Amruthadhaare ; ಭಾಗ್ಯಳ ಹುಡುಕಾಟದಲ್ಲಿ ಮನೆಯವರು : ಯಾರಿಗೆ ಸಿಗುತ್ತಾರೆ ಗೌತಮ್ ತಾಯಿ..!
ಅಮೃತಧಾರೆ ಧಾರಾವಾಹಿಯಲ್ಲಿ ಸುಧಾಳಿಗೆ ತೊಂದರೆ ಆಗಬಾರದು ಎಂದು ಗೌತಮ್ ಅಡ್ವಾನ್ಸ್ ಹಣ ನೀಡಿದ್ದಾನೆ. ಇದನ್ನು ಕಂಡು ಸುಧಾ ಶಾಕ್ ಆಗಿದ್ದಾಳೆ.ಮನೆಗೆ ಹಣ್ಣು, ಸ್ವೀಟ್, ಚಾಕ್ಲೇಟ್ ಗಳನ್ನು ಕೂಡ ಕಳಿಸಿಕೊಟ್ಟಿದ್ದಾನೆ. ಅಲ್ಲದೇ, ತಮ್ಮ ತಾಯಿಯ ಶುಶ್ರೂಶೆ ಮಾಡಿ ನಿಧಾನವಾಗಿ ಕೆಲಸಕ್ಕೆ ಬನ್ನಿ ಎಂದು ಹೇಳಿದ್ದಾನೆ. ನಲವತ್ತು ಸಾವಿರ ಸಂಬಳ ಫಿಕ್ಸ್ ಮಾಡಿದ್ದಾನೆ. ಸುಧಾಳ ಮನಸ್ಸಿಗೆ ಇವೆಲ್ಲಾ ನೋವುಂಟು ಮಾಡಿದ್ದು, ಇಷ್ಟು ಒಳ್ಳೆಯವರಿಗೆ ತಾನು ಕೆಟ್ಟದ್ದನ್ನು ಮಾಡಬೇಕಾ ಎಂದು ಚಿಂತೆಗೀಡಾಗಿದ್ದಾಳೆ.
ಅಮ್ಮನ ಜೊತೆಗೆ ಕೈ ಜೋಡಿಸಿದ ಜೈದೇವ್
ಈ ಸತ್ಯವನ್ನು ಗೌತಮ್ ಮತ್ತು ಭೂಮಿಕಾ ಬಳಿ ತಿಳಿಸಲು ಮುಂದಾಗುತ್ತಾಳೆ. ಆದರೆ, ಇಬ್ಬರೂ ಸುಧಾಳ ಮಾತನ್ನು ಅರ್ಥ ಮಾಡಿಕೊಳ್ಳದೇ ಕಳಿಸುತ್ತಾರೆ. ಸೂಧಾ ಈಗ ಈ ಮನೆಗೆ ಬಂದಿರುವುದೇ ಕೆಟ್ಟದ್ದನ್ನು ಮಾಡಲು ಎಂಬುದು ಗೊತ್ತಿರುವುದರಿಂದ ಸಂಕಷ್ಟದಲ್ಲಿ ಸಿಲುಕಿದ್ದಾಳೆ. ಇತ್ತ ಶಕುಂತಲಾ ಹೇಗಾದರೂ ಮಾಡಿ ಭಾಗ್ಯಳನ್ನು ಹುಡುಕಬೇಕು. ಇಲ್ಲದೇ ಹೋದರೆ ತಾನು ಮಾಡಿದ ಅಪರಾಧಗಳೆಲ್ಲಾ ಹೊರಗೆ ಬರುತ್ತದೆ ಎಂದು ಗಾಬರಿಯಾಗಿದ್ದಾಳೆ. ಲಕ್ಷ್ಮೀಕಾಂತನ ಮಾತನ್ನು ಕೇಳಿ ಈಗ ಎಲ್ಲಾ ಸತ್ಯವನ್ನು ಜೈದೇವ್ ಗೆ ತಿಳಿಸಿದ್ದಾಳೆ. ಜೈದೇವ್ ಜೊತೆ ಸೇರಿಕೊಂಡು ಭಾಗ್ಯಳನ್ನು ಹುಡುಕಲು ಮುಂದಾಗಿದ್ದಾಳೆ. ಜೈದೇವ್ ಕೂಡ ಅಮ್ಮನ ಜೊತೆಗೆ ಸೇರಿಕೊಂಡಿದ್ದಾನೆ.

ಗೌತಮ್ ನನ್ನು ಟ್ರ್ಯಾಪ್ ಮಾಡಿದ ಶಕುಂತಲಾ
ಜೈದೇವ್ ಈಗ ಭಾಗ್ಯಳನ್ನು ಹುಡುಕಿಸಲು ಪ್ಲಾನ್ ಮಾಡಿದ್ದಾನೆ. ಆದರೆ, ಈಗಾಗಲೇ ಗೌತಮ್ ಭಾಗ್ಯಳನ್ನು ಹುಡುಕಲು ಸಾಕಷ್ಟು ತಯಾರಿಯನ್ನು ಮಾಡಿಕೊಂಡಿರುವುದು ಜೈದೇವ್ ಗೆ ತಿಳಿದಿದ್ದಾನೆ. ಹೀಗಾಗಿ ಶಕುಂತಲಾಳಿಗೆ ಐಡಿಯಾ ಕೊಟ್ಟಿದ್ದಾನೆ. ಭಾಗ್ಯ ಬದುಕಿರುವ ಸತ್ಯ ನಿನಗೆ ಗೊತ್ತಿದ್ದು, ಹುಡುಕಲು ಪ್ರಯತ್ನಿಸುತ್ತಿರುವುದಾಗಿ ಗೌತಮ್ ಬಳಿ ಹೇಳು. ಆಗ ಗೌತಮ್ ಪ್ಲಾನ್ ಗಳು ನಮಗೆ ಗೊತ್ತಾಗುತ್ತದೆ ಎಂದು ಹೇಳುತ್ತಾನೆ. ಶಕುಂತಲಾ ಗೌತಮ್ ಬಳಿ ಹೋಗಿ ನಿನ್ನ ಹೆತ್ತ ತಾಯಿ ಬದುಕಿದ್ದಾರೆ ಗೌತಮ್, ಅವರು ಬೆಂಗಳೂರಿನಲ್ಲೇ ಇದ್ದಾರಂತೆ. ಹುಡುಕಿಸುತ್ತಿದ್ದೇನೆ ಎಂದು ಹೇಳುತ್ತಾಳೆ. ಗೌತಮ್ ಗೆ ತಾನು ಈ ವಿಚಾರವನ್ನು ಶಕುಂತಲಾಳಿಂದ ಬಚ್ಚಿಟ್ಟು ತಪ್ಪು ಮಾಡಿದೆ ಎಂದು ಭಾವಿಸುತ್ತಾನೆ. ಅಮ್ಮನನ್ನು ಹುಡುಕಲು ತಾನು ಏನೆಲ್ಲಾ ಮಾಡಿದ್ದಾನೆ ಎಂಬ ವಿಚಾರವನ್ನು ಹೇಳುತ್ತಾನೆ.
ಭಾಗ್ಯಳಿಗಾಗಿ ಹುಡುಕಾಡುತ್ತಿರುವ ಜೈದೇವ್
ಜೈದೇವ್ ರೌಡಿಗಳನ್ನು ಬಿಟ್ಟು ಭಾಗ್ಯಳನ್ನು ಹುಡುಕಿಸುವ ಕೆಲಸ ಮಾಡುತ್ತಿದ್ದಾನೆ. ಭಾಗ್ಯ ಬೆಂಗಳೂರಿನಲ್ಲಿರುವ ವಿಚಾರ, ಮಗಳೇ ಅಮ್ಮನನ್ನು ನೋಡಿಕೊಳ್ಳುತ್ತಿರುವ ಸಂಗತಿಗಳನ್ನು ತಿಳಿದುಕೊಳ್ಳುತ್ತಾನೆ. ರೌಡಿಗಳೀಂದ ಮಾತ್ರ ಈ ಕೆಲಸ ಸಾಗದು ಎಂದು ತಿಳಿದ ಜೈದೇವ್ ಈಗ ತನ್ನ ಕಡೆಯ ಕೆಲ ಹುಡುಗರಿಗೆ ಸೇಲ್ಸ್ ಮೆನ್ ಗಳ ವೇಷದಲ್ಲಿ ಮನೆ ಮನೆಯಲ್ಲೂ ಹುಡುಕುವಂತೆ ತಿಳಿಸಿದ್ದಾನೆ. ಹುಡುಗರು ಭಾಗ್ಯಳ ಹಳೆಯ ಫೋಟೋವನ್ನು ಹಿಡಿದುಕೊಂಡು ಹುಡುಕಾಡುತ್ತಿದ್ದಾರೆ.
ಗೌತಮ್ ಗೆ ಸಿಗುತ್ತಾಳಾ ಭಾಗ್ಯ..?
ಇನ್ನು ಹೊಸ ಪ್ರೊಮೋ ಒಂದನ್ನು ವಾಹಿನಿ ಪ್ರಸಾರ ಮಾಡಿದ್ದು, ಅದರಲ್ಲಿ ಭಾಗ್ಯ ಗೌತಮ್ ಮನೆಗೆ ನೇರವಾಗಿ ಆಗಮಿಸಿದ್ದಾಳೆ. ಗೌತಮ್ ಅವರ ತಾಯಿಯನ್ನು ನೋಡುತ್ತಾನೆ. ಆದರೆ, ನಿಜವಾಗಿಯೂ ಅವರ ತಾಯಿ ಎದುರಿಗೆ ಬರುತ್ತಾರಾ ಇಲ್ಲವೇ ಮೊದಲು ಜೈದೇವ್ ಗೆ ಸಿಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಅಕಸ್ಮಾತ್ ಗೌತಮ್ ಗೆ ಭಾಗ್ಯ ಸಿಕ್ಕರೆ ಶಕುಂತಲಾ ಮಾಡಿದ ಕೆಲಸಗಳು ಬಯಲಾಗುವ ಸಾಧ್ಯತೆ ಇದೆ. ಇದನ್ನೆಲ್ಲಾ ಮುಚ್ಚಿಡುವ ಸಲುವಾಗಿ ಜೈದೇವ್ ಗೆ ಮೊದಲು ಭಾಗ್ಯ ಸಿಕ್ಕರೆ, ಭಾಗ್ಯ ಜೀವಕ್ಕೆ ಅಪಾಯವಿರುವುದಂತೂ ಗ್ಯಾರೆಂಟಿ. ಸದ್ಯ ಧಾರಾವಾಹಿ ಕುತೂಹಲದಿಂದ ಕೂಡಿದೆ.


Click it and Unblock the Notifications











