಳ ಮಾಡಿಕೊಳ್ಳುವುದು ಇಷ್ಟವಿಲ್ಲ. ಹಾಗಾಗಿ ಪಾರ್ಥ ಅಪೇಕ್ಷಾ ಏನೇ ಮಾಡಿದರೂ ಸುಮ್ಮನಿರುತ್ತಾನೆ. ಈಗ ಅಪೇಕ್ಷಾ ಪಾರ್ಥನ ಮಾಡುತ್ತಿದ್ದ ಕೆಲಸದ ಫೈಲ್ ಅನ್ನು ಡಿಲೀಟ್ ಮಾಡಿ ಆಟವಾಡಿಸಿದ್ದಾಳೆ. ಪಾರ್ಥನಿಗೆ ಕೋಪ ಬಂದರೂ, ಬೇಸರವಾದರೂ ತೋರಿಸಿಕೊಳ್ಳದೇ ಸುಮ್ಮನಿದ್ದಾನೆ.

amruthadhaare-serial-01-october-episode-written-update

ಅಮ್ಮನ ಬಗ್ಗೆ ಹೇಳಿದ ಗೌತಮ್

ಗೌತಮ್ ರಾತ್ರಿ ಮಲಗಿದಾಗ ಅಕಸ್ಮಾತ್ ಆಗಿ ಭೂಮಿಕಾ ಲೈಟ್ ಆಫ್ ಮಾಡುತ್ತಾಳೆ. ಇದರಿಂದ ಗೌತಮ್ ಗಾಬರಿಯಾಗುತ್ತಾನೆ. ತಕ್ಷಣ ಭೂಮಿಕಾ ಸಮಾಧಾನ ಮಾಡಿ, ಕತ್ತಲು ಎಂದರೆ ನಿಮಗೆ ಯಾಕಿಷ್ಟು ಭಯವಾಗುತ್ತದೆ ಎಂದು ಕೇಳುತ್ತಾಳೆ. ಆಗ ಗೌತಮ್ ತನ್ನ ತಾಯಿ ಬಗ್ಗೆ ಮೊದಲ ಬಾರಿಗೆ ಭೂಮಿಕಾ ಬಳಿ ಹೇಳಿಕೊಳ್ಳುತ್ತಾನೆ. ತನ್ನ ತಾಯಿ ಎಷ್ಟು ಮೃದು. ಆಕೆ ತನ್ನನ್ನು ಹೇಗೆ ನೋಡಿಕೊಂಡರು ಎಂಬುದನ್ನೆಲ್ಲಾ ಹೇಳುತ್ತಾನೆ. ಪ್ರೀತಿಯಿಂದ ತನ್ನನ್ನು ಅವರ ತಾಯಿ ಖುಷಿ ಖುಷಿಯಾಗಿ ನೋಡಿಕೊಳ್ಳುತ್ತಿದ್ದದ್ದು, ಒಂದು ಕ್ಷಣವೂ ತನಗೆ ಬೇಸರವಾಗದಂತೆ ಪ್ರೀತಿಯಿಂದ ಆರೈಕೆ ಮಾಡಿದ್ದನ್ನು ಸ್ಮರಿಸಿಕೊಳ್ಳುತ್ತಾನೆ.

ತಾಯಿಗಾಗಿ ಇಂದಿಗೂ ಕಾಯುತ್ತಿರುವ ಗೌತಮ್

ಗೌತಮ್ ತನ್ನ ತಾಯಿ ಬಗ್ಗೆ ಹೇಳುವುದನ್ನು ಕೇಳುತ್ತಾ ಭೂಮಿಕಾ ಕೂಡ ಬೇಸರ ಮಾಡಿಕೊಳ್ಳುತ್ತಾಳೆ. ಗೌತಮ್ ತನ್ನ ತಂಗಿ ಬಗ್ಗೆಯೂ ಹೇಳುತ್ತಾನೆ. ಇಬ್ಬರೂ ಕೆಲವೇ ಕಾಲ ಜೊತೆಗಿದ್ದರೂ, ಖುಷಿಯಾಗಿದ್ದ ಕ್ಷಣಗಳನ್ನೆಲ್ಲಾ ನೆನೆಪು ಮಾಡಿಕೊಳ್ಳುತ್ತಾನೆ. ಆದರೆ, ಇದ್ದಕ್ಕಿದ್ದ ಹಾಗೆ ಅವರ ತಾಯಿ ಮತ್ತು ತಂದೆ ಇಬ್ಬರೂ ಜಗಳ ಮಾಡಿದ್ದು, ತನ್ನ ತಾಯಿ ತಂಗಿ ಜೊತೆಗೆ ಮನೆ ಬಿಟ್ಟು ಹೋಗಿದ್ದು. ಮನ ಎ ಬಿಟ್ಟು ಹೋಗುವಾಗ ತನ್ನನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ್ದನ್ನು ಹೇಳುತ್ತಾನೆ. ಈಗಲೂ ತನ್ನ ತಾಯಿಯನ್ನು ನೋಡಬೇಕು ಎಂದು ಗೌತಮ್ ಹಂಬಲಿಸುತ್ತಿದ್ದಾನೆ. ಅದಕ್ಕಾಗಿ ಹುಡುಕಾಟವನ್ನೂ ಮುಂದುವರೆಸಿದ್ದಾನೆ. ಭೂಮಿಕಾ ಇವತ್ತಲ್ಲ ನಾಳೆ ನಿಮ್ಮ ತಾಯಿ ನಿಮಗೆ ಸಿಕ್ಕೇ ಸಿಗುತ್ತಾರೆ ಎಂದು ಸಮಾಧಾನ ಮಾಡುತ್ತಾಳೆ.

amruthadhaare-serial-01-october-episode-written-update

ಭಾಗ್ಯಳನ್ನು ಕೊಂದಿದ್ದಾಳಾ ಶಕುಂತಲಾ..?

ಇತ್ತ ಇದೇ ಸಮಯದಲ್ಲಿ ಲಕ್ಷ್ಮೀಕಾಂತ ಶಕುಂತಲಾ ರೂಮಿಗೆ ಬಂದು ಕನಸಿನಲ್ಲಿ ಭಾಗ್ಯ ಬಂದಿದ್ದಳು. ನಮ್ಮ ಮನೆಯ ಕಡೆಗೆ ಬರುತ್ತಿದ್ದಂತೆ ಕನಸು ಬಿತ್ತು. ನನಗೀಗ ಭಯವಾಗುತ್ತಿದೆ ಎಂದು ಹೇಳುತ್ತಾನೆ. ಆದರೆ, ಶಕುಂತಲಾ ಕಾರು ಅಪಘಾತದಲ್ಲಿ ಭಾಗ್ಯಳನ್ನು ನಾವೇ ಸಾಯಿಸಿದ್ದೇವೆ. ಅವಳು ಸತ್ತು ಮಣ್ಣಲ್ಲಿ ಮಣ್ಣಾಗಿದ್ದಾಳೆ. ಹುಡುಕಿದರೆ ಮೂಳೆಯೂ ಸಿಗುವುದಿಲ್ಲ. ಹಾಗಿರುವಾಗ ಈಗ ಯಾಕೆ ನಿನಗೆ ಭಯವಾಗುತ್ತೆ ಎಂದು ಹೇಳುತ್ತಾಳೆ. ಆದರೆ, ಶಕುಂತಲಾ ಗೌತಮ್ ತಾಯಿಯನ್ನು ಕೊಂದಿದ್ಯಾಕೆ..? ಗೌತಮ್ ತಾಯಿ ಮತ್ತು ತಂದೆ ನಡುವೆ ಜಗಳ ಯಾಕೆ ಆಯ್ತು..? ಹಾಗೂ ಈಗ ಗೌತಮ್ ತಂಗಿ ಬದುಕಿರಬಹುದಾ ಎಂಬ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X