Amruthadhaare; ಸೊಸೆ ಮಾಡಿದ ರೂಲ್ಸ್ ಬ್ರೇಕ್ ಮಾಡಲು ಪ್ಲಾನ್ ಮಾಡುತ್ತಾಳಾ ಅತ್ತೆ ಶಕುಂತಲಾ ದೇವಿ..?
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಆಡಳಿತವನ್ನು ಮಲ್ಲಿ ಇಷ್ಟಪಟ್ಟಿದ್ದಾಳೆ. ಅಲ್ಲದೇ, ಗೌತಮ್ ಮಾತನಾಡಿ ಮನೆಯವರನ್ನು ಕನ್ವಿನ್ಸ್ ಮಾಡಿದ ರೀತಿಯನ್ನು ಮೆಚ್ಚಿಕೊಂಡಿದ್ದಾಳೆ.ಹೀಗಾಗಿ ಮಲ್ಲಿ ಮನೆಯಲ್ಲಿ ಸಿಹಿ ತಿಂಡಿಯನ್ನು ತಯಾರಿಸಿದ್ದಾಳೆ. ಗೌತಮ್ ಮತ್ತು ಭೂಮಿಕಾಳಿಗೆ ಕೊಟ್ಟು ಮುಚ್ಚು ಮರೆಯಿಲ್ಲದೇ ತನ್ನ ಖುಷಿಯನ್ನು ವ್ಯಕ್ತಪಡಿಸಿದ್ದಾಳೆ. ಮೊದಲೆಲ್ಲಾ ಏನಾದರೂ ಕೇಳಿದರೆ ಮಾತನಾಡಲು ಹೆದರುತ್ತಿದ್ದ ಮಲ್ಲಿ, ಇವತ್ತು ಗೌತಮ್ ಎದುರು ಉಸಿರು ಬಿಡದಂತೆ ಭಾಷಣ ಮಾಡಿದ್ದಾಳೆ. ಇದನ್ನು ಕೇಳಿ ಗೌತಮ್ ಮಲ್ಲಿಯ ಬದಲಾವಣೆಗೆ ಖುಷಿ ಪಡುತ್ತಾನೆ.
ಹೊಸ ಪ್ಲಾನ್ ಮಾಡುತ್ತಿರುವ ಶಕುಂತಲಾ
ಭೂಮಿಕಾ ಮಾಡಿರುವ ರೂಲ್ಸ್ ಗೆ ಗೌತಮ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಗಿದೆ. ಇದರಿಂದ ಶಕುಂತಲಾ ಮತ್ತು ಅವಳ ಮಕ್ಕಳಿಗೆ ಹೊಸ ಸಂಕಷ್ಟ ಎದುರಾಗಿದೆ. ಇನ್ನು ಇದಕ್ಕೆ ಬೇರೆ ದಾರಿ ಕಾಣದೇ, ಅಶ್ವಿನಿ, ಜೈದೇವ್, ಲಕ್ಷ್ಮೀಕಾಂತ್ ಹಾಗೂ ಶಕುಂತಲಾ ತಲೆ ಕೆಡಿಸಿಕೊಂಡು ಕೂತಿದ್ದಾರೆ. ಹೀಗೆ ಬಿಟ್ಟರೆ ಭೂಮಿಕಾ ನಮ್ಮನ್ನು ತಮ್ಮ ಆಳನ್ನಾಗಿ ಮಾಡಿಕೊಂಡು ಬಿಡುತ್ತಾಳೆ ಎಂದು ಶಕುಂತಲಾಳ ಚಿಂತೆಯಾಗಿದೆ. ಭೂಮಿಕಾ ವಿರುದ್ಧ ಏನಾದರೂ ಪ್ಲಾನ್ ಮಾಡಲೇ ಬೇಕು. ಅವಳನ್ನು ಹೀಗೆ ಬಿಟ್ಟರೇ ನಮ್ಮ ಕಥೆ ಮುಗಿಯುತ್ತೆ. ನನ್ನ ಮಕ್ಕಳು ಅವಳು ಕೊಡುವುದನ್ನು ಭಿಕ್ಷೆ ರೀತಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೊಸ ದಾರಿಯನ್ನು ಹುಡುಕುತ್ತಿದ್ದಾಳೆ.

ಸಂಬಳ ತಂದು ಕೊಟ್ಟ ಭೂಮಿಕಾ
ಭೂಮಿಕಾಳಿಗೆ ತನ್ನ ಕೋಚಿಂಗ್ ಇನ್ ಸ್ಟಿಟ್ಯೂಟ್ ನಿಂದ ಸಂಬಳ ಕೊಟ್ಟಿದ್ದಾರೆ. ಮದುವೆಯಾದ ಬಳಿಕ ಮೊದಲ ಸಂಬಳ ಪಡೆದ ಭೂಮಿಕಾ ಅದನ್ನು ಖುಷಿಯಿಂದ ತಂದು ಪತಿಗೆ ನಡಿದ್ದಾಳೆ. ಖಾಲಿ 30 ಸಾವಿರ ಸಂಬಳವನ್ನು ತಂದು ದೊಡ್ಡ ಮೊತ್ತ ಎಂಬಂತೆ ಭೂಮಿಕಾ ಗೌತಮ್ ಎದುರು ಹೇಳಿಕೊಂಡಿದ್ದಾಳೆ. ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುವ ಗೌತಮ್ ಗೆ ಭೂಮಿಕಾಳಲ್ಲಿರುವ ಸಂತಸವನ್ನು ಅರ್ಥ ಮಾಡಿಕೊಳ್ಳಲು ಆಗಿಲ್ಲ. ಮೂರು ಸಾವಿರ ರೂಪಾಯಿಗೆ ಪಾರ್ಟಿ ಕೊಡಿಸುವುದಾಗಿ ಹೇಳಿದ್ದು, ಗೌತಮ್ ಗೆ ಆಶ್ಚರ್ಯವಾಗಿದೆ. ಅಷ್ಟು ಹಣಕ್ಕೆ ಎಂತಹ ಪಾರ್ಟಿ ಕೊಡಿಸಬಹುದು ಎಂದು ಕುತೂಹಲಗೊಂಡಿದ್ದಾನೆ.
ಕೋಪ ಬಂದಂತೆ ನಟಿಸಿದ ಅರುಣ್
ಇನ್ನು ಅರುಣ್ ಗೆ ಭೂಮಿಕಾ ಮತ್ತು ಗೌತಮ್ ಸೇರಿ, ಐದು ಕೋಟಿ ರೂಪಾಯಿಯ ಚೆಕ್ ಅನ್ನು ಕೊಟ್ಟಿದ್ದಾರೆ. ನೀವು ಕಷ್ಟದಲ್ಲಿರುವ ವಿಚಾರವನ್ನು ನನಗೆ ಭೂಮಿಕಾ ಹೇಳಿದಳು. ಮುಜುಗರವಿಲ್ಲದೇ, ಈ ಹಣವನ್ನು ತೆಗೆದುಕೊಂಡು ಸಮಸ್ಯೆ ಅನ್ನು ಬಗೆ ಹರಿಸಿಕೊಳ್ಳಿ. ಇದರಿಂದ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗುತ್ತದೆ ಎಂದರೆ, ಸಾಲ ಎಂದು ಪಡೆದುಕೊಂಡು, ಕಂಪನಿಯಲ್ಲಿ ಲಾಭ ಬಂದ ಬಳಿಕ ಸಾಲು ಮರು ಪಾವತಿಸಿ ಎನ್ನುತ್ತಾನೆ. ಈ ಮಾತು ಅರುಣ್ ಗೆ ಅವಮಾನವಾದಂತೆ ಆಗುತ್ತದೆ. ಅಶ್ವಿನಿ ಬಳಿ ಜಗಳ ಮಾಡುತ್ತಾನೆ. ಈ ಮನೆಯಲ್ಲಿ ತನಗೆ ಮರಿಯಾದೆ ಇಲ್ಲ ಎಂಬಂತೆ ನಡೆದುಕೊಳ್ಳುತ್ತಾನೆ. ಆದರೆ, ಅಶ್ವಿನಿ ಅರುಣ್ ಗೆ ಸಮಾಧಾನ ಮಾಡುತ್ತಾಳೆ. ಇದೆಲ್ಲವೂ ಅರುಣ್ ಬೇಕಂತಲೇ ಅಶ್ವಿನಿ ಬಳಿ ಆಡುತ್ತಿರುವ ನಾಟಕವಾಗಿದೆ.

ಪಾರ್ಥನ ಪ್ರೀತಿ ಬಗ್ಗೆ ತಿಳಿದ ಅಶ್ವಿನಿ
ಇನ್ನು ಪಾರ್ಥ ಮತ್ತು ಅಪೇಕ್ಷಾ ತಮ್ಮ ಮದುವೆಯ ಬಗ್ಗೆ ಮಾತನಾಡುತ್ತಿರುತ್ತಾರೆ. ಪಾರ್ಥ ಆದಷ್ಟು ಬೇಗ ಕೆಲಸ ಹುಡುಕ ಬೇಕು. ಕೆಲಸ ಸಿಕ್ಕ ಬಳಿಕ ಸದಾಶಿವ ಮಾವನ ಬಳಿ ಬಂದು ತನ್ನ ಪ್ರೀತಿ ಬಗ್ಗೆ ಹೇಳಿಕೊಂಡು ಎಲ್ಲರನ್ನೂ ಒಪ್ಪಿಸಿ ಮದುವೆಯಾಗಬೇಕು ಎಂದುಕೊಂಡಿದ್ದಾನೆ. ಇವರಿಬ್ಬರೂ ಮಾತನಾಡುವುದು ಹಾಗೂ ಅಪ್ಪಿಕೊಳ್ಳುವುದನ್ನು ನೋಡಿದ ಅಶ್ವಿನಿ ಗಾಬರಿಯಾಗಿ ಅಪೇಕ್ಷಾ ಮತ್ತು ಪಾರ್ಥ ಪ್ರೀತಿ ಮಾಡುತ್ತಿದ್ದಾರೆ ಎಂದು ಶಕುಂತಲಾ ಬಳಿ ಬಂದು ಹೇಳುತ್ತಾಳೆ. ಶಕುಂತಲಾ ತನಗೆ ಈ ಎಲ್ಲಾ ವಿಚಾರ ಗೊತ್ತಿದ್ದು, ಕುರಿಯನ್ನು ಕೊಬ್ಬಲು ಬಿಟ್ಟಿದ್ದೇನೆ. ಸಮಯ ಬಂದಾಗ ಬಲಿ ಕೊಡುತ್ತೇನೆ ಎಂದು ಹೇಳುತ್ತಾಳೆ.


Click it and Unblock the Notifications











