Amruthadhaare: ಭೂಮಿಕಾ ಮೇಲೆ ಗೌತಮ್ ಗರಂ: ಪಾರ್ಟಿ ಮಾಡಿ ಮಹಿಮಾಗೆ ಕಸಿವಿಸಿ
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮದುವೆಯಾದ ನಾಲ್ಕೇ ದಿನಕ್ಕೆ ಯುಎಸ್‌ಗೆ ಮೀಟಿಂಗ್ ಎಂದು ಹೋಗಿದ್ದಾನೆ. ಇದಕ್ಕೆ ಭೂಮಿಕಾ ಕೂಡ ಒಪ್ಪಿಗೆ ಕೊಟ್ಟಿದ್ದಾಳೆ. ಯುಎಸ್‌ನಿಂದ ಭೂಮಿಕಾಳಿಗೆ ಗೌತಮ್ ಫೋನ್ ಮಾಡಿ ಡ್ರಾನಲ್ಲಿ ಹಾರ್ಡ್ ಡಿಸ್ಕ್ ಇದೆ ನೋಡಿ ಎಂದು ಕೇಳುತ್ತಾನೆ. ಭೂಮಿಕಾ ತಪ್ಪಾಗಿ ಅರ್ಥ ಮಾಡಿಕೊಂಡು ಗೌತಮ್ ಬಟ್ಟೆಗಳಿರುವ ವಾಡ್ರೂಬ್‌ನಲ್ಲಿ ನೋಡುತ್ತಾಳೆ.
ಹಾರ್ಡ್ ಡಿಸ್ಕ್ ದೊರಕಿದ ಮೇಲೆ ಭೂಮಿಕಾ ಬೋರ್ ಆಗುತ್ತಿದೆ ಎಂದು ಗೌತಮ್‌ನ ವಸ್ತುಗಳನ್ನು ನೋಡುತ್ತಿರುತ್ತಾಳೆ. ಅಲ್ಲಿ ಗೌತಮ್ ಪುಟಾಣಿ ಕಾರುಗಳನ್ನು ಇಟ್ಟಿರುತ್ತಾನೆ.
ಆ ವಸ್ತುಗಳನ್ನು ನೋಡಿ ಭೂಮಿಕಾ ಖುಷಿಪಡುತ್ತಿರುತ್ತಾಳೆ. ಮತ್ತೆ ಗೌತಮ್ ಫೋನ್ ಮಾಡಿದಾಗ ಈ ವಿಚಾರವನ್ನು ಹೇಳುತ್ತಾಳೆ. ಆಗ ಗೌಥಮ್ ಭೂಮಿಕಾ ಮೇಲೆ ಕೋಪ ಮಾಡಿಕೊಂಡು ರೇಗುತ್ತಾನೆ.

ಸಣ್ಣ ವಿಚಾರಕ್ಕೆ ಬೈದ ಗೌತಮ್
ಇನ್ನೊಬ್ಬರ ಪರ್ಸನಲ್ ಥಿಂಕ್ಸ್ ಅನ್ನು ಯಾಕೆ ನೋಡುತ್ತಿರಾ? ನಿಮಗೆ ಕಾಮನ್ ಸೆನ್ಸ್ ಇಲ್ವಾ ಎಂದು ಬೈಯುತ್ತಾನೆ. ಇದರಿಂದ ಭೂಮಿಕಾಳಿಗೆ ಬೇಸರವಾಗುತ್ತದೆ. ಗೌತಮ್‌ಗೆ ತನ್ನ ಹಳೆಯ ಪ್ರೀತಿ ವಿಚಾರವೆಲ್ಲಾ ನೋಡಿದಳೇನೋ ಎಂಬ ಆತಂಕವಿರುತ್ತದೆ.
ಮನೆಯಲ್ಲೇ ಪಾರ್ಟಿ ಮಾಡಿದ ಮಹಿಮಾ
ಇತ್ತ ಮಹಿಮಾಳಿಗೆ ಪಾರ್ಟಿ ಅರೇಂಜ್ ಮಾಡಲು ಶಕುಂತಲಾ ಒಪ್ಪಿಗೆ ಕೊಟ್ಟಿರುವುದಿಲ್ಲ. ಶಕುಂತಲಾ ಬೇಕಂತಲೇ ಮಹಿಮಾಳನ್ನು ಆದಷ್ಟು ದೂರ ಇಡಲು ಪ್ರಯತ್ನಿಸುತ್ತಿರುತ್ತಾಳೆ. ಮಹಿಮಾ ತಾನು ಮದುವೆಗೂ ಮುನ್ನವೇ ಗರ್ಭಿಣಿ ಆಗಿರುವ ಒಂದೇ ಒಂದು ಕಾರಣದಿಂದ ಈಗ ಶಕುಂತಲಾ ಮಾತನ್ನು ವಿರೋಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ತನ್ನ ಅತ್ತೆಯ ಮನೆಯಲ್ಲೇ ಪಾರ್ಟಿ ಮಾಡುತ್ತಿರುತ್ತಾಳೆ. ಆರೇಂಜ್ ಜ್ಯೂಸ್, ಸ್ವೀಟ್ಸ್, ಪಪ್ಸ್, ಸಮೋಸ, ಕೋಕ್ ಅನ್ನು ತಂದು ಇಟ್ಟಿರುತ್ತಾರೆ.
ಮಹಿಮಾ ಸ್ಥಿತಿಗೆ ಮರುಗಿದ ಗೆಳೆಯರು
ಮಹಿಮಾ ಸ್ನೇಹಿತರೆಲ್ಲರೂ ಮನೆಗೆ ಬರುತ್ತಾರೆ. ದಿ ಗ್ರೇಟ್ ಫ್ಯಾಷನ್ ಡಿಸೈನರ್ ಮಹಿಮಾ ದಿವಾನ್ ಇಷ್ಟು ಲೋಕಲ್ ಆಗಿ ಪಾರ್ಟಿ ಅರೇಂಜ್ ಮಾಡಿರುವುದಕ್ಕೆ ಆಡಿಕೊಳ್ಳುತ್ತಾರೆ. ಜೀವನ್‌ನ ಪ್ರೀತಿ ಮಾಡಿದೆ ಎಂಬ ಒಂದೇ ಒಂದು ಕಾರಣಕ್ಕೆ, ಇಷ್ಟೊಂದು ಅಡ್ಜಸ್ಟ್ ಮಾಡಿಕೊಂಡಿದ್ದೀಯಾ? ಅರಮನೆಯಲ್ಲಿದ್ದವಳು ಈಗ ಬೀದಿಗೆ ಬಂದಂತೆ ಈ ಮಿಡಲ್ ಕ್ಲಾಸ್ ಅವರ ಜೊತೆಗೆ ಬದುಕು ನಡೆಸುತ್ತಿದ್ದೀಯಾ ಎಂದು ವ್ಯಂಗ್ಯವಾಡುತ್ತಾರೆ.

ಮಧ್ಯರಾತ್ರಿ ಪಾರ್ಟಿಗೆ ಗಲಾಟೆ
ಮಹಿಮಾಳಿಗೆ ಬೇರೆ ಯಾವುದೇ ದಾರಿ ಇರುವುದಿಲ್ಲ. ಹಾಗಾಗಿ ಇರುವ ಸತ್ಯವನ್ನು ಒಪ್ಪಿಕೊಂಡು ಮುನ್ನಡೆಯುತ್ತಿದ್ದಾಳೆ. ಸ್ನೇಹಿತರಿಗೆಲ್ಲಾ ಇದೊಂದು ಬಾರಿ ಅಡ್ಜಸ್ಟ್ ಮಾಡಿಕೊಳ್ಳಲು ರಿಕ್ವೆಸ್ಟ್ ಮಾಡುತ್ತಾಳೆ. ಮನೆಯಲ್ಲಿ ಮಧ್ಯರಾತ್ರಿ ಆದರೂ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಎಲ್ಲರೂ ಪಾರ್ಟಿ ಎಂಜಾಯ್ ಮಾಡುತ್ತಿರುತ್ತಾರೆ. ಅಕ್ಕ-ಪಕ್ಕದ ಮನೆಯವರು ಡಿಸ್ಟರ್ಬ್ ಆಗುತ್ತಿದೆ ಎಂದು ಮನೆಗೆ ಬಂದು ಬೈಯುತ್ತಾರೆ.
ಮಹಿಮಾಳಿಗೆ ಅವಮಾನ
ಹಣ ಇರುವ ಮನೆಯ ಹುಡುಗಿಯನ್ನು ತಂದರೆ ಹೀಗೆ ಆಗೋದು. ನಮ್ಮನ್ನೆಲ್ಲಾ ನೆಮ್ಮದಿಯಾಗಿ ಮಲಗಲು ಬಿಡಿ. ಇಲ್ಲಾಂದ್ರೆ ಪೊಲೀಸ್ ಕಂಪ್ಲೇಂಟ್ ಕೊಡಬೇಕಾಗುತ್ತೆ ಎಂದು ಜೋರು ಮಾಡುತ್ತಾರೆ. ಮಹಿಮಾ ಕೂಡ, ನಮ್ಮ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದೀವಿ, ಕೇಳೋದಕ್ಕೆ ನೀವ್ಯಾರು ಎಂದು ಜೋರು ಮಾಡುತ್ತಾಳೆ. ನಂತರ ಸದಾಶಿವ ಎಲ್ಲರನ್ನೂ ಕ್ಷಮೆ ಕೇಳುತ್ತಾರೆ. ಇವತ್ತಿಗೆ ಇಷ್ಟೇ ಸಾಕು ಎಂದು ಹೇಳುತ್ತಾರೆ.
ಮಹಿಮಾ- ಜೀವನ್ ಜಗಳ
ಜೀವ ಪಾರ್ಟಿ ಮುಗಿಸೋಣ ಅಪ್ಪ ಹೇಳಿದ ಮೇಲೆ ಮುಗೀತು ಎಂದು ಹೇಳಿ ಎಲ್ಲರನ್ನೂ ಕಳಿಸುತ್ತಾನೆ. ಇದರಿಂದ ಮಹಿಮಾಳಿಗೆ ದೊಡ್ಡ ಅವಮಾನವಾಗುತ್ತದೆ. ಮಹಿಮಾ, ಜೀವನ್ ಜೊತೆಗೆ ಜಗಳ ಮಾಡುತ್ತಾಳೆ. ಎಲ್ಲಾ ನಾನೇ ಅಡ್ಜಸ್ಟ್ ಮಾಡಿಕೊಳ್ಳಬೇಕು. ನನ್ನದೇ ತಪ್ಪು ಎಂದು ಬೇಸರ ಮಾಡಿಕೊಂಡು ಮಲಗುತ್ತಾಳೆ.


Click it and Unblock the Notifications











