Amruthadhaare ; ಜೈದೇವ್ ಗೆ ಗ್ರಹಚಾರ ಬಿಡಿಸಿದ ಗೌತಮ್ : ಜೆಡಿಯನ್ನು ಮನೆಯಲ್ಲೇ ಕೂಡಿಹಾಕುತ್ತಾನೆ..?
ಅಮೃತಧಾರೆ ಧಾರಾವಾಹಿಯಲ್ಲಿ ಆನಂದ್ ಗೆ ಈಗಲೇ ಪ್ರಜ್ಞೆ ಬರೋದಿಲ್ಲ ಎಂದು ಎಲ್ಲರೂ ಗಾಬರಿಯಾಗಿದ್ದರು.ಆದರೆ, ಆನಂದ್ ಎಚ್ಚರವಾಗಿದ್ದು,ಈಗ ಅವರ ಮನೆಗೆ ಹೊರಟಿದ್ದಾನೆ. ಎಚ್ಚರವಾದಾಗಿನಿಂದಲೂ ಆನಂದ್ ತಲೆಯಲ್ಲಿ ಜೈದೇವ್ ಯೋಚನೆ ಕಾಡುತ್ತಿದೆ. ಮನೆಗೆ ಹೋಗುವಾಗ ಜೈದೇವ್ ಬಗ್ಗೆ ಯೋಚಿಸಿದ ಆನಂದ್ ಗೆ ಗೌತಮ್ ಬಳಿ ಸತ್ಯ ಹೇಳುವ ಮನಸ್ಸಾಗಿದೆ.ತನಗೆ ಯಾವ ಸಮಯದಲ್ಲಿ ಏನು ಆಗುತ್ತದೋ. ಗೌತಮ್ ಗೆ ಸತ್ಯ ಗೊತ್ತಾಗದೇ ಹೋದರೆ, ಮನೆಯಲ್ಲಿ ಇನ್ನಷ್ಟು ಸಮಸ್ಯೆಗಳು ಉದ್ಭವವಾಗಬಹುದು ಎಂದು ಆನಂದ್ ಯೋಚಿಸಿದ್ದಾನೆ.
ಸತ್ಯ ಅರಿತ ಗೌತಮ್ ಕೆಂಡಾಮಂಡಲ
ಮನೆಯಿಂದ ಹೊರಡುವ ಮುನ್ನ ಗೌತಮ್‌ನನ್ನು ಕರೆದು ಅಪೇಕ್ಷಾ ಮತ್ತು ಪಾರ್ಥನ ಮೇಲೆ ಅಟ್ಯಾಕ್ ಮಾಡಿದ್ದು ಯಾರು ಎಂಬ ಸತ್ಯವನ್ನು ಹೇಳಿದ್ದಾನೆ. ಜೈದೇವ್ ಅಪೇಕ್ಷಾ ಮೇಲಿನ ಸಿಟ್ಟಿಗೆ ಹೀಗೆ ಮಾಡಿದ್ದಾನೆ.ನೀನು ಅವನಿಗೆ ಎಚ್ಚರಿಕೆ ಕೊಡುವುದೇ ಮುಖ್ಯ ಎಂದು ಹೇಳುತ್ತಾನೆ.ಗೌತಮ್ ಗೆ ಸತ್ಯ ತಿಳಿದು ಶಾಕ್ ಆಗುತ್ತದೆ.ಸ್ವಂತ ತಮ್ಮ ಹಾಗೂ ತಮ್ಮನನ್ನು ಮದುವೆಯಾಗುವ ಹುಡುಗಿಯನ್ನು ಕೊಲ್ಲಿಸಲು ಜೈದೇವ್ ಇಷ್ಟೆಲ್ಲಾ ಪ್ಲಾನ್ ಮಾಡಿದ್ದು ಎಂದು ಗಾಬರಿಯಾಗಿದ್ದಾನೆ. ಜೈದೇವ್ ನನ್ನು ಭೇಟಿ ಮಾಡಬೇಕು ಎಂದು ಕಾಯುತ್ತಿದ್ದು, ಅವನು ದೇವಸ್ಥಾನಕ್ಕೆ ಹೋಗಿದ್ದಾನೆ ಎಂದು ಮಲ್ಲಿ ಹೇಳಿದ್ದಾಳೆ.

10 ಲಕ್ಷ ಕಳೆದುಕೊಂಡು ಬಂದ ಅಪೇಕ್ಷಾ
ಇತ್ತ ಶಕುಂತಲಾ ಅಪೇಕ್ಷಾಳನ್ನು ಭೂಮಿಕಾ ವಿರುದ್ಧ ಎತ್ತಿಕಟ್ಟು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾಳೆ. ಅದಕ್ಕಾಗಿ ಅಪೇಕ್ಷಾಳನ್ನು ಕ್ಲಬ್ ಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಗ್ಯಾಂಬ್ಲಿಂಗ್ ಆಡುವಂತೆ ಮಾಡಿದ್ದಾಳೆ. ಕ್ಲಬ್, ಪಾರ್ಟಿ, ಕಾರ್ಡ್ಸ್ ಬಗ್ಗೆಯಲ್ಲಾ ಏನೂ ಅರಿಯದ ಅಪೇಕ್ಷಾ ಅತ್ತೆ ಮಾತನ್ನು ಕೇಳಿ ಗ್ಯಾಂಬ್ಲಿಂಗ್ ನಲ್ಲಿ 10ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾಳೆ. ಶಕುಂತಲಾ ಈ ಹಣ ಈ ಮನೆಗೆ ಏನೂ ಅಲ್ಲ. ದಿನಾ ಹತ್ತು ಲಕ್ಷ ಹಣ ಕಳೆದುಕೊಂಡು ಬಂದರೂ ಮನೆಗೆ ಕೊಂಚವೂ ನಷ್ಟವಾಗುವುದಿಲ್ಲ ಎಂದು ಸಮಾಧಾನ ಮಾಡಿದ್ದಾಳೆ. ಆದರೆ, ಅಪೇಕ್ಷಾ ಗಾಬರಿಯಾಗಿದ್ದಾಳೆ. ಪಾರ್ಥ ಬೇರೆ ಈ ಗ್ಯಾಂಬ್ಲಿಂಗ್ ನಲ್ಲಿ ನೀವು ಆಡುವುದು ಇಷ್ಟವಿಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಾನೆ.
ಜೈದೇವ್ ಗೆ ಬಾರಿಸಿದ ಗೌತಮ್
ಜೈದೇವ್ ಮನೆಗೆ ಬಂದ ಕೂಡಲೇ ಗೌತಮ್ ಭೇಟಿ ಮಾಡಿ ಮಾತನಾಡಿಸುತ್ತಾನೆ. ಅಪೇಕ್ಷಾ ಮತ್ತು ಪಾರ್ಥನನ್ನು ಅಟ್ಯಾಕ್ ಮಾಡಿದವರು ಯಾರು ಎಂದು ಹುಡುಕು ಎಂದು ಹೇಳುತ್ತಾನೆ. ಜೈದೇವ್ ರೌಡಿಗಳ ಬಗ್ಗೆ ಬಾಯಿಗೆ ಬಂದ ಹಾಗೆ ಬೈಯುತ್ತಿರುತ್ತಾನೆ. ಇದೇ ಸಮಯದಲ್ಲಿ ಗೌತಮ್ ಜೈದೇವ್ ಕೆನ್ನೆಗೆ ಭಾರಿಸಿತುತ್ತಾನೆ. ಸ್ವಂತ ತಮ್ಮನ ಬದುಕನ್ನೇ ಹಾಳು ಮಾಡಲು ಹೊರಟಿದ್ದೀಯಾ. ನಿನ್ನಲ್ಲಿ ಇಷ್ಟು ಕೆಟ್ಟ ಬುದ್ದಿ ಹೇಗೆ ಬಂತು ಎಂದು ಬೈಯುತ್ತಾನೆ. ಮನೆಯಲ್ಲಿ ಈ ವಿಚಾರ ಗೊತ್ತಾದರೆ,ಅಮ್ಮ ಎಷ್ಟು ಬೇಸರ ಮಾಡಿಕೊಳ್ಳುತ್ತಾಳೆ.ಜೀವದ ಬೆಲೆ ಗೊತ್ತಿದ್ದೀಯಾ ನಿನಗೆ ಎಂದು ಬೈಯುತ್ತಾನೆ.

ತಮ್ಮನನ್ನು ಮನೆಯಲ್ಲೇ ಕೂಡಿ ಹಾಕಿದ ಅಣ್ಣ
ಗೌತಮ್ ಜೈದೇವ್ ನನ್ನು ಹೀಗೆ ಬಿಟ್ಟರೆ ಬಹಳ ಕಷ್ಟವಾಗುತ್ತದೆ ಎಂದು ಬಹಳ ಯೋಚನೆ ಮಾಡುತ್ತಾನೆ. ಮನೆಯವರೆಲ್ಲರನ್ನೂ ಸೇರಿಸಿ ಮಾತನಾಡುತ್ತಾನೆ. ಇನ್ಮುಂದೆ ಜೈದೇವ್ ಮನೆ ಬಿಟ್ಟು ಎಲ್ಲೂ ಹೋಗುವಂತಿಲ್ಲ. ಅವನು ಮನೆಯಲ್ಲೇ ಇರಬೇಕು ಎಂದು ಆರ್ಡರ್ ಮಾಡುತ್ತಾನೆ. ಶಕುಂತಲಾ ಯಾಕೆ ಎಂದು ಎಷ್ಟು ಪ್ರಶ್ನೆ ಮಾಡಿದರೂ ಕೂಡ ಗೌತಮ್ ಸತ್ಯ ಹೇಳಲಾಗದೇ ಮುಚ್ಚಿಡುತ್ತಾನೆ. ಮಲ್ಲಿಯನ್ನು ನೋಡಿಕೊಳ್ಳುವ ಸಲುವಾಗಿ ಅವನು ಮನೆಯಲ್ಲೇ ಇರಬೇಕು ಎಂದು ಹೇಳುತ್ತಾನೆ.


Click it and Unblock the Notifications











