Amruthadhaare ; ಭಾಗ್ಯಳನ್ನು ಕೊಲ್ಲುತ್ತಾಳಾ ಶಕುಂತಲಾ..? : ಅತ್ತೆಯ ಬಣ್ಣವನ್ನು ಕಳಚುತ್ತಾಳಾ ಭೂಮಿಕಾ..?
ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾಳಲ್ಲಿ ದಿನ ದಿನಕ್ಕೂ ಭೂಮಿಕಾ ಮೇಲಿನ ಬೇಸರ ಹೆಚ್ಚಾಗುತ್ತಲೇ ಇದೆ. ಇದರಿಂದ ಪಾರ್ಥನಿಗೆ ಮ್ಯಾನೇಜ್ ಮಾಡುವುದು ಕಷ್ಟವಾಗುತ್ತಿದೆ. ಏನು ಮಾತನಾಡಿದರೂ ರೇಗಾಡುವ, ಸಿಡುಕುವ ಅಪೇಕ್ಷಾ ಮಾತು ಮಾತಿಗೂ ಭೂಮಿಕಾಳ ಬಗ್ಗೆ ಸಿಟ್ಟಾಗುತ್ತಾಳೆ. ಇದರಿಂದ ಏನು ಮಾತನಾಡಬೇಕು ಎಂಬುದೇ ಪಾರ್ಥನಿಗೆ ಗೊತ್ತಾಗುತ್ತಿಲ್ಲ. ಇತ್ತ ದಿಯಾ ಜೊತೆಗೆ ಜೈದೇವ್ ಸಂಬಂಧ ಹೊಂದಿರುವುದನ್ನು ತಿಳಿದ ಮಲ್ಲಿ, ಬೇಸರ ಮಾಡಿಕೊಂಡು ತಾತನ ಮನೆಗೆ ಹೋಗಿದ್ದಾಳೆ. ಈಗಲೇ ವಾಪಸ್ ಬರುವ ಸುಳಿವಿಲ್ಲ.
ಮತ್ತೆ ಕ್ಯಾತೆ ತೆಗೆದ ದಿಯಾ
ಇದರೊಂದಿಗೆ ದಿಯಾ ಕೂಡ ಆಗಾಗ ಜೈದೇವ್ ಜೊತೆಗೆ ಜಗಳ ಮಾಡುತ್ತಿರುತ್ತಾಳೆ. ಮಲ್ಲಿಗೆ ಡಿವೋರ್ಸ್ ಕೊಟ್ಟು ನನ್ನನ್ನು ಮದುವೆಯಾಗಿ. ಇನ್ನು ಎಷ್ಟು ದಿನ ಎಂದು ನಾವು ಕದ್ದು ಮುಚ್ಚಿ ಭೇಟಿಯಾಗುವುದು ಎಂದು ಬೇಸರ ಮಾಡಿಕೊಂಡಿದ್ದಾಳೆ. ಈ ವಿಚಾರಕ್ಕೆ ದಿಯಾ ಆಗಾಗ ಜೈದೇವ್ ಬಳಿ ವಾದ ಮಾಡುತ್ತಿರುತ್ತಾಳೆ. ಜೈದೇವ್ ದಿಯಾಳನ್ನು ಸಂಭಾಳಿಸಿದ್ದು, ನೀನೇ ನನ್ನ ಹೆಂಡತಿ. ಸ್ವಲ್ಪ ಸಮಯ ಕೊಡು ನನಗೆ ಎಲ್ಲಾ ಸರಿ ಮಾಡುತ್ತೇನೆ. ನಿನ್ನ ಜೊತೆಗೆ ಮದುವೆಯಾಗಿ ಗ್ರ್ಯಾಂಡ್ ಆಗಿಯೇ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಭರವಸೆ ಕೊಟ್ಟಿದ್ದಾನೆ. ಬೇಸರವಾದಾಗ ಜಗಳ ಮಾಡುವ ದಿಯಾ, ಜೈದೇವ್ ಸಮಾಧಾನ ಮಾಡುತ್ತಿದ್ದಂತೆಯೇ ಸುಮ್ಮನಾಗಿ ಬಿಡುತ್ತಾಳೆ.

ಭಾಗ್ಯಳನ್ನು ಕೊಲ್ಲುತ್ತಾಳಾ ಶಕುಂತಲಾ
ಇನ್ನು ಶಕುಂತಲಾಳನ್ನು ಕಂಡಾಗಲೆಲ್ಲಾ ಭಾಗ್ಯ ಗಾಬರಿಯಾಗುತ್ತಾಳೆ. ಆದರೆ, ಮನೆಯವರು ಯಾರೂ ಈ ಬದಲಾವಣೆಯನ್ನು ಗುರುತು ಹಿಡಿದಿಲ್ಲ. ಮನೆಯವರಿಗೆ ಸತ್ಯ ಗೊತ್ತಾದರೆ ಕಷ್ಟ, ಭಾಗ್ಯ ಬದುಕಿದ್ದರೆ ಯಾವತ್ತಿದ್ದರೂ ತನ್ನ ಉಳಿವಿಗೆ ಸಮಸ್ಯೆ ಆಗುತ್ತದೆ ಎಂಬುದನ್ನು ಬಲವಾಗಿ ನಂಬಿರುವ ಶಕುಂತಲಾ ಅವಳನ್ನು ಸಾಯಿಸಲು ಯತ್ನಿಸಿದ್ದಾಳೆ. ಶಕುಂತಲಾಳ ಎಲ್ಲಾ ಕ್ರೈಂಗಳಿಗೂ ಲಕ್ಷ್ಮೀಕಾಂತನೇ ಸಪೋರ್ಟ್ ಮಾಡುವುದು. ಹೀಗಾಗಿ ಈಗಲೂ ಲಕ್ಷ್ಮೀಕಾಂತ ಅಡುಗೆ ಮನೆಯಲ್ಲಿರುವ ಸುಧಾ ರೂಮಿಗೆ ಹೋಗದಂತೆ ತಡೆದಿದ್ದಾನೆ. ಭಾಗ್ಯ ಮಲಗಿರುವಾಗ ಶಕುಂತಲಾ ದಿಂಬಿನ ಸಹಾಯದಿಂದ ಕೊಲ್ಲಲು ಪ್ರಯತ್ನಿಸಿದ್ದಾಳೆ.
ಜಸ್ಟ್ ಎಸ್ಕೇಪ್ ಆದ ಶಕುಂತಲಾ
ಆದರೆ, ಗೌತಮ್ ಮನಸ್ಸಿಗೆ ತಳಮಳವಾಗಿದ್ದು, ಅಮ್ಮನನ್ನು ನೋಡಲು ಬಯಸಿದ್ದಾನೆ. ಹೀಗಾಗಿ ಭೂಮಿಕಾ ಮತ್ತು ಗೌತಮ್ ಭಾಗ್ಯ ರೂಮಿನತ್ತ ತೆರಳಿದ್ದನ್ನು ಗಮನಿಸಿದ ಲಕ್ಷ್ಮೀಕಾಂತ ಅಕ್ಕನಿಗೆ ಎಸ್ಕೇಪ್ ಆಗಲು ಸಹಾಯ ಮಾಡಿದ್ದಾನೆ. ರೂಮಿಗೆ ಬಂದ ಗೌತಮ್ ತಾಯಿ ಒದ್ದಾಡುತ್ತಿರುವುದನ್ನು ಕಂಡು ಗಾಬರಿಯಾಗುತ್ತಾನೆ. ಭೂಮಿಕಾಳಿಗೆ ಅನುಮಾನ ಬರುತ್ತದೆ. ಎಲ್ಲರೂ ಮಲಗಿದ ಬಳಿಕ ಲಕ್ಷ್ಮೀಕಾಂತ ಮನೆಯ ಕರೆಂಟ್ ಕಟ್ ಮಾಡಿದ್ದು, ಶಕುಂತಲಾ ಭಾಗ್ಯ ರೂಮ್ ನಿಂದ ಹೊರಗೆ ಬಂದಿದ್ದಾಳೆ. ಇದನ್ನು ಗಮನಿಸಿದ ಭೂಮಿಕಾ ಯಾರೋ ಅಪರಿಚಿತರು ಮನೆಗೆ ಬಂದಿದ್ದಾರೆ ಎಂದು ಅರಿತು ಅವರನ್ನು ಹಿಂಬಾಲಿಸಿದ್ದಾಳೆ. ಕೊನೆಗೆ ಅಲ್ಲೇ ಸಿಕ್ಕ ವಸ್ತುವಿನಿಂದ ಶಕುಂತಲಾ ತಲೆಗೆ ಹೊಡೆದು ಗಾಯ ಮಾಡಿದ್ದಾಳೆ.
ಸಿಸಿಟಿವಿಯಲ್ಲಿ ಸತ್ಯ ಬಯಲಾಗುತ್ತಾ..?
ಕತ್ತಲೆಯಲ್ಲೂ ಶಕುಂತಲಾ ಜಸ್ಟ್ ಮಿಸ್ ಆಗಿ ಎಸ್ಕೇಪ್ ಆಗಿದ್ದಾಳೆ. ಭೂಮಿಕಾ ಒಡೆದ ಏಟಿಗೆ ಶಕುಂತಲಾ ತಲೆಯಲ್ಲಿ ರಕ್ತ ಬಂದಿದ್ದು, ಲಕ್ಷ್ಮೀಕಾಂತ ಬ್ಯಾಂಡೇಜ್ ಹಾಕಿದ್ದಾನೆ. ಇನ್ನು ಸಿಸಿಟಿವಿಯಲ್ಲಿ ನೋಡಿದರೆ, ತನ್ನ ಬಣ್ಣ ಬಯಲಾಗುತ್ತೆ ಎಂದು ತಿಳಿದ ಶಕುಂತಲಾ ಫುಟೇಜ್ ಡಿಲೀಟ್ ಮಾಡುವಂತೆ ಲಕ್ಷ್ಮೀಕಾಂತನಿಗೆ ಹೇಳುತ್ತಾಳೆ. ಲಕ್ಷ್ಮೀಕಾಂತ ಸಿಸಿಟಿವಿ ಫುಟೇಜ್ ಡಿಲೀಟ್ ಮಾಡಲು ಆಗಮಿಸಿದ್ದು, ಇದೇ ವೇಳೆಗೆ ಭೂಮಿಕಾ ಸಿಸಿಟಿವಿಯನ್ನು ಚೆಕ್ ಮಾಡಿದರೆ ಮನೆಗೆ ಬಂದವರ ಬಗ್ಗೆ ಗೊತ್ತಾಗುತ್ತೆ ಎಂದು ಸಿಸ್ಟಮ್ ಬಳಿ ಬರುತ್ತಿದ್ದಾಳೆ. ಈಗ ಲಕ್ಷ್ಮೀಕಾಂತ ಭೂಮಿಕಾಳಿಗೆ ಸಿಕ್ಕಿ ಬೀಳುತ್ತಾನಾ..? ಹಾಗೇನಾದರೂ ಆದರೆ, ಶಕುಂತಲಾ ಬಣ್ಣ ಬಯಲಾಗುವುದಂತೂ ಪಕ್ಕಾ ಆಗಿದ್ದು, ಮುಂದಿನ ಎಪಿಸೋಡ್ ಕುತೂಹಲಕಾರಿಯಾಗಿದೆ.


Click it and Unblock the Notifications











