Amruthadhaare ;ಸುಧಾ ಮತ್ತು ಭಾಗ್ಯಾ ಕಿಡ್ನ್ಯಾಪ್ ಆಗಿದ್ದಾರಾ? ದೇವಸ್ಥಾನಕ್ಕೆ ಬಂದವರು ಯಾರು?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಗೆ ಸುಧಾ ಮಾಡಿದ ತಪ್ಪಿನ ಅರಿವಾಗಿ ಅವಳನ್ನು ಮನೆಯಿಂದ ಹೊರಗೆ ಕಳಿಸಿದ್ದಾನೆ. ತಾನು ನಂಬಿದವರೇ ಮೋಸ ಮಾಡುತ್ತಾರೆ ಎಂದು ಬೇಸರ ಮಾಡಿಕೊಂಡಿದ್ದಾನೆ. ಆದರೆ, ಭೂಮಿಕಾ ಖುಷಿ ಮೂಡ್ ನಲ್ಲಿ ಇದ್ದಾಳೆ. ಖುಷಿ ಇದ್ದರೂ ಕೂಡ ಭೂಮಿಕಾ ತನ್ನ ಸಂತಸವನ್ನು ಯಾರ ಎದುರಿಗೂ ತೋರಿಸಿಕೊಳ್ಳಲಾಗದಂತಹ ಪರಿಸ್ಥಿತಿಯಲ್ಲಿ ಇದ್ದಾಳೆಗೌತಮ್ ಬೇಸರವನ್ನು ಅರ್ಥ ಮಾಡಿಕೊಂಡ ಭೂಮಿಕಾ ಸಮಾಧಾನ ಮಾಡಲು ಯತ್ನಿಸುತ್ತಾಳೆ. ಈ ವೇಳೆ ಭೂಮಿಕಾ ಸುಧಾಳ ಪರ ಮಾತನಾಡಿದ್ದಕ್ಕೆ ಗೌತಮ್ ಮತ್ತಷ್ಟು ಬೇಸರ ಮಾಡಿಕೊಳ್ಳುತ್ತಾನೆ.
ಗೌತಮ್ ಗೆ ಸರ್ಪ್ರೈಸ್ ಕೊಡಲಿರುವ ಭೂಮಿಕಾ
ಸುಧಾ ಅವರ ತಾಯಿಯನ್ನು ನೋಡಿರುವ ಭೂಮಿಕಾಳಿಗೆ ಗೌತಮ್ ಅವರ ತಾಯಿ ಸಾವನ್ನಪ್ಪಿಲ್ಲ ಬದುಕಿದ್ದಾರೆ ಎಂಬ ಸತ್ಯ ಗೊತ್ತಾಗಿದೆ. ಈ ವಿಚಾರವನ್ನು ಗೌತಮ್ ಗೆ ಹೇಳಬೇಕು ಎಂಬ ಆಸೆ ಇದ್ದರು ಕೂಡ ಈಗಲೇ ಬೇಡ, ದೇವಸ್ಥಾನದಲ್ಲಿ ಗೌತಮ್ ತನ್ನ ತಾಯಿ ಹಾಗೂ ತಂಗಿಯನ್ನು ಭೇಟಿ ಮಾಡಲಿ ಎಂದು ಭೂಮಿಕಾ ಬಯಸಿದ್ದಾಳೆ. ಹಾಗಾಗಿ ಸುಧಾಳನ್ನು ಇಂದು ಹೋಟೆಲ್ ನಲ್ಲಿ ಉಳಿದುಕೊಳಳುವಂತೆ ಹೇಳಿ ಕಳಿಸಿದ್ದಾಳೆ. ಗೌತಮ್ ನನ್ನು ನಾಳೆ ದೇವಸ್ಥಾನಕ್ಕೆ ಹೋಗೋಣ ಎಂದು ಒಪ್ಪಿಸಿದ್ದಾಳೆ. ಇತ್ತ ಶಕುಂತಲಾ ಭಾಗ್ಯ ಎಲ್ಲಿಗೆ ಹೋಗಿರಬಹುದು ಎಂದು ತಲೆಕೆಡಿಸಿಕೊಂಡಿದ್ದಾಳೆ. ಜೈದೇವ್ ಜಯರಾಂ ಮೂಲಕ ಸುಧಾ ಎಲ್ಲಿದ್ದಾಳೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾನೆ.

ಗೌತಮ್ ತಾಯಿಯನ್ನು ಕಂಡು ಆನಂದ್ ಭಾವುಕ
ಬೆಳಗ್ಗೆ ಎದ್ದ ಕೂಡಲೇ ಭೂಮಿಕಾ ಮತ್ತು ಗೌತಮ್ ರೆಡಿಯಾಗಿ ದೇವಸ್ಥಾನದಕ್ಕೆ ತೆರಳಿದ್ದಾರೆ. ಗೌತಮ್ ಮತ್ತು ಭೂಮಿಕಾ ಸುಧಾಳಿಗೋಸ್ಕರ ಕಾಯುತ್ತಿದ್ದಾರೆ. ಗೌತಮ್ ಗಂತೂ ಕಾದು ಕಾದು ಸಾಕಾಗಿ ಹೋಗಿದೆ. ಇನ್ನು ಇವರಿಬ್ಬರು ದೇವಸ್ಥಾನಕ್ಕೆ ತೆರಳಿದ್ದನ್ನು ಗಮನಿಸಿದ ಲಕ್ಷ್ಮೀಕಾಂತನಿಗೆ ಅನುಮಾನ ಶುರುವಾಗಿದೆ. ಸುಧಾಳನ್ನು ಆಟೋ ಹತ್ತಿಸಿ ಕಳಿಸಿರುವ ಭೂಮಿಕಾ ಭಾಗ್ಯಳನ್ನು ನೋಡಿರುತ್ತಾಳಾ ಎಂಬ ಅನುಮಾನ ಶಕುಂತಲಾ, ಲಕ್ಷ್ಮೀಕಾಂತನ ಮನದಲ್ಲಿ ಇದೆ. ಇದನ್ನು ಪದೇ ಪದೇ ಜೈದೇವ್ ಬಳಿ ಹೇಳಿಕೊಂಡು ಒದ್ದಾಡುತ್ತಿದ್ದಾನೆ. ಇತ್ತ ದೇವಸ್ಥಾನಕ್ಕೆ ಸುಧಾ ಮತ್ತು ಭಾಗ್ಯ ಆಗಮಿಸಿದ್ದು, ಆನಂದ್ ಭಾವುಕನಾಗಿದ್ದಾನೆ.
ಜಸ್ಟ್ ಮಿಸ್ ಆದ್ರಾ ಸುಧಾ, ಭಾಗ್ಯ..?
ಇನ್ನು ಸುಧಾ ಹೋಟೆಲ್ ನಲ್ಲಿರುವ ಮಾಹಿತಿ ಪಡೆದ ಜೈದೇವ್ ಸುಧಾ ಗೌತಮ್ ಸ್ವಂತ ತಂಗಿ, ಭಾಗ್ಯ ತಾಯಿ. ಹೀಗಾಗಿ ನೀವು ಅವರನ್ನು ಕಿಡ್ನ್ಯಾಪ್ ಮಾಡಲು ಸಾಧ್ಯವೇ ಎಂದು ಜಯರಾಂ ಬಳಿ ಜೈದೇವ್ ಸಹಾಯ ಕೇಳುತ್ತಾನೆ. ಈ ಸತ್ಯ ತಿಳಿದ ಜಯರಾಂ ಅಯ್ಯೋ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನಯ ಗುರುತಿಸದೇ ಹೋದೆ ಎಂದು ತಕ್ಷಣವೇ ಕಿಡ್ನ್ಯಾಪ್ ಮಾಡಿಸಿದ್ದಾನೆ. ಹುಡುಗರು ಕಿಡ್ನ್ಯಾಪ್ ಮಾಡಿರುವುದಾಗಿಯೂ ಗೋಡೌನ್ ನಲ್ಲಿ ಕೂಡಿ ಹಾಕಿರುವುದಾಗಿಯೂ ತಿಳಿಸುತ್ತಾರೆ. ಆದರೆ, ದೇವಸ್ಥಾನಕ್ಕೆ ಸುಧಾ ಬಂದಿರುವುದು ಸುಳ್ಳಾ..? ಹುಡುಗರು ಬೇರೆ ಯಾರನ್ನೋ ಕಿಡ್ನ್ಯಾಪ್ ಮಾಡಿದ್ದು, ಜಸ್ಟ್ ಮಿಸ್ ಆಗಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ.
ನಿಜಕ್ಕೂ ಗೌತಮ್ ತನ್ನ ತಾಯಿಯನ್ನು ಭೇಟಿಯಾಗುತ್ತಾನಾ..?
ನಾಳಿನ ಸಂಚಿಕೆಯಲ್ಲಿ ಗೌತಮ್ ತನ್ನ ತಾಯಿಯನ್ನು ಭೇಟಿಯಾಗಲಿದ್ದು, ಇಷ್ಟು ದಿನ ತಾಳ್ಮೆಯಿಂದ ಕಾದಿದ್ದ ಗೌತಮ್ ಗೆ ಎಷ್ಟು ಖುಷಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇಲ್ಲವೇ ಗೌತಮ್ ತನ್ನ ತಾಯಿಯನ್ನು ಭೇಟಿಯಾದದಂತೆ ಭೂಮಿಕಾ ದೇವಸ್ಥಾನದಲ್ಲಿ ಕೂತು ಕನಸು ಕಾಣುತ್ತಿದ್ದಾಳಾ ಎಂಬ ಕುತೂಹಲ ಮೂಡಿದೆ. ಭೂಮಿಕಾ ಆಸೆ ನೆರವೇರುತ್ತಾ ಇಲ್ಲವೇ ಶಕುಂತಲಾ ಮತ್ತು ಜೈದೇವ್ ಆಟವೇ ಗೆಲ್ಲುತ್ತಾ ಎಂಬುದನ್ನು ತಿಳಿಯಲು ಕಾದು ನೋಡಲೇ ಬೇಕಿದೆ.


Click it and Unblock the Notifications











