Amruthadhaare ; ಆತುರದಲ್ಲಿ ಎಡವಟ್ಟು ಮಾಡಿಕೊಂಡ ಭೂಮಿಕಾಳಿಗೆ ಬುದ್ಧಿ ಹೇಳಿದ ಆನಂದ್..!
ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥನಿಗೆ ಅತ್ತಿಗೆ ಭೂಮಿಕಾ ಹೇಳಿದ ಮಾತುಗಳು ಆತಂಕವನ್ನು ಹೆಚ್ಚಿಸಿದೆ. ಪ್ರೀತಿ ಅನ್ನೋದು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಬೇಜವಾಬ್ದಾರಿಯಿಂದ ನಡೆದುಕೊಲ್ಳುವುದಲ್ಲ ಎಂದು ಭೂಮಿಕಾ ಬುದ್ಧಿ ಹೇಳಿದ್ದಾಳೆ. ಈ ಮಾತನ್ನು ಕೇಳಿದ ಪಾರ್ಥನಿಗೆ ಸತ್ಯ ಎನಿಸಿದ್ದು, ಇದ್ದಕ್ಕಿದ್ದ ಹಾಗೆ ಅಪೇಕ್ಷಾಳನ್ನು ಅವಾಯ್ಡ್ ಮಾಡಿದ್ದಾನೆ. ಜವಾಬ್ದಾರಿಯುತ ಪ್ರೇಮಿಯಾಗಿ ಪಾರ್ಥ ಬದಲಾಗುತ್ತಿದ್ದಾನೆ. ಪ್ರೀತಿ ಪ್ರೇಮವನ್ನು ಪಕ್ಕಕ್ಕಿಟ್ಟು, ಕೆಲಸ ಹುಡುಕುತ್ತಾನಾ..? ಅಪೇಕ್ಷಾಳ ಬಗ್ಗೆ ಕಾಳಜಿಯಿಂದ ನಡೆದುಕೊಳ್ಳುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.
ಬೋರ್ಡ್ ಮೆಂಬರ್ ಆದ ಭೂಮಿಕಾ
ಭೂಮಿಕಾ ಖುಷಿ ಖುಷಿಯಾಗಿ ಮತ್ತೆ ಕೋಚಿಂಗ್ ಸೆಂಟರ್ ಗೆ ಪಾಠ ಮಾಡಲೆಂದು ಹೊರಟಿದ್ದಾಳೆ. ಆದರೆ, ಭೂಮಿಕಾ ಇನ್ ಸ್ಟಿಟ್ಯೂಟ್ ತಲುಪುತ್ತಿದ್ದಂತೆ ದೊಡ್ಡ ಶಾಕ್ ಸಿಕ್ಕಿದೆ. ಬೋರ್ಡ್ ಮೆಂಬರ್ ಆಗಿ ಭೂಮಿಕಾಳನ್ನು ಆಯ್ಕೆ ಮಾಡಿ ಅವಳಿಗೆ ದೊಡ್ಡ ಪೋಸ್ಟ್ ಕೊಟ್ಟಿದ್ದಾರೆ. ಇದರಿಂದ ಸಹುದ್ಯೋಗಿಗಳು ಚುಚ್ಚಿ ಮಾತನಾಡಿದ್ದಾರೆ. ಗೌತಮ್ ಹೆಂಡತಿಗೆ ಸುಲಭವಾಗಿ ಬೋರ್ಡ್ ಮೆಂಬರ್ ಪಟ್ಟ ಸಿಕ್ಕಿದೆ. ಟ್ಯಾಲೆಂಟ್ ಗಿಂತಲೂ ಹಣಕ್ಕೆ ಹೆಚ್ಚು ಆದ್ಯತೆ ಎಂದಿದ್ದಾರೆ. ಇದೆಲ್ಲವೂ ಭೂಮಿಕಾಳ ಮನಸ್ಸಿಗೆ ಘಾಸಿ ಮಾಡಿದೆ. ಹಿಂದೆ ಮುಂದೆ ಯೋಚಿಸದೇ ಭೂಮಿಕಾ ನಿರ್ಧಾರ ಒಂದು ತೆಗೆದುಕೊಂಡಿದ್ದಾಳೆ.

ಶಕುಂತಲಾ ಕುತಂತ್ರದಿಂದ ದಂಪತಿಯಲ್ಲಿ ಬಿರುಕು
ಶಕುಂತಲಾ ಬೋರ್ಡ್ ಗೆ ಕಾಲ್ ಮಾಡಿ ನಾವು ಡೊನೇಷನ್ ಕೊಡುತ್ತಿದ್ದೇವೆ. ನನ್ನ ಸೊಸೆಗೆ ದೊಡ್ಡ ಸ್ಥಾನವನ್ನು ಕೊಡಿ ಎಂದು ತಾಕೀತು ಮಾಡಿದ್ದಾಳೆ. ಬೇಕಂತಲೇ ಗೌತಮ್ ಮತ್ತು ಭೂಮಿಕಾ ಬಾಳಲ್ಲಿ ಶಕುಂತಲಾ ಬಿರುಕು ಮೂಡಿಸಲು ಮುಂದಾಗಿದ್ದಾಳೆ. ಆದರೆ ಈ ವಿಚಾರ ಭೂಮಿಕಾಳಿಗೆ ಗೊತ್ತಿಲ್ಲ. ಇತ್ತ ಮಲ್ಲಿಗೆ ಮನೆಯಲ್ಲಿ ಸಿಕ್ಕಾಪಟ್ಟೆ ಬೋರ್ ಹೊಡೆಯುತ್ತಿದೆ. ನಿತ್ಯ ಭೂಮಿಕಾ ಅಕ್ಕ ಇರುತ್ತಿದ್ದರು ಹೊತ್ತು ಕಳೆಯುತ್ತಿತ್ತು. ಆದರೆ, ಈಗ ಭೂಮಿಕಾ ಅಕ್ಕ ಕೆಲಸಕ್ಕೆ ಹೋಗುತ್ತಿದ್ದಾರೆ. ತನಗೆ ಮನೆಯಲ್ಲಿ ಹೊತ್ತು ಹೋಗುತ್ತಿಲ್ಲ ಎಂದು ಕಾಲೇಜಿಗೆ ಹೋಗಲು ನಿರ್ಧರಿಸಿದ್ದಾಳೆ. ಆದರೆ, ಜೈದೇವ ಕಳಿಸಲು ಒಪ್ಪುತ್ತಿಲ್ಲ.

ಭೂಮಿಕಾ ತಪ್ಪನ್ನು ತಿಳಿಸಿ ಹೇಳಿದ ಆನಂದ್
ಭೂಮಿಕಾ ಮನೆಗೆ ಬಂದವಳೇ ಗೌತಮ್ ಮೇಲೆ ಕೂಗಾಡಲು ಶುರು ಮಾಡುತ್ತಾಳೆ. ನಿಮ್ಮಿಂದಾಗಿ ನನ್ನ ಟ್ಯಾಲೆಂಟ್ ಸೊರಗುತ್ತಿದೆ. ನನ್ನದು ಎಂಬ ಐಡೆಂಟಿಟಿಯೇ ಇಲ್ಲದಂತಾಗಿದೆ. ನಾನು ಏನು ಮಾಡಲಿ. ನಿಮ್ಮ ಹೆಸರು ನನ್ನ ಹೆಸರಿನ ಜೊತೆಗೆ ಸೇರಿಕೊಂಡಿರುವುದು ನನಗೆ ಸಮಸ್ಯೆಯನ್ನು ಉಂಟು ಮಾಡಿದೆ. ನನಗೆ ಇದನ್ನೆಲ್ಲಾ ಸಹಿಸಿಕೊಳ್ಳಲು ಆಗುವುದಿಲ್ಲ. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ. ನನ್ನನ್ನು ಬೋರ್ಡ್ ಮೆಂಬರ್ ಮಾಡಿರುವುದು ನನಗೆ ಸ್ವಲ್ಪವೂ ಇಷ್ಟವಿಲ್ಲ. ನನಗೆ ಬಹಳ ಹಿಂಸೆ ಆಗುತ್ತಿದೆ ಎಂದು ಗೌತಮ್ ಮೇಲೆ ಗೂಬೆ ಕೂರಿಸುತ್ತಾಳೆ. ಗೌತಮ್ ಇಲ್ಲದಾಗ ಆನಂದ್ ಭೂಮಿಕಾಳಿಗೆ ಬುದ್ಧಿ ಹೇಳುತ್ತಾನೆ.

ಕ್ಷಮೆ ಕೇಳಿ ಸಮಾಧಾನಗೊಂಡ ಭೂಮಿಕಾ
ನೀವು ಮಾಡಿದ್ದು ತಪ್ಪು. ಆತುರ ಪಟ್ಟು ಹೀಗೆಲ್ಲಾ ಮಾತನಾಡಬಾರದಿತ್ತು. ಗೌತಮ್ ಯಾವುದೇ ಇನ್ ಫ್ಲುಯೆನ್ಸ್ ಮಾಡಿಲ್ಲ. ಅವನಿಗೆ ಯಾವ ವಿಚಾರವೂ ಗೊತ್ತಿಲ್ಲ. ಅವರ ತಂದೆಯ ಕಾಲದಿಂದಲೂ ನಿಮ್ಮ ಇನ್ ಸ್ಟಿಟ್ಯೂಟ್ ಗೆ ಡೊನೇಷನ್ ಕೊಡುತ್ತಿದ್ದಾರೆ. ಆದರೆ, ನೀವು ಸುಖಾ ಸುಮ್ಮನೆ ಗೌತಮ್ ಮೇಲೆ ಗೂಬೆ ಕೂರಿಸಿದಿರಿ ಎಂದು ಹೇಳುತ್ತಾನೆ. ಈ ಮಾತುಗಳನ್ನು ಕೇಳಿದ ಭೂಮಿಕಾಳಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಗೌತಮ್ ಮಲಗಿದ್ದಾಗ ಎಬ್ಬಿಸಿ ಕ್ಷಮೆ ಕೇಳುತ್ತಾಳೆ. ಗೌ ತಮ್ ಕೂಡ ಭೂಮಿಕಾಳನ್ನು ನಗಿಸಲು ನಕ್ಷತ್ರದ ಲೆಕ್ಕ ಕೇಳುತ್ತಾನೆ. ಕೊನೆಗೆ ಭೂಮಿಕಾ ಸಮಾಧಾನ ಮಾಡಿಕೊಂಡು ಮಲಗಲು ಮುಂದಾಗುತ್ತಾಳೆ.


Click it and Unblock the Notifications











