Amruthadhaare ; ಹೊಸ ನಾಟಕಕ್ಕೆ ನಾಂದಿ ಹಾಡಿದ ಶಕುಂತಲಾ : ಗೌತಮ್ ಎದುರು ಸುಳ್ಳು ಹೇಳಿದ ಗುರುಗಳು..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಜೊತೆಗೆ ಗೌತಮ್ ದಾಂಪತ್ಯ ಜೀವನವನ್ನು ಆರಂಭಿಸಲು ಸಜ್ಜಾಗುತ್ತಿದ್ದಾನೆ. ಆನಂದ್ ಗೆಳೆಯನ ಬದುಕಿನ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾನೆ. ಭೂಮಿಕಾ ಬಳಿ ಮನದ ಮಾತುಗಳನ್ನು ಹೇಳಿಕೊಂಡು, ತನ್ನ ಪ್ರೀತಿಯ ರಹಸ್ಯವನ್ನು ತೆರೆದಿಡಲು ಮುಂದಾಗಿದ್ದಾನೆ. ಇದೇ ಸಂದರ್ಭದಲ್ಲಿ ಗೌತಮ್ ಗೆ ಶಕುಂತಲಾ ಶಾಕ್ ಕೊಟ್ಟಿದ್ದಾಳೆ. ಇದ್ದಕ್ಕಿದ್ದ ಹಾಗೆಯೇ ಶಕುಂತಲಾ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇದರಿಂದ ಗಾಬರಿಯಾಗಿರುವ ಗೌತಮ್, ತಾಯಿಯ ಆರೈಕೆಯನ್ನು ಮಾಡುತ್ತಿದ್ದಾನೆ.

ಜೈದೇವನಿಗೆ ಮತ್ತೆ ವಾರ್ನಿಂಗ್ ಕೊಟ್ಟ ಭೂಮಿಕಾ..!

ಇತ್ತ ಜೈದೇವ ಹೊಸ ನಾಟಕವನ್ನು ಆರಂಭಿಸಿದ್ದಾನೆ. ಮಲ್ಲಿ ಮೇಲೆ ಅತಿಯಾದ ಪ್ರೀತಿಯನ್ನು ತೋರಿಸುತ್ತಿದ್ದಾನೆ. ಮಲ್ಲಿಯ ಮೇಲೆ ಕೆಂಡದಷ್ಟು ಕೋಪ ಇಟ್ಟುಕೊಂಡಿದ್ದ ಜೈದೇವ ಈಗ ಇದ್ದಕ್ಕಿದ್ದ ಹಾಗೆಯೇ ಪ್ರೀತಿ ತೋರಿಸಲು ಶುರು ಮಾಡಿದ್ದಾನೆ. ಇದರಿಂದ ಮಲ್ಲಿ ಕೂಡ ಓದುವುದನ್ನು ಬಿಟ್ಟು ಜೈದೇವನ ಪ್ರೀತಿಯ ಗುಂಗಿನಲ್ಲಿ ತೇಲಾಡುತ್ತಿದ್ದಾಳೆ. ಇದನ್ನು ಗಮನಿಸಿದ ಭೂಮಿಕಾ ಜೈದೇವನ ನಡವಳಿಕೆಯನ್ನು ಅನುಮಾನಿಸಿದ್ದಾಳೆ. ಹಾಗಾಗಿ ಜೈದೇವನ ಜೊತೆಗೆ ರಹಸ್ಯವಾಗಿ ಮಾತನಾಡಿದ್ದಾಳೆ. ನಿನ್ನ ಬದಲಾವಣೆಯಲ್ಲಿ ನನಗೆ ಅನುಮಾನವಿದೆ ಎಂದು ಹೇಳಿದ್ದು, ಸದ್ಯ ಜೈದೇವ, ನನ್ನ ತಪ್ಪುಗಳ ಅರಿವಾಗಿ ಬದಲಾಗಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ಆದರೆ, ಭೂಮಿಕಾಳಿಗೆ ಜೈದೇವನ ಮಾತಿನಲ್ಲಿ ನಂಬಿಕೆ ಬಂದಿಲ್ಲ. ಹಾಗಾಗಿ ವಾರ್ನಿಂಗ್ ಕೊಟ್ಟಿದ್ದಾಳೆ. ನಿನ್ನ ಈ ನಡವಳಿಕೆಯಿಂದ ಮನೆಯವರಿಗೆ ಸಮಸ್ಯೆ ಆದರೆ, ನಾನು ಸುಮ್ಮನಿರುವುದಿಲ್ಲ. ಅದರಲ್ಲೂ ಮಲ್ಲಿಗೆ ತೊಂದರೆಯಾದರೆ, ನಿನಗೆ ಯಾವ ಅವಕಾಶಗಳೂ ಇಲ್ಲದಂತೆ ಮಾಡುತ್ತೇನೆ ಎಂದು ವಾರ್ನಿಂಗ್ ಕೊಟ್ಟಿದ್ದಾಳೆ.

Amruthadhaare Serial 02 April episode written update

ಮಹಿಮಾಳಿಗೆ ತಲೆ ನೋವು ತಂದ ದೀಪಾಂಶು

ಇನ್ನು ಮಹಿಮಾಳಿಗೆ ದೀಪಾಂಶು ಕಾಟ ಹೆಚ್ಚಾಗಿದೆ. ದೀಪಾಂಶು ಮಹಿಮಾಳನ್ನು ಮೊದಲಿನಿಂದಲೂ ಪ್ರೀತಿಸುತ್ತಿದ್ದ. ಆದರೆ, ಮಹಿಮಾ ಜೀವನ್ ಬೇಕು ಎಂದು ಹೇಳಿ ತನ್ನಿಷ್ಟದಂತೆ ಮದುವೆಯಾಗಿದ್ದಳು. ದೀಪಾಂಶು ಮಹಿಮಾ ಮದುವೆಯಾದ ಮೇಲೂ ಅವಳ ಜೊತೆಗೇ ಇದ್ದ. ಇದೀಗ ತನ್ನನ್ನು ಪ್ರೀತಿಸದಿದ್ದರೆ, ತಾನು ಹೇಳಿದಂತೆ ಕೇಳದಿದ್ದರೆ, ಮನೆಯಲ್ಲಿ ಅಬಾರ್ಷನ್ ಮಾಡಿಕೊಂಡ ಸತ್ಯವನ್ನು ಹೇಳುತ್ತೇನೆ ಎಂದು ಬೆದರಿಸುತ್ತಿದ್ದಾನೆ. ಮಹಿಮಾಳಿಗೆ ದೀಪಾಂಶು ಬ್ಲ್ಯಾಕ್ ಮೇಲ್ ನಿಂದ ಆತಂಕ ಎದುರಾಗಿದೆ. ಮನೆಯ ಮುಂದೆಯೇ ರಾತ್ರೀ ಇಡೀ ಕಾದಿರುವ ದೀಪಾಂಶುನ ಮಹಿಮಾ ದೂರವಿಡಲು ಯತ್ನಿಸುತ್ತಿದ್ದಾಳೆ. ಆದರೆ, ಅವನು ಮಹಿಮಾಳ ಮಾತು ಕೇಳಲು ತಯಾರಿಲ್ಲ.

Amruthadhaare Serial 02 April episode written update

ಶಕುಂತಲಾ ಆರೋಗ್ಯದಲ್ಲಿ ಏರುಪೇರು

ಗೌತಮ್ ಹಾಗೂ ಭೂಮಿಕಾ ದೂರವಿರಬೇಕು ಎಂಬ ಕಾರಣಕ್ಕೆ ಶಕುಂತಲಾ ಹುಷಾರಿಲ್ಲ ಎಂದು ನಾಟಕ ಮಾಡಿದ್ದಲ್ಲದೇ, ಈಗ ಮನೆಯವರ ಜಾತಕವನ್ನು ಗುರುಗಳ ಬಳಿ ತೋರಿಸೋಣ ಎಂದು ಗೌತಮ್ ಬಳಿ ಕೇಳಿಕೊಂಡಿದ್ದಾಳೆ. ಗುರುಗಳಿಗೆ ಹಣ ಕೊಟ್ಟಿರುವ ಶಕುಂತಲಾ ತನಗೆ ಬೇಕಾದಂತೆ ಜಾತಕ ಹೇಳಿಸಲು ಮುಂದಾಗಿದ್ದಾಳೆ. ಶಕುಂತಲಾ ಮನೆಗೆ ಈಗಾಗಲೇ ಗುರುಗಳು ಆಗಮಿಸಿದ್ದು, ಮನೆಯವರ ಜಾತಕವನ್ನು ನೋಡುತ್ತಿದ್ದಾರೆ.

Amruthadhaare Serial 02 April episode written update

ಜಾತಕದ ಬತ್ತಿ ಇಟ್ಟ ಶಕುಂತಲಾ

ಗುರುಗಳು ಮನೆಯವರ ಜಾತಕವನ್ನು ನೋಡಿ, ಎಲ್ಲರ ಜಾತಕವೂ ಚೆನ್ನಾಗಿದೆ ಎಂದಿದ್ದಾರೆ. ಭೂಮಿಕಾ ಎದುರಿಗೆ ಸುಳ್ಳು ಹೇಳಿದ ಗುರುಗಳು, ನೆಪ ಮಾಡಿ ಎಲ್ಲರನ್ನೂ ಶಕುಂತಲಾ ಹೊರಗೆ ಕಳಿಸಿದ್ದಾಳೆ. ಆ ನಂತರ ಗುರುಗಳು ಗೌತಮ್ ಬಳಿ ಸುಳ್ಳು ಹೇಳಿದ್ದಾನೆ. ನೀನು ಮತ್ತು ಭೂಮಿಕಾ ಒಟ್ಟಿಗೆ ಇರಕೂಡದು. ಇದರಿಂದ ಮನೆಗೆ, ಮುಂದೆ ಹುಟ್ಟುವ ಮಗುವಿಗೆ ಹಾಗೂ ಭೂಮಿಕಾಳ ಜೀವಕ್ಕೆ ಬಹಳ ದೊಡ್ಡ ಆಪತ್ತಿದೆ. ನೀವಿಬ್ಬರು ಆದಷ್ಟು ದೂರ ಇರಬೇಕು ಎಂದಿದ್ದಾನೆ. ಈ ಮಾತನ್ನು ಕೇಳಿದ ಗೌತಮ್ ಗೆ ಆಘಾತವಾಗಿದೆ. ಇನ್ಮುಂದೆ ಭೂಮಿಕಾಳಿಂದ ಗೌತಮ್ ದೂರ ಇರುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
bhoomika and gautham going to separate. Mahima is facing big problem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X