Amruthadhaare ; ಪಾರ್ಥ ಮತ್ತು ಅಪರ್ಣಾ ಅನುಮಾನ, ಜೈದೇವ್ ಆಟಗಳಿಗೆಲ್ಲ ಬ್ರೇಕ್ ಬೀಳುತ್ತಾ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ತನ್ನ ತಾಯಿ ಬಗ್ಗೆ ಮೊದಲ ಬಾರಿಗೆ ಭೂಮಿಕಾ ಬಳಿ ಹೇಳಿಕೊಂಡಿದ್ದಾನೆ. ಈ ಮೂಲಕ ತನ್ನ ಮನಸ್ಸನ್ನು ಕೊಂಚ ಹಗುರ ಮಾಡಿಕೊಳ್ಳುತ್ತಾನೆ. ಭೂಮಿಕಾಳಿಗೆ ಗೌತಮ್ ಮಾತುಗಳನ್ನು ಕೇಳಿದ ಬಳಿಕ ತನ್ನ ತಾಯಿಯನ್ನು ನೋಡುವ ಆಸೆ ಇನ್ನಷ್ಟು ಹೆಚ್ಚಾಗಿದೆ. ಗೌತಮ್ ತಾಯಿ ಆದಷ್ಟು ಬೇಗ ಸಿಗಲಿ ಎಂದು ಬಯಸಿದ್ದಾಳೆ. ಗೌತಮ್ ಗೂ ಕೂಡ ಭೂಮಿಕಾ ಸಮಾಧಾನ ಹೇಳಿದ್ದಾಳೆ. ಭೂಮಿ ಗುಂಡಗಿದೆ. ನಿಮ್ಮ ತಾಯ ಆದಷ್ಟು ಬೇಗ ನಿಮಗೆ ಸಿಗುತ್ತಾರೆ. ಭರವಸೆಯನ್ನು ಕಳೆದುಕೊಳ್ಳಬೇಡಿ ಎಂದು ಸಮಾಧಾನದ ಮಾತುಗಳನ್ನಾಡಿದ್ದಾಳೆ.

ಜೈದೇವ್ ರೂಮಿನಲ್ಲಿ ಪಾರ್ಥ

ಪಾರ್ಥ ಯಾವುದೋ ಫೈಲ್ ನ ಮಾಹಿತಿ ಬೇಕು ಎಂದು ಜೈದೇವ್ ರೂಮಿಗೆ ಬಂದಿದ್ದಾನೆ. ಮಲ್ಲಿ ಬಳಿ ಒಪ್ಪಿಗೆ ಪಡೆದು, ಜೈದೇವ್ ವಾಡ್ರೋಬ್‌ ತೆರೆದಿದ್ದಾನೆ. ತನಗೆ ಬೇಕಾದ ಫೈಲ್ ನ ಹುಡುಕಿದಾಗ ಅವನಿಗೆ ಆಫೀಸಿಗೆ ಸಂಬಂಧ ಪಟ್ಟ ಬಹಳ ಮುಖ್ಯವಾದ ಫೈಲ್ ಒಂದು ಸಿಕ್ಕಿದೆ. ಇದನ್ನು ನೋಡಿದ ಪಾರ್ಥನಿಗೆ ಜೈದೇವ್ ಏನೋ ಡಬಲ್ ಗೇಮ್ ಆಡುತ್ತಿರಬೇಕು ಎಂದು ಅನಸುತ್ತೆ. ಹುಡುಕಿದರೆ ಇನ್ನೇನಾದರೂ ಸಿಗಬಹುದೇ ಎಂದು ಹುಡುಕಿದಾಗ ಅಕಸ್ಮಾತ್ ಆಗಿ ಮಫ್ಲರ್ ಸಿಗುತ್ತದೆ. ಅದನ್ನು ಪಾರ್ಥಗೆ ತನ್ನ ಹಾಗೂ ಅಪೇಕ್ಷಾ ಮದುವೆಯ ಸಂದರ್ಭದಲ್ಲಿ ನೋಡಿದ್ದರ ನೆನಪಾಗುತ್ತದೆ. ತನ್ನ ಮೇಲೆ ಅಟ್ಯಾಕ್ ಮಾಡಿದ ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಮುಖವನ್ನು ಮಫ್ಲರ್ ನಿಂದ ಮುಚ್ಚಿಕೊಂಡಿದ್ದ. ಆದರೆ, ಆ ವ್ಯಕ್ತಿ ಜೈದೇವ್ ಎಂಬ ಅನುಮಾನ ಪಾರ್ಥನನ್ನು ಕಾಡಿದೆ.

Amruthadhaare Serial 02 October episode written update

ಪಾರ್ಥನ ಮೇಲೆ ಅಟ್ಯಾಕ್ ಮಾಡಿದ್ದು ಜೈದೇವ್

ಮುಖ ಮುಚ್ಚಿಕೊಂಡು ಬಂದಿದ್ದ ವ್ಯಕ್ತಿ ಜೈದೇವ್ ಪರ್ಸನಾಲಿಟಿಯನ್ನೇ ಹೊಂದಿದ್ದ. ಅಲ್ಲದೇ ಅವನ ಕಣ್ಣುಗಳು ಕೂಡ ಜೈದೇವ್ ಕಣ್ಣುಗಳ ರೀತಿಯೇ ಇತ್ತು ಎಂಬುದನ್ನು ಪಾರ್ಥ ಸ್ಪಷ್ಟಪಡಿಸಿಕೊಂಡಿದ್ದಾನೆ. ಭೂಮಿಕಾ ಅತ್ತಿಗೆ ಬಳಿ ತನ್ನ ಮನದಲ್ಲಿರುವ ಈ ಗೊಂದಲವನ್ನು ಹೇಳಿಕೊಂಡಿದ್ದಾನೆ. ಭೂಮಿಕಾ ಅದೇ ರೀತಿಯ ಮಫ್ಲರ್ ಬೇರೆಯವರ ಬಳಿಯೂ ಇರಬಹುದು ಎಂದು ಹೇಳಿದರೂ, ಪಾರ್ಥನಿಗೆ ಸಮಾಧಾನವಿಲ್ಲ. ಹಾಗಾಗಿ ಭೂಮಿಕಾ ನೀನು ಯೋಚಿಸಬೇಡ, ಈ ಬಗ್ಗೆ ನಾವು ಗೌತಮ್ ಬಳಿ ಮಾತನಾಡೋಣ ಎಂದಿದ್ದಾನೆ.

ಆನಂದ್ ಅಪಘಾತಕ್ಕೆ ಜೈದೇವ್ ಕಾರಣ

ಇತ್ತ ಅಪರ್ಣಾಳಿಗೆ ಆನಂದ್ ಗೆ ಅಪಘಾತವಾಗಲು ಜೈದೇವ್ ಕಾರಣ ಇರಬಹುದು ಎಂದು ಈ ಹಿಂದೆಯೇ ಗೆಸ್ ಮಾಡಿದ್ದಳು. ಆದರೆ, ಆನಂದ್ ಅಪರ್ಣಾಳಿಗೆ ನೀನು ಸುಮ್ಮನೆ ಅನುಮಾನಿಸ ಬೇಡ ಎಂದು ಸಮಾಧಾನ ಮಾಡಿರುತ್ತಾನೆ. ಆದರೆ, ಸಿಸಿಟಿವಿ ಫುಟೇಜ್ ನೋಡಿದ ಅಪರ್ಣಾ ಪೊಲೀಸ್ ಆಗಿರುವ ತನ್ನ ಸ್ನೇಹಿತೆಯನ್ನು ಮನೆಗೆ ಕರೆಸಿದ್ದಾಳೆ. ಸಿಸಿಟಿವಿ ಸಾಕ್ಷ್ಯ ನೀಡಿ ಇದರ ಹಿಂದೆ ಯಾರಿದ್ದಾರೆ ಎಂದು ಹೇಳಿ ಅಂತ ಕೇಳಿದ್ದಾಳೆ. ಆಕೆಯ ಸ್ನೇಹಿತೆಯೂ ಮಾಹಿತಿ ಕಲೆ ಹಾಕಿದ್ದು, ಜೈದೇವ್ ಕೊಲೆ ಪ್ರಯತ್ನ ಮಾಡಿದ್ದಾನೆ ಎಂಬ ಸತ್ಯವನ್ನು ಹೇಳಿದ್ದಾರೆ.

ಜೈದೇವ್ ಆಟ ಬಯಲಾಗುತ್ತಾ..?

ಈ ಮಾತು ಕೇಳಿದ ಅಪರ್ಣಾಳಿಗೆ ನೋವಾಗಿದೆ. ಜೈದೇವ್ ಯಾಕೆ ಹೀಗೆ ಮಾಡಬೇಕು, ನಾನು ಈ ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ. ಕೇಸ್ ಹಾಕಿ ಅವನಿಗೆ ಶಿಕ್ಷೆ ಎಂದು ಹಠ ಮಾಡಿದ್ದಾಳೆ. ಮಲ್ಲಿಗೂ ಜೈದೇವ್ ಆಟ ಗೊತ್ತಾಗಿದೆ. ಪಾರ್ಥನಿಗೆ ಈಗ ಅನುಮಾನ ಶುರುವಾಗಿದೆ. ಇದನ್ನೆಲ್ಲಾ ನೋಡುತ್ತಿದ್ದರೆ, ಜೈದೇವ್ ಆಟ ಕಂಪ್ಲೀಟ್ ಆಗಿ ಮುಕ್ತಾಯಗೊಂಡಿದೆ ಎಂಬ ಪ್ರಶ್ನೆ ಎದ್ದಿದ್ದು, ಗೌತಮ್ ಜೈದೇವ್ ಗೆ ಯಾವ ರೀತಿಯಲ್ಲಿ ಶಿಕ್ಷೆಯನ್ನು ಕೊಡಬಹುದು ಎಂಬ ಕುತೂಹಲವೂ ಮೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X