Amruthadhaare; ಕಾರ್ ಶೋ ರೂಂನಿಂದ ಗೌತಮ್ ಗೆ ಮೆಸೇಜ್ ಬರಲು ಕಾರಣವೇನು..?
ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾ ಮತ್ತು ಪಾರ್ಥ ಪ್ರೀತಿಯನ್ನು ದೂರ ಮಾಡುತ್ತಿರುವ ದುಃಖದಲ್ಲಿ ಭೂಮಿಕಾ ಇದ್ದಾಳೆ. ಭೂಮಿಕಾಳ ಮೌನವನ್ನು ಕಂಡು ಆನಂದ್ ಅನುಮಾನಗೊಂಡಿದ್ದಾನೆ. ಈ ಬಗ್ಗೆ ಗೌತಮ್ ಬಳಿ ಆನಂದ್ ವಿಚಾರಿಸಿದ್ದು, ಯಾಕೆ ಅತ್ತಿಗೆ ಬೇಸರದಲ್ಲಿದ್ದಾರೆ. ಏನಾದರೂ ಸಮಸ್ಯೆನಾ ಎಂದು ಕೇಳಿದ್ದಾನೆ. ಆದರೆ, ಗೌತಮ್ ಗೂ ಇದಕ್ಕೆ ಕಾರಣ ಗೊತ್ತಿಲ್ಲ. ಹಾಗಾಗಿ ಅಪೇಕ್ಷಾಳಿಗೆ ತಲೆನೋವು, ಅವಳಿಗೆ ಹುಷಾರಿಲ್ಲ ಎಂದು ಭೂಮಿಕಾ ಕೂಡ ಸ್ವಲ್ಪ ಡಲ್ ಆಗಿ ಇದ್ದಾಳೆ. ಸ್ವಲ್ಪ ಸಮಯ ಕಳೆದ ಮೇಲೆ ಸರಿ ಹೋಗುತ್ತಾಳೆ ಎಂದು ಹೇಳುತ್ತಾನೆ.
ನಿನ್ನನ್ನು ಒಪ್ಪಲು ಸಾಧ್ಯವಿಲ್ಲ ಎಂದ ಸದಾಶಿವ
ಇತ್ತ ಪಾರ್ಥ ಭಾವಿ ಮಾವ ಕೊಟ್ಟ ಪರೀಕ್ಷೆಯಲ್ಲಿ ಗೆಲ್ಲಲು ಇನ್ನೊಂದೇ ಮೆಟ್ಟಿಲು ಬಾಕಿ ಎಂಬ ಖುಷಿಯಲ್ಲಿದ್ದಾನೆ. ಹೀಗಾಗಿ ಸದಾಶಿವನ ಬಳಿ ಹೋಗಿ ತಾನು ಈ ಹದಿನೈದು ದಿನಗಳಲ್ಲಿ ಕಲಿತ ಪಾಠ ಮತ್ತು ಚಾಲೆಂಜ್‌ನಲ್ಲಿ ಗೆದ್ದಿದ್ದೀನಿ ಎಂದು ಹೇಳುತ್ತಾನೆ. ಸದಾಶಿವ ನೀನು ಈ ಚಾಲೇಂಜ್ ನಲ್ಲಿ ಗೆಲ್ಲುವುದಿಲ್ಲ ಎಂದುಕೊಂಡು ಟಾಸ್ಕ್ ಕೊಟ್ಟೆ. ಆದರೆ ನೀನು ಒಳ್ಳೆಯ ಹುಡುಗ. ನೀನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿ ಬಿಟ್ಟೆ. ಆದರೆ, ನನ್ನನ್ನು ಕ್ಷಮಿಸು ನಿನ್ನನ್ನು ಯಾವುದೇ ಕಾರಣಕ್ಕೂ ನಾನು ಒಪ್ಪುವುದಿಲ್ಲ. ನಿನಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡಿ, ಈ ಸಮಾಜವನ್ನು ಎದುರಿಸುವ ಶಕ್ತಿ ನನಗಿಲ್ಲ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಪಾರ್ಥನಿಗೆ ಶಾಕ್ ಆಗುತ್ತದೆ.

ಯಾರೇನೇ ಅನ್ನಲಿ ನಿನ್ನ ಪ್ರೀತಿಗೆ ನಾನಿದ್ದೀನಿ
ಸೀದಾ ಅವನ ತಾಯಿ ಶಕುಂತಲಾ ಬಳಿ ಹೋಗಿ ನಡೆದ ಘಟನೆಯನ್ನು ಹೇಳುತ್ತಾನೆ. ಹೇಗಾದರೂ ಮಾಡಿ ನೀನೇ ಒಪ್ಪಿಸು ಎಂದು ಕೇಳಿಕೊಳ್ಳುತ್ತಾನೆ. ಶಕುಂತಲಾ ತನ್ನ ಬಳಿಯೇ ಮಗ ಬಂದು ಎಲ್ಲವನ್ನೂ ಹೇಳಿಕೊಳ್ಳುತ್ತಿರುವುದಕ್ಕೆ ಖುಷಿ ಪಡುತ್ತಾಳೆ. ನೀನು ಯಾವುದಕ್ಕೂ ಹೆದರಬೇಡ. ನಾನಿದ್ದೀನಿ, ಈ ಮದುವೆಯನ್ನು ಮಾಡಿಸುತ್ತೀನಿ ಎಂದು ಶಕುಂತಲಾ ಪಾರ್ಥನಿಗೆ ಭರವಸೆಯನ್ನು ಕೊಡುತ್ತಾಳೆ. ಆದರೆ ಅಲ್ಲಿಯವರೆಗೂ ಅಪೇಕ್ಷಾಳನ್ನು ಭೇಟಿ ಮಾಡಬೇಡ ಎಂದು ಹೇಳುತ್ತಾಳೆ.
ಗೌತಮ್ ಗೆ ಕಾರ್ ಶೋ ರೂಂ ಕೊಡುತ್ತಾ ಸರ್ಪ್ರೈಸ್
ಗೌತಮ್ ಗೆ ಪದೇ ಪದೇ ಮೆಸೇಜ್ ಒಂದು ಬರುತ್ತಿರುತ್ತದೆ. ಕಾರ್ ಶೋ ರೂಂ ನವರು ನಿಮ್ಮ ಕಾರು ಡೆಲಿವರಿಗೆ ಸಿದ್ಧವಿದೆ. ಬಂದು ಪಡೆಯಿರಿ ಎಂದಿರುತ್ತದೆ. ಇದರಿಂದ ಗೌತಮ್ ಯಾರು ತನಗೆ ಕಾರನ್ನು ಬುಕ್ ಮಾಡಿದ್ದು ಎಂದು ಅನುಮಾನ ಪಡುತ್ತಾನೆ. ಆನಂದ್ ಮತ್ತು ಶಕುಂತಲಾಳನ್ನು ವಿಚಾರಿಸಿದಾಗ ಇಲ್ಲ. ಅದು ಫೇಕ್ ಮೆಸೇಜ್ ಇರಬೇಕು ಎನ್ನುತ್ತಾರೆ. ಮತ್ತೆ ಮೆಸೇಜ್ ಬಂದಾಗ ಕಾಲ್ ಮಾಡಿ ಕೇಳುತ್ತಾನೆ. ನಿಮ್ಮ ಕಾರ್ ರೆಡಿ ಇದೆ. ಬಂದು ತೆಗೆದುಕೊಳ್ಳಿ ಎಂದು ಹೇಳುತ್ತಾರೆ.

ಕಾರು ಖರೀದಿಸಲು ಬಂದ ಜೈದೇವ್
ಯಾಕೆಂದರೆ, ಜೈದೇವ್ ಮದುವೆಯಾದ ಮೇಲೂ ದಿಯಾ ಎಂಬ ಹುಡುಗಿ ಜೊತೆಗೆ ಸುತ್ತಾಡುತ್ತಿದ್ದಾನೆ. ದಿಯಾ ತನಗೆ ಕಾರ್ ಗಿಫ್ಟ್ ಬೇಕು ಎಂದು ಕೇಳಿದ್ದು, ಜೈದೇವ್ ಅದನ್ನು ಬುಕ್ ಮಾಡಿದ್ದಾನೆ. ಅಕಸ್ಮಾತ್ ಆಗಿ ಅದರ ಮೆಸೇಜ್ ಗೌತಮ್ ಗೆ ಹೋಗಿದ್ದು, ಈಗ ಕಾರ್ ಶೋ ರೂಂ ಗೆ ಜೈದೇವ್ ಮತ್ತು ದಿಯಾ ಬಂದಿದ್ದಾರೆ. ಇದೇ ಸಮಯಕ್ಕೆ ಗೌತಮ್ ಮತ್ತು ಆನಂದ್ ಕೂಡ ಬಂದಿದ್ದು, ಮುಂದೆ ಏನಾಗುತ್ತದೆ ಎಂಬ ಕುತೂಹಲ ಮೂಡಿದೆ.


Click it and Unblock the Notifications











