Amruthadhaare ; ಅತ್ತಿಗೆ ಮೈದುನನ ನಡುವೆ ಬಿಗ್ ಫೈಟ್, ಜೈದೇವನನ್ನು ಭೂಮಿಕಾ ಲಾಕ್ ಮಾಡ್ತಾಳಾ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವನನ್ನು ಪೊಲೀಸ್ ಸ್ಟೇಷನ್ ಗೆ ಕಳಿಸಿದ ಕಾರಣ ಶಕುಂತಲಾ ಭೂಮಿಕಾ ಮೇಲೆ ಕೂಗಾಡುತ್ತಾಳೆ. ಆಗ ಭೂಮಿಕಾ ಕೂಡ ಎದುರು ಮಾತನಾಡುತ್ತಾಳೆ. ಆಗ ಗೌತಮ್ ತಾಯಿ ಪರ ಮಾತನಾಡಲು ಹೋಗಿ ಭೂಮಿಕಾಳಿಗೆ ನೋವಾಗುವಂತೆ ಬೈಯುತ್ತಾನೆ.

ಇದರಿಂದ ಭೂಮಿಕಾ ಮನಸ್ಸಿಗೆ ನೋವಾಗುತ್ತದೆ. ಆಗ ಆನಂದ್ ಗೌತಮ್ ಗೆ ಬೈದು ಬುದ್ಧಿ ಹೇಳುತ್ತಾನೆ. ಭೂಮಿಕಾಳದ್ದು ಏನೂ ತಪ್ಪಿಲ್ಲ. ಹಾಗಿದ್ದರೂ ಯಾಕೆ ನೀನು ಅವಳಿಗೆ ಬೈದಿದ್ದು, ಆಕೆ ಮನಸ್ಸಿಗೆ ನೋವಾಗಿರುತ್ತದೆ ಹೋಗಿ ಮೊದಲು ಕ್ಷಮೆ ಕೇಳು ಎಂದು ಹೇಳುತ್ತಾನೆ.

Amruthadhaare Serial 04 March episode written update

ಭೂಮಿಕಾ ಪರ ಮಾತನಾಡಿದ ಗೌತಮ್

ಭೂಮಿಕಾ ಬಳಿ ಹೋಗಿ ಗೌತಮ್ ಕ್ಷಮೆ ಕೇಳುತ್ತಾನೆ. ಭೂಮಿಕಾ ಮನಸ್ಸು ಕೂಡ ಹಗುರವಾಗುತ್ತದೆ. ಆಗ ಭೂಮಿಕಾ ನೀವು ಅತ್ತೆಗೆ ಬುದ್ಧಿ ಹೇಳಿ ಮಗ ಎಂದು ಜೈದೇವ ಪರ ನಿಂತರೆ ತಪ್ಪಾಗುತ್ತದೆ. ಮಲ್ಲಿಗೆ ಹೊಡೆದು ಬಡೆದು ನೋಡಿಕೊಳ್ಳುವುದು ಸರಿಯಲ್ಲ ಎಂದು ಹೇಳುತ್ತಾಳೆ.

ಆಗ ಶಕುಂತಲಾ ಬಳಿ ಹೋಗಿ ಭೂಮಿಕಾ ಹೇಳಿದಂತೆಯೇ ಗೌತಮ್ ಮಾತನಾಡುತ್ತಾನೆ. ಜೈದೇವನಿಗೆ ಬುದ್ಧಿ ಹೇಳಿ. ಅವನು ಮಾಡುತ್ತಿರುವುದು ತಪ್ಪು ಎನ್ನುತ್ತಾನೆ. ಭೂಮಿಕಾ ಮನಸ್ಸಿಗೆ ನೋವು ಮಾಡಬೇಡಿ. ಅವಳು ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ ಎಂದು ಹೇಳುತ್ತಾನೆ.

ಮಾನ್ಯ ವಿಚಾರ ತೆಗೆದ ಶಕುಂತಲಾ

ಶಕುಂತಲಾಳಿಗೆ ಗೌತಮ್ ಮಾತುಗಳು ಕೋಪವನ್ನು ತರಿಸುತ್ತದೆ. ಆಗ ಬೇಕಂತಲೇ ಮಾನ್ಯ ವಿಚಾರವನ್ನು ತೆಗೆಯುತ್ತಾಳೆ. ನಾನು ಮಗನ ಪರವೇ ನಿಲ್ಲಬೇಕಾಗುತ್ತದೆ ಗೌತಮ್. ಮಾನ್ಯ ವಿಚಾರ ಬಂದಾಗಲೂ ಅಷ್ಟೇ ನಾನು ನಿನ್ನ ಪರ ನಿಂತಿದ್ದೆ. ನೆನಪು ಮಾಡಿಕೋ.

Amruthadhaare Serial 04 March episode written update

ಈಗಳು ಅಷ್ಟೇ ನಾನು ಜೈದೇವನ ಪರವೇ ಮಾತನಾಡಬೇಕು. ನಿನಗೆ ಒಂದು ರೀತಿ, ಜೈದೇವನಿಗೆ ಮತ್ತೊಂದು ರೀತಿ ನಡೆದುಕೊಳ್ಳಲು ಸಾಧ್ಯವೇ ಎಂದು ವ್ಯಂಗ್ಯವಾಗಿ ಮಾತನಾಡುತ್ತಾಳೆ. ಗೌತಮ್ ಗೆ ಈ ಮಾತುಗಳು ಮುಜುಗರವನ್ನು ಉಂಟು ಮಾಡುತ್ತದೆ. ಆದರೂ ಬೇರೆ ದಾರಿ ಇಲ್ಲದೇ ಸುಮ್ಮನಾಗುತ್ತಾನೆ.

ಅತ್ತಿಗೆ ಮೈದುನ ನಡುವೆ ಬಿಗ್ ಫೈಟ್

ಇನ್ನು ಭೂಮಿಕಾ ತಾನು ದೂರು ಕೊಡದಿದ್ದರೂ ಪೊಲೀಸರು ಮನೆಗೆ ಹೇಗೆ ಬಂದರು ಎಂದು ಯೋಚಿಸುತ್ತಿರುತ್ತಾಳೆ. ಆಗ ಇದೆಲ್ಲವೂ ಜೈದೇವನದ್ದೇ ಕೆಲಸವಿರಬೇಕು ಎಂದು ತಿಳಿದುಕೊಳ್ಳುತ್ತಾಳೆ. ಗಾರ್ಡನ್ ನಲ್ಲಿ ಜೈದೇವ ಒಬ್ಬನೇ ಇರುತ್ತಾನೆ. ಅಲ್ಲಿಗೆ ಭೂಮಿಕಾ ಹೋಗಿ ಜೈದೇವನಿಗೆ ಬೈಯುತ್ತಾಳೆ.

Amruthadhaare Serial 04 March episode written update

ನಿನ್ನಂತಹ ಚೀಪ್ ಬುದ್ಧಿ ಅವರನ್ನ ನಾನೆಲ್ಲೂ ನೋಡಿಲ್ಲ. ಜೀವನದಲ್ಲಿ ತುಂಬಾ ಆಟಗಳನ್ನು ಆಡಿದ್ದೀಯಾ ಅಂತ ಕಾಣುತ್ತೆ. ಆದರೆ, ಇನ್ಮುಂದೆ ಅದೆಲ್ಲಾ ನಡೆಯೋದಿಲ್ಲ. ಯಾಕೆಂದರೆ, ಆಗ ನಿನ್ನ ಆಟಕ್ಕೆ ಮರು ಆಟವಾಡಲು ಯಾರೂ ಇರಲಿಲ್ಲ. ಈಗ ನಾನಿದ್ದೀನಿ ಎಂದು ವಾರ್ನಿಂಗ್ ಕೊಡುತ್ತಾಳೆ. ಜೈದೇವ ಕೂಡ ರೋಷದಲ್ಲೇ ಮಾತನಾಡುತ್ತಾನೆ. ಈ ಮದುವೆ ಮದುವೇನೇ ಅಲ್ಲ ಎಂದು ಜಂಭದಿಂದ ಮಾತನಾಡುತ್ತಾನೆ.

ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಿದ ಭೂಮಿ

ಮಾರನೇಯ ದಿನವೇ ಭೂಮಿಕಾ ಪ್ಲಾನ್ ಮಾಡಿ ಆನಂದ್ ಅನ್ನು ಕರೆಸಿಕೊಳ್ಳುತ್ತಾಳೆ. ತನ್ನ ಹಾಗೂ ಗೌತಮ್ ಮದುವೆಯ ಸರ್ಟಿಫಿಕೇಟ್ ಮಾಡಿಸುವ ಬಗ್ಗೆ ನಿರ್ಧಾರ ಮಾಡುತ್ತಾಳೆ. ತಮ್ಮಿಬ್ಬರ ಮದುವೆಯ ಸರ್ಟಿಫಿಕೇಟ್ ಮಾಡಿಸುವ ನೆಪದಲ್ಲಿ ಭೂಮಿಕಾ ಮಲ್ಲಿ ಮತ್ತು ಜೈದೇವನ ವಿವಾಹ ಪ್ರಮಾಣ ಪತ್ರಕ್ಕೆ ಸಹಿ ಹಾಕಿಸುತ್ತಾಳೆ.

ಇದು ಜೈದೇವನಿಗೆ ಇಷ್ಟವಿರುವುದಿಲ್ಲ. ಆದರೆ, ಮನೆಯವರ ಮುಂದೆ ಅಲ್ಲಗಳೆಯಲಾರದೇ ಸಹಿ ಹಾಕುತ್ತಾನೆ. ಈಗ ಭೂಮಿಕಾಳಿಗೆ ಕೊಂಚ ಸಮಾಧಾನವಾಗುತ್ತದೆ. ಮೈದುನ ಮತ್ತು ಅತ್ತಿಗೆ ನಡುವೆ ಬಿಗ್ ಫೈಟ್ ಶುರುವಾಗಿದ್ದು, ಜೈದೇವನನನ್ನು ಎಲ್ಲಾ ಕಡೆಯಿಂದಲೂ ಭೂಮಿಕಾ ಲಾಕ್ ಮಾಡುತ್ತಾಳಾ ಕಾದು ನೋಡಬೇಕಿದೆ.

More from Filmibeat

English summary
bhoomika intentionally prepares marriage certificate of malli- jaidev
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X