Amruthadhaare: ಗೆಳೆಯನಿಗಾಗಿ ಬಹು ದೊಡ್ಡ ಆಫರ್ ಕೈ ಬಿಟ್ಟ ಆನಂದ್
'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಬರುತ್ತಿದ್ದರೆ, ಶಕುಂತಲಾ ಮನೆಯವರು ಒಬ್ಬೊಬ್ಬರು ಒಂದೊಂದು ಕಾರಿನಲ್ಲಿ ಒಬ್ಬೊಬ್ಬರು ಮದುವೆ ಮಂಟಪಕ್ಕೆ ಬರುತ್ತಿರುತ್ತಾರೆ. ಗೌತಮ್ ಮದುವೆ ಬಗ್ಗೆ ಯಾರಿಗೂ ಯೋಚನೆಯೇ ಇಲ್ಲ. ಸುಮ್ಮನೆ ಹೋಗಬೇಕಲ್ಲ ಎಂದು ಎಲ್ಲರೂ ಹೊರಟಿರುತ್ತಾರೆ. ಲಕ್ಕಿ ಲಕ್ಷ್ಮೀಕಾಂತ ಕಂಠ ಪೂರ್ತಿ ಕುಡಿದು ಕಾರಿನಲ್ಲಿ ನಿದ್ದೆ ಮಾಡುತ್ತಿರುತ್ತಾನೆ.
ಗೌತಮ್ ಮದುವೆ ಆಗುತ್ತಿರುವುದಕ್ಕೆ ಆತನ ಗೆಳೆಯ ಆನಂದ್ ಮತ್ತು ಪತ್ನಿ ಅಪರ್ಣಾ ಇಬ್ಬರೂ ಖುಷಿಯಾಗಿರುತ್ತಾರೆ. ಈಗಲಾದರೂ ಗೌತಮ್‌ಗಾಗಿ ಒಂದು ಜೀವ ಬರುತ್ತಿದೆ ಎನ್ನುತ್ತಿದ್ದಾರೆ. ಇದೇ ವೇಳೆಗೆ ಆನಂದ್‌ಗೆ ಒಂದು ಫೋನ್ ಕಾಲ್ ಬರುತ್ತದೆ. ಅದು ಯುಎಸ್ ಕಂಪನಿಯದ್ದಾಗಿರುತ್ತದೆ.

ಆನಂದ್‌ಗೆ ಯುಎಸ್ ಮೂಲದ ಕಂಪನಿಯಿಂದ ಕೆಲಸದ ಆಫರ್ ಇರುತ್ತದೆ. ಇಂಟರ್ ವ್ಯೂವ್ ಕೂಡ ಅಟೆಂಡ್ ಮಾಡಿರುವ ಆನಂದ್, ಗೌತಮ್ ಕಂಪನಿಯನ್ನು ಬಿಡಬೇಕು ಎಂದು ಕೊಂಡಿರುತ್ತಾನೆ. ಹೀಗಾಗಿ ಈಗ ತನ್ನ ತೀರ್ಮಾನವನ್ನು ತಿಳಿಸುವಂತೆ ಕೇಳಿ ಫೋನ್ ಮಾಡಿರುತ್ತಾರೆ. ಅಪರ್ಣಾ ನಿಮ್ಮ ತೀರ್ಮಾನವನ್ನು ಅವರಿಗೆ ಬೇಗ ತಿಳಿಸಿ ಎಂದು ಹೇಳುತ್ತಾಳೆ.
ಕೆಲಸದ ಆಸೆ ಕೈ ಬಿಟ್ಟ ಆನಂದ್
ಆನಂದ್ ನಾನು ಈಗಾಗಲೇ ತೀರ್ಮಾನ ಮಾಡಿದ್ದೀನಿ. ನಾನು ಗೌತಮ್ ಕಂಪನಿಯನ್ನು ಬಿಟ್ಟು ಎಲ್ಲೂ ಹೋಗಿವುದಿಲ್ಲ. ಗೌತಮ್‌ಗೆ ನನ್ನ ಅವಶ್ಯಕತೆ ಬಹಳ ಇದೆ. ಈ ಸಂದರ್ಭದಲ್ಲಿ ನಾನು ಬಿಟ್ಟು ಹೋದರೆ ಸಮಸ್ಯೆ ಆಗುತ್ತದೆ. ಹಾಗಾಗಿ ನಾನು ಇಲ್ಲೇ ಇರುತ್ತೇನೆ. ಗೌತಮ್ ಕಂಪನಿಗೆ ಹೋಲಿಸಿದರೆ, ಅದು ದೊಡ್ಡ ಕೆಲಸವೇ ಇರಬಹುದು. ಆದರೆ, ಗೌತಮ್‌ನ ಬಿಡಲು ಸಾಧ್ಯವಿಲ್ಲ ಎಂದು ಹೇಳಿ. ತನ್ನ ನಿರ್ಧಾರಕ್ಕೆ ಅಪರ್ಣಾಳನ್ನು ಕ್ಷಮೆಯಾಚಿಸಬೇಕು ಎಂದು ಕೇಳುತ್ತಾನೆ. ಇದಕ್ಕೆ ಅಪರ್ಣಾ ಬೇಸರ ಮಾಡಿಕೊಳ್ಳದೇ ನಿಮ್ಮ ನಿರ್ಧಾರ ನನಗೆ ಮೊದಲೇ ಗೊತ್ತಿತ್ತು ಎನ್ನುತ್ತಾಳೆ.

ಕಲ್ಯಾಣ ಮಂಟಪ ಅಡ್ರೆಸ್ ಸಿಗಲೇ ಇಲ್ಲ
ಕಲ್ಯಾಣ ಮಂಟಪ ಹುಡುಕುತ್ತಾ ಹೊರಟ ಗೌತಮ್ ಮನೆಯವರಿಗೆ ಗೊತ್ತಾಗುವುದಿಲ್ಲ. ಹೀಗಾಗಿ ಕಾರುಗಳನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ಎಲ್ಲಿ ಹೋಗುವುದು ಎಂದು ಯೋಚಿಸುತ್ತಿರುತ್ತಾರೆ. ಕಂಠ ಪೂರ್ತಿ ಕುಡಿದ ಲಕ್ಕಿ ಲಕ್ಷ್ಮೀಕಾಂತನಿಗೆ ಜವಾಬ್ದಾರಿ ಕೊಟ್ಟು ತಪ್ಪು ಮಾಡಿದೆವು ಎಂದು ಗೌತಮ್ ಬೇಸರ ಮಾಡಿಕೊಳ್ಳುತ್ತಾನೆ. ಎಲ್ಲರೂ ನನ್ನನ್ನು ಫಾಲೋ ಮಾಡಿ ಎಂದು ಮುಂದೆ ಸಾಗುತ್ತಾನೆ. ಮುಂದೆ ರೋಡ್ ಬ್ಲಾಕ್ ಆಗಿರುತ್ತದೆ.
ಮಂಟಪದಲ್ಲಿ ಸಮಸ್ಯೆ
ಇತ್ತ ಕಾರು ಕೆಟ್ಟು ನಿಂತ ಕಾರಣ ಭೂಮಿಕಾ ಮನೆಯವರು ಆಟೋದಲ್ಲಿ ಬಂದು ಇಳಿಯುತ್ತಾರೆ. ಆದರೆ, ಕಲ್ಯಾಣ ಮಂಟಪದಲ್ಲಿ ಮತ್ತೊಂದು ಮದುವೆ ನಡೆಯುತ್ತಿರುತ್ತದೆ. ಇದನ್ನು ನೋಡಿ ಮನೆಯವರೆಲ್ಲಾ ಗಾಬರಿಯಾಗುತ್ತಾರೆ. ಆದರೆ, ಮಂಟಪ ಬುಕ್ ಮಾಡಿಕೊಟ್ಟವನು, ಸ್ವಲ್ಪ ಹೊತ್ತಿಗೆ ನಿಮಗೆ ಮಂಟಪ ಕೊಡುತ್ತೇವೆ ಎಂದು ಹೇಳುತ್ತಾರೆ. ಅಷ್ಟರಲ್ಲಿ ಭೂಮಿಕಾಳಿಗೆ ಗೌತಮ್ ಕಾಲ್ ಮಾಡುತ್ತಾನೆ.
ಮಧುಮಗನನ್ನು ಬರಮಾಡಿಕೊಂಡ ಮಧುಮಗಳು
ಕಲ್ಯಾಣ ಮಂಟಪ ರಸ್ತೆ ಬ್ಲಾಕ್ ಆಗಿದೆ. ಹೇಗೆ ಬರುವುದು ಎಂದು ಕೇಳಿದ್ದಕ್ಕೆ ಭೂಮಿಕಾ ಅಡ್ರೆಸ್ ಹೇಳುತ್ತಾಳೆ. ಬಳಿಕ ಚೌಟರಿ ಎದುರು ತಾನೇ ಬರುತ್ತಾಳೆ. ಮಧುಮಗಳನ್ನು ಗೇಟ್ ಬಳಿ ನೋಡಿದ ಗೌತಮ್‌ಗೆ ಶಾಕ್ ಆಗುತ್ತದೆ. ಇದೇನಿದು ಎಂದು ಬಂದು ಕೇಳುತ್ತಾನೆ. ಎಲ್ಲರೂ ಬ್ಯುಸಿಯಾಗಿದ್ದಾರೆ. ಅದಕ್ಕೆ ನಾನೇ ಬಂದೆ ಎನ್ನುತ್ತಾಳೆ. ಬಳಿಕ ಕಲ್ಯಾಣ ಮಂಟಪದಲ್ಲಿ ಮತ್ತೊಂದು ಮದುವೆ ನಡೆಯುತ್ತಿದೆ. ನಿಮ್ಮ ಮನೆಯವರನ್ನು ಸ್ವಲ್ಪ ತಡವಾಗಿ ಬರಲು ಹೇಳಿ ಎಂದು ರಿಕ್ವೆಸ್ಟ್ ಮಾಡಿಕೊಳ್ಳುತ್ತಾಳೆ. ಭೂಮಿಕಾಳ ಪರಿಸ್ಥಿತಿಯನ್ನು ಗೌತಮ್ ಅರ್ಥ ಮಾಡಿಕೊಳ್ಳುತ್ತಾನೆ.


Click it and Unblock the Notifications











