Amruthadhaare ; ಭೂಮಿಕಾ ಮನಸ್ಸು ಭಾರ, ಗೌತಮ್ ಎರಡನೇ ಪತ್ನಿ ಯಾರು ?
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಮಾತುಗಳನ್ನು ದಡ್ಡಿಯಂತೆ ನಂಬಿರುವ ಭೂಮಿಕಾ, ಗೌತಮ್ ಗೆ ಎರಡನೇ ಮದುವೆ ಮಾಡಿಸಲು ಓಕೆ ಎಂದಿದ್ದಾಳೆ. ಭೂಮಿಕಾ ಇಷ್ಟು ಬೇಗ ಶಕುಂತಲಾ ಮಾತಿಗೆ ಒಪ್ಪಿಗೆ ಸೂಚಿಸಿರುವುದಕ್ಕೆ ಖುಷಿಯಾಗಿದ್ದು, ಭೂಮಿಕಾ ಈ ಮನೆಯಿಂದ ಹೊರಟ ಮೇಲೆ ಎಲ್ಲವೂ ತನ್ನ ಕೈಯಡಿ ಇರುತ್ತದೆ ಎಂದು ತೇಲಾಡುತ್ತಿದ್ದಾಳೆ. ಜೈದೇವ್ ಅಮ್ಮನಿಗೆ ಶಾಕ್ ಕೊಟ್ಟಿದ್ದಾನೆ. ಅಕಸ್ಮಾತ್ ಭೂಮಿಕಾ ಕೊನೆಯ ಕ್ಷಣದಲ್ಲಿ ಗೌತಮ್ ನನ್ನು ಬಿಟ್ಟು ಕೊಡದೇ ಇದ್ದರೆ, ನಿಮ್ಮ ಪ್ಲಾನ್ ಉಲ್ಟಾ ಆಗಬಹುದು ಎಂದು ಹೇಳಿದ್ದಾನೆ.
ಬೇಕಂತಲೇ ಸುಳ್ಳು ಹೇಳಿದ ಗೌತಮ್
ಈ ಮಾತನ್ನು ಕೇಳಿದ ಶಕುಂತಲಾಳಿಗೆ ಒಂದು ಕ್ಷಣ ಗಾಬರಿಯಾಗುತ್ತದೆ. ಆದರೆ, ಎಮೋಷನಲ್ ಆಗಿ ಭೂಮಿಕಾಳನ್ನು ಕುಗ್ಗಿಸಿರುವ ಕಾರಣ ಈ ವಿಷಯದಲ್ಲಿ ಯಾವುದೇ ರೀತಿಯ ತಪ್ಪು ಆಗುವುದಿಲ್ಲ ಎಂದು ನಂಬಿದ್ದಾಳೆ. ಇತ್ತ ಭೂಮಿಕಾ ಗೌತಮ್ ಬಳಿ ಪದೇ ಪದೇ ಹಳೆಯ ಪ್ರೀತಿ, ನಿಮಗೆ ಎಂತಹ ಹುಡುಗಿ ಬೇಕು ಎಂದೆಲ್ಲಾ ಕೇಳುತ್ತಲೇ ಇದ್ದಾಳೆ. ಗೌತಮ್ ಗೆ ಭೂಮಿಕಾ ಮನದಲ್ಲಿ ಏನಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಅಲ್ಲದೇ, ಇದರಿಂದ ಗೌತಮ್ ಒದ್ದಾಟ ನಡೆಸುವಂತಾಗಿದೆ. ಭೂಮಿಕಾ ಪ್ರಶ್ನೆ ಉತ್ತರಿಸಲಾಗದೇ ಸುಳ್ಳು ಹೇಳುತ್ತಾನೆ. ನಾನು ಒಂದು ಹುಡುಗಿಯನ್ನು ಇಇಷ್ಟಪಟ್ಟಿದ್ದೆ. ಅವಳು ತುಂಬಾನೇ ಸುಂದರವಾಗಿದ್ದಳು. ಹಣೆ ಬರಹ ಅವಳ ಜೊತೆಗೆ ಮದುವೆ ಮಾಡಿಕೊಳ್ಳಲು ಆಗಲೇ ಇಲ್ಲ ಎಂದು ಹೇಳುತ್ತಾನೆ. ಆ ಹುಡುಗಿ ಯಾರು ಅವಳ ಫೋಟೋ ಇದೆಯಾ ಎಂದು ಕೇಳಿದಾಗ, ಗೌತಮ್ ಹಳೆಯ ಆಲ್ಬಂ ನೋಡುತ್ತಾಳೆ. ಅದರಲ್ಲಿ ಭೂಮಿಕಾ ಫೋಟೋ ಇರುತ್ತದೆ. ಬಳಿಕ ಗೌತಮ್ ನೀವು ಬಿಟ್ಟರೆ ನನಗೆ ಬೇರೆ ಯಾರೂ ಇಷ್ಟವಿಲ್ಲ ಎಂದು ಹೇಳುತ್ತಾನೆ.

ಜೀವನಿಗೆ ಸಪೋರ್ಟ್ ಮಾಡಿದ ಮಹಿಮಾ
ಇತ್ತ ಜೀವನ್ ಕುಡಿದು ಬಂದಿದ್ದಕ್ಕೆ ಮಹಿಮಾಳಿಗೆ ಕೋಪ ಬಂದಿರುತ್ತದೆ. ಮರುದಿನ ಜೀವನ್ ರಾಜೇಂದ್ರ ಭೂಪತಿ ಅವರ ಜೊತೆಗೆ ಇದ್ದೀನಿ ಎಂದಾಗ ಫೋನ್ ಅನ್ನು ಅವರಿಗೆ ಕೊಡಲು ಹೇಳಿ ಮಹಿಮಾ ರಾಜೇಂದ್ರ ಭೂಪತಿಗೆ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ನಿಮ್ಮದೇನಿದ್ದರೂ ಬಿಸಿನೆಸ್ ಅಷ್ಟೇ ಇರಲಿ. ಅದು ಬಿಟ್ಟು ಕೆಟ್ಟ ಚಟಗಳನ್ನೆಲ್ಲಾ ಕಲಿಸಬೇಡಿ ಎಂದು ಬೈಯುತ್ತಾಳೆ. ಇನ್ನು ಇಂದು ಕೂಡ ಜೀವನ್ ಮನೆಗೆ ಲೇಟ್ ಆಗಿ ಬರುತ್ತಾನೆ. ಆಗ ಸದಾಶಿವ, ಮಂದಾಕಿನಿ ಕೂಡ ಎದ್ದಿರುತ್ತಾರೆ. ಜೀವನ್ ಕುಡಿದ ವಿಚಾರವನ್ನು ಮಹಿಮಾ ಎಲ್ಲರಿಗೂ ಹೇಳಿರಬೇಕು ಎಂದು ಗಾಬರಿಯಾಗುತ್ತಾನೆ. ಆದರೆ, ಸದಾಶಿವ ದಿನಾ ಲೇಟ್ ಆಗಿ ಬರುತ್ತಿರುವುದಕ್ಕೆ ಕ್ಲಾಸ್ ತೆಗೆದುಕೊಳ್ಳುತ್ತಾನೆ. ಸಮಾಧಾನಗೊಂದ ಜೀವನ್ ಮಹಿಮಾಳಿಗೆ ಥ್ಯಾಂಕ್ಸ್ ಹೇಳುತ್ತಾನೆ.
ಗೌತಮ್ ಗಾಗಿ ನೋಡಿರುವ ಹುಡುಗಿ ಯಾರು..?
ಇನ್ನು ಭೂಮಿಕಾ ಶಕುಂತಲಾ ಬಳಿ ನೀವು ನೋಡಿರುವ ಹುಡುಗಿಯನ್ನು ನಾನು ಭೇಟಿ ಮಾಡಬೇಕು. ಅವಳು ಗೌತಮ್ ನನ್ನು ಹೇಗೆ ನೋಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳುತ್ತಾಳೆ. ಶಕುಂತಲಾ ಅದಕ್ಕೆ ಓಕೆ ಎಂದಿದ್ದು, ಭೂಮಿಕಾ ಗೌತಮ್ ಬಳಿ ಸುಳ್ಳು ಹೇಳಿ ಆ ಹುಡುಗಿಯನ್ನು ಭೇಟಿ ಮಾಡಲು ಹೋಗುತ್ತಾಳೆ. ಹುಡುಗಿಯ ಹೆಸರು ಮಧುರ. ಆ ಹುಡುಗಿಗೂ ಶಕುಂತಲಾಳಿಗೂ ಹೇಗೆ ಪರಿಚಯ ಎಂಬುದು ಗೊತ್ತಿಲ್ಲ.
ಹುಡುಗಿಯನ್ನು ಭೇಟಿ ಮಾಡಿದ ಭೂಮಿಕಾ
ಇನ್ನು ಒಂದು ಕೆಫೆಯಲ್ಲಿ ಮಧುರಾ ಮತ್ತು ಭೂಮಿಕಾ ಭೇಟಿ ಮಾಡುತ್ತಾಳೆ. ಮಧುರ ತನ್ನ ಬಳಿ ಸಾಕಷ್ಟು ಬಿಸಿನೆಸ್ ಗಳಿದ್ದು, ಈ ಕೆಫೆ ನನ್ನ ಕನಸು ಎನ್ನುತ್ತಾಳೆ. ಇನ್ನು ಬೆಲ್ಲದ ಕಾಫಿ ನನಗಿಷ್ಟ ಎಂದು ಹೇಲಿ ಅದೇ ಕಾಫಿಯನ್ನೇ ಭೂಮಿಕಾಳಿಗೂ ತರಿಸುತ್ತಾಳೆ. ಮಧುರಾ ಮಾತುಗಳನ್ನಾಲಿಸಿದ ಭೂಮಿಕಾ ಈ ಹುಡುಗಿ ಗೌತಮ್ ಗೆ ಸರಿಯಾದ ಜೋಡಿ ಎಂದು ಮೆಚ್ಚಿಕೊಂಡಿದ್ದಾಳೆ.


Click it and Unblock the Notifications











