Amruthadhaare: ಕೊನೆಗೂ ನೆರವೇರಿತು ಭೂಮಿಕಾ - ಗೌತಮ್ ನಿಶ್ಚಿತಾರ್ಥ : ಆದರೂ ಇಬ್ಬರಲ್ಲೂ ಇಲ್ಲ ಹೊಂದಾಣಿಕೆ!
ಇಂದು ಗೌತಮ್ ದಿವಾನ್ ಹಾಗೂ ಭೂಮಿಕಾ ಎಂಗೇಜ್ ಮೆಂಟ್ ಸ್ಪೆಷಲ್ ದಿನ. ಎಲ್ಲರೂ ಸಾಮಾನ್ಯವಾಗಿ ಬೆಳಗ್ಗೆ ಹೊತ್ತಲ್ಲಿ ನಿಶ್ಚಿತಾರ್ಥ ಮಾಡಿಕೊಂಡರೆ, ಗೌತಮ್ ರಾತ್ರಿ 10.30ಕ್ಕೆ ಉಂಗುರ ಬದಲಾಯಿಸಿಕೊಂಡಿದ್ದಾನೆ.
ಮಂದಾಕಿನಿಗೆ ಕೊನೆಗೂ ತನ್ನ ಮಗಳ ನಿಶ್ಚಿತಾರ್ಥ ನೆರೆವೇರುತ್ತಿದೆ ಎಂಬುದಕ್ಕಿಂತ ಗೌತಮ್ ದಿವಾನ್ ಕುಟುಂಬಕ್ಕೆ ಸೇರುತ್ತಿದ್ದಾಳೆ ಎಂಬ ಖುಷಿ. ಅದೇ ಸದಾಶಿವನಿಗೆ ಮಗಳು ಚೆನ್ನಾಗಿದ್ದರೆ ಸಾಕು ಎಂಬ ಆಲೋಚನೆಯಾಗಿದೆ.
ಎಂಗೇಜ್ ಮೆಂಟ್ ನಡೆಯುವ ಸಂದರ್ಭದಲ್ಲಿ ಶಕುಂತಲಾ ಅವರ ಸಹೋದರ ಬೇಕಂತಲೇ ಅಪೇಕ್ಷಾ ಬಳಿ ಬಂದು ನೀನು ಇರಬೇಕಾದ ಜಾಗದಲ್ಲಿ ನಿನ್ನ ಅಕ್ಕ ಇದ್ದಾಳೆ ಎಂದು ಕಿವಿ ಚುಚ್ಚಲು ಯತ್ನಿಸುತ್ತಾನೆ. ಆದರೆ, ಅಪೇಕ್ಷಾ ಅವನ ಮಾತಿಗೆ ಬೆಲೆ ಕೊಡುವುದಿಲ್ಲ.

ಆನಂದ್ ಗೌತಮ್ ದಿವಾನ್ ಇವತ್ತಾದರೂ ಭುಮಿಕಾಳಿಗೆ ಕಾಂಪ್ಲಿಮೆಮಟ್ ಕೊಡು ಎಂದು ಹೇಲಿರುತ್ತಾನೆ. ಇಷ್ಟವಿಲ್ಲದಿದ್ದರೂ, ನಿಮ್ಮ ಹೇರ್ ಸ್ಟೈಲ್ ಚೆನ್ನಾಗಿದೆ. ನಿಮ್ಮ ಡ್ರೆಸ್ ಇಷ್ಟ ಆಯ್ತು ಎಂದು ಹೇಳಲು ಹೇಳಿರುತ್ತಾನೆ. ಇದನ್ನು ನೆನಪು ಮಾಡಿಕೊಂಡ ಗೌತಮ್ ಭುಮಿಕಾಳಿಗೆ ಮೊದಲು ಹೇರ್ ಸ್ಟೈಲ್ ಬಗ್ಗೆ ಕಾಂಪ್ಲಿಮೆಂಟ್ ಕೊಡುತ್ತಾನೆ. ಆಗ ಭೂಮಿಕಾಳಿಗೆ ಖುಷಿಯಾಗುತ್ತದೆ. ಬಳಿಕ ನಿಮ್ಮ ಎಲ್ಲೋ ಡ್ರೆಸ್ ಚೆನ್ನಾಗಿದೆ ಎಂದು ಹೇಲಿದಾಗ ಅವಳಿಗೆ ಬೇಸರವಾಗುತ್ತದೆ. ಅದಕ್ಕೆ ಭೂಮಿಕಾ ಸುಮ್ಮನೆ ಸುಳ್ಳು ಕಾಂಪ್ಲಿಮೆಂಟ್ ಕೊಡಬೇಡಿ. ಇದು ನಾವಿಬ್ಬರೂ ಇಷ್ಟಪಟ್ಟು ಆಗುತ್ತಿರುವ ಮದುವೆಯಲ್ಲ. ಕಾಂಪ್ರಮೈಸ್ ಮ್ಯಾರೇಜ್ ಅನ್ನೋದನ್ನ ಮರೆಯಬೇಡಿ. ಬಲವಂತಕ್ಕೆ ನನ್ನನ್ನು ಹೊಗಳುವ ಅಗತ್ಯವಿಲ್ಲ ಎನ್ನುತ್ತಾಳೆ. ಆಗ ಗೌತಮ್ ಭೂಮಿಕಾಳ ಡ್ರೆಸ್ ನೋಡಿದಾಗ ಅವಳು ಪಿಂಕ್ ಡ್ರೆಸ್ ಧರಿಸುವುದನ್ನು ನೋಡಿ ಬೇಸರ ಮಾಡಿಕೊಳ್ಳುತ್ತಾನೆ. ಕ್ಷಮೆ ಕೇಳಿ. ಬೇರೆ ದಿನಕ್ಕಿಂತ ಓಕೆ. ಆದರೂ ಅಷ್ಟೇ ಚೆನ್ನಾಗಿಲ್ಲ ಎಂದು ಹೇಳುತ್ತಾನೆ. ಆಗ ಭೂಮಿಕಾಳಿಗೆ ಖುಷಿಯಾಗುತ್ತದೆ.
ಇನ್ನು ಗೌತಮ್ ಹಾಗೂ ಭೂಮಿಕಾ ಒಬ್ಬರಿಗೊಬ್ಬರು ಉಂಗುರವನ್ನು ತೊಡಿಸುತ್ತಾರೆ. ಆದರೆ, ಭೂಮಿಕಾ ತಂದ ಉಂಗುರ ಚಿಕ್ಕದಾಗಿರುತ್ತದೆ. ಗೌತಮ್ ಬಹಳ ಕಷ್ಟ ಪಟ್ಟು ತನ್ನ ಬೆರಳಿಗೆ ಹಾಕಿಕೊಳ್ಳುತ್ತಾನೆ. ಮಹಿಮಾಳಿಗೆ ಪಾರ್ಟಿಯೊಂದಕ್ಕೆ ಆಹ್ವಾನ ಬರುತ್ತದೆ. ಆಗ ಎಲ್ಲರ ಎದುರಿಗೆ ಜೀವನ್ ಅನ್ನು ತಬ್ಬಿಕೊಂಡು ರೂಮಿಗೆ ಕರೆದುಕೊಂಡು ಹೋಗುತ್ತಾಳೆ. ಜೀವನ್ ಗಲಾಟೆ ಮಾಡುತ್ತಾನೆ. ಎಲ್ಲರ ಎದುರು ಹೀಗೆ ಆಡಬೇಡ ಎಂದರೂ ಮಹಿಮಾ ಕೇಳುವುದಿಲ್ಲ. ಪಾರ್ಟಿ ಹೋಗೋಣ ಬಾ ಎಂದಾಗ ಜೀವನ್ ಇಲ್ಲ. ನಾವು ಐಸ್ ಕ್ರೀಂ ಪಾರ್ಟಿ ಮಾಡೋಣ ಬಾ ಎಂದು ಕರೆಯುತ್ತಾನೆ. ಇಬ್ಬರ ನಡುವೆ ಮನಸ್ತಾಪ ಉಂಟಾಗುತ್ತದೆ. ಮಹಿಮಾ ಡ್ರಿಂಕ್ಸ್ ತರಿಸಿಕೊಳ್ಳುತ್ತಾಳೆ. ಇದರಿಂದ ಜೀವನ್ ಗೆ ಇನ್ನಷ್ಟು ಬೇಸರವಾಗುತ್ತದೆ. ಜೀವನ್ ನಡವಳಿಕೆಯಿಂದ ಕೋಪ ಮಾಡಿಕೊಂಡ ಮಹಿಮಾ ಪಾರ್ಟಿಗೆ ಹೋಗಲು ಮುಂದಾಗುತ್ತಾಳೆ.
ಮಂದಾಕಿನಿ ಬೇಕಂತ ತಾನೇ ಹೋಗಿ ಎಲ್ಲರನ್ನೂ ಮಾತನಾಡಿಸುತ್ತಾಳೆ. ಪೇಪರ್ ಎಡಿಟರ್ ಬಳಿ ಹೋಗಿ ಅವರ ಪತ್ರಿಕೆ ಬಗ್ಗೆ ಮಾತನಾಡುತ್ತಾಳೆ. ಬಳಿಕ ಅವರ ಪತ್ರಿಕೆಯಲ್ಲಿ ಸಾಧಕರ ಕಾಲಂ ಶುರು ಮಾಡಲು ಸಜೆಷನ್ ನೀಡುತ್ತಾಳೆ. ಅದರಲ್ಲೂ ತಾನೂ 1988 ನಲ್ಲಿ ಮಿಸ್ ಮೈಸೂರು ಆಗಿದ್ದು, ಅವಳ ಸಂದರ್ಶನ ಪಡೆಯುವಂತೆ ಹೇಳುತ್ತಾಳೆ. ಇದನ್ನು ಕೇಳಿದ ಅವರೆಲ್ಲಾ ಒಳಗೊಳಗೆ ನಗುತ್ತಾರೆ. ನಂತರ ಅಲ್ಲಿಂದ ಮಂದಾಕಿನಿ ಹೊರಟ ಮೇಲೆ ಅವರೆಲ್ಲಾ ಅಯ್ಯೋ ಗೌತಮ್ ಗೆ ಎಂತಹ ಸಂಬಂಧ ಸಿಕ್ಕಿದೆ ಎಂದು ಮಾತನಾಡಿಕೊಂಡು ನಗುತ್ತಾರೆ.
ಗೌತಮ್ ರೂಮ್ ನಲ್ಲಿ ಭೂಮಿಕಾ
ಇನ್ನು ಫೋಟೋ ತೆಗೆಸಿಕೊಲ್ಳುವಾಗ ಗೌತಮ್ ಮತ್ತು ಭೂಮಿಕಾ ಒಂದು ಅಡಿ ದೂರ ದೂರ ನಿಂತಿರುತ್ತಾರೆ. ಆನಂದ್ ಎಷ್ಟೇ ಹೇಳಿದರೂ ಇಬ್ಬರೂ ಪಕ್ಕ ಪಕ್ಕ ನಿಲ್ಲುವುದಿಲ್ಲ. ಆಗ ಅಪರ್ಣಾ ಫೋಟೋ ತೆಗೆಯುವ ಸಮಯಕ್ಕೆ ಸರಿಯಾಗಿ ಭೂಮಿಕಾಳನ್ನು ಗೌತಮ್ ಮೇಲೆ ಬೀಳುವಂತೆ ತಳ್ಳುತ್ತಾಳೆ. ಇದರಿಂದ ಇಬ್ಬರಿಗೂ ಮುಜುಗರವಾಗುತ್ತದೆ. ಅಪರ್ಣಾ ಭೂಮಿಕಾಳನ್ನು ಗೌತಮ್ ರೂಮ್ ಗೆ ಕರೆದುಕೊಂಡು ಹೋದಾಗ ಘೌತಮ್ ಗೆ ಕೋಪ ಬರುತ್ತದೆ.


Click it and Unblock the Notifications











